Breaking News

SC-ST’ ಒಳಮೀಸಲಾತಿಗೆ `ಸುಪ್ರೀಂಕೋರ್ಟ್’ ಗ್ರೀನ್ ಸಿಗ್ನಲ್

ನವದೆಹಲಿ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಲ್ಲಿ ಉಪ ವರ್ಗೀಕರಣಕ್ಕೆ ಅವಕಾಶವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ ಬಹುಮತದಿಂದ ತೀರ್ಪು ನೀಡಿದೆ. ಮಹತ್ವದ ತೀರ್ಪಿನಲ್ಲಿ, ಏಳು ನ್ಯಾಯಾಧೀಶರ ಪೀಠವು – 6:1 ಬಹುಮತದಿಂದ- ಎಸ್ಸಿ / ಎಸ್ಟಿ ವರ್ಗಗಳಲ್ಲಿ ಹೆಚ್ಚು ಹಿಂದುಳಿದವರಿಗೆ ಪ್ರತ್ಯೇಕ ಕೋಟಾಗಳನ್ನು ನೀಡಲು ಉಪ ವರ್ಗೀಕರಣಕ್ಕೆ ಅವಕಾಶವಿದೆ ಎಂದು ಅಭಿಪ್ರಾಯಪಟ್ಟಿದೆ. ಉದ್ಯೋಗ ಮತ್ತು ಪ್ರವೇಶದಲ್ಲಿ ಕೋಟಾಕ್ಕಾಗಿ ಎಸ್ಸಿ ಮತ್ತು ಎಸ್ಟಿ ವರ್ಗಗಳಲ್ಲಿ ಉಪ ವರ್ಗೀಕರಣ ಮಾಡಲು ರಾಜ್ಯಗಳಿಗೆ ಅಧಿಕಾರವಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಸುಪ್ರೀಂ ಕೋರ್ಟ್ನ 7 ನ್ಯಾಯಾಧೀಶರ ಪೀಠವು 6:1 ಬಹುಮತದಿಂದ, ಮೀಸಲಾತಿ ವರ್ಗಗಳ ಅಂದರೆ ಪರಿಶಿಷ್ಟ …

Read More »

ಜೈಲಲ್ಲಿರುವ ನಟ ದರ್ಶನ್ ಕೈ ಸೇರಲಿದೆ ‘ಹುಬ್ಬಳ್ಳಿ ಸಿದ್ಧಾರೂಢ ಮಠದ ಕೃತಿ’

ಹುಬ್ಬಳ್ಳಿ, ಆಗಸ್ಟ್ 01: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ಆರೋಪದಲ್ಲಿ ನಟ ದರ್ಶನ್ ಬೆಂಗಳೂರು ಸೆಂಟ್ರಲ್ ಜೈಲು ಸೇರಿದ್ದಾರೆ. ನಟ ದರ್ಶನ್ ಹುಬ್ಬಳ್ಳಿಗೆ ಹೋದಾಗ ಅಲ್ಲಿನ ಶ್ರೀ ಸಿದ್ಧರೂಢ ಮಠಕ್ಕೆ ಕೆಲವು ಭಾರಿ ಭೇಟಿ ನೀಡಿದ್ದರು. ಶ್ರೀಗಳ ಗದ್ದುಗೆಯ ಆಶೀರ್ವಾದ ಪಡೆಯುತ್ತಿದ್ದರು. ಇದೀಗ ಇದೇ ಮಠದ ಪ್ರಸಾದ ಮತ್ತು ಕೃತಿ ಕೋರಿಯರ್ ಮೂಲಕ ಜೈಲಿಗೆ ಕಳಹಿಸಲಾಗಿದೆ. ಹೌದು, ಕೊಲೆ ಆರೋಪಿಯಾಗಿ ಸುಮಾರು 50 ದಿನಗಳಿಂದ ಜೈಲಿನಲ್ಲಿ ವಿಚಾರಣಾಧೀನ ಖೈದಿಯಾಗಿರುವ ನಟ …

Read More »

