Breaking News

ಸರ್ಕಾರವನ್ನು ಉಳಿಸಿಕೊಳ್ಳುವ ಸಲುವಾಗಿ ಮಂಡಿಸಿದ ಬಜೆಟ್‌

ಸರ್ಕಾರವನ್ನು ಉಳಿಸಿಕೊಳ್ಳುವ ಸಲುವಾಗಿ ಮಂಡಿಸಿದ ಬಜೆಟ್‌ ಹೊಸದಿಲ್ಲಿ: ಈ ಬಾರಿಯ ಕೇಂದ್ರ ಬಜೆಟ್‌ “ಕಾಪಿಕ್ಯಾಟ್‌’ ಬಜೆಟ್‌ ಆಗಿದ್ದು, ಇದು ಅಭಿವೃದ್ಧಿಗೆ ಪೂರಕವಲ್ಲದ ಬಜೆಟ್‌ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದ್ದಾರೆ. ಮೋದಿ ಸರ್ಕಾರವನ್ನು ಉಳಿಸಿಕೊಳ್ಳುವ ಸಲುವಾಗಿ ಈ ಬಜೆಟ್‌ ಮಂಡನೆಯಾಗಿದೆ ಎಂದಿದ್ದಾರೆ. ಈ ಬಗ್ಗೆ ತಮ್ಮ ಟ್ವೀಟರ್‌ ಖಾತೆಯಲ್ಲಿ ಬರೆ ದು ಕೊಂಡಿ ರುವ ಖರ್ಗೆ, “ಮೋದಿ ಸರ್ಕಾರದ “ಕಾಪಿಕ್ಯಾಟ್‌ ಬಜೆಟ್‌’ಗೆ ಸರಿಯಾಗಿ ಕಾಂಗ್ರೆಸ್‌ನ ನ್ಯಾಯಪತ್ರವನ್ನು ನಕಲು ಮಾಡಲೂ ಬಂದಿಲ್ಲ. ತಮ್ಮ ಮಿತ್ರ …

Read More »

ಹಿರಣ್ಯಕೇಶಿ ನದಿಯ ಸೇತುವೆಯಲ್ಲಿ ಸವಾರರ ಹುಚ್ಚಾಟ

ಸಂಕೇಶ್ವರ: ಸಮೀಪದ ಹಿರಣ್ಯಕೇಶಿ ನದಿಯ ಸೇತುವೆ ಮೇಲೆ ನೀರು ರಭಸದಿಂದ ಹರಿಯುತ್ತಿದ್ದರೂ ವಾಹನ ಸವಾರರು ಪ್ರಾಣಾಪಾಯವನ್ನೂ ಲೆಕ್ಕಿಸದೇ ನದಿ ನೀರಿನಲ್ಲಿಯೇ ವಾಹನ ಚಲಾಯಿಸಿಕೊಂಡು ಹೋದ ಘಟನೆ ನಡೆದಿದೆ. ಕರ್ನಾಟಕ-ಮಹಾರಾಷ್ಟ್ರ ಸಂಪರ್ಕಿಸುವ ರಸ್ತೆಗೆ ಅಡ್ಡಲಾಗಿ ಹಾದು ಹೋಗಿರುವ ಹಿರಣ್ಯಕೇಶಿ ನದಿ ಸೇತುವೆ ಜಲಾವೃತವಾಗಿದ್ದು, ಸುರಕ್ಷತೆ ದೃಷ್ಟಿಯಿಂದ ಸಂಚಾರ ನಿರ್ಬಂಧಿಸಿ ಪೊಲೀಸರನ್ನು ನಿಯೋಜಿಸಲಾಗಿತ್ತು. ಆದರೂ ಕೂಡಾ ವಾಹನ ಸವಾರರು ಜೀವದ ಹಂಗು ತೊರೆದು ವಾಹನ ಚಲಾಯಿಸಿ ಹುಚ್ಚಾಟ ಮೆರೆದಿದ್ದಾರೆ.

