Breaking News

ದೇವರಾಜೇಗೌಡ 3 ದಿನ ಪೊಲೀಸ್‌ ಕಸ್ಟಡಿಗೆ

ಹಾಸನ: ಅತ್ಯಾಚಾರ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಬಿಜೆಪಿ ಮುಖಂಡ, ವಕೀಲ ದೇವರಾಜೇ ಗೌಡ ಅವರನ್ನು ಮೂರು ದಿನಗಳ ಕಾಲ ಪೊಲೀಸ್‌ ಕಸ್ಟಡಿಗೆ ನೀಡಿ ಹೊಳೆನರಸೀಪುರದ ಜೆಎಂಎಫ್ಸಿ ನ್ಯಾಯಾಲಯ ಆದೇಶಿಸಿದೆ. ಹೆಚ್ಚಿನ ವಿಚಾರಣೆಗಾಗಿ ಆರೋಪಿಯನ್ನು ತಮ್ಮ ಕಸ್ಟಡಿಗೆ ನೀಡುವಂತೆ ಹೊಳೆನರಸೀಪುರ ನಗರ ಠಾಣೆ ಪೊಲೀಸರು ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಾಧೀಶರು ಮಂಗಳವಾರದಿಂದ ಗುರುವಾರದ ವರೆಗೆ ಪೊಲೀಸ್‌ ಕಸ್ಟಡಿಗೆ ನೀಡಿ ಆದೇಶಿಸಿದರು. ಮೇ 11ರಂದು ದೇವರಾಜೇಗೌಡ ಅವರನ್ನು ಬಂಧಿಸಿದ್ದ ಹೊಳೆನರಸೀಪುರ ನಗರ ಠಾಣೆ ಪೊಲೀಸರು …

Read More »

ಏನು ತಪ್ಪು ಮಾಡದಿದ್ದರೂ ಶಿಕ್ಷೆ: ಜಿಟಿಡಿ ಮುಂದೆ ರೇವಣ್ಣ ಕಣ್ಣೀರು

ಬೆಂಗಳೂರು: ಮಹಿಳೆ ಅಪಹರಣ ಆರೋಪದಡಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ಮಾಜಿ ಸಚಿವ ಎಚ್‌.ಡಿ.ರೇವಣ್ಣ ಅವರು ಜೆಡಿಎಸ್‌ ಕೋರ್‌ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡರ ಎದುರು ಕಣ್ಣೀರಿಟ್ಟಿದ್ದಾರೆ. ಸೋಮವಾರ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿ ರೇವಣ್ಣ ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ ಇದನ್ನು ಖುದ್ದು ಜಿ.ಟಿ.ದೇವೇಗೌಡರೇ ತಿಳಿಸಿದರು. ರೇವಣ್ಣರನ್ನು ಭೇಟಿಯಾಗಿ ಆರೋಗ್ಯ ಕುಶಲೋಪರಿ ವಿಚಾರಿಸಬೇಕು, ಮಾತನಾಡಿಸಬೇಕು ಎಂದು ಮನಸ್ಸಿನಲ್ಲಿತ್ತು. ಸೋಮವಾರ ಅನುಮತಿ ಸಿಕ್ಕಿದ್ದರಿಂದ ಭೇಟಿ ಮಾಡಿದ್ದೇನೆ. ಅವರದ್ದು ಈಗ ಪ್ರಶ್ನೆ …

Read More »

ಮೊದಲ ಮಳೆಯ ಭಾರೀ ಅವಾಂತರ: 8 ಮಂದಿ ಸಾವು

ಮುಂಬಯಿ: ದೇಶದ ವಾಣಿಜ್ಯ ರಾಜಧಾನಿ ಮುಂಬಯಿಯಲ್ಲಿ ಸೋಮವಾರ ಭಾರೀ ಮಳೆಯಾಗಿದೆ. ಪ್ರಸಕ್ತ ಸಾಲಿನ ಮುಂಗಾರು ಆಗಮನದ ಮೊದಲ ಹಂತದಲ್ಲಿಯೇ ಭಾರೀ ಪ್ರಮಾಣದಲ್ಲಿ ಅನಾಹುತವನ್ನೇ ಸೃಷ್ಟಿ ಮಾಡಿದೆ. ಮುಂಬಯಿ ವಿಮಾನ ನಿಲ್ದಾಣ, ಬೊರಿವಿಲಿ, ನವೀ ಮುಂಬಯಿ ಸೇರಿದಂತೆ ವಾಣಿಜ್ಯ ರಾಜಧಾನಿಯ ವಿವಿಧ ಭಾಗಗಳಲ್ಲಿ ಧಾರಾಕಾರ ಮಳೆಯಾಗಿದೆ. ಮುಂಬಯಿನ ಘಾಟ್ಕೊàಪರ್‌ನಲ್ಲಿ ಬೃಹತ್‌ ಪ್ರಮಾಣದ ಜಾಹೀರಾತು ಫ‌ಲಕ ಕುಸಿದು 8 ಮಂದಿ ಅಸುನೀಗಿದ್ದಾರೆ. ಮತ್ತೂಂದೆಡೆ ಬೃಹತ್‌ ಪ್ರಮಾಣದ ಟವರ್‌ ಗಾಳಿಯ ರಭಸಕ್ಕೆ ಪೆಟ್ರೋಲ್‌ ಬಂಕ್‌ನ ಮೇಲೆ …

