Breaking News

1-10ನೇ ತರಗತಿ ವಿದ್ಯಾರ್ಥಿಗಳಿಗೆ ಗುಡ್‌ ನ್ಯೂಸ್‌ : ಇಂದಿನಿಂದಲೇ ವಾರದ 6 ದಿನವೂ ಮಕ್ಕಳಿಗೆ ಮೊಟ್ಟೆ ವಿತರಣೆ!

1-10ನೇ ತರಗತಿ ವಿದ್ಯಾರ್ಥಿಗಳಿಗೆ ಗುಡ್‌ ನ್ಯೂಸ್‌ : ಇಂದಿನಿಂದಲೇ ವಾರದ 6 ದಿನವೂ ಮಕ್ಕಳಿಗೆ ಮೊಟ್ಟೆ ವಿತರಣೆ! ಬೆಂಗಳೂರು: ರಾಜ್ಯದ ಸರ್ಕಾರಿ ಶಾಲಾ ಮತ್ತು ಅನುದಾನಿತ ಶಾಲಾ ಮಕ್ಕಳಿಗೆ ಗುಡ್ ನ್ಯೂಸ್ ಎನ್ನುವಂತೆ ಇಂದಿನಿಂದಲೇ ವಾರದಲ್ಲಿ 6 ದಿನವೂ ಮೊಟ್ಟೆ ವಿತರಣೆ ಮಾಡುವ ನಿರೀಕ್ಷೆಯಿದೆ. ಸೆಪ್ಟೆಂಬರ್‌ ತಿಂಗಳಿನಿಂದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಮಕ್ಕಳಿಗೆ ವಾರದ 6 ದಿನವೂ ಮೊಟ್ಟೆ ವಿತರಿಸಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ …

Read More »

ಗುದದ್ವಾರದಲ್ಲಿ 1.19 ಕೋಟಿ ರೂ. ಮೌಲ್ಯದ ಚಿನ್ನ ಗುಪ್ತವಾಗಿ ಸಾಗಿಸುತ್ತಿದ್ದ ಶ್ರೀಲಂಕಾ ಪ್ರಜೆ ಅರೆಸ್ಟ್

ಬೆಂಗಳೂರು: 1.19 ಕೋಟಿ ರೂಪಾಯಿ ಮೌಲ್ಯದ ಚಿನ್ನವನ್ನು ಗುದದ್ವಾರದಲ್ಲಿಟ್ಟುಕೊಂಡು ಕಳ್ಳ ಸಾಗಣೆ ಮಾಡುತ್ತಿದ್ದ ಶ್ರೀಲಂಕಾ ಪ್ರಜೆಯನ್ನು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ. ಪೇಸ್ಟ್ ಮಾದರಿಯ ಚಿನ್ನವನ್ನು ಮಾತ್ರೆಗಳು ಹಾಗೂ ಚಿನ್ನದ ಬಿಸ್ಕತ್ ಗಳನ್ನು ಬಚ್ಚಿಟ್ಟುಕೊಂಡು ಕಳ್ಳ ಸಾಗಣೆ ಮಾಡಲಾಗುತ್ತಿತ್ತು. ಬಂಧಿತ ಶ್ರೀಲಂಕಾ ಪ್ರಜೆಯಿಂದ 1.19 ಕೋಟಿ ರೂಪಾಯಿ ಮೌಲ್ಯದ 1 ಕೆಜಿ 670 ಗ್ರಾಂ ತೂಕದ ಚಿನ್ನ ಜಪ್ತಿ ಮಾಡಲಾಗಿದೆ. ಆಗಸ್ಟ್ 31 ರಂದು ರಾತ್ರಿ ಶ್ರೀಲಂಕಾದ …

Read More »

ಆನ್ಲೈನ್ ಗೇಮ್, ಬೆಟ್ಟಿಂಗ್ ಆಯಪ್ ನಿಷೇಧಿಸಲು ಆಗ್ರಹ: ಅಮಿತ್ ಶಾ ಗೆ ಪತ್ರ ಬರೆದ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ

ಬೆಂಗಳೂರು: ಆನ್ಲೈನ್ ಗೇಮ್, ಬೆಟ್ಟಿಂಗ್ ಆಯಪ್ ನಿಷೇಧಿಸುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ಪತ್ರ ಬರೆದಿದ್ದಾರೆ. ಯುವಜನತೆಯನ್ನು ಹಾಳು ಮಾಡಿ ಬಡ ಕುಟುಂಬಗಳನ್ನು ಬೀದಿಗೆ ತಳ್ಳುತ್ತಿರುವ ಆನ್ಲೈನ್ ಗೇಮ್ ಮತ್ತು ಬೆಟ್ಟಿಂಗ್ ಮತ್ತಿತರ ಆಯಪ್ ಗಳನ್ನು ನಿರ್ಬಂಧಿಸಬೇಕೆಂದು ಕೋರಿದ್ದಾರೆ. ಮಕ್ಕಳು, ಯುವಜನತೆ ಆನ್ಲೈನ್ ಬೆಟ್ಟಿಂಗ್ ಆಯಪ್ ಗಳ ವ್ಯಸನಿಗಳಾಗಿ ಹಣ ಕಳೆದುಕೊಳ್ಳುತ್ತಿದ್ದಾರೆ. ಇದರಿಂದ ಅವರ ಮತ್ತು ಅವರ ಕುಟುಂಬದವರ …

Read More »

ಮಾನವೀಯ ಮೌಲ್ಯಗಳೊಂದಿಗೆ ಪ್ರಾಮಾಣಿಕ ಬದುಕು ಕಟ್ಟಿಕೊಳ್ಳಿ; ಜ| ಸಂತೋಷ್‌ ಹೆಗ್ಡೆ

ಶಿರ್ವ: ದುರಾಸೆ ದೇಶದಲ್ಲಿ ರೋಗವಾಗಿ ಬೆಳೆಯುತ್ತಿದ್ದು, ಯುವಜನತೆ ಹೆತ್ತವರ ಸಹಕಾರದೊಂದಿಗೆ ಇದ್ದುದರಲ್ಲಿಯೇ ಸಂತಸ ಪಡುವ ಗುಣಗಳನ್ನು ಬೆಳೆಸಿಕೊಂಡಲ್ಲಿ ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣ ಸಾಧ್ಯ.ಮಾನವೀಯತೆ ಇದ್ದರೆ ಸಮಾಜದಲ್ಲಿ ಶಾಂತಿ ಸೌಹಾರ್ದತೆ ನೆಲೆಸುತ್ತದೆ. ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಪ್ರಾಮಾಣಿಕ ಬದುಕು ಕಟ್ಟಿಕೊಳ್ಳುವುದ ರೊಂದಿಗೆ ಸಮಾಜದ ಭಾವನೆಗಳನ್ನು ಬದಲಾಯಿಸಬಹುದು ಎಂದು ಸರ್ವೋತ್ಛ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಜ| ಎನ್‌.ಸಂತೋಷ್‌ ಹೆಗ್ಡೆ ಹೇಳಿದರು. ಅವರು ಸೆ.1 ರಂದು ಬಂಟಕಲ್ಲು ಶ್ರೀ ಮಧ್ವ ವಾದಿರಾಜ ತಾಂತ್ರಿಕ …

Read More »

ಕೋವಿಡ್ ಹಗರಣದ ತನಿಖೆಯಾಗಲಿ, ನಮಗೆ ಯಾವುದೇ ತೊಂದರೆಯಿಲ್ಲ: ಜೋಶಿ

ಹುಬ್ಬಳ್ಳಿ: ಬಿಜೆಪಿ ಸರಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾದ ಕೋವಿಡ್ ಹಗರಣದ ತನಿಖೆ ಮಾಡಲಿ ನಮಗೆ ಯಾವುದೇ ತೊಂದರೆಯಿಲ್ಲ. ಯಾರಾದರು ಭ್ರಷ್ಟಾಚಾರ ಮಾಡಿದ್ದರೆ ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ. ಕಾಂಗ್ರೆಸ್‌ ಸರಕಾರ ಅಧಿಕಾರಕ್ಕೆ ಬಂದು ಒಂದೂವರೆ ವರ್ಷವಾದರೂ ಕೋವಿಡ್ ಕಾಲದ ಹಗರಣದ ಬಗ್ಗೆ ಇವರಿಗೆ ನೆನಪಾಗಲಿಲ್ಲವಾ? ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ತಿರುಗೇಟು ನೀಡಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರೇ ತಪ್ಪು ಮಾಡಿದ್ದರೂ ಕಾನೂನಿನ ಪ್ರಕಾರ ಶಿಕ್ಷೆಯಾಗಲಿ. ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿಯವರ …

Read More »