Read More »

ರೈತರೇ ಗಮನಿಸಿ : ಬೆಳೆ ವಿಮೆ ಲಾಭ ಪಡೆಯಲು ತಪ್ಪದೇ ಈ ಕೆಲಸ ಮಾಡಿಕೊಳ್ಳಿ

ಬಳ್ಳಾರಿ : ರೈತರು ಬೆಳೆ ವಿಮೆ ಯೋಜನೆಯಡಿ ತಮ್ಮ ಬೆಳೆಗಳನ್ನು ನೋಂದಾಯಿಸಿಕೊಂಡು ಯೋಜನೆಯ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ತಿಳಿಸಿದ್ದಾರೆ. ಪ್ರಸ್ತಕ ಸಾಲಿನ ಮುಂಗಾರು ಹಂಗಾಮಿನಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ಬೆಳೆ ವಿಮೆಗೆ ನೋಂದಾಯಿಸಲು ಬೆಳೆ ಸಾಲ ಪಡೆದ ಹಾಗೂ ಬೆಳೆ ಸಾಲ ಪಡೆಯದ ರೈತರು ತಮ್ಮ ಬೆಳೆಗಳಿಗೆ ಬ್ಯಾಂಕುಗಳಲ್ಲಿ ವಿಮೆ ಮಾಡಿಸಿಕೊಳ್ಳಬೇಕು. ಮುಸುಕಿನ ಜೋಳ, ಜೋಳ, …

Read More »

ರಾಜ್ಯದಲ್ಲಿ ನಕಲಿ ವೈದ್ಯರ ಹಾವಳಿ ತಡೆಗೆ ಮಹತ್ವದ ಕ್ರಮ

ಬೆಂಗಳೂರು : ರಾಜ್ಯದಲ್ಲಿ ನಕಲಿ ವೈದ್ಯರ ಹಾವಳಿ ತಡೆಗೆ ರಾಜ್ಯ ಸರ್ಕಾರವು ಮಹತ್ವದ ಕ್ರಮ ಕೈಗೊಂಡಿದ್ದು, ನಕಲಿ ವೈದ್ಯರೆಂದು ಕಂಡುಬಂದರೆ ₹25 ಲಕ್ಷದವರೆಗೆ ದಂಡ ವಿಧಿಸಲಾಗುವುದು ಎಂದು ಸಚಿವ ದಿನೇಶ್‌ ಗುಂಡೂರಾವ್‌ ಹೇಳಿದ್ದಾರೆ. ವಿಧಾನ ಮಂಡಲ ಕಲಾಪದಲ್ಲಿ ಈ ಕುರಿತು ಮಾಹಿತಿ ನೀಡಿರುವ ಸಚಿವ ದಿನೇಶ್‌ ಗುಂಡೂರಾವ್‌, ರಾಜ್ಯದಲ್ಲಿ ನಕಲಿ ವೈದ್ಯರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದ್ದು, ಕನಿಷ್ಠ 3 ವರ್ಷ ಜೈಲು ಶಿಕ್ಷೆಯಾಗುವಂತೆ ಕ್ರಿಮಿನಲ್‌ ಕೇಸ್‌ ದಾಖಲಿಸಲಾಗುತ್ತಿದೆ. ನಕಲಿ …

Read More »

ರಾಜ್ಯದ 1,351 ಗ್ರಾಮಗಳಲ್ಲಿ ಭೂಕುಸಿತ ಆತಂಕ;ಕೃಷ್ಣಬೈರೇಗೌಡ?