ಭ್ರೂಣ ಹತ್ಯೆ ಮಾಡಿಸಿದ ಪ್ರಿಯಕರ, ಕ್ರಮಕೈಗೊಳ್ಳದ ಪೊಲೀಸರ ವಿರುದ್ಧ ಪ್ರಧಾನಿಗೆ ಮಹಿಳೆ ಪತ್ರ

ಭ್ರೂಣ ಹತ್ಯೆ ಮಾಡಿಸಿದ ಪ್ರಿಯಕರ, ಕ್ರಮಕೈಗೊಳ್ಳದ ಪೊಲೀಸರ ವಿರುದ್ಧ ಪ್ರಧಾನಿಗೆ ಮಹಿಳೆ ಪತ್ರ ರಾಮನಗರ: ಭ್ರೂಣ ಹತ್ಯೆ ಮಾಡಿಸಿದ ಪ್ರಿಯಕರ (Love) ಹಾಗೂ ಆತನ ವಿರುದ್ಧ ಕ್ರಮಕೈಗೊಳ್ಳದ ಪೊಲೀಸರ (Ramangara Police) ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪ್ರಧಾನಿ ಮೋದಿಗೆ ಮಹಿಳೆಯೊಬ್ಬರು ಪತ್ರ ಬರೆದಿದ್ದಾರೆ. ಪ್ರಿಯಕರ ಮತ್ತು ಪೊಲೀಸರಿಂದ ಅನ್ಯಾಯಕ್ಕೊಳಗಾಗಿದ್ದೇನೆ ಎಂದು ಜಿಲ್ಲೆಯ ಮಾಗಡಿ (Magadi) ಮೂಲದ ಮಹಿಳೆ, ಪ್ರಧಾನಿ ಮೋದಿಗೆ (PM MOdi) ಪತ್ರ ಬರೆದಿದ್ದಾರೆ. ಒಂದು ವೇಳೆ ನ್ಯಾಯ …

Read More »

ಪೊಲೀಸರ ಕೈಯಿಂದ ತಪ್ಪಿಸಲೆತ್ನಿಸಿದ ರೌಡಿಶೀಟರ್ ಗೆ ಗುಂಡೇಟು

ಗದಗ: ಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಿ ಆಗಲೆತ್ನಿಸಿದ ರೌಡಿಶೀಟರ್ ಗೆ ಗುಂಡಿನ ರುಚಿ ತೋರಿಸಿದ್ದಾರೆ. ಗದಗ ಜಿಲ್ಲೆಯ ಲಕ್ಕುಂಡಿ ಕಣಗಿನಹಾಳ ರಸ್ತೆಯಲ್ಲಿ ಗುರುವಾರ (ಆ.1) ಘಟನೆ ನಡೆದಿದೆ. ರೌಡಿ ಶೀಟರ್ ಸಂಜಯ್ ಕೊಪ್ಪದ ಮೇಲೆ ಫೈರಿಂಗ್ ನಡೆಸಲಾಗಿದೆ. ರಾಬರಿ‌ ಕೇಸ್ ಗೆ ಸಂಬಂಧಿಸಿದಂತೆ ಸ್ಥಳ ಮಹಜರಿಗೆ ಪೊಲೀಸರು ಬಂದಿದ್ದರು.   ಸ್ಥಳ ಮಹಜರು ವೇಳೆ ರೌಡಿ ಶೀಟರ್ ಸಂಜಯ್ ಪೊಲೀಸರ ಮೇಲೆ ಕಲ್ಲೆಸೆದು ಪರಾರಿಯಾಗಲು ಯತ್ನಿಸಿದ್ದಾನೆ. ಓಡಲು ಮುಂದಾಗಿದ್ದ …

Read More »

ತುಂಗಭದ್ರೆಯ ಚೆಲುವಿಗೆ ಮನಸೋತ ಪ್ರವಾಸಿಗರು

ಮುನಿರಾಬಾದ್: ಇಲ್ಲಿನ ತುಂಗಭದ್ರಾ ಜಲಾಶಯವು ನಿರಂತರ ಮಳೆಯಿಂದ ಭರ್ತಿಯಾಗಿದ್ದು, ಹೆಚ್ಚುವರಿ ನೀರು ನದಿಗೆ ಹರಿಸಲಾಗುತ್ತಿದೆ. ಜಲಾಶಯದಿಂದ ಧುಮ್ಮಿಕ್ಕುವ ನೀರು ಮತ್ತು ನೊರೆಯ ದೃಶ್ಯವನ್ನು ಕಣ್ತುಂಬಿಕೊಳ್ಳಲು ಸಾವಿರಾರು ಪ್ರವಾಸಿಗರು ಬರುತ್ತಿದ್ದಾರೆ. ಜಲಾಶಯ ಹಿನ್ನೀರಿನ ಲೇಕ್ ವ್ಯೂ ಪ್ರವಾಸಿ ಮಂದಿರದ ಬಳಿ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಕಂಡುಬಂದರು. ತೆರೆ ಬರುವ ವೇಳೆ ಮತ್ತು ಗಾಳಿಯ ಪರಿಣಾಮ ಸಿಡಿಯುವ ನೀರ ಸಿಂಚನಕ್ಕೆ ಮೈವೊಡ್ಡಿ ಮಕ್ಕಳು ಸಮೇತ ಪ್ರವಾಸಿಗರು ಪುಳಕಗೊಂಡರು. ಅಲ್ಲಿನ ಸಿಬ್ಬಂದಿಯ ಎಚ್ಚರಿಕೆ …

Read More »

ಸಾಕು ನಾಯಿಯೊಂದು ರಕ್ತದಾನ ಮಾಡಿ ಇನ್ನೊಂದು ನಾಯಿಯ ಪ್ರಾಣ ಉಳಿಸಿದೆ.

