ಬೀದರ್: ಸಾರಿಗೆ ಬಸ್ ನಲ್ಲಿ ಸೀಟಿಗಾಗಿ ಇಬ್ಬರು ಮಹಿಳೆಯರು ಪರಸ್ಪರ ಚಪ್ಪಲಿಯಿಂದ ಹೊಡೆದಾಡಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬೀದರನಿಂದ ಕಲಬುರಗಿ ಮಾರ್ಗದಲ್ಲಿ ಸಂಚರಿಸುವ ಬಸ್‌ನಲ್ಲಿ ನಡೆದಿದ್ದು. ಶಕ್ತಿ ಯೋಜನೆ ಅಡಿ ಉಚಿತ ಟಿಕೆಟ್ ಪಡೆದ ಬಳಿಕ ಮಹಿಳೆಯರು ಕಿತ್ತಾಟ. ಓರ್ವ ಮಹಿಳೆ ಸೀಟು ಬಿಡು ಕೊಡು ಇದು ನನ್ನ ಸೀಟು ಎಂದು ಹೇಳಿದ್ದರೆ ಮತ್ತೋರ್ವ ಮಹಿಳೆ ನಾನೇಕೆ ಸೀಟು ಬಿಡಲಿ ಏನ್ ಮಾಡ್ತಿಯಾ ಎಂದು ಪರಸ್ಪರ ವಾಗ್ವಾದ ನಡೆಸಿದ್ದಾರೆ. …
Read More »ಸರ್ಕಾರಿ ಜಾಗಕ್ಕೆ ಎರಡು ಸಮುದಾಯಗಳ ನಡುವೆ ಮಾರಾಮಾರಿ
ಚಿಕ್ಕಮಗಳೂರು: ಸರ್ಕಾರಿ ಜಾಗದ ವಿಚಾರಕ್ಕೆ ಎರಡು ಸಮುದಾಯಗಳ ನಡುವೆ ಗಲಾಟೆ ನಡೆದಿದ್ದು ರಾತ್ರೋ ರಾತ್ರಿ 50 ಮಂದಿಯ ಮೇಲೆ ದೂರು ದಾಖಲಾದ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ನಾಗೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ಜಾಗದ ವಿಚಾರಕ್ಕೆ ಇಡೀ ಗ್ರಾಮವೇ ರಣರಂಗವಾದಂತಾಗಿದೆ. ಸರ್ಕಾರಿ ಜಾಗದಲ್ಲಿ ದೇವಾಲಯ ಕಟ್ಟಲು ಲಂಬಾಣಿ ಜನಾಂಗದವರು ಜಾಗಕ್ಕೆ ತಂತಿ ಬೇಲಿ ಹಾಕಿದ್ದರು. ಇದನ್ನು ವಿರೋಧಿಸಿ ಸಮುದಾಯ ಭವನ ಕಟ್ಟಲು ಇನ್ನೊಂದು ಸಮುದಾಯ ಪಟ್ಟು ಹಿಡಿದಿತ್ತು. ಈ ಗಲಾಟೆ ನಡುವೆಯೇ …
Read More »ಶಾಕ್ ನಿಂದ ವಿದ್ಯುತ್ ದುರಸ್ತಿ ಮಾಡುತ್ತಿದ್ದ ಕೂಲಿಕಾರ ಮೃತಪಟ್ಟಿದ್ದಾರೆ.
