Breaking News

ವಿದ್ಯಾರ್ಥಿಯ ಮೇಲೆ ಮನಬಂದಂತೆ ಥಳಿಸಿದ ಗುಂಪು: ಐವರು ಅರೆಸ್ಟ್

ಹುಬ್ಬಳ್ಳಿ: ಕ್ಷುಲ್ಲಕ ಕಾರಣಕ್ಕೆ ವಿದ್ಯಾರ್ಥಿಯನ್ನು, ಯುವಕರ ಗುಂಪೊಂದು ಮನಬಂದಂತೆ ಥಳಿಸಿ, ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಐವರನ್ನು ಬಂಧಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಶಾಲಾ ವಿದ್ಯಾರ್ಥಿಯೊಬ್ಬ ಯುವತಿಯೊಂದಿಗೆ ಮಾತನಾಡಿದ್ದಾನೆ ಎಂದು ಆರೋಪಿ ಶಾಲೆಯ ಬಳಿಯೇ ವಿದ್ಯಾರ್ಥಿಯನ್ನು ಹಿಡಿದು ಯುವಕರ ಗುಂಪೊಂದು ಮನ ಬಂದಂತೆ ಥಳಿಸಿತ್ತು. ಕಾಲಿನಿಂದ ಒದ್ದು ಹಲ್ಲೆ ನಡೆಸಿದ್ದರು. ಇದನ್ನು ಕಂಡ ಇತರ ವಿದ್ಯಾರ್ಥಿಗಳು ಶಾಲೆಯ ಪ್ರಾಂಶುಪಾಲರಿಗೆ ದೂರು ನೀಡಿದ್ದರು. ಪ್ರಾಂಶುಪಾಲರು ಅಶೋಕ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣವನ್ನು ಗಂಭೀರವಾಗಿ …

Read More »

ರಾಹುಲ್‌ ದ್ರಾವಿಡ್‌ ಗೆ ʻಭಾರತ ರತ್ನʼ ನೀಡಿ : ಸುನೀಲ್‌ ಗವಾಸ್ಕರ್‌ ಒತ್ತಾಯ

ನವದೆಹಲಿ: ಭಾರತದ ಮಾಜಿ ನಾಯಕ ಮತ್ತು ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಭಾರತ ರತ್ನ ಪ್ರಶಸ್ತಿಗೆ ಅರ್ಹರು ಎಂದು ಭಾರತದ ಮಾಜಿ ನಾಯಕ ಸುನಿಲ್ ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ. 51 ವರ್ಷದ ದ್ರಾವಿಡ್ ತಮ್ಮ 16 ವರ್ಷಗಳ ಸುದೀರ್ಘ ಅಂತರರಾಷ್ಟ್ರೀಯ ವೃತ್ತಿಜೀವನದಲ್ಲಿ ಭಾರತಕ್ಕಾಗಿ 164 ಟೆಸ್ಟ್, 344 ಏಕದಿನ ಮತ್ತು 1 ಟಿ 20 ಐ ಪಂದ್ಯಗಳನ್ನು ಆಡಿದ್ದಾರೆ, ನವೆಂಬರ್ 2021 ರಿಂದ ಜೂನ್ 2024 ರವರೆಗೆ ಭಾರತದ ಮುಖ್ಯ ಕೋಚ್ …

Read More »

ಮಹಾಮಳೆಗೆ ಮುಂಬೈ ತತ್ತರ..ಹಲವು ರೈಲುಗಳ ಸಂಚಾರ ಸ್ಥಗಿತ

ಮುಂಬೈ: ವಾಣಿಜ್ಯ ನಗರಿ ಮುಂಬೈ ಮಹಾನಗರ ಧಾರಾಕಾರ ಮಳೆಗೆ ತತ್ತರಿಸಿದೆ. ರಸ್ತೆಗಳು ನೀರಿನಿಂದ ತುಂಬಿಹೋಗಿದ್ದು ವಾಹನಗಳು ಮುಳುಗುತ್ತಿವೆ. ಹಲವು ರೈಲುಗಳ ಮಾರ್ಗ ಬದಲಿಸಲಾಗಿದೆ. ಮುಂಬೈನಲ್ಲಿ ಕಳೆದ ಕೆಲವು ದಿನಗಳಿಂದ ಭಾರೀ ಮಳೆಯಾಗುತ್ತಿದೆ. ರಸ್ತೆ, ರೈಲು ಮಾರ್ಗಗಳ ಮೇಲೆ ಭಾರೀ ಪ್ರಮಾಣದಲ್ಲಿ ನೀರು ಮತ್ತು ಕೆಸರು ಸಂಗ್ರಹವಾಗುತ್ತಿರುವುದರಿಂದ ವಾಹನ ಮತ್ತು ರೈಲುಗಳ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ವಿಮಾನ ನಿಲ್ದಾಣದಲ್ಲೂ ಇದೇ ಪರಿಸ್ಥಿತಿ ಇದೆ. ವಿವಿಧೆಡೆ ರೈಲು ಹಳಿಗಳ ಮೇಲೆ ಮರಗಳು ಉರುಳಿ ಬಿದ್ದಿವೆ. ಇದರಿಂದಾಗಿ …