ಕೊಪ್ಪಳ, ಆಗಸ್ಟ್ 1: ರಕ್ತದಾನ ಶ್ರೇಷ್ಠ ದಾನ ಎನ್ನುತ್ತಾರೆ. ಆದರೆ, ಇತ್ತೀಚೆಗೆ ಸೂಕ್ತ ಸಮಯದಲ್ಲಿ ರಕ್ತ ಸಿಗದೆ ಅನೇಕರು ಮೃತಪಡುತ್ತಿರುವ ಘಟನೆಗಳು ಮೇಲಿಂದ ಮೇಲೆ ವರದಿಯಾಗುತ್ತಿವೆ. ಮನುಷ್ಯರೇ ಮನುಷ್ಯರಿಗೆ ರಕ್ತದಾನ ಮಾಡಿ ಜೀವ ಉಳಿಸಲು ಹಿಂದುಮುಂದು ನೋಡುತ್ತಿರುವ ಸ್ಥಿತಿ ನಿರ್ಮಾಣವಾಗಿದೆ. ಆದರೆ ಒಂದು ನಾಯಿ ಇನ್ನೊಂದು ನಾಯಿ ಜೀವ ಉಳಿಸಲು ರಕ್ತದಾನ ಮಾಡಿರುವ ಅಪರೂಪದ ಘಟನೆ ಕೊಪ್ಪಳದಲ್ಲಿ ನಡೆದಿದೆ. ಇದು ಅಚ್ಚರಿಯನಿಸಿದರು ಕೂಡಾ ನಿಜ. ಕೊಪ್ಪಳದಲ್ಲಿ ಬುಧವಾರ ಸಾಕಿದ ನಾಯಿಯೊಂದು ಮತ್ತೊಂದು …

Read More »

ಬೆಳಗಾವಿ-ಮೀರಜ್ ನಡುವೆ ಪ್ರಯಾಣಿರ ಅನುಕೂಲಕ್ಕಾಗಿ ವಿಶೇಷ ಪ್ಯಾಸೆಂಜರ್ ರೈಲು ಓಡಾಟ

ಬೆಳಗಾವಿ, ಆಗಸ್ಟ್.01: ಪಶ್ಚಿಮ ಘಟ್ಟದಲ್ಲಿ ಭಾರಿ ಮಳೆ ಆಗುತ್ತಿದ್ದು, ಸಪ್ತ ನದಿಗಳು ಹರಿಯುವ ಬೆಳಗಾವಿ (Belagavi) ಜಿಲ್ಲೆಯಲ್ಲಿ ಪ್ರವಾಹ ಎದುರಾಗಿದೆ. ಗ್ರಾಮಗಳು, ಸಾವಿರಾರು ಎಕರೆ ಜಮೀನು, ಸೇತುವೆಗಳು ಮುಳುಗಿ ಜನರ ಬದುಕು ಬೀದಿಗೆ ಬಂದಿದೆ. ಇನ್ನು ಕೃಷ್ಣಾ ನದಿಯಿಂದ 3 ಲಕ್ಷ ಕ್ಯೂಸೆಕ್ ನೀರು ಮತ್ತು ಘಟಪ್ರಭಾದಿಂದ 73 ಸಾವಿರ ಕ್ಯೂಸೆಕ್‌ಗಿಂತ ಹೆಚ್ಚು ನೀರನ್ನು ಹರಿಬಿಡುತ್ತಿರುವ ಹಿನ್ನೆಲೆ ಬೆಳಗಾವಿ ಜಿಲ್ಲೆಯ ಕೃಷ್ಣಾ ಹಾಗೂ ಘಟಪ್ರಭಾ ನದಿಯ ವ್ಯಾಪ್ತಿಯಲ್ಲಿ 44ಕ್ಕೂ ಹೆಚ್ಚು ಸೇತುವೆಗಳು …

Read More »