ಮುಂಡರಗಿ: ಶಾಕ್ ನಿಂದ ವಿದ್ಯುತ್ ದುರಸ್ತಿ ಮಾಡುತ್ತಿದ್ದ ಕೂಲಿಕಾರ ಮೃತಪಟ್ಟ ಘಟನೆ ಗದಗ ಜಿಲ್ಲೆಯ ಮುಂಡರಗಿ ಪಟ್ಟಣದ ಅಂಭಾಭವಾನಿ ನಗರದಲ್ಲಿ ಮೇ. 15ರ ಬುಧವಾರ ಮಧ್ಯಾಹ್ನ ನಡೆದಿದೆ. ವಿದ್ಯುತ್ ದುರಸ್ತಿ ಕೂಲಿಕಾರ ಅಜ್ಜಯ್ಯ ವೀರಯ್ಯ ಹಿರೇಮಠ (46) ಮೃತಪಟ್ಟ ವ್ಯಕ್ತಿ. ಹೆಸ್ಕಾಂನ ವಿದ್ಯುತ್ ದುರಸ್ತಿಗಾಗಿ ಕೂಲಿಕಾರ ಅಜ್ಜಯ್ಯ ವಿದ್ಯುತ್ ಕಂಬಕ್ಕೆ ಏರಿದ್ದ ಸಂದರ್ಭ ಶಾಕ್ ಹೊಡೆದ ಪರಿಣಾಮ ಕಂಬದ ಮೇಲಿಂದ ಬಿದ್ದು, ಮೃತಪಟ್ಟಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ …
Read More »ಎಂಡಿಎಂಎ ಡ್ರಗ್ಸ್ ಸಹಿತ ಓರ್ವನ ಬಂಧನ
ಮಂಗಳೂರು: ಮಂಗಳೂರು ತಾಲೂಕಿನ ವಾಮಂಜೂರು ಮೈದಾನದಲ್ಲಿರುವ ಶೇಂದಿ ಅಂಗಡಿ ಬಳಿ ಎಂಡಿಎಂಎ ಡ್ರಗ್ಸ್ ಸಹಿತ ಓರ್ವನನ್ನು ಪೊಲೀಸರು ಮಂಗಳವಾರದಂದು ಬಂಧಿಸಿದ್ದಾರೆ. ಪೆರ್ಮನ್ನೂರಿನ ದಾವೂದ್ ಫರ್ವೀಜ್(37) ಬಂಧಿತ ಆರೋಪಿ. ಈತನಿಂದ 15,000 ರೂ. ಮೌಲ್ಯದ 10 ಗ್ರಾಂ ತೂಕದ ನಿಷೇಧಿತ ಮಾದಕ ವಸ್ತು ಎಂಡಿಎಂಎ ಹಾಗೂ 810 ರೂ ನಗದನ್ನು ವಶಪಡಿಸಿಕೊಂಡಿದ್ದಾರೆ. ಕಾರ್ಯಾಚರಣೆಯಲ್ಲಿ ಶ್ರೀಮತಿ ಧನ್ಯಾ ಎನ್.ನಾಯಕ ಸಹಾಯಕ ಪೊಲೀಸ್ ಆಯುಕ್ತರು, ಮಂಗಳೂರು ದಕ್ಷಿಣ ಉಪವಿಭಾಗದರವರ ನೇತೃತ್ವದ ಮಾದಕ ದ್ರವ್ಯ ವಿರೋಧಿ …
Read More »CAA ಅಡಿಯಲ್ಲಿ ಮೊದಲ ಬಾರಿಗೆ 14 ಜನರಿಗೆ ಭಾರತೀಯ ಪೌರತ್ವ ಪ್ರಮಾಣಪತ್ರ
CAA ಅಡಿಯಲ್ಲಿ ಮೊದಲ ಬಾರಿಗೆ 14 ಜನರಿಗೆ ಭಾರತೀಯ ಪೌರತ್ವ ಪ್ರಮಾಣಪತ್ರ ನವದೆಹಲಿ: ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶದಿಂದ ಕಿರುಕುಳಕ್ಕೊಳಗಾದ ಮುಸ್ಲಿಮೇತರ ವಲಸಿಗರಿಗೆ ಭಾರತೀಯ ಪೌರತ್ವ ನೀಡುವ ಪ್ರಕ್ರಿಯೆಯನ್ನು ಪ್ರಾರಂಭಿಸುವ ಮೂಲಕ ಕೇಂದ್ರವು ಸೂಚನೆ ನೀಡಿದ ಸುಮಾರು ಎರಡು ತಿಂಗಳ ನಂತರ ಇಂದು 14 ಜನರಿಗೆ ಸಿಎಎ ಅಡಿಯಲ್ಲಿ ಮೊದಲ ಪೌರತ್ವ ಪ್ರಮಾಣಪತ್ರಗಳನ್ನು ನೀಡಲಾಯಿತು. ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಇಂದು (ಬುಧವಾರ) ಮಾಹಿತಿಯನ್ನು ಹಂಚಿಕೊಂಡಿದೆ. ಇದರಲ್ಲಿ 14 ಜನರಿಗೆ ಭಾರತೀಯ ಪೌರತ್ವದ …
Read More »ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ರಾಜ್ಯ ಸರಕಾರ ಸಂಪೂರ್ಣ ವಿಫಲ: ಶೆಟ್ಟರ್
