ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೈಲಿಗೆ ಸೇರಿ ಒಂದು ವರ್ಷ ಪೂರ್ಣಗೊಂಡಿದೆ. ಗೆಳತಿ ಪವಿತ್ರಾ ಗೌಡಗೆ ಕೆಟ್ಟ ಪದ ಬಳಸಿದಾ ಎಂಬ ಕಾರಣಕ್ಕೆ ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿ ಕೊಲೆ ಮಾಡಿದ ಪ್ರಕರಣದಲ್ಲಿ ನಟ ದರ್ಶನ್ ಜೈಲು ಸೇರಿದ್ದರು. ಕೊಲೆ ಆರೋಪ ಬಂದು 20 ತಿಂಗಳು ಆಗಿದೆ. ಆದರೆ, ಜೈಲು ಸೇರಿ ಒಟ್ಟು 365 ದಿನ ಕಳೆದಿದೆ.
ಮೊದಲ ಬಾರಿ 2024 ಜೂನ್ 11 ರಂದು ಮೈಸೂರಿನಲ್ಲಿ ಬಂಧನಕ್ಕೆ ಒಳಗಾಗಿದ್ದ ದರ್ಶನ್ 2024 ಅಕ್ಟೋಬರ್ 30ರ ತನಕ ಅಂದರೆ 131 ದಿನಗಳ ಕಾಲ ಪರಪ್ಪನ ಅಗ್ರಹಾರ ಹಾಗೂ ಬಳ್ಳಾರಿ ಜೈಲಿನಲ್ಲೇ ಇದ್ದರು. ಇದಾದ ಬಳಿಕ ಜಾಮೀನು ಪಡೆದು ಹೊರ ಬಂದಿದ್ದರು. ಆದರೆ ಸುಪ್ರೀಂ ಕೋರ್ಟ್ನಲ್ಲಿ ಜಾಮೀನು ರದ್ದು ಆಗಿದ್ದಕ್ಕೆ ಮತ್ತೆ ಆರೋಪಿ ದರ್ಶನ್ನ ಬಂಧನವಾಗಿತ್ತು.
2025ರ ಆ.14ರಂದು ಮತ್ತೆ ಪರಪ್ಪನ ಅಗ್ರಹಾರ ಸೇರಿಕೊಂಡರು. ದಾಸ ಎರಡನೇ ಬಾರಿ ಬಂಧನಕ್ಕೆ ಒಳಗಾಗಿ 226 ದಿನ ಕಳೆದಿದೆ. ಡೆವಿಲ್ ಸಿನಿಮಾದ ರಿಲೀಸ್ ವೇಳೆ ತನ್ನ ಅಭಿಮಾನಿಗಳು ಸಿನಿಮಾ ಗೆಲ್ಲಿಸುವುದನ್ನು ಕಣ್ತುಂಬಿಕೊಳ್ಳಲು ಆಗದೆ ಜೈಲಿನಲ್ಲಿ ಕೊರಗಿದರು. ದರ್ಶನ್ ಹೊರ ಬರೋದಕ್ಕೆ ಕಾನೂನು ಹೋರಾಟ ನಡೆಯುತ್ತಿದ್ದು, ಜಾಮೀನು ದೊರೆಯುತ್ತದೆಯೋ ಇಲ್ಲವೋ ಕಾದು ನೋಡಬೇಕಿದೆ.
Laxmi News 24×7