ಚಿಕ್ಕೋಡಿ: ಮಹಾರಾಷ್ಟ್ರದ ಕೊಂಕಣ ಪ್ರದೇಶದಲ್ಲಿ ಮಳೆ ಹೆಚ್ಚು ಸುರಿಯುತ್ತಿರುವ ಹಿನ್ನೆಲೆಯಲ್ಲಿ ಚಿಕ್ಕೋಡಿ ಉಪ ವಿಭಾಗದ ಕೃಷ್ಣಾ ಅದರ ಉಪನದಿಗಳಾದ ದೂಧಗಂಗಾ, ವೇದಗಂಗಾ ನದಿಗಳಲ್ಲಿ ನೀರಿನ ಹರಿವು ಮಂಗಳವಾರ ಮತ್ತೇ 2 ಅಡಿಯಷ್ಟು ಹೆಚ್ಚಳವಾಗಿದೆ. ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಿದ ರಾಜಾಪೂರೆ ಬ್ಯಾರೇಜ್ ನಲ್ಲಿ 16,125 ಕ್ಯುಸೆಕ್ ಹೊರ ಹರಿವು ಇದ್ದು, ದೂಧಗಂಗಾ ನದಿಯಿಂದ 4,920 ಕ್ಯುಸೆಕ್ ಸೇರಿದಂತೆ ಕೃಷ್ಣಾ ಹಾಗೂ ದೂಧಗಂಗಾ ನದಿಗಳ ಸಂಗಮ ಸ್ಥಳ …
Read More »ಪೋಷಣ್ ಅಭಿಯಾನದಡಿ ಅಂಗನವಾಡಿ ಕಾರ್ಯಕರ್ತೆಯರಿಗೆ ಮೊಬೈಲ್: ಹೆಬ್ಬಾಳಕರ
ಬೆಳಗಾವಿ: ‘ತಮ್ಮ ಕೆಲಸಗಳಿಗೆ ಉತ್ತಮ ಮೊಬೈಲ್ ಅಗತ್ಯ ಎಂದು ಅಂಗನವಾಡಿ ಕಾರ್ಯಕರ್ತೆಯರು ಕಳೆದ ಅನೇಕ ವರ್ಷಗಳಿಂದ ಹೋರಾಟ ಮಾಡುತ್ತಿದ್ದರು. ಇದಕ್ಕೆ ಹಿಂದಿನ ಬಿಜೆಪಿ ಸರ್ಕಾರ ಸ್ಪಂದಿಸಿರಲಿಲ್ಲ. ನಾನು ಮುಖ್ಯಮಂತ್ರಿಗೆ, ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿದ್ದರಿಂದ ಮೊಬೈಲ್ ಮಂಜೂರಾಗಿವೆ’ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳಕರ ಹೇಳಿದ್ದಾರೆ. ‘ಮೊಬೈಲ್ ಮಂಜೂರು ಮಾಡಿದ್ದು ಕೇಂದ್ರ ಸರ್ಕಾರ’ ಎಂಬ ಶಾಸಕ ಅಭಯ ಪಾಟೀಲ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ‘ಕೇಂದ್ರ ಸರ್ಕಾರ ಪೋಷಣ್ ಅಭಿಯಾನದ ಅಡಿಯಲ್ಲಿ …
Read More »ಸಾಹಿತ್ಯಕ್ಕೆ ಗದುಗಿನ ಮಹಾಭಾರತ ಕೊಡುಗೆ ದೊಡ್ಡದು: ಪ್ರೊ.ಗಣೇಶ ಚಲವಾದಿ
ಗದಗ: ‘ಕನ್ನಡ ಸಾಹಿತ್ಯ ಕ್ಷೇತ್ರವನ್ನು ಉತ್ತುಂಗ ಶಿಖರದಲ್ಲಿ ಇರುವಂತೆ ಮಾಡಿದ ಕವಿಗಳ ಸಾಲಿಗೆ ಸೇರುವ ‘ರೂಪಕ ಸಾಮ್ರಾಜ್ಯ ಚಕ್ರವರ್ತಿ’ ಕುಮಾರವ್ಯಾಸ ಗದುಗಿನ ವೀರನಾರಾಯಣ ದೇವಸ್ಥಾನದಲ್ಲಿ ಕುಳಿತು ಬರೆದ ಗದುಗಿನ ಮಹಾಭಾರತ ಕನ್ನಡ ಸಾಹಿತ್ಯ ಲೋಕಕ್ಕೆ ಒಂದು ದೊಡ್ಡ ಕೊಡುಗೆ’ ಎಂದು ಪ್ರೊ.