ಬೆಳಗಾವಿ: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ರಾಜ್ಯ ಸರಕಾರ ಸಂಪೂರ್ಣ ವಿಫಲವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಆರೋಪಿಸಿದ್ದಾರೆ. ಹುಬ್ಬಳ್ಳಿ ನಿವಾಸಿ ಅಂಜಲಿ ಅಂಬಿಗೇರ ಕೊಲೆ ಪ್ರಕರಣದ ಕುರಿತು ಮಾತನಾಡಿದ ಅವರು ಅಂಬಿಗೇರ ಕೊಲೆ ಪ್ರಕರಣದ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದರು. ಬಳಿಕ ಮಾತನಾಡಿದ ಅವರು ರಾಜ್ಯದಲ್ಲಿ ಕಾನೂನು- ಸುವ್ಯವಸ್ಥೆ ಹಾಳಾಗಿದ್ದು, ಕಾಂಗ್ರೆಸ್ ಸರ್ಕಾರ ಕಾನೂನು ಹಾಗೂ ಸುವ್ಯವಸ್ಥೆ ಕಾಪಾಡುವಲ್ಲಿ ಪದೇ ಪದೇ ವಿಫಲವಾಗುತ್ತಿದೆ. ಈ ಸರ್ಕಾರದಲ್ಲಿ …
Read More »ತಾಕತ್ ಇದ್ದರೆ ನಮ್ಮ ರಾಜ್ಯಕ್ಕೆ ಬರಲಿ: ಸಚಿವ ದರ್ಶನಾಪುರ ಸವಾಲ್
ಯಾದಗಿರಿ: ಮೊದಲು ಮಹಾರಾಷ್ಟ್ರದಲ್ಲಿ ತಮ್ಮ ಸರ್ಕಾರ ಉಳಿಸಿಕೊಳ್ಳಲಿ, ಅಲ್ಲಿ ಏನು ಕಡೆದು ಹಾಕಿಲ್ಲ, ಆದರೆ ಕರ್ನಾಟಕಕ್ಕೆ ಬಂದು ಏನು ಕಡೆದು ಹಾಕುತ್ತಾರೆ ಎಂದು ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ ಶಿಂಧೆ ವಿರುದ್ಧ ಯಾದಗಿರಿ ಉಸ್ತುವಾರಿ ಮಂತ್ರಿ ಶರಣಬಸಪ್ಪ ದರ್ಶನಾಪುರ ಆಕ್ರೋಶಗೊಂಡರು.
Read More »ತಾಯಿ ಚಾಮುಂಡಿಗೆ ಎಲ್ಲವನ್ನೂ ಬಿಟ್ಟಿದ್ದೇನೆ’: ಪುತ್ರ ಪ್ರಜ್ವಲ್ ಹೆಸರಲ್ಲಿ ವಿಶೇಷ ಪೂಜೆ ಸಲ್ಲಿಸಿದ ಹೆಚ್ ಡಿ ರೇವಣ್ಣ
ಮೈಸೂರು: ಜೆಡಿಎಸ್ ಶಾಸಕ ಹೆಚ್ಡಿ ರೇವಣ್ಣ ನಿನ್ನೆ ಮಂಗಳವಾರ ಜೈಲಿನಿಂದ ಬಿಡುಗಡೆ ಆಗಿ ತಮ್ಮ ತಂದೆ ಹೆಚ್ ಡಿ ದೇವೇಗೌಡ ನಿವಾಸಕ್ಕೆ ಆಗಮಿಸಿ ತಂದೆ-ತಾಯಿ ಕಾಲಿಗೆ ನಮಸ್ಕರಿಸಿ ಮಾತುಕತೆ ನಡೆಸಿದ ನಂತರ ಸಾಯಂಕಾಲ ಟೆಂಪಲ್ ರನ್ ನಡೆಸಿದ್ದಾರೆ. ಬಸವನಗುಡಿಯಲ್ಲಿರುವ ಆಂಜನೇಯ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ ತದನಂತರ ಬನಶಂಕರಿಯ ತಮ್ಮ ನಿವಾಸಕ್ಕೆ ಆಗಮಿಸಿ ಅಲ್ಲಿಯೂ ಸಹ ದೇವರ ಪ್ರಾರ್ಥನೆ ಮಾಡಿದರು. ಬಳಿಕ ಅಲ್ಲಿಂದ ನೇರವಾಗಿ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ …
Read More »ಚುನಾವಣೆ ಪ್ರಚಾರದ ವೇಳೆ ಚಿತ್ರ ಬಿಡಿಸಿ ಉಡುಗೊರೆ ನೀಡಿದ್ದ ಬಾಗಲಕೋಟೆ ಯುವತಿ: ಕೊಟ್ಟ ಮಾತಿನಂತೆ ಪತ್ರ ಬರೆದ ಪ್ರಧಾನಿ!
