ಬೆಳಗಾವಿ- ಪವಿತ್ರ ರಮಜಾನ್ ಈದ್ ಹಬ್ಬವನ್ನು ಸೋಮವಾರ ಆಚರಿಸಲು ಬೆಳಗಾವಿಯ ಅಂಜುಮನ್ ಇಸ್ಲಾಂ ಮತ್ತು ಚಾಂದ್ ಕಮೀಟಿ ನಿರ್ಧರಿಸಿದೆ
ಇಂದು ದೇಶದ ಯಾವ ಭಾಗದಲ್ಲೂ ಚಂದ್ರ ದರ್ಶನವಾಗಿಲ್ಲ ಹೀಗಾಗಿ ರಮಜಾನ್ ಈದ್ ಸೋಮವಾರ ಆಚರರಿಸಲು ನಿರ್ಣಯಿಸಲಾಗಿದೆ
ಬೆಳಗಾವಿಯ ಅಂಜುಮನ್ ಸಂಸ್ಥೆಯ ಅಧ್ಯಕ್ಷ ರಾಜು ಸೇಠ ಅಧ್ಯಕ್ಷತೆಯಲ್ಲಿ ನಡೆದ ಚಾಂದ್ ಕಮೀಟಿ ಇಂದು ಸಂಜೆ ಅಂಜುಮನ್ ಹಾಲ್ ನಲ್ಲಿ ಸಭೆ ಸೇರಿ ಈದ ಆಚರಣೆಯ ಕುರಿತು ಸಮಾಲೋಚನೆ ನಡೆಸಿತು .ಚಂದ್ರ ದರ್ಶನದ ಬಗ್ಗೆ ದೂರವಾಣಿಯ ಮೂಲಕ ದೇಶದ ವಿವಿಧ ಮಹಾನಗರಗಳ ಚಾಂದ್ ಕಮೀಟಿಯ ಪದಾಧಿಕಾರಿಗಳನ್ನು ಸಂಪರ್ಕಿಸಿ ಚಂದ್ರ ದರ್ಶಣ ಆಗಿದೆಯೋ ಇಲ್ಲವೋ ಎನ್ನುವದರ ಬಗ್ಗೆ ಮಾಹಿತಿ ಪಡೆದುಕೊಂಡಿತು
ದೇಶದ ಯಾವ ಭಾಗದಲ್ಲೂ ಚಂದ್ರ ದರ್ಶನ ಆಗಿಲ್ಲ ಎಂದು ಖಾತ್ರಿಯಾದ ಬಳಿಕ ಬೆಳಗಾವಿಯ ಚಾಂದ್ ಕಮೀಟಿ ಸೋಮವಾರ ಹಬ್ಬ ಆಚರಿಸುವ ನಿರ್ಣಯ ಕೈಗೊಂಡಿತು
ಸಭೆಯಲ್ಲಿ ಚಾಂದ್ ಕಮೀಟಿಯ ಸದಸ್ಯರು ಹಿರಿಯ ಮೌಲ್ವಿಗಳು,ಮತ್ತು ಮುಫ್ತಿಗಳು ಉಪಸ್ಥಿತರಿದ್ದರು.
ಸೋಮವಾರ ಈದ್ ಆಚರಿಸುವ ನಿರ್ಣಯದ ಬಳಿಕ ಮಾತನಾಡಿದ ರಾಜು ಸೇಠ ,ಎಲ್ಲ ಮುಸ್ಲಿಂ ಬಾಂಧವರು ತಮ್ಮ ತಮ್ಮ ಮನೆಗಳಲ್ಲಿಯೇ ಈದ್ ಪ್ರಾರ್ಥನೆ ಮಾಡಬೇಕು ಪ್ರಾರ್ಥನೆ ಯಾವ ರೀತಿ ಮಾಡಬೇಕು ಎನ್ನುವದರ ಬಗ್ಗೆ ತಮ್ಮ ತಮ್ಮ ಬಡಾವಣೆಯ ಮೌಲ್ವಿಗಳನ್ನು ಸಂಪರ್ಕ ಮಾಡಿ ಮಾಹಿತಿ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
https://youtu.be/tmeRCcpCcmg
Laxmi News 24×7