ಗಣೇಶ ಚಲವಾದಿ ಹೇಳಿದರು. ವಿಜಯ ವಾಣಿಜ್ಯ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಳು ಗದುಗಿನ ವೀರನಾರಾಯಣ ದೇವಸ್ಥಾನಕ್ಕೆ ಮಂಗಳವಾರ ಭೇಟಿ ನೀಡಿದಾಗ ಇತಿಹಾಸ ಪರಿಚಯಿಸಿ ಮಾತನಾಡಿದರು. ಗದುಗಿನ ವೀರನಾರಾಯಣ ದೇವಸ್ಥಾನವು ಕ್ರಿಶ 1,117 …
Read More »ಪೋಕ್ಸೊ ಸಂತ್ರಸ್ತೆಗೆ ಬೆದರಿಕೆ: ಮಂಜುನಾಥ ಸ್ವಾಮೀಜಿ ವಿರುದ್ಧದ ವಿಚಾರಣೆಗೆ HC ತಡೆ
ಬೆಂಗಳೂರು: ‘ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಹೊತ್ತ ಪ್ರಕರಣದಲ್ಲಿನ ಸಂತ್ರಸ್ತೆಗೆ ಬೆದರಿಕೆ ಹಾಕಿದ್ದಾರೆ’ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಕುಣಿಗಲ್ ತಾಲ್ಲೂಕಿನ ಹುಲಿಯೂರು ದುರ್ಗ ಹೋಬಳಿ ಹಂಗರಹಳ್ಳಿಯ ಶ್ರೀವಿದ್ಯಾ ಚೌಡೇಶ್ವರಿ ದೇವಸ್ಥಾನದ (ಶ್ರೀ ಮಠ) ಬಾಲ ಮಂಜುನಾಥ ಸ್ವಾಮೀಜಿ (36) ವಿರುದ್ಧದ ವಿಚಾರಣಾ ಕೋರ್ಟ್‌ನ ನ್ಯಾಯಿಕ ಪ್ರಕ್ರಿಯೆಗೆ ಹೈಕೋರ್ಟ್ ತಡೆ ನೀಡಿದೆ. ಈ ಕುರಿತಂತೆ ಬಾಲ ಮಂಜುನಾಥ ಸ್ವಾಮೀಜಿ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ …
Read More »ಕೃಷ್ಣಾ ನದಿಯಲ್ಲಿ ತೆಪ್ಪ ಮುಳುಗಿ ಹಲವರು ನಾಪತ್ತೆ, ಓರ್ವನ ಶವ ಪತ್ತೆ
ವಿಜಯಪುರ: ಇಸ್ಪೀಟ್ ಅಡ್ಡೆ ಮೇಲೆ ಪೊಲೀಸರು ದಾಳಿ ಮಾಡುತ್ತಿದ್ದಾರೆ ಎಂಬ ಭೀತಿಯಿಂದ ತೆಪ್ಪದ ಮೂಲಕ ನದಿಯಲ್ಲಿ ಹೊರಟಿದ್ದಾಗ ಬಿರುಗಾಳಿಗೆ ತೆಪ್ಪ ಮುಳುಗಿದ ಘಟನೆ ಮಂಗಳವಾರ ಸಂಜೆ ಜಿಲ್ಲೆಯ ಕೃಷ್ಣಾ ನದಿಯಲ್ಲಿ ನಡೆದಿದೆ. ಘಟನೆಯಲ್ಲಿ ಹಲವರು ನಾಪತ್ತೆಯಾಗಿದ್ದು, ಓರ್ವನ ಶವ ಪತ್ತೆಯಾಗಿದೆ. ಜಿಲ್ಲೆಯ ಕೊಲ್ಹಾರ ತಾಲೂಕಿನ ಬಳೂತಿ ಬಳಿ ಕೃಷ್ಣಾ ನದಿಗೆ ನಿರ್ಮಿಸಿರುವ ಏತ ನೀರಾವರಿ ಜಾಕವೆಲ್ ಬಳಿ ದುರಂತ ಸಂಭವಿಸಿದೆ. 35 ವರ್ಷದ ಪುಂಡಲೀಕ ಎನ್ ಕಂಚಿ ಎಂಬಾತನ …
Read More »ಕಾವೇರಿ ನದಿಗೆ ಭಾರಿ ನೀರು, ಕೆಲವೇ ದಿನದಲ್ಲಿ ಕೆಆರ್‌ಎಸ್ ಡ್ಯಾಂ ಫುಲ್?