ಬಾಗಲಕೋಟೆ: ಚುನಾವಣಾ ಪ್ರಚಾರದ ವೇಳೆ ಪ್ರಧಾನಮಂತ್ರ ನರೇಂದ್ರ ಮೋದಿ ಹಾಗೂ ಅವರ ತಾಯಿ ಇರುವ ಭಾವಚಿತ್ರ ನೀಡಿದ್ದ ಬಾಗಲಕೋಟೆ ಯುವತಿ ನಾಗರತ್ನಾ ಬಸವರಾಜ ಮೇಟಿಯವರಿಗೆ ಮೋದಿ ಅವರು ಧನ್ಯವಾದ ತಿಳಿಸಿ, ಪತ್ರ ಬರೆದಿದ್ದಾರೆ. ಪ್ರಧಾನಿ ಮೋದಿ ಅವರು ಬಾಗಲಕೋಟೆಯಲ್ಲಿ ಭಾಷಣ ಮಾಡುವ ವೇಳೆ ನಾಗರತ್ನಾ ಅವರು ಫೋಟೋ ಹಿಡಿದು ನಿಂತಿದ್ದರು. ಇದನ್ನು ಗಮನಿಸಿದ ಮೋದಿಯವರು ತಮ್ಮ ಅಂಗರಕ್ಷಕ ಅಧಿಕಾರಿಗಳಿಂದ ಫೋಟೊ ತರಿಸಿಕೊಂಡು, ಪತ್ರ ಬರೆಯುವುದಾಗಿ ತಿಳಿಸಿದ್ದರು. ಇದೀಗ ಕೊಟ್ಟ ಮಾತಿನಂತೆ …
Read More »ಮುಂಗಾರು ಆರಂಭವಾಗುವವರೆಗೂ ಹೆಚ್ಚಿನ ಗುಡುಗು- ಧೂಳು ಸಹಿತ ಬಿರುಗಾಳಿ: IMD ಎಚ್ಚರಿಕೆ
ಬೆಂಗಳೂರು: ನೈಋತ್ಯ ಮಾನ್ಸೂನ್ ಪ್ರಾರಂಭವಾಗುವವರೆಗೆ ಹೆಚ್ಚಿನ ಗುಡುಗು ಮತ್ತು ಧೂಳು ಸಹಿತ ಬಿರುಗಾಳಿ ಬೀಸುವ ಸಾಧ್ಯತೆಯಿದೆ, ಆದರೆ ರಾಜ್ಯ ಮತ್ತು ದೇಶದಲ್ಲಿ ಯಾವುದೇ ಶಾಖದ ಅಲೆ ಎಚ್ಚರಿಕೆ ಇಲ್ಲ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಮುಂಬಯಿಯ ಘಾಟ್‌ಕೋಪರ್ ನಲ್ಲಿ ಅಕ್ರಮ ಸಂಗ್ರಹಣೆಯು ಇಂಧನ ಮಾರಾಟ ಕೇಂದ್ರದ ಮೇಲೆ ಬಿದ್ದು ಕನಿಷ್ಠ ಹೋರ್ಡಿಂಗ್ ಬಿದ್ದು 14 ಮಂದಿಯನ್ನು ಬಲಿತೆಗೆದುಕೊಂಡ ಪ್ರಕರಣ ಉಲ್ಲೇಖಿಸಿರುವ , ಇಲಾಖೆಯು ಜನರಿಗೆ ಎಚ್ಚರಿಕೆ ನೀಡಿ ಸುರಕ್ಷಿತವಾಗಿರಲು ಸಲಹೆ …
Read More »