Breaking News

ವಿಶ್ವ ದಾಖಲೆ ಬರೆದ ವಿಶ್ವದ ಅತಿ ಎತ್ತರದ ಗೂಳಿ ರೋಮಿಯೋ

ಈ ಗೂಳಿ ಹೋಲ್‌ಸ್ಟೈನ್ ಜಾತಿಯ ಗೂಳಿಯಾಗಿದ್ದು ಇದಕ್ಕೆ ಈಗ 6 ವರ್ಷ. ಇದರ ಹೆಸರು ರೋಮಿಯೋ. ‘1.94 ಮೀಟರ್ (6 ಅಡಿ 4.5 ಇಂಚು) ಎತ್ತರವಿರುವ ಈ ಗೂಳಿ ಗಿನ್ನೆಸ್ ವಿಶ್ವ ದಾಖಲೆ ಪುಟವನ್ನು ಸೇರಿದೆ. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಗೂಳಿಯೊಂದು ಚರ್ಚೆಯಲ್ಲಿದೆ ಏಕೆಂದರೆ ಈ ಗೂಳಿ ಗಿನ್ನೆಸ್ ವಿಶ್ವ ದಾಖಲೆ ಪುಟವನ್ನು ಸೇರಿದೆ. ವಾಸ್ತವವಾಗಿ, 6 ವರ್ಷದ ಹೋಲ್‌ಸ್ಟೈನ್ ಸ್ಟೀರ್ ರೋಮಿಯೋ ಅನ್ನು ವಿಶ್ವದ ಅತಿ ಎತ್ತರದ ಬುಲ್ ಎಂದು ಪರಿಗಣಿಸಲಾಗಿದೆ. …

Read More »

ನಿವೃತ್ತ ಐಎಎಸ್​ ಅಧಿಕಾರಿ ಪತ್ನಿ ಶವವಾಗಿ ಪತ್ತೆ,

ನಿವೃತ್ತ ಐಎಎಸ್​ ಅಧಿಕಾರಿ ದೇವೇಂದ್ರ ನಾಥ್ ದುಬೆ ಅವರ ಪತ್ನಿ ಮೋಹಿನಿ ದುಬೆ ಶನಿವಾರ ಲಕ್ನೋದಲ್ಲಿರುವ ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ದೇವೇಂದ್ರನಾಥ್ ಅವರು ಗಾಲ್ಫ್ ಆಡಲು ಹೋಗಿದ್ದರು ಆದರೆ ಅವರು ಮನೆಗೆ ಹಿಂದಿರುಗಿದಾಗ, ಅವರು ತಮ್ಮ ಮನೆಯ ಒಳಗಿನಿಂದ ಬೀಗ ಹಾಕಿರುವುದನ್ನು ಗಮನಿಸಿದರು ಬಳಿಕ ಒಳಗೆ ಹೋಗಿ ನೋಡಿದಾಗ ಪತ್ನಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ದುಬೆ ಅವರ ಮನೆಯ ಬೀರುವಿನಲ್ಲಿದ್ದ ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದನ್ನು ಗಮನಿಸಿದ್ದಾರೆ. …

Read More »