ಮುಂಗಾರು ಮಳೆ ಕರ್ನಾಟಕ ರಾಜ್ಯದಲ್ಲಿ ಅಲರ್ಟ್ ಆಗಿದ್ದು, ಮಲೆನಾಡು ಭಾಗ ಸೇರಿದಂತೆ ಪ್ರಮುಖ ನದಿಗಳು ಹುಟ್ಟುವ ಪ್ರದೇಶದಲ್ಲಿ ಭಾರಿ ಮಳೆ ಬೀಳುತ್ತಿದೆ. ಹೀಗಾಗಿ ಕರ್ನಾಟಕದ ನದಿಗಳ ನೀರಿನ ಪ್ರಮಾಣವೂ ಭಾರಿ ಏರಿಕೆ ಕಂಡಿದ್ದು, ತುಂಬಿ ತುಳುಕುತ್ತಿವೆ. ಈ ಮೂಲಕ ಕರ್ನಾಟಕದಲ್ಲಿ ನದಿಗಳಿಗೆ ಅಡ್ಡಲಾಗಿ ಕಟ್ಟಿರುವ ಡ್ಯಾಂ & ಚೆಕ್ ಡ್ಯಾಂಗೆ ಭರ್ಜರಿ ನೀರು ಹರಿದು ಬರುತ್ತಿದ್ದು, ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಕೆಆರ್‌ಎಸ್ ಡ್ಯಾಂ ಇನ್ನೇನು ಸಂಪೂರ್ಣ ತುಂಬುವ ಹಂತಕ್ಕೆ …
Read More »ಉದ್ಯೋಗ ವಾರ್ತೆ : ‘KSRTC’ ಯಿಂದ 13,000 ಚಾಲಕರ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ.!
ಬೆಂಗಳೂರು : KSRTC ಬಸ್ ಚಾಲಕರಾಗಬೇಕು ಎಂದು ಅಂದುಕೊಂಡವರಿಗೆ ಇಲ್ಲಿದೆ ಸುವರ್ಣಾವಕಾಶ. KSRTC 13 ಸಾವಿರ ಬಸ್ ಚಾಲಕರ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುತ್ತಿದೆ. ಆಯಾ ಬಸ್ ಡಿಪೋಗಳು ಗುತ್ತಿಗೆ ಆಧಾರದಲ್ಲಿ ನೇಮಕಾತಿ ಮಾಡಿಕೊಳ್ಳುತ್ತಿದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ. ಚಾಮರಾಜನಗರ, ರಾಮನಗರ, ಆನೇಕಲ್ ಡಿಪೋದಲ್ಲಿ ಚಾಲಕ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಚಾಮರಾಜನಗರ ಡಿಪೋದಲ್ಲಿ ಕೆಲಸ ಬೇಕಿದ್ರೆ 8050980889, 8618876846. ಹಾಗೂ ರಾಮನಗರ, ಅನೇಕಲ್ ನಲ್ಲಿ ಕೆಲಸ ಬೇಕಿದ್ರೆ 8050980889, 8618876846 ಸಂಪರ್ಕಿಸಬಹುದಾಗಿದೆ. …
Read More »ವಸತಿ ರಹಿತರಿಗೆ ಡಿಸಿಎಂ ಡಿ.ಕೆ ಶಿವಕುಮಾರ್ ಗುಡ್ ನ್ಯೂಸ್..!