ಬೆಂಗಳೂರು: ಪಶ್ಚಿಮಘಟ್ಟ ವ್ಯಾಪ್ತಿಯ 250 ಗ್ರಾಮ ಪಂಚಾಯತ್‌ಗಳ 1,351 ಗ್ರಾಮಗಳ ಸೂಕ್ಷ್ಮ ಪ್ರದೇಶಗಳಲ್ಲಿ ಭೂಕುಸಿತ ಸಾಧ್ಯತೆಯಿದೆ ಎಂದು ಕೇಂದ್ರದ ಭೂ ಸರ್ವೆಕ್ಷಣ ಇಲಾಖೆ ವರದಿ ನೀಡಿದ್ದು, ಮುಂಜಾಗ್ರತ ಕ್ರಮವಾಗಿ ಕುಸಿತ ಉಂಟಾಗುವ ಪ್ರದೇಶಗಳಲ್ಲಿ ತಡೆಗೋಡೆ ನಿರ್ಮಾಣ ಸೇರಿದಂತೆ ಅಗತ್ಯ ಪರಿಹಾರ ಕಾರ್ಯಾಚರಣೆಗಾಗಿ 100 ಕೋಟಿ ರೂ. ಮೀಸಲಿಡಲು ತೀರ್ಮಾನಿಸಲಾಗಿದೆ ಎಂದು ಕಂದಾಯ ಇಲಾಖೆ ಸಚಿವ ಕೃಷ್ಣಬೈರೇಗೌಡ ತಿಳಿಸಿದರು. ಪಶ್ಚಿಮಘಟ್ಟ, ಮಲೆನಾಡು ಹಾಗೂ ಕರಾವಳಿ ಪ್ರದೇಶಗಳಲ್ಲಿ ಉಂಟಾಗುತ್ತಿರುವ ಭೂ ಕುಸಿತಕ್ಕೆ ಕಾರಣವೇನು ? …

Read More »

ಕಣ್ಮನ ಸೆಳೆಯುವ ಚಾರ್ಮಾಡಿ ಘಾಟ್

ಮಳೆಗಾಲದಲ್ಲಿ ಪ್ರವಾಸಿಗರನ್ನು ಸೆಳೆಯುವ ಪ್ರಮುಖ ಸ್ಥಳಗಳಲ್ಲಿ ಚಾರ್ಮಾಡಿ ಘಾಟ್ ಕೂಡ ಒಂದಾಗಿದೆ. ಮಲೆನಾಡಿನ ಚಿಕ್ಕಪುಟ್ಟ ಜಲಪಾತಗಳೆಲ್ಲಾ ಜೀವಂತಿಕೆ ಪಡೆದುಕೊಳ್ಳುವ ದೃಶ್ಯ ವೈಭವವನ್ನು ಕಣ್ತುಂಬಿಕೊಳ್ಳುವುದೇ ಕಣ್ಣಿಗೆ ಹಬ್ಬವಿದ್ದಂತೆ. ಜಲಧಾರೆ, ಹಸಿರನ್ನೇ ಮೈವೆತ್ತು ನಿಂತ ಬೆಟ್ಟಗಳು, ಕಡಿದಾದ ಕಣಿವೆಯ ದಾರಿ, ಜಲಪಾತ, ಪ್ರಪಾತ, ಹಸಿರು, ಮಳೆ, ಗುಡ್ಡವನ್ನು ಚುಂಬಿಸುವ ಬೆಳ್ಳಿ ಮೋಡಗಳು ಒಂದೇ, ಎರಡೇ. ಹೀಗೆ ಚಾರ್ಮಾಡಿ ಘಾಟ್ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಅಪಾರ ಸಂಖ್ಯೆಯ ಪ್ರವಾಸಿಗರು ಭೇಟಿ ಕೊಡುತ್ತಾರೆ. ಅಲ್ಲಲ್ಲಿ ಕಾಣಸಿಗುವ ಜಲಪಾತಗಳ …

Read More »