ಧರ್ಮ ಗೌರವಿಸುವ ಜನರೊಂದಿಗೆ ವ್ಯಾಪಾರ ಮಾಡಿ: ಯತ್ನಾಳ್

ವಿಜಯಪುರ: ಹಬ್ಬ-ಹರಿದಿನಗಳು ಸೇರಿ ಇತರ ದಿನಗಳಲ್ಲೂ ಸನಾತನ ಹಿಂದೂ ಧರ್ಮ, ಸಂಸ್ಕೃತಿ, ಆಚರಣೆ, ಸಂಪ್ರದಾಯವನ್ನು ಗೌರವಿಸುವ, ಪ್ರೀತಿಸುವ ಹಾಗೂ ಉಳಿಸಿ ಬೆಳೆಸುವ ಜನರೊಂದಿಗೆ ವ್ಯಾಪಾರ, ವ್ಯವಹಾರ ಮಾಡಬೇಕೆಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ. ನಮ್ಮ ಹಿಂದೂ ಧರ್ಮ ನಮ್ಮ ದೇಶದ ಒಂದು ಜೀವನದ ಪದ್ದತಿ, ಸಂಸ್ಕೃತಿಯಾಗಿದೆ. ದೇಶದ ಸುರಕ್ಷತೆ, ಅಭಿವೃದ್ಧಿ ಜತೆಗೆ ಧರ್ಮದ ಉಳಿವಿಗಾಗಿ, ನಮ್ಮ ಧರ್ಮವನ್ನು ಗೌರವಿಸುವ, ದೇಶಾಭಿಮಾನ ಹೊಂದಿರುವ ಪ್ರತಿಯೊಬ್ಬ ಬೀದಿ ಬದಿ ವ್ಯಾಪಾರಸ್ಥರಿಂದ ಹಿಡಿದು, ದೊಡ್ಡ …

Read More »

ʼಸಿಎಂ ಕುರ್ಚಿʼಗೆ ಕರ್ಚೀಫ್‌ ಹಾಕಿದ ಮತ್ತೊಬ್ಬ ನಾಯಕ; ಯಾರು?

ರಾಜ್ಯ ರಾಜಕಾರಣದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಮಾತುಗಳು ಜೋರಾಗಿ ಕೇಳಿಬರುತ್ತಿರುವುದರ ನಡುವೆಯೇ ಈ ರೇಸ್‌ಗೆ ಮತ್ತೊಬ್ಬ ಕಾಂಗ್ರೆಸ್ ನಾಯಕ ಇಳಿದಿದ್ದಾರೆ. ಸಿದ್ದರಾಮಯ್ಯ ಅವರ ನಂತರ ಡಿ.ಕೆ.ಶಿವಕುಮಾರ್‌ ಅವರೇ ಸಿಎಂ ಕುರ್ಚಿಯ ಪ್ರಬಲ ಆಕಾಂಕ್ಷಿ ಎನ್ನುವ ಗುಸುಗುಸು ಇದೆ. ಇದಲ್ಲದೆ ಈಗಾಗಲೇ ಹಲವು ಕಾಂಗ್ರೆಸ್‌ ನಾಯಕರು ಸಿಎಂ ಆಗುವ ಬಗ್ಗೆ ಕನಸು ಕಾಣುತ್ತಿದ್ದಾರೆ. ಈಗ ಈ ಸಿಎಂ ರೇಸ್‌ಗೆ ಮಾಜಿ ಸಚಿವ ಆರ್.ವಿ.ದೇಶಪಾಂಡೆ ಕೂಡ ಇಳಿದಿದ್ದಾರೆ. ತಾವು ಕೂಡ ಸಿಎಂ ಆಗಬೇಕು ಎನ್ನುವ …

Read More »

ಗದಗ- ಬೆಟಗೇರಿ ನಗರಸಭೆ | ಗದ್ದುಗೆ ಗುದ್ದಾಟ: ಎರಡೂ ಪಕ್ಷದಿಂದ ‘ಚತುರ ನಡೆ’

ಗದಗ: ಇಲ್ಲಿನ ಗದಗ- ಬೆಟಗೇರಿ ನಗರಸಭೆಯಲ್ಲಿ ಅಧಿಕಾರದಲ್ಲಿದ್ದ ಬಿಜೆಪಿಯ ಮೊದಲನೇ ಅವಧಿ ಮುಗಿದು, ಎರಡನೇ ಅವಧಿಗೆ ಮೀಸಲಾತಿ ಪ್ರಕಟಗೊಂಡ ನಂತರದಿಂದ ಇಲ್ಲೀವರೆಗೆ ಹಲವು ರಾಜಕೀಯ ಮೇಲಾಟಗಳು, ಆರೋಪ- ಪ್ರತ್ಯಾರೋಪಗಳು, ಕಾನೂನು ಹೋರಾಟಗಳು ನಡೆದಿದ್ದು, ನಗರಸಭೆ ಗದ್ದುಗೆ ಏರಲು ಎರಡೂ ಪಕ್ಷಗಳು ನಡೆಸಿರುವ ಚತುರ ನಡೆಗಳು ಚುನಾವಣಾ ಕಣವನ್ನು ರಂಗೇರಿಸಿವೆ.   ಇದರ ಮಧ್ಯೆ, ಮೀಸಲಾತಿ ಪ್ರಕಟಗೊಂಡು 23 ದಿನಗಳ ಬಳಿಕ ಕಾಂಗ್ರೆಸ್‌ನ ಇಬ್ಬರು ಸದಸ್ಯರು ಮೀಸಲಾತಿಗೆ ಆಕ್ಷೇಪ ವ್ಯಕ್ತಪಡಿಸಿ ಧಾರವಾಡದ ಹೈಕೋರ್ಟ್‌ …

