ಗೋಕಾಕ್: ಜಲ ಸಂಪನ್ಮೂಲ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರು ಫೆ.೨೭ ರಿಂದ ಮಾ.೨ ರ ವರಗೆ ಬೆಳಗಾವಿ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ.
ಫೆ.೨೭ ರಂದು ೧೦ ಗಂಟೆಗೆ ನಗರದ ಎನ್‌ಇಎಸ್ ಶಾಲಾ ಆವರಣದಲ್ಲಿ ನಡೆಯಲಿರುವ ತಾಲೂಕು ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಂಡು, ಸಂಜೆ ನಗರದಲ್ಲಿ ವಾಸ್ತವ್ಯ ಮಾಡಲಿದ್ದಾರೆ. ಫೆ.೨೮ ರಂದು ಗೋಕಾಕ ತಾಲೂಕಿನ ಜಮನಾಳ ಗ್ರಾಮದ ಸಿದ್ದಲಿಂಗೇಶ್ವರ ದೇವಸ್ಥಾನದ ಹತ್ತಿರ ಆಣೆಕಟ್ಟು ಸ್ಥಳ ಪರಿಶೀಲನೆ ಹಾಗೂ ನಗರದ ಸಮೀಪ ಘಟ್ಟಿ ಬಸವಣ್ಣ ದೇವಸ್ಥಾನದ ಹತ್ತಿರ ನಿರ್ಮಿಸಲಾಗುತ್ತಿರುವ ಆಣೆಕಟ್ಟಿನ ಮುಳುಗಡೆ ಪ್ರದೇಶದ ಪುನರ್ ವಸತಿ ಹಾಗೂ ಪುನರ್ ನಿರ್ಮಾಣದ ಸ್ಥಳ ಪರಿಶೀಲನೆ ನಡೆಸುವರು. ಮಧ್ಯಾಹ್ನ ೨.೩೦ ಗಂಟೆಗೆ ಉಪಮುಖ್ಯಮಂತ್ರಿ ಹಾಗೂ ಲೋಕೋಪಯೋಗಿ ಸಚಿವ ಗೋವಿಂದ ಕಾರಜೋಳ ಅವರೊಂದಿಗೆ ಗೋಕಾಕ-ಫಾಲ್ಸ್ ಹಾಗೂ ನಗರದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಸೇತುವೆಗಳ ಸ್ಥಳ ಪರಿಶೀಲನೆ ನಡೆಸುವರು. ಗೋಕಾಕದಲ್ಲಿ ವಾಸ್ತವ್ಯ. ಮಾ.೧ ರಂದು ಮುಂಜಾನೆ ೧೧ ಗಂಟೆಗೆ ಬೆಳಗಾವಿಯ ಪ್ರವಾಸಿ ಮಂದಿರದಲ್ಲಿ ಕೋವಿಡ್-೧೯ ಬಗ್ಗೆ ಜಿಲ್ಲೆಯ ಹಿರಿಯ ಅಧಿಕಾರಿಗಳೊಂದಿಗೆ ಸಭೆ. ೪.೩೦ ಗೋಕಾಕ ನಗರಕ್ಕೆ ಆಗಮನ ವಾಸ್ತವ್ಯ. ಮಾ.೨ರಂದು ಮುಂಜಾನೆ ೧೦ ಗಂಟೆಗೆ ಬೆಳಗಾವಿಯಿಂದ ವಿಮಾನದ ಮೂಲಕ ಬೆಂಗಳೂರಿಗೆ ಪ್ರಯಾಣ ಬೆಳೆಸುವರು ಎಂದು ಸಚಿವರ ಆಪ್ತ ಕಾರ್ಯದರ್ಶಿಗಳು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Laxmi News 24×7