Read More »

ಪಾಸ್‌ಪೋರ್ಟ್‌ ರದ್ದತಿಗೆ ಕೋರ್ಟ್‌ಗೆ ಎಸ್‌ಐಟಿ ಮೊರೆ?

ಬೆಂಗಳೂರು: ಲೈಂಗಿಕ ದೌರ್ಜನ್ಯ ಹಾಗೂ ಅತ್ಯಾಚಾರ ಪ್ರಕರಣದಲ್ಲಿ ವಿದೇಶದಲ್ಲಿ ತಲೆಮರೆಸಿ ಕೊಂಡಿರುವ ಹಾಸನ ಸಂಸದ ಪ್ರಜ್ವಲ್‌ ರೇವಣ್ಣನ ಬಂಧನಕ್ಕೆ ಎಸ್‌ಐಟಿ ಮತ್ತೂಂದು ಅಸ್ತ್ರ ಸಿದ್ಧಪಡಿಸಲು ಮುಂದಾಗಿದ್ದು, ಕೋರ್ಟ್‌ ಮೂಲಕ ಆರೋಪಿಯ ರಾಜತಾಂತ್ರಿಕ ಪಾಸ್‌ಪೋರ್ಟ್‌ ರದ್ದುಗೊಳಿಸಲು ಚಿಂತನೆ ನಡೆಸಿದೆ. ಕೇಂದ್ರ ಸರಕಾರ ನೀಡಿರುವ ರಾಜತಾಂತ್ರಿಕ ಪಾಸ್‌ ಪೋರ್ಟನ್ನು ರದ್ದುಗೊಳಿಸಿ ಆರೋಪಿ ದೇಶಕ್ಕೆ ಮರಳಲು ಸಹಕಾರ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಖುದ್ದು ಬರೆದ ಪತ್ರಕ್ಕೆ ಕೇಂದ್ರ ಯಾವುದೇ ಉತ್ತರ ನೀಡಿಲ್ಲ. ಈ ಹಿನ್ನೆಲೆಯಲ್ಲಿ ಎಸ್‌ಐಟಿ …

Read More »

RCB ಪ್ಲೇ ಆಫ್ ಲೆಕ್ಕಾಚಾರ ಹೀಗಿದೆ ..; ಚೆನ್ನೈ ವಿರುದ್ಧ ಗೆಲ್ಲಬೇಕು, ಲಕ್ನೋ ಸೋಲಬೇಕು

RCB ಪ್ಲೇ ಆಫ್ ಲೆಕ್ಕಾಚಾರ ಹೀಗಿದೆ ..; ಚೆನ್ನೈ ವಿರುದ್ಧ ಗೆಲ್ಲಬೇಕು, ಲಕ್ನೋ ಸೋಲಬೇಕು ಬೆಂಗಳೂರು: ಸೋಲಿನ ಮೇಲೆ ಸೋಲನುಭವಿಸಿ ಕಟ್ಟಕಡೆಯ ಸ್ಥಾನಕ್ಕೆ ಕುಸಿದು, ಇನ್ನೇನು ಹೊರಬಿತ್ತು ಎಂಬ ಸ್ಥಿತಿಯಲ್ಲಿದ್ದ ಕನ್ನಡಿಗರ ನೆಚ್ಚಿನ ರಾಯಲ್‌ ಚಾಲೆಂಜರ್ ಬೆಂಗ ಳೂರು ತಂಡವೀಗ ಸತತ 5 ಪಂದ್ಯಗಳನ್ನು ಗೆದ್ದು ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೆ ನೆಗೆದದ್ದು ನಿಜಕ್ಕೂ ಅಚ್ಚರಿ. ಇಲ್ಲಿಂದ 4ನೇ ಸ್ಥಾನಕ್ಕೇರಿ, ಇದನ್ನು ಉಳಿಸಿಕೊಂಡರೆ ಆರ್‌ಸಿಬಿ ಪ್ಲೇ ಆಫ್ ಪ್ರವೇಶಿಸಲಿದೆ! ಆದರೆ ಈ ಹಾದಿ ಅಷ್ಟು …

Read More »