ಕಾಸು ಕೊಟ್ಟು ಪೊರಕೆ, ಏಟು ತಿನ್ನಲು ಮುಗಿಬಿದ್ದ ಭಕ್ತರು

ಆನೇಕಲ್, ಮೇ 25: ಕಾಸು ಕೊಟ್ಟು ಪೊರಕೆ ಮೊರದಲ್ಲಿ ಏಟು ತಿನ್ನಲು ಭಕ್ತರು (Devotees) ಮುಗಿಬಿದ್ದಿರುವಂತಹ ಅಪರೂಪದ ಘಟನೆಯೊಂದು ನಗರದಲ್ಲಿ ನಡೆದಿದೆ. ಶ್ರೀ ಧರ್ಮರಾಯಸ್ವಾಮಿ ದ್ರೌಪತಮ್ಮ ಕರಗದ (Karaga) ಅಂಗವಾಗಿ ನಡೆಯುವ ಕೋಟೆ ಜಗಳ ಎಂಬ ವಿಶಿಷ್ಟ ಧಾರ್ಮಿಕ ಆಚರಣೆಯಲ್ಲಿ ಕಾಳಿ ವೇಷಧಾರಿಯಿಂದ ಭಕ್ತರಿಗೆ ಪೊರಕೆ ಮೊರದೇಟು ನೀಡಲಾಗಿದೆ. ಬಲಿ ನೀಡಲಾದ ಮೇಕೆಯ ಶ್ವಾಸಕೋಶವನ್ನು ಬಾಯಿಯಲ್ಲಿ ಕಚ್ಚಿಕೊಳ್ಳುವ ಕಾಳಿ ವೇಶಧಾರಿ, ಸಿಕ್ಕ ಸಿಕ್ಕವರಿಗೆ ಪೊರಕೆ, ಮೊರದಲ್ಲಿ ಹೊಡೆಯುವ ದೃಶ್ಯ ಮಾತ್ರ ರೋಮಾಂಚಕಾರಿ ಆಗಿರುತ್ತದೆ. ಕೋಟೆ ಜಗಳಕ್ಕಾಗಿ ನೂರಾರು …

Read More »

ಮಾಮೂಲಿ ಕೊಡದಿದ್ದಕ್ಕೆ ನನ್ನ ಗಂಡನನ್ನು ಪೊಲೀಸರೆ ಹೊಡೆದು ಸಾಯಿಸಿದ್ದಾರೆ : ಮೃತ ಆದಿಲ್ ಪತ್ನಿ ಆರೋಪ

ದಾವಣಗೆರೆ : ಒಂದು ತಿಂಗಳು ಮಾಮೂಲಿ ಕೊಡದಿದ್ದಕ್ಕೆ ನನ್ನ ಪತಿಯನ್ನು ಪೊಲೀಸರು ಹೊಡೆದು ಸಾಯಿಸಿದ್ದಾರೆ ಎಂದು ಮೃತ ಆದಿಲ್ ಪತ್ನಿ ಹೀನಾಬಾನು ಚನ್ನಗಿರಿ ಪೊಲೀಸರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಮಟ್ಕಾ ಆಡುತ್ತಿದ್ದ ಎಂದು ಆರೋಪಿಸಿ ಚೆನ್ನಗಿರಿ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಗಳು ನಿನ್ನೆ ಆದಿಲ್ಲನ್ನು ಠಾಣೆಗೆ ಕರೆದುಕೊಂಡು ಹೋಗಿದ್ದರು.

Read More »

ರಾಯಬಾಗಕ್ಕೆ ಚಿಕ್ಕೋಡಿ ಗ್ರಾಮಗಳ ಸೇರ್ಪಡೆಗೆ ವಿರೋಧ

ಚಿಕ್ಕೋಡಿ: ಚಿಕ್ಕೋಡಿ ತಾಲ್ಲೂಕು ವ್ಯಾಪ್ತಿಯ ರಾಯಬಾಗ ವಿಧಾನಸಭಾ ಕ್ಷೇತ್ರದ ಕೆಲವು ಗ್ರಾಮಗಳನ್ನು ರಾಯಬಾಗ ತಾಲ್ಲೂಕು ವ್ಯಾಪ್ತಿಯಲ್ಲಿ ಸೇರ್ಪಡೆಗೆ ವಿರೋಧಿಸಿ ನಾಗರಮುನ್ನೋಳಿ ಹೋಬಳಿಯ ಗ್ರಾಮಸ್ಥರು ಚಿಕ್ಕೋಡಿ ತಹಶೀಲ್ದಾರರಿಗೆ ಗುರುವಾರ ಮನವಿ ಸಲ್ಲಿಸಿದರು. ಕಳೆದ ಹಲವು ವರ್ಷಗಳಿಂದ ಚಿಕ್ಕೋಡಿ ತಾಲ್ಲೂಕು ವ್ಯಾಪ್ತಿಯಲ್ಲಿ ನಾಗರಮುನ್ನೋಳಿ, ಬಂಬಲವಾಡ, ಬೆಳಕೂಡ, ಕರೋಶಿ, ಉಮರಾಣಿ, ಹತ್ತರವಾಟ, ಜಾಗನೂರ, ಜೈನಾಪುರ, ಮುಗಳಿ, ಕರಗಾಂವ, ವಡ್ರಾಳ ಮುಂತಾದ ಗ್ರಾಮ ಪಂಚಾಯಿತಿಗಳು ಹಾಗೂ ಕಬ್ಬೂರ ಪಟ್ಟಣ ಪಂಚಾಯಿತಿ ರಾಯಬಾಗ ವಿಧಾನಸಭಾ ಕ್ಷೇತ್ರಕ್ಕೆ ಒಳಪಟ್ಟಿದ್ದರೂ, …