ಚನ್ನಪಟ್ಟಣ : ಸೈಟ್ ಇಲ್ಲದವರಿಗೆ ಸೈಟ್ ಹಾಗೂ ಮನೆ ಇಲ್ಲದವರಿಗೆ ಮನೆ ಕೊಡಿಸುವ ಕಾರ್ಯಕ್ರಮವನ್ನು ರೂಪಿಸಿ ಅದನ್ನು ಕಾರ್ಯರೂಪಕ್ಕೆ ತರುವ ಜವಾಬ್ದಾರಿ ನನ್ನದು ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು. ಚನ್ನಪಟ್ಟಣದ ಮಳೂರಿನಲ್ಲಿ ಇಂದು ಹಮ್ಮಿಕೊಂಡಿದ್ದ ‘ಬಾಗಿಲಿಗೆ ಬಂತು ಸರಕಾರ, ಸೇವೆಗೆ ಇರಲಿ ಸಹಕಾರ’ ಬೃಹತ್ ಜನಸ್ಪಂದನ ಕಾರ್ಯಕ್ರಮವನ್ನು ಉದ್ದೇಶಿಸಿ ಡಿಸಿಎಂ ಡಿಕೆ ಶಿವಕುಮಾರ್ ಮಾತನಾಡಿದರು. ಜನರನ್ನು ಸರ್ಕಾರವೇ ನೇರವಾಗಿ ಈ ಕಾರ್ಯಕ್ರಮದಡಿ ಸಂಪರ್ಕಿಸುತ್ತಿದೆ. ಪ್ರತಿನಿತ್ಯ ಜನರು ಸರ್ಕಾರಿ ಕಚೇರಿಗಳಿಗೆ …
Read More »ಹಿಂದು ಎಂದಿಗೂ ಹಿಂಸೆ ಬಯಸುವುದಿಲ್ಲ: ‘ರಾಗಾ’ ಹೇಳಿಕೆಗೆ ವ್ಯಾಪಕ ಖಂಡನೆ
ಧಾರವಾಡ, ಜುಲೈ 02: ಹೊಸ ಕೇಂದ್ರ ಸರ್ಕಾರ ರಚನೆ ಆದ ಬಳಿಕ ಮೊದಲ ಲೋಕಸಭಾ ಅಧಿವೇಶನದಲ್ಲಿ ಕಾಂಗ್ರೆಸ್ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರು ಹಿಂದೂಗಳ ಕುರಿತು ದೇವರ ಫೋಟೋ ಹಿಡಿದು ಮಾತನಾಡಿದರು. ಅವರ ಈ ಹೇಳಿಕೆಗೆ ವ್ಯಾಪಕ ಖಂಡನೆ ಕೇಳಿ ಬಂದಿದೆ. ಎಐಸಿಸಿ ವರಿಷ್ಠ ರಾಹುಲ್ ಗಾಂಧಿ ಹೇಳಿಕೆಯನ್ನು ನಾನು ವಿರೋಧಿಸುತ್ತೇನೆ. ರಾಹುಲ್ ಹೇಳಿಕೆಯನ್ನು ಖಂಡಿಸುತ್ತೇನೆ ಎಂದು ಧಾರವಾಡದಲ್ಲಿ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದರು. ಮಂಗಳವಾರ ಸುದ್ದಿಗಾರರ …
Read More »ಹೊಸ BPL, APL ರೇಷನ್ ಕಾರ್ಡ್ ನಿರೀಕ್ಷೆಯಲ್ಲಿದ್ದವರಿಗೆ ಗಮನಕ್ಕೆ: ಇಂದು, ನಾಳೆ ಅರ್ಜಿ ಸಲ್ಲಿಕೆ-ತಿದ್ದುಪಡಿಗೆ ಅವಕಾಶ
ಬೆಂಗಳೂರು: ಹೊಸ ಎಪಿಎಲ್, ಬಿಪಿಎಲ್ ಕಾರ್ಡ್ ಗೆ ಅರ್ಜಿ ಸಲ್ಲಿಸೋ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್ ಎನ್ನುವಂತೆ, ಇಂದು, ನಾಳೆ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗಿದೆ. ಈ ಬಗ್ಗೆ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯಿಂದ ಮಾಹಿತಿ ಹಂಚಿಕೊಂಡಿದ್ದು, ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿದೆ ಅಂತ ತಿಳಿಸಿದೆ. ದಿನಾಂಕ 02-07-2024 ರಿಂದ ದಿನಾಂಕ 03-07-2024ರವರೆಗೆ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಬೆಳಿಗ್ಗೆ 10 …
Read More »
Laxmi News 24×7