ನಾಲ್ಕು ತಾಲ್ಲೂಕಿನಲ್ಲಿ ಜು.24 ರಂದು ಅಂಗನವಾಡಿ, ಶಾಲೆಗಳಿಗೆ ರಜೆ ಘೋಷಣೆ

SCHOOL COLLEGE HOLIDAY ON 24 JULY ವ್ಯಾಪಕ ಮಳೆ: ನಾಲ್ಕು ತಾಲ್ಲೂಕಿನಲ್ಲಿ ಜು.24 ರಂದು ಅಂಗನವಾಡಿ, ಶಾಲೆಗಳಿಗೆ ರಜೆ ಘೋಷಣೆ ಬೆಳಗಾವಿ, ವ್ಯಾಪಕ ಮಳೆ ಹಿನ್ನೆಲೆಯಲ್ಲಿ ಬೆಳಗಾವಿ, ಖಾನಾಪುರ, ಬೈಲಹೊಂಗಲ ಮತ್ತು ಕಿತ್ತೂರು ತಾಲ್ಲೂಕಿನ ಅಂಗನವಾಡಿ, ಎಲ್ಲ ಸರಕಾರಿ, ಅನುದಾನಿತ, ಅನುದಾನರಹಿತ ಪ್ರಾಥಮಿಕ-ಪ್ರೌಢಶಾಲೆಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಆದೇಶ ಹೊರಡಿಸಿದ್ದಾರೆ. ಅದೇ ರೀತಿ ಬೆಳಗಾವಿ ಮತ್ತು ಖಾನಾಪುರ ತಾಲ್ಲೂಕಿನ ಪದವಿ ಪೂರ್ವ ಕಾಲೇಜುಗಳಿಗೂ ರಜೆ ಘೋಷಿಸಲಾಗಿದೆ …

Read More »

ESI ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿದ ಮೊಸಳೆ ಮರಿ. ಸಿಬ್ಬಂದಿಗಳು ಕಕ್ಕಾಬಿಕ್ಕಿ

ದಾಂಡೇಲಿ : ನದಿಯಲ್ಲಿ, ನದಿಯ ಸುತ್ತಮುತ್ತ, ರಸ್ತೆಗಳಲ್ಲಿ ಮೊಸಳೆಗಳು ಅಡ್ಡಾಡುತ್ತಿರುವುದನ್ನು ಆಗೊಮ್ಮೆ ಈಗೊಮ್ಮೆ ನೋಡಿದ್ದೇವೆ. ಆದರೆ ಆಸ್ಪತ್ರೆಯ ಒಳಗಡೆ ಮೊಸಳೆಯ ಮರಿಯೊಂದು ಪ್ರತ್ಯಕ್ಷವಾಗಿ ಅಚ್ಚರಿ ಮೂಡಿಸಿದ ಘಟನೆ ದಾಂಡೇಲಿಯ ಇಎಸ್‌ಐ ಆಸ್ಪತ್ರೆಯಲ್ಲಿ ಸೋಮವಾರ ತಡರಾತ್ರಿ ನಡೆದಿದೆ. ಆಸ್ಪತ್ರೆಯೊಳಗಡೆ ಪ್ರತ್ಯಕ್ಷವಾದ ಮೊಸಳೆಯ ಮರಿಯನ್ನು ನೋಡಿದೊಡನೆ ಸಿಬ್ಬಂದಿಗಳು ಒಮ್ಮೆಲೆ ಭಯ ಮತ್ತು ಅಚ್ಚರಿಗೊಂಡಿದ್ದಾರೆ. ತಕ್ಷಣವೆ ಇ.ಎಸ್.ಐ ಆಸ್ಪತ್ರೆಯ ಭದ್ರತಾ ಸಿಬ್ಬಂದಿ ತುಕರಾಮ ಅವರು ಮೊಸಳೆಯ ಮರಿಯನ್ನು ಸುರಕ್ಷಿತವಾಗಿ ಹಿಡಿದು, ನದಿಗೆ ಬಿಟ್ಟು ಬಂದಿದ್ದಾರೆ. ಒಟ್ಟಿನಲ