ಶಿವನ ಕೈಲಾಸವೇ ಧರೆಗಿಳಿದ ಅನುಭವ ಎಲ್ಲಿ ನೋಡಿದರಲ್ಲಿ ಕೈಲಾಸನಾಥನ ನಾಮ ಸ್ಮರಣೆ ಭಕ್ತಿಯ ಭಾವಪರವಶದಲ್ಲಿ ಮುಳಗಿದ ಶಿವನ ಆರಾಧಕರು ಅಪಾರ ಸಂಖ್ಯೆಯ ಭಕ್ತಾದಿಗಳು ಶಿವನ ದರ್ಶನ ಪಡೆದುಕೊಂಡರು. ಈ ಭಕ್ತಿಯ ಜಾತ್ರೆ ನಡೆದಿದ್ದು ರಾಮದುರ್ಗ ಪಟ್ಟಣದ ಮುಳ್ಳೂರು ಗುಡ್ಡದ ರಾಮೇಶ್ವರಂ ನಲ್ಲಿರುವ ಅಶೋಕವನದ ಶಿವನಮೂರ್ತಿಯಲ್ಲಿ.
ಪ್ರತಿ ವರ್ಷದಂತೆ ಮಹಾಶಿವರಾತ್ರಿಯ ಅಂಗವಾಗಿ ಬಹಳ ವಿಜೃಂಭಣೆಯಿಂದ ಶಿವನ ಪೂಜಾ ಕೈಂಕರ್ಯಗಳು ನಡೆಯುವುದರ ಮೂಲಕ ಪರಮೇಶ್ವರನ ಆರಾಧನೆಯನ್ನು ಮಾಡಲಾಯಿತು.

ಈ ಸಂದರ್ಭದಲ್ಲಿ ಶಿವ ಪ್ರತಿಷ್ಠಾನದ ಸೇವಾ ಸಮಿತಿ ಅಧ್ಯಕ್ಷರಾದ ಶಾಸಕ ಅಶೋಕ್ ಪಟ್ಟಣ ಮಾತನಾಡಿ ಪ್ರತಿವರ್ಷದಂತೆ ಈ ವರ್ಷವೂ ಕೂಡ ಬಹಳ ವಿಜೃಂಭಣೆಯಿಂದ ಮಹಾಶಿವರಾತ್ರಿಯನ್ನು ಆಚರಣೆಯನ್ನು ಮಾಡಲಾಗುತ್ತಿದೆ ಎಲ್ಲ ಭಕ್ತಾದಿಗಳು ಶಾಂತ ರೀತಿಯಿಂದ ಶಿವನ ದರ್ಶನವನ್ನು ಮಾಡಬೇಕೆಂದು ತಿಳಿಸಿದರು.
ರಾಜ್ಯದ ಅತಿ ಎತ್ತರದ ಎರಡನೇ ಶಿವನ ಮೂರ್ತಿ ಹಾಗೂ ನಂದಿ ವಿಗ್ರಹ ದರ್ಶನಕ್ಕೆ ಲಕ್ಷಾಂತರ ಜನ ಆಗಮಿಸಿದ್ದರು. ಸಕಲ ಸಿದ್ಧತೆಯನ್ನು ಸೇವಾ ಸಮಿತಿಯಿಂದ ಕೈಗೊಳ್ಳಲಾಗಿತ್ತು. ಶಿವರಾತ್ರಿ ಹಿನ್ನೆಲೆಯಲ್ಲಿ ಉಪವಾಸವನ್ನು ಕೈಗೊಂಡ ಲಕ್ಷಾಂತರ ಭಕ್ತಾದಿಗಳಿಗೆ ಉಪವಾಸದ ಫಲಹಾರದ ವ್ಯವಸ್ಥೆಯನ್ನು ಮಾಡಲಾಗಿತ್ತು.
ಪವಿತ್ರ ಶಿವರಾತ್ರಿಯ ರಾತ್ರಿ ಜಾಗರಣೆಯನ್ನು ಹಿನ್ನೆಲೆಯಲ್ಲಿ ಆಧ್ಯಾತ್ಮಿಕ ಪ್ರವಚನ, ಸಂಗೀತ, ಭಜನೆ ವಿವಿಧ ಕಾರ್ಯಕ್ರಮಗಳು ನಡೆದವು.
Laxmi News 24×7