ಗುಡುಗು-ಸಿಡಿಲಿನಿಂದ ಅಪಾಯ ತಗ್ಗಿಸಲು ಮುನ್ನೆಚ್ಚರಿಕೆ ಸೂತ್ರ

ಗುಡುಗು ಸಿಡಿಲಿನಿಂದಾಗುವ ಅಪಾಯಗಳನ್ನು ತಗ್ಗಿಸಲು ಸಾರ್ವಜನಿಕರು ಏನೆಲ್ಲ ಕ್ರಮಗಳನ್ನು ಕೈಗೊಳ್ಳಬೇಕು ಎಂಬುವುದಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣ ಪ್ರಾಧಿಕಾರದಿಂದ ಸಾರ್ವಜನಿಕರಿಗೆ ಮುನ್ನೆಚ್ಚರಿಕೆ ನೀಡಿದೆ. ಪ್ರತಿಕೂಲ ಹವಾಮಾನದ ಸಮಯದಲ್ಲಿ ಕೃಷಿ ಕ್ಷೇತ್ರದಲ್ಲಿ ಕೆಲಸ ಮಾಡಲು, ಜಾನುವಾರುಗಳನ್ನು ಮೇಯಿಸಲು ಮೀನುಗಾರಿಕೆ ಮತ್ತು ದೋಣಿಗಳನ್ನು ಓಡಿಸಲು ಅಥವಾ ಸಾಮಾನ್ಯ ಪ್ರಯಾಣಕ್ಕಾಗಿ ಮನೆಯಿಂದ ಹೊರಗೆ ಹೋಗಬಾರದು. ಗುಡುಗು- ಸಿಡಿಲಿನ ಸಂದರ್ಭದಲ್ಲಿ ಲೋಹದ ತಗಡನ್ನು ಹೊದಿಸಿರುವ ಮನೆಗಳು ಸುರಕ್ಷಿತವಲ್ಲ, ಸುರಕ್ಷಿತವಾದ ಕಟ್ಟಡಗಳಾದ ಮನೆಗಳು, ಕಚೇರಿಗಳು, ಅಂಗಡಿಗಳು ಮತ್ತು ಕಿಟಕಿ …

Read More »

ತರಕಾರಿ ಬಲು ದುಬಾರಿ..

ಹಾವೇರಿ: ಕಳೆದ ಎರಡು ತಿಂಗಳಿಂದ ಬಿಸಿಲಿನ ತೀವ್ರತೆ, ಮಳೆ ಕೊರತೆಯಿಂದ ತರಕಾರಿ ನಿರೀಕ್ಷಿತ ಮಟ್ಟದಲ್ಲಿ ಮಾರುಕಟ್ಟೆಗೆ ಪೂರೈಕೆಯಾಗುತ್ತಿಲ್ಲ. ಹೀಗಾಗಿ ತರಕಾರಿ ದರ ಏರಿಕೆ ಕಂಡಿದ್ದು, ಗ್ರಾಹಕರ ಜೇಬಿಗೆ ಬಿಸಿ ತಟ್ಟುವಂತಾಗಿದೆ. ಸ್ಥಳೀಯ ಬಸವೇಶ್ವರ ನಗರದಲ್ಲಿ ರವಿವಾರ ನಡೆದ ತರಕಾರಿ ಸಂತೆಯಲ್ಲಿ ದರ ಏರಿಕೆ ಬಿಸಿ ಜನಸಾಮಾನ್ಯರಿಗೆ ಶಾಕ್‌ ನೀಡಿತು.

Read More »

Sugar ಕಾರ್ಖಾನೆಗಳಿಗೆ ಈಗ ಕಬ್ಬು “ಬರ’! ನೀರಿನ ಕೊರತೆಯಿಂದ ಬೆಳೆಯದ ಕಬ್ಬು

ಮಂಡ್ಯ/ಬೆಳಗಾವಿ: ಭೀಕರ ಬರ ಹಾಗೂ ನೀರಿನ ಕೊರತೆಯು ರಾಜ್ಯದ ಕಬ್ಬು ಬೆಳೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ರಾಜ್ಯದಲ್ಲಿ ಮುಂಬರುವ ಕಬ್ಬು ಹಂಗಾಮಿನಲ್ಲಿ ಉತ್ಪಾದನೆ ಶೇ.30ರಷ್ಟು ಕುಸಿತವಾಗಲಿದೆ ಮಾತ್ರವಲ್ಲದೆ, ನೀರಿನ ಅಭಾವದಿಂದಾಗಿ ಬೇಸಗೆ ಹಂಗಾಮಿನಲ್ಲಿ ಕಬ್ಬು ಬೆಳೆ ನಿರೀಕ್ಷಿತ ಮಟ್ಟದಲ್ಲಿ ಬಿತ್ತನೆಯಾಗದ ಕಾರಣ ಈ ಬಾರಿ ಕಬ್ಬು ಅರೆಯುವಿಕೆಗೆ ಕಾರ್ಖಾನೆಗಳಿಗೆ ಕಬ್ಬಿನ ಬರ ಕಾಡಲಿದೆ. ನೀರು ಗಣನೀಯವಾಗಿ ಕಡಿಮೆಯಾದ ಕಾರಣ ರಾಜ್ಯದಲ್ಲಿ ಬರುವ ಹಂಗಾಮಿನಲ್ಲಿ ಸುಮಾರು 80 ಲಕ್ಷ ಮೆಟ್ರಿಕ್‌ ಟನ್‌ …