Read More »

ರೇಣುಕಾಸ್ವಾಮಿ ಹತ್ಯೆ ಪ್ರಕರಣ : ಜಾಮೀನು ಅರ್ಜಿ ಹಿಂಪಡೆದ A17 ಆರೋಪಿ ನಿಖಿಲ್‌ ನಾಯಕ್

ಬೆಂಗಳೂರು : ರೇಣುಕಾಸ್ವಾಮಿ ಹತ್ಯೆ ಪ್ರಕರಣದ A17 ಆರೋಪಿ ನಿಖಿಲ್‌ ನಾಯಕ್ ಸಲ್ಲಿಸಿದ್ದ ಜಾಮೀನು ಅರ್ಜಿ ಹಿಂಪಡೆದಿದ್ದಾನೆ. ಎಫ್‌ ಎಸ್‌ ಎಲ್‌ ವರದಿ ಬಾರದ ಕಾರಣ ನೀಡಿ ನಿಖಿಲ್‌ ನಾಯಕ್‌ ಜಾಮೀನು ಅರ್ಜಿ ಹಿಂಪಡೆದಿದ್ದಾನೆ. ಜಾರ್ಮಿನು ಅರ್ಜಿಗೆ ಎಸ್‌ ಪಿಪಿ ಪ್ರಸನ್ನ ಕುಮಾರ್‌ ಅವರು ದಾಖಲೆ ಸಹಿತ ೬೦ ಪುಟಗಳ ಆಕ್ಷೇಪಣೆ ಸಲ್ಲಿಸಿದ್ದರು. ಹೀಗಾಗಿ ಜಾಮೀನು ಅರ್ಜಿಯನ್ನು ನಿಖಿಲ್‌ ನಾಯಕ್‌ ಪರ ವಕೀಲರು ಹಿಂಪಡೆದಿದ್ದಾರೆ. ಆರೋಪಿ ನಿಖಿಲ್‌ ನಾಯಕ್‌ ಗೆ …

Read More »

ಪಿಂಚಣಿದಾರರಿಗೆ ರಾಜ್ಯ ಸರ್ಕಾರದಿಂದ ಗುಡ್‌ನ್ಯೂಸ್‌: ಅರ್ಜಿ ವಿಲೇ ಅವಧಿ 30 ದಿನಕ್ಕೆ ಇಳಿಕೆ.!

ಬೆಂಗಳೂರು: ಪಿಂಚಣಿ ಗಳ ವಿಲೇ ಅವಧಿ ಸದ್ಯ 45 ದಿನ ಇದೆ. ಇದನ್ನು 30 ದಿನಕ್ಕೆ ಇಳಿಸಲಾಗುವುದು ಎಂದು ಸಿಎಂ ತಿಳಿಸಿದರು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಹಿತಿ ನೀಡಿದರು. ಇದೇ ವೇಳೆ ಅವರು ಮಾತನಾಡಿ, ಪಿಂಚಣಿ ಅರ್ಜಿಗಳು ಯಾವ ಯಾವ ಜಿಲ್ಲೆಗಳಲ್ಲಿ ಎಷ್ಟೆಷ್ಟು ಬಾಕಿ ಇವೆ ಎನ್ನುವ ಪಟ್ಟಿ ಪ್ರಸ್ತಾಪಿಸಿದ ಸಿಎಂ ಆಯಾ ಜಿಲ್ಲಾಧಿಕಾರಿಗಳಿಗೆ ಕಾಲಮಿತಿಯೊಳಗೆ …

Read More »