Read More »

ಮೊದಲ ದಿನ ಮಕ್ಕಳನ್ನು ಸಂಭ್ರಮದಿಂದ ಸ್ವಾಗತಿಸಲು ಶಿಕ್ಷಣ ಇಲಾಖೆ ಸಿದ್ಧತೆ

ಬೆಳಗಾವಿ: ಮೊದಲ ದಿನ ಮಕ್ಕಳನ್ನು ಸಂಭ್ರಮದಿಂದ ಸ್ವಾಗತಿಸಲು ಶಿಕ್ಷಣ ಇಲಾಖೆ ಸಿದ್ಧತೆ ಬೆಳಗಾವಿ: ಜಿಲ್ಲೆಯಾದ್ಯಂತ ಮೇ 29ರಿಂದ 2024-25ನೇ ಸಾಲಿನ ತರಗತಿ ಆರಂಭವಾಗಲಿವೆ.   ಬೇಸಿಗೆ ರಜೆ ಮುಗಿಸಿ ಶಾಲೆಯತ್ತ ಮುಖಮಾಡುವ ಮಕ್ಕಳನ್ನು ಸಂತಸದಿಂದ ಬರಮಾಡಿಕೊಳ್ಳುವ ದೃಷ್ಟಿಯಿಂದ ಮೊದಲ ದಿನವೇ ಪಠ್ಯಪುಸ್ತಕ ವಿತರಿಸಲು ಶಾಲಾ ಶಿಕ್ಷಣ ಇಲಾಖೆ ಸಿದ್ಧತೆ ನಡೆಸಿದೆ.

Read More »

ಸವದತ್ತಿ: ಬಹಿರ್ದೆಸೆ ತಾಣವಾದ ಚಿಕ್ಕುಂಬಿ ಕೆರೆ, ಅಧಿಕಾರಿಗಳ ವಿರುದ್ಧ ಜನರ ಆಕ್ರೋಶ

ಸವದತ್ತಿ: ಗ್ರಾಮಸ್ಥರ ಜೀವನಾಡಿಯಾಗಿದ್ದ ಚಿಕ್ಕುಂಬಿ ಕೆರೆ ಇದೀಗ ಬಹಿರ್ದೆಸೆ ತಾಣವಾಗಿ ಮಾರ್ಪಟ್ಟಿದೆ. ಗ್ರಾಮ ಪ್ರವೇಶಿಸುತ್ತಿದ್ದಂತೆ ದುರ್ವಾಸನೆಯೇ ಸ್ವಾಗತಿಸುತ್ತದೆ.   ಕೆರೆಯ ಸುತ್ತಲೂ ಮುತ್ತಿಕೊಂಡಿರುವ ಕಸರದ ರಾಶಿ, ತಿಪ್ಪೆ ಗುಂಡಿಗಳು ರಸ್ತೆವರೆಗೂ ಹಬ್ಬಿವೆ.