Read More »

ಎಚ್‌ಡಿ ರೇವಣ್ಣಗೆ ಬೇಲಾ? ಮತ್ತೆ ಜೈಲಾ? ಸಂಜೆ 5 ಗಂಟೆಗೆ ಕೋರ್ಟ್ ಆದೇಶ ಪ್ರಕಟ

ಬೆಂಗಳೂರು: ಮಾಜಿ ಸಚಿವ ಎಚ್‌ಡಿ ರೇವಣ್ಣಗೆ (HD Revanna) ಬೇಲಾ? ಅಥವಾ ಮತ್ತೆ ಜೈಲಾ? ಈ ಪ್ರಶ್ನೆಗೆ ಉತ್ತರ ಇನ್ನೇನು ಕೆಲವೇ ನಿಮಿಷಗಳಲ್ಲಿ ಸಿಗಲಿದೆ. ರೇವಣ್ಣ ಬೇಲ್ ಅರ್ಜಿ (bail petition) ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ನ್ಯಾಯಾಲಯ, ಆದೇಶ ಕಾಯ್ದಿರಿಸಿದೆ. ಇಂದು ಸಂಜೆ 5 ಗಂಟೆಗೆ ಜಾಮೀನು ಅರ್ಜಿ ಆದೇಶ ನೀಡುವುದಾಗಿ ಕೋರ್ಟ್ ಹೇಳಿದೆ. ಎಚ್‌ಡಿ ರೇವಣ್ಣ ಪರ ಸಿವಿ ನಾಗೇಶ್ ವಾದ ಮಂಡಿಸಿದ್ದರೆ, ಎಸ್‌ಐಟಿ (SIT) ಪರ ವಿಶೇಷ …

Read More »

ಜೆಎಸ್‌ಡಬ್ಲ್ಯು ದುರಂತ: ಜಿಂದಾಲ್ ಅಧ್ಯಕ್ಷ, ಉಪಾಧ್ಯಕ್ಷರ ಮೇಲೆ ಪ್ರಕರಣ ದಾಖಲಿಸಿ

ಬಳ್ಳಾರಿ: ‘ಜಿಂದಾಲ್‌ ಸ್ಟೀಲ್‌ ಲಿಮಿಟೆಡ್‌’ನಲ್ಲಿ ಗುರುವಾರ ಸಂಭವಿಸಿದ ದುರಂತಕ್ಕೆ ಸಂಬಂಧಿಸಿದಂತೆ ಕಾರ್ಖಾನೆಯ ಎಚ್‌ಎಸ್‌ಎಂ-03 ಘಟಕದ ಉಸ್ತುವಾರಿ ಉಪಾಧ್ಯಕ್ಷ ಸೇರಿದಂತೆ ಆರು ಅಧಿಕಾರಿಗಳ ವಿರುದ್ಧ ನಿರ್ಲಕ್ಷ್ಯ ಪ್ರಕರಣ ದಾಖಲಿಸಲಾಗಿದೆ. ದುರಂತದಲ್ಲಿ ಸಾವಿಗೀಡಾಗಿದ್ದ ಹೊಸಪೇಟೆಯ ಭುವನಹಳ್ಳಿಯ ಗಂಟೆ ಜಡಿಯಪ್ಪ ಅವರ ತಮ್ಮ ಮಹೇಂದ್ರ ಅವರು ಘಟನೆಗೆ ಸಂಬಂಧಿಸಿದಂತೆ ತೋರಣಗಲ್‌ ಪೋಲಿಸ್‌ ಠಾಣೆಗೆ ದೂರು ನೀಡಿದ್ದಾರೆ. ದೂರು ಆಧರಿಸಿ, ಎಚ್‌ಎಸ್‌ಎಂ-3 ಘಟಕದ ಉಸ್ತುವಾರಿ ಉಪಾಧ್ಯಕ್ಷ, ಸುರಕ್ಷತೆ ವಿಭಾಗದ ಎವಿಪಿ, ಸುರಕ್ಷತೆ ವಿಭಾಗದ ವ್ಯವಸ್ಥಾಪಕ, ಸಿವಿಲ್ ವಿಭಾಗದ …

Read More »