ಗೋಕಾಕದಲ್ಲಿರುವ ಶಾಸಕರ ಗೃಹ ಕಚೇರಿಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಭಾಗ್ಯ ಲಕ್ಷ್ಮಿ ಯೋಜನೆಯ 2020-21 ನೇ ಸಾಲಿನ ಅಂಚೆ ಇಲಾಖೆಯ ವತಿಯಿಂದ ಅನುಷ್ಠಾನ ಗೊಳಿಸಿದ್ದ ಸುಕನ್ಯಾ ಸಮೃದ್ದಿ ಯೋಜನೆಯನ್ನು ಬೆಳಗಾವಿ ಜಿಲ್ಲೆಯಲ್ಲಿ ಗೋಕಾಕದಲ್ಲಿ ಪ್ರಥಮವಾಗಿ ಶಾಸಕರಾದ ಶ್ರೀ ರಮೇಶ ಜಾರಕಿಹೋಳಿಯವರು ಪಲಾನುಭವಿಗಳಿಗೆ ಅಂಚೆ ಇಲಾಖೆಯ ಪಾಸಬುಕ್ ನೀಡುವ ಮೂಲಕ ಚಾಲನೆ ನೀಡಿದರು.
ನಂತರ ನಗರೋತ್ಥಾನ
ಹಂತ -3ರ ಪ್ರೋತ್ಸಾಹ ಧನದಲ್ಲಿ ರೂ,16.85 ಕೋಟಿ ಅನುದಾನದಲ್ಲಿ ನಾಕಾ ನಂ,1ರಿಂದ ಮಾರ್ಕಂಡೆಯ ನದಿಯವರೆಗೆ ಎರಡೂಬದಿ ಚರಂಡಿ ಮತ್ತು ಪಾದಚಾರಿ ರಸ್ತೆ ಹಾಗೂ ಲೋಕೊಪಯೋಗಿ ಇಲಾಖೆಯಿಂದ ಮಂಜೂರಾದ ರೂ 2,50ಕೋಟಿ ಅನುದಾನದಡಿಯಲ್ಲಿ ವಾಲ್ಮೀಕಿ ಸರ್ಕಲದಿಂದ ಶಿವಾಜಿ ಸರ್ಕಲವರೆಗೆ ಎರಡೂಬದಿ ಚರಂಡಿ ನಿರ್ಮಾಣದ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮಾಡಿ ಗೋಕಾಕ ಮತಕ್ಷೇತ್ರವನ್ನು ಮಾದರಿ ನಗರ ಮಾಡಲಿಕ್ಕೆ ನಾವು ಸದಾ ಸಿದ್ದರಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಶಾಸಕರ ಆಪ್ತಸಹಾಯಕರುಗಳಾದ ಭೀಮಗೌಡ್ರ ಪೋಲಿಸಗೌಡ್ರ, ಸುರೇಶ ಸನದಿ, ಗೋಕಾಕ ನಗರಸಭೆಯ ಆಯುಕ್ತರಾದ ಶಿವಾನಂದ ಹೀರೆಮಠ, ಅದ್ಯಕ್ಷರು, ಉಪಾದಕ್ಷರು ಹಾಗೂ ಸದಸ್ಯರುಗಳು ಮತ್ತು ಬಿಜೆಪಿ ನಗರ ಮಂಡಲದ ಕಾರ್ಯಕರ್ತರು ಉಪಸ್ಥಿತರಿದ್ದರು.