ದಕ್ಷ ಅಧಿಕಾರಿ ಅಣ್ಣಾಮಲೈ ಹಾದಿಯಲ್ಲಿ ರವಿ.ಡಿ.ಚನ್ನಣ್ಣನವರ್ ?

Spread the love

ಬೆಂಗಳೂರು : ರಾಜ್ಯ ಪೊಲೀಸ್ ಇಲಾಖೆಯಲ್ಲಿ ನಿಷ್ಠೆ, ಪ್ರಮಾಣಿಕ ಐಪಿಎಸ್ ಅಧಿಕಾರಿ ರವಿ ಡಿ.ಚನ್ನಣ್ಣನವರ ನಡೆ ತೀವ್ರ ಕೂತುಹಲ ಮೂಡಿಸಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದಂತ ಚೆನ್ನಣ್ಣನವರನ್ನು ಈಚೆಗೆ ರಾಜ್ಯ ಸರ್ಕಾರ ಸಿಐಡಿ ಎಸ್ಪಿಯಾಗಿ ವರ್ಗಾವಣೆ ಮಾಡಿದೆ. ಪ್ರಸ್ತುತ ಸಿಐಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ಮಠಗಳಿಗೆ ಭೇಟಿ ನೀಡಿ ಆಶೀರ್ವಾದ ಪಡೆಯುತ್ತಿದ್ದು, ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ಮಠಯಾತ್ರೆ ಕೈಗೊಂಡಿರುವ ಅವರು, ಚಿತ್ರದುರ್ಗದ ಬಸವ ಮಾಚಿದೇವ ಸ್ವಾಮೀಜಿ, ಕಾಗಿನೆಲೆ ಪೀಠಕ್ಕೆ ತೆರಳಿ ನಿರಂಜನಾನಂದಪುರಿ ಶ್ರೀಗಳು, ಹರಿಹರ ಪೀಠದ ವಚನಾನಂದ ಶ್ರೀಗಳು, ಬೋಮಿ ಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಸೇರಿದಂತೆ ಹಲವು ಮಠಕ್ಕೆ ತೆರಳಿ ಆಶೀರ್ವಾದ ಪಡೆದಿದ್ದಾರೆ.

ಈಗಾಗಲೇ ಮಠಯಾತ್ರೆ ಕೈಗೊಂಡಂತ ಐಪಿಎಸ್ ಅಧಿಕಾರಿಗಳು ಹುದ್ದೆ ತೊರೆದು ತಮಿಳುನಾಡು ರಾಜಕೀಯಕ್ಕೆ ದುಮುಕಿದ್ದಾರೆ. ತಮಿಳುನಾಡಿನ ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದಾರೆ. ರವಿ ಚನ್ನಣ್ಣನವರು ಕೂಡ ಅಣ್ಣಾಮಲೈ ಅವರ ಹಾದಿ ತುಳಿಯಲಿದ್ದಾರೆ ಎಂದು ಅನುಮಾನ ಮೂಡಿದೆ.

ಅಲ್ಲದೆ ದೊಡ್ಡಬಳ್ಳಾಪುರ ಅಥವಾ ನೆಲಮಂಗಲ ಮೀಸಲು ಕ್ಷೇತ್ರಗಳ ಮೇಲೆ ಕಣ್ಣಿಟ್ಟಿರುವಂತ ಅವರು, ಇಲ್ಲಿಂದ ರಾಜಕೀಯಕ್ಕೆ ಪ್ರವೇಶ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಆ ಬಗ್ಗೆ ರವಿ ಚೆನ್ನಣ್ಣನವರ್ ಸ್ಪಷ್ಟ ಪಡಿಸಿದಾಗಲೇ ಖಚಿತಗೊಳ್ಳಬೇಕಿದೆ.


Spread the love

About Laxminews 24x7

Check Also

ಡಿಸಿಎಂ ಡಿಕೆಶಿ ಭೇಟಿಯಾದ ವೀರಪ್ಪನ್ ಪುತ್ರಿ ವಿದ್ಯಾರಾಣಿ

Spread the loveರಾಮನಗರ: ಬಿಡದಿಯ ವಂಡರ್‌ಲಾ ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡಿರೋ ಒಡಿಶಾದ ಕಾಂಗ್ರೆಸ್‌ ಶಾಸಕರನ್ನು ಭೇಟಿ ಮಾಡಲು ರೆಸಾರ್ಟ್‌ಗೆ ಬಂದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