ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಆದ್ಯತೆ

Spread the love

ನಿಪ್ಪಾಣಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರದ ಅಭಿವದ್ಧಿ ಹಾಗೂ ನಿಪ್ಪಾಣಿ ಕ್ಷೇತ್ರದ ವಿಕಾಸವನ್ನು ಮೆಚ್ಚಿ ಭೀಮಾಪುರವಾಡಿ ಗ್ರಾಮದ
ಮುಖಂಡರು ಹಾಗೂ ಕಾರ್ಯಕರ್ತರು ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ ಎಂದು ಶಾಸಕಿ ಶಶಿಕಲಾ ಜೊಲ್ಲೆ ತಿಳಿಸಿದರು.
ನಗರದ ಹಾಲಸಿದ್ಧನಾಥ ಸಕ್ಕರೆ ಕಾರ್ಖಾನೆ ಸಭಾಭವನದಲ್ಲಿ ಗುರುವಾರ ಕಾರ್ಯಕರ್ತರನ್ನು ಬಿಜೆಪಿಗೆ ಬರಮಾಡಿಕೊಂಡು ಮಾತನಾಡಿದ ಅವರು, ಕಾಂಗ್ರೆಸ್ ಕಾರ್ಯಕರ್ತರ ಸೇರ್ಪಡೆಯಿಂದ ಬಿಜೆಪಿ ಶಕ್ತಿ ಮತ್ತಷ್ಟು ಹೆಚ್ಚಿದೆ. ಕಾರ್ಯಕರ್ತರ ಆಶಯದಂತೆ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಲಾಗುವುದು ಎಂದು ಭರವಸೆ ನೀಡಿದರು.
ಸತೀಶ ಕೊಂಡೇಕರ, ವಿಶಾಲ ಸೂರ್ಯವಂಶಿ, ಉದಯ ಬೇಳೆೇಕರ, ತುಷಾರ ಕೊಂಡೇಕರ, ಕೇದಾರ ಸೂರ್ಯವಂಶಿ, ಕುಬೇರ ಕೊಂಡೇಕರ, ರೋಹನ್ ಚೌಹಾಣ, ಪ್ರಥಮೇಶ ಬೇಳೆೇಕರ, ಉದಯ ಕೊಂಡೇಕರ, ರಂಜಿತ ಕೊಂಡೇಕರ, ಅಜಿತ ಕೊಂಡೇಕರ, ಗಣೇಶ ಮೋರೆ, ಪ್ರಕಾಶ ಸಾಳುಂಕೆ ಸೇರಿದಂತೆ 20ಕ್ಕಿಂತ ಹೆಚ್ಚು ಕಾರ್ಯಕರ್ತರು ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿಗೆ ಸೇರ್ಪಡೆಗೊಂಡರು.
ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ಬಿಜೆಪಿ ಗ್ರಾಮೀಣ ಅಧ್ಯಕ್ಷ ಬಾಳಾಸಾಹೇಬ ಕದಂ, ಸಿದ್ದು ನರಾಟೆ, ಹಾಲಶುಗರ್ಸ್‌ ನಿರ್ದೇಶಕರಾದ ಶ್ರೀಕಾಂತ ಬನ್ನೆ, ಭರತ ನಸಲಾಪುರೆ, ಬಾಳಾಸಾಹೇಬ ಸದಲಗೆ, ಮಿಥುನ ಪಾಟೀಲ, ಅರುಣ ಬಿಲವಾಡೆ, ಬಾಬಾಸಾಹೇಬ ಜಾಧವ, ಅಲಗೊಂಡ ಪಾಟೀಲ, ಭರತ ಘೋಸರವಾಡೆ, ರೇಖಾ ಘೋಸರವಾಡೆ ಇದ್ದರು.

Spread the love

About Laxminews 24x7

Check Also

ನಿಪ್ಪಾಣಿ: ಸರ್ಕಾರಿ ಕಚೇರಿಗಳಿಗೆ ಬೇಕಿದೆ ಸ್ವಂತ ಕಟ್ಟಡ!

Spread the loveನಿಪ್ಪಾಣಿ: ಗಡಿಭಾಗದ ನಿಪ್ಪಾಣಿಯು ತಾಲ್ಲೂಕು ಕೇಂದ್ರವಾಗಿ ರಚನೆಯಾಗಿ ಎಂಟು ವರ್ಷವಾಗಿದೆ. ಆದರೆ, ಕೆಲವೇ ಇಲಾಖೆಗಳ ಕಚೇರಿಗಳಷ್ಟೇ ಕಾರ್ಯಾರಂಭ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