775 ಕೋಟಿ ಆಸ್ತಿಯಿದ್ದರೂ 30 ವರ್ಷಗಳಿಂದ ಸೀರೆಯನ್ನೇ ಖರೀದಿಸಿಲ್ಲ ಸುಧಾ ಮೂರ್ತಿ

ಸಾಮಾನ್ಯವಾಗಿ ಮಹಿಳೆಯರು ಶಾಪಿಂಗ್ ಮಾಡಲು ಇಷ್ಟಪಡುತ್ತಾರೆ. ಗಳಿಕೆ ಉತ್ತಮವಾಗಿದ್ದರೆ ಶಾಪಿಂಗ್‌ಗೆ ಬೇಡಿಕೆಯೂ ಹೆಚ್ಚುತ್ತದೆ. ಆದರೆ ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಅವರ ಪತ್ನಿ ಸುಧಾ ಮೂರ್ತಿ ಕಳೆದ 30 ವರ್ಷಗಳಿಂದ ತಮಗಾಗಿ ಒಂದೇ ಒಂದು ಸೀರೆಯನ್ನೂ ಖರೀದಿಸಿಲ್ಲ. ಸಂದರ್ಶನವೊಂದರಲ್ಲಿ ಅವರು ಬಿಚ್ಚಿಟ್ಟ ಈ ಸಂಗತಿ ಸಾಕಷ್ಟು ವೈರಲ್‌ ಆಗಿತ್ತು. ಕೋಟ್ಯಾಂತರ ರೂಪಾಯಿ ಆಸ್ತಿ-ಪಾಸ್ತಿ ಇದ್ದರೂ ಸುಧಾಮೂರ್ತಿ ತಮಗಾಗಿ ಒಂದೇ ಒಂದು ಸೀರೆಯನ್ನೂ ಖರೀದಿಸದೇ ಇರುವುದು ನಿಜಕ್ಕೂ ಅಚ್ಚರಿ ಮೂಡಿಸುತ್ತದೆ. ಸುಧಾಮೂರ್ತಿ …

Read More »

ಡಿಸಿಗಳು ಮಹಾರಾಜರಲ್ಲ, ಬೀದಿಗಳಿದು ಡೆಂಗ್ಯೂ ನಿಯಂತ್ರಿಸದೇ ಇದ್ರೆ ಕಠಿಣ ಕ್ರಮ-CM

ಡಿಸಿಗಳು ಮಹಾರಾಜರಲ್ಲ, ಬೀದಿಗಳಿದು ಡೆಂಗ್ಯೂ ನಿಯಂತ್ರಿಸದೇ ಇದ್ರೆ ಕಠಿಣ ಕ್ರಮ-CM ಬೆಂಗಳೂರು : ಡಿಸಿಗಳು ಮಹಾರಾಜರಲ್ಲ, ಬೀದಿಗಳಿದು ಡೆಂಗ್ಯೂ ನಿಯಂತ್ರಿಸದೇ ಇದ್ರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ. ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಜಿಲ್ಲಾಧಿಕಾರಿಗಳು, ಸಿಇಒ ಹಾಗೂ ಉಸ್ತುವಾರಿ ಕಾರ್ಯದರ್ಶಿಗಳ ಸಭೆಯಲ್ಲಿ ಮಾತನಡಿದ ಸಿಎಂ ಸಿದ್ದರಾಮಯ್ಯ ಡಿಸಿಗಳು ಮಹಾರಾಜರಲ್ಲ , ಜನ ಸೇವಕರು ಎನ್ನುವುದನ್ನು ನೆನಪಿನಲ್ಲಿಟ್ಟುಕೊಂಡು ಜನಸೇವೆ ಮಾಡಬೇಕು. ಬೀದಿಗಿಳಿದು ಕೆಲಸ ಮಾಡಬೇಕು. ರಾಜಕಾರಣಿಗಳು …

Read More »

BPL ಕಾರ್ಡ್‌ ನಿರೀಕ್ಷೆಯಲ್ಲಿದ್ದವರಿಗೆ ಗುಡ್‌ನ್ಯೂಸ್‌: ಶೀಘ್ರದಲ್ಲಿ ಕಾರ್ಡ್‌ ವಿತರಣೆಗೆ ಸಿಎಂ ಸಿದ್ದರಾಮಯ್ಯ ಸೂಚನೆ.!