Read More »

ಸವದತ್ತಿ: 99 ವಿದ್ಯಾರ್ಥಿಗಳಿಗೆ ಸುಜ್ಞಾನನಿಧಿ ಶಿಷ್ಯವೇತನ

ಸವದತ್ತಿ: ಇಲ್ಲಿನ ಗುರ್ಲಹೊಸೂರಿನ ಚಿದಂಬರೇಶ್ವರ ದೇವಸ್ಥಾನದಲ್ಲಿ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದಿಂದ ಸುಜ್ಞಾನನಿಧಿ ಶಿಷ್ಯವೇತನ ಮಂಜೂರಾತಿ ಪತ್ರ ವಿತರಣಾ ಕಾರ್ಯಕ್ರಮ ಶುಕ್ರವಾರ ಜರುಗಿತು. ಪಿಐ ಧರ್ಮಾಕರ ಧರ್ಮಟ್ಟಿ ಮಾತನಾಡಿ, ಮಹಿಳೆಯರ ಆರ್ಥಿಕಾಭಿವೃದ್ಧಿಗೆ ಮಾತ್ರವಲ್ಲದೇ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೂ ಧರ್ಮಸ್ಥಳ ಸಂಘ ಆರ್ಥಿಕ ನೆರವು ನೀಡುತ್ತಿರುವ ಕಾರ್ಯ ಶ್ಲಾಘನೀಯ. ತಾಲ್ಲೂಕಿನ 99 ವಿದ್ಯಾರ್ಥಿಗಳಿಗೆ ಸುಜ್ಞಾನನಿಧಿ ಶಿಷ್ಯವೇತನ ನೀಡಿ ಬಡ ಮಕ್ಕಳನ್ನು ಶೈಕ್ಷಣಿಕವಾಗಿ ಮೇಲೆತ್ತುವ ಕಾರ್ಯ ಮಾದರಿಯಾಗಿದೆ ಎಂದರು. ವೇದಿಕೆಯಲ್ಲಿ 99 ಮಂದಿ …

Read More »

ನಿಪ್ಪಾಣಿ ನಗರಸಭೆ: ಮತ್ತೆ ಬಿಜೆಪಿ ಮೇಲುಗೈ

ನಿಪ್ಪಾಣಿ: ಸ್ಥಳೀಯ ನಗರಸಭೆಯ ಎರಡನೇಯ ಅವಧಿಯ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆ ನಡೆದು ಈ ಅವಧಿಯಲ್ಲೂ ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಮತ್ತು ಶಾಸಕಿ ಶಶಿಕಲಾ ಜೊಲ್ಲೆ ನೇತೃತ್ವದಲ್ಲಿ ಬಿಜೆಪಿಯೇ ಮೇಲುಗೈ ಸಾಧಿಸಿದೆ. ಬಿಜೆಪಿ ಪಕ್ಷದ ಸೋನಲ್ ಕೋಠಡಿಯಾ ಅಧ್ಯಕ್ಷರಾಗಿ ಹಾಗೂ ಸಂತೋಷ ಸಾಂಗಾವಕರ ಉಪಾಧ್ಯಕ್ಷರಾಗಿ ಬಹುಮತಗಳಿಂದ ಆಯ್ಕೆಯಾದರು.   ಇಬ್ಬರೂ ತಲಾ 17 ಮತಗಳನ್ನು ಪಡೆದು ವಿರೋಧಿ ಬಣದ ಶರದ ಪವಾರ ಗುಂಪು ಎನ್‍ಸಿಪಿ ಬೆಂಬಲಿತ ಅಧ್ಯಕ್ಷ ಸ್ಥಾನದ ಅಭ್ಯರ್ಥಿ …

Read More »