ಸಂತ್ರಸ್ತರಿಗೆ ಪರಿಹಾರದ ಅಭಯ ನೀಡಿದ ಯುವ ಮುಖಂಡ ಸರ್ವೋತ್ತಮ

ತಿಗಡಿ, ಸುಣಧೋಳಿ, ಹುಣಶ್ಯಾಳ ಪಿವೈ, ಬೀಸನಕೊಪ್ಪ, ಢವಳೇಶ್ವರ, ಅರಳಿಮಟ್ಟಿ, ಅವರಾದಿ ಗ್ರಾಮಗಳಿಗೆ ಭೇಟಿ ನೀಡಿದ ಸರ್ವೋತ್ತಮ ಜಾರಕಿಹೊಳಿ ಮೂಡಲಗಿ- ಪ್ರವಾಹಕ್ಕೀಡಾಗಿರುವ ಸಂತ್ರಸ್ತ ಕುಟುಂಬಗಳಿಗೆ ಅಗತ್ಯವಿರುವ ಎಲ್ಲ ನೆರವನ್ನು ನೀಡುವುದಾಗಿ ಯುವ ಮುಖಂಡ ಸರ್ವೋತ್ತಮ ಜಾರಕಿಹೊಳಿ ಅವರು ಭರವಸೆ ನೀಡಿದರು. ತಾಲೂಕಿನ ಘಟಪ್ರಭಾ ನದಿ ತೀರದ ಗ್ರಾಮಗಳಿಗೆ ಭೇಟಿ ನೀಡಿ ಮಾತನಾಡಿದ ಅವರು, ಸಂತ್ರಸ್ತರಿಗೆ ಅಗತ್ಯವಿರುವ ಸರ್ಕಾರದ ಸೌಲಭ್ಯಗಳನ್ನು ಕಲ್ಪಿಸಿಕೊಡಲು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರಿಗೆ ಈಗಾಗಲೇ ಮನವಿ ಮಾಡಿಕೊಂಡಿದ್ದೇನೆ ಎಂದು …

Read More »

ವಿವಾದದ ಸುಳಿಯಲ್ಲಿ ನಟ ದರ್ಶನ್‌ ಬಂಧಿಸಿದ್ದACP ಚಂದನ್‌ ಕುಮಾರ್‌.

ಬೆಂಗಳೂರು: ನಟ ದರ್ಶನ್ ಬಂಧಿಸಿ ಸುದ್ದಿಯಾಗಿದ್ದ ಎಸಿಪಿ ಚಂದನ್‌ ಕುಮಾರ್‌ ವಿರುದ್ದ ಕೆಲ ಆರೋಪಗಳು ಕೇಳಿ ಬರುತ್ತಿವೆ. ನಟ ದರ್ಶನ್‌ ಬಂಧನವಾದ ಬೆನ್ನಲೇ ಸುದ್ದಿಯಾಗಿರುವ ಎಸಿಪಿ ಚಂದನ್‌ ಕುಮಾರ್ ಈಗ ದಲಿತ ವಿರೋಧಿ ಎನ್ನುವ ಆರೋಪ ಕೇಳಿ ಬಂದಿದ್ದು, ಚಂದನ್‌ ಅವರ ಬಗ್ಗೆ ಕೇಳಿ ಬರುತ್ತಿರುವ ಆರೋಪ ಇನ್ನೂ ಸಾಬೀತಾಗಿಲ್ಲ. ಎಸಿಪಿ ಚಂದನ್‌ ಕುಮಾರ್ ಅವರ ಬಗ್ಗೆ ಹರಿರಾಮ್ ಎ ಎನ್ನುವವರು ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಹೀಗೆ ಬರೆದುಕೊಂಡಿದ್ದಾರೆ. ಈತನು …

Read More »

ಓಟಿಎಸ್ ಯೋಜನೆ 15 ದಿನ ವಿಸ್ತರಿಸಲು ಆಗ್ರಹ

ಬೆಂಗಳೂರು, ಜುಲೈ 31: ಒಂದು ಬಾರಿ ಪರಿಹಾರ (ಓಟಿಎಸ್) ಯೋಜನೆಯನ್ನು ಬಿಬಿಎಂಪಿ ಜಾರಿಗೆ ತಂದು ಬೆಂಗಳೂರಿನ ಆಸ್ತಿ ಮಾಲೀಕರುಗಳಿಗೆ ಅನುಕೂಲ ಮಾಡಿಕೊಟ್ಟಿದ್ದು ಸ್ವಾಗತಾರ್ಹ. ತೆರಿಗೆ ಬಾಕಿ ಬರುವುದಿದೆ, ಹೀಗಾಗಿ ಇನ್ನು ಎರಡು ವಾರಗಳ ಕಾಲ ಈ ಯೋಜನೆಯನ್ನು ವಿಸ್ತರಣೆ ಮಾಡುವಂತೆ ಎಎಪಿ ರಾಜ್ಯಾಧ್ಯಕ್ಷರಾದ ಮುಖ್ಯಮಂತ್ರಿ ಚಂದ್ರು ಅವರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಸರ್ಕಾರದ ಒಂದು ಬಾರಿ ಪರಿಹಾರ (ಓಟಿಎಸ್) ಯೋಜನೆಯಿಂದಾಗಿ ಈಗಾಗಲೇ ಬೆಂಗಳೂರಿನ ಆಸ್ತಿ ಮಾಲೀಕರು ಪ್ರಯೋಜನವನ್ನು ಪಡೆದುಕೊಂಡು ತಮ್ಮ …

Read More »