BPL ಕಾರ್ಡ್‌ ನಿರೀಕ್ಷೆಯಲ್ಲಿದ್ದವರಿಗೆ ಗುಡ್‌ನ್ಯೂಸ್‌: ಶೀಘ್ರದಲ್ಲಿ ಕಾರ್ಡ್‌ ವಿತರಣೆಗೆ ಸಿಎಂ ಸಿದ್ದರಾಮಯ್ಯ ಸೂಚನೆ.! ಬೆಂಗಳೂರು: ರಾಜ್ಯದಲ್ಲಿ ಶೇ. 80 ರಷ್ಟು ಬಿಪಿಎಲ್‌ ಕಾರ್ಡುಗಳನ್ನು ಹೊಂದಿದ್ದಾರೆ. ತಮಿಳುನಾಡಿನಲ್ಲಿ ಶೇ.40 ರಷ್ಟಿದೆ. ನೀತಿ ಆಯೋಗದ ಪ್ರಕಾರ ರಾಜ್ಯದಲ್ಲಿ ಪ್ರಸ್ತುತ ಬಡತನ ರೇಖೆಗಿಂತ ಕೆಳಗಿರುವವರ ಪ್ರಮಾಣ ಶೇ.5.67 ಇರಬೇಕು. ಆದರೆ ರಾಜ್ಯದಲ್ಲಿ 1.27 ಕೋಟಿ ಕುಟುಂಬಗಳಿಗೆ ಬಿಪಿಎಲ್‌ ಕಾರ್ಡ್‌ ನೀಡಿದ್ದೇವೆ. ಅನರ್ಹ ಬಿ.ಪಿ.ಎಲ್. ಕಾರ್ಡುಗಳನ್ನು ರದ್ದು ಪಡಿಸಿ, ಅರ್ಹರಿಗೆ ಬಿಪಿಎಲ್‌ ಕಾರ್ಡು ಒದಗಿಸಬೇಕು ಎಂದು …

Read More »

ʻರೈತ ಹಂತಕʼ ಸಿದ್ದರಾಮಯ್ಯ ಸರ್ಕಾರದ 1 ವರ್ಷದ ಅವಧಿಯಲ್ಲಿ 1,182 ರೈತರು ಆತ್ಮಹತ್ಯೆ : ಆರ್.‌ ಅಶೋಕ್‌

ʻರೈತ ಹಂತಕʼ ಸಿದ್ದರಾಮಯ್ಯ ಸರ್ಕಾರದ 1 ವರ್ಷದ ಅವಧಿಯಲ್ಲಿ 1,182 ರೈತರು ಆತ್ಮಹತ್ಯೆ : ಆರ್.‌ ಅಶೋಕ್‌ ಬೆಂಗಳೂರು : ʻರೈತ ಹಂತಕʼ ಸಿದ್ದರಾಮಯ್ಯ ಸರ್ಕಾರದ 1, ವರ್ಷದ ಅವಧಿಯಲ್ಲಿ 1,182 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವಿಪಕ್ಷ ನಾಯಕ ಆರ್.‌ ಅಶೋಕ್‌ ವಾಗ್ದಾಳಿ ನಡೆಸಿದ್ದಾರೆ. ಈ ಕುರಿತು ಟ್ವೀಟ್‌ ಮಾಡಿರುವ ಆರ್‌. ಅಶೋಕ್‌, ಕರ್ನಾಟಕದ ಇತಿಹಾಸದಲ್ಲಿಯೇ ಅತಿ ಭಂಡ ಸರ್ಕಾರವೆಂದರೆ ಅದು ರೈತ ವಿರೋಧಿ, ರೈತ ಹಂತಕ ಸಿದ್ದರಾಮಯ್ಯ …

Read More »

ಸೂರತ್ ಕಟ್ಟಡ ಕುಸಿತ: ಮಾಲೀಕರ ವಿರುದ್ಧ ಎಫ್‌ಐಆರ್ ದಾಖಲು

ನವದೆಹಲಿ:ಸುಮಾರು ಮೂರು ಗಂಟೆಗಳ ಕಾಲ ನಡೆದ ಕಾರ್ಯಾಚರಣೆಯ ನಂತರ, 23 ವರ್ಷದ ಮಹಿಳೆಯನ್ನು ರಕ್ಷಿಸಿ ಆಸ್ಪತ್ರೆಗೆ ಸಾಗಿಸಲಾಯಿತು, ಅಲ್ಲಿ ಅವರ ಸ್ಥಿತಿ ಸ್ಥಿರವಾಗಿದೆ ಎಂದು ಹೇಳಲಾಗಿದೆ. ಗುಜರಾತ್ನ ಸೂರತ್ ನಗರದಲ್ಲಿ ಜುಲೈ 7 ರಂದು ಆರು ಅಂತಸ್ತಿನ ಕಟ್ಟಡ ಕುಸಿದು ಸಾವನ್ನಪ್ಪಿದವರ ಸಂಖ್ಯೆ ಏಳಕ್ಕೆ ಏರಿದೆ. ಘಟನೆಯಲ್ಲಿ ಒಂದು ಡಜನ್ ಗೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಪೊಲೀಸರು ಬಿಲ್ಡರ್ ಗಳ ವಿರುದ್ಧ ಪ್ರಥಮ ಮಾಹಿತಿ ವರದಿ (ಎಫ್ ಐಆರ್) ದಾಖಲಿಸಿದ್ದಾರೆ. …

Read More »