Breaking News

ಪುನೀತ್ ರಾಜ್‍ಕುಮಾರ್ ವೃತ್ತದಲ್ಲಿ ಪ್ರತಿಮೆ ಅನಾವರಣಗೊಳಿಸಿದ ಯುವ ನಟ ವಿನಯ್ ರಾಜ್‍ಕುಮಾರ್

Spread the love

ಗೋಕಾಕ ನಗರದಲ್ಲಿರುವ ಕನ್ನಡಿಗರ ಹೆಮ್ಮೆಯ ‘ಕರ್ನಾಟಕ ರತ್ನ’ ಡಾ. ಪುನೀತ್ ರಾಜ್‍ಕುಮಾರ್ ವೃತ್ತದಲ್ಲಿ ಇಂದು ಅವರ ಭವ್ಯ ಪ್ರತಿಮೆಯನ್ನು ಯುವ ನಟ ವಿನಯ್ ರಾಜ್‍ಕುಮಾರ್ ಅವರ ಉಪಸ್ಥಿತಿಯಲ್ಲಿ ಅತ್ಯಂತ ಸಡಗರದಿಂದ ಅನಾವರಣಗೊಳಿಸಲಾಯಿತು.

ಈ ಸಂದರ್ಭದಲ್ಲಿ ಬಿಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಅಮರನಾಥ ಜಾರಕಿಹೊಳಿ, ಯುವ ನಾಯಕ ಸರ್ವೋತ್ತಮ ಜಾರಕಿಹೊಳಿ, ಗೋಕಾಕ ನಗರಸಭೆಯ ಸದಸ್ಯರು, ಮುಖಂಡರು ಹಾಗೂ ಅಪ್ಪು ಅಭಿಮಾನಿಗಳ ಸಂಘದ ಪದಾಧಿಕಾರಿಗಳು ಮತ್ತು ಸಾವಿರಾರು ಸಂಖ್ಯೆಯಲ್ಲಿ ಅಪ್ಪು ಅಭಿಮಾನಿಗಳು ಉಪಸ್ಥಿತರಿದ್ದರು.

ಪುನೀತ್ ರಾಜ್‍ಕುಮಾರ್ ಅವರ ಕಲಾ ಸೇವೆ ಹಾಗೂ ಸಮಾಜಮುಖಿ ವ್ಯಕ್ತಿತ್ವವನ್ನು ಸ್ಮರಿಸುವ ಮೂಲಕ ಗೋಕಾಕ ನಗರ ಇಂದು ಭಾವಪೂರ್ಣ ಕ್ಷಣಗಳಿಗೆ ಸಾಕ್ಷಿಯಾಯಿತು.


Spread the love

About Laxminews 24x7

Check Also

ಗೋಕಾಕದ ಸರ್ಕಾರಿ ಪಿ.ಯು. ಕಾಲೇಜಿನಲ್ಲಿ ಪ್ರತಿಭಾ ಕಾರಂಜಿ’ ಕಾರ್ಯಕ್ರಮ

Spread the loveಇಂದು ಗೋಕಾಕದ ಸರ್ಕಾರಿ ಪಿ.ಯು. ಕಾಲೇಜಿನಲ್ಲಿ ಶಾಲಾ ಶಿಕ್ಷಣ ಇಲಾಖೆ, ಜಿಲ್ಲಾಡಳಿತ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಸಹಯೋಗದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