Read More »

ಬೆಳಗಾವಿ: ವಿದ್ಯುತ್‌ ಪರಿವರ್ತಕ ಏರಿದ ಮಾನಸಿಕ ಅಸ್ವಸ್ಥ

ಬೆಳಗಾವಿ: ಇಲ್ಲಿನ ಟಿಳಕ ಚೌಕ್‌ನಲ್ಲಿ ಮಾನಸಿಕ ಅಸ್ವಸ್ಥನೊಬ್ಬ ಶುಕ್ರವಾರ ವಿದ್ಯುತ್‌ ಪರಿವರ್ತಕ ಒಳಗೊಂಡ ಕಂಬ ಏರಿದ್ದರಿಂದ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಇದನ್ನು ನೋಡಲು ಅಪಾರ ಸಂಖ್ಯೆಯಲ್ಲಿ ಜನರು ಸೇರಿದ್ದರಿಂದ ಸಂಚಾರ ಸಮಸ್ಯೆ ತಲೆದೋರಿತು.   ತಕ್ಷಣವೇ ಸ್ಥಳಕ್ಕೆ ದೌಡಾಯಿಸಿದ ಹೆಸ್ಕಾಂ ಸಿಬ್ಬಂದಿ ಮತ್ತು ಪೊಲೀಸರು, ಆತನನ್ನು ಕೆಳಗಿಳಿಸುವಲ್ಲಿ ಯಶಸ್ವಿಯಾದರು.

Read More »

ಬೆಳಗಾವಿ: ನಿವೃತ್ತಿ ನಂತರ ಬದುಕು ನೀಡಿದ ಡ್ರ್ಯಾಗನ್

ಚನ್ನಮ್ಮನ ಕಿತ್ತೂರು: ತಾಲ್ಲೂಕಿನ ಮೇಟ್ಯಾಲ ಗ್ರಾಮದ ಸ್ವಂತ ಜಮೀನಿನಲ್ಲಿ ಸುರೇಖಾ ಶಿವಾನಂದ ಪೂಜಾರ ದಂಪತಿ ಸಾವಯವ ಡ್ರ್ಯಾಗನ್ ಹಣ್ಣಿನ ಕೃಷಿ ಕೈಗೊಂಡು ಗಮನ ಸೆಳೆದಿದ್ದಾರೆ. ಈ ಭಾಗದಲ್ಲಿ ಹೊಸ ಬೇಸಾಯವಾಗಿ ಗುರುತಿಸಿಕೊಂಡಿರುವ ಈ ಬೆಳೆಯು ರೈತರನ್ನು ಆಕರ್ಷಿಸುವಂತೆ ಮಾಡಿದೆ.

Read More »

ಕರಂಜಾಳ ಕೆರೆಯಲ್ಲಿ ಬೇಸಿಗೆಯಲ್ಲೂ ನೀರು

ಖಾನಾಪುರ: ಸಾಮಾನ್ಯವಾಗಿ ಬೇಸಿಗೆಯಲ್ಲಿ ಹಳ್ಳ-ಕೊಳ್ಳಗಳು, ಕೆರೆ-ಕಟ್ಟೆಗಳು ಮತ್ತು ನದಿ ಮತ್ತಿತರ ಜಲಮೂಲಗಳಲ್ಲಿ ನೀರಿನ ಹರಿವು ಮತ್ತು ಪ್ರಮಾಣ ಕ್ಷೀಣಿಸುವುದು ವಾಡಿಕೆ. ಆದರೆ ತಾಲ್ಲೂಕಿನ ಲೋಂಡಾ ಅರಣ್ಯ ವಲಯದ ಕರಂಜಾಳ ಗ್ರಾಮ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಹತ್ತು ವರ್ಷಗಳ ಹಿಂದೆ ಅರಣ್ಯ ಇಲಾಖೆಯವರು ನಿರ್ಮಿಸಿದ ಕೆರೆಯಲ್ಲಿ ಈ ವರ್ಷದ ಕಡು ಬೇಸಿಗೆಯಲ್ಲೂ ಅವಶ್ಯ ಪ್ರಮಾಣದಲ್ಲಿ ನೀರಿನ ಸಂಗ್ರಹವಿದೆ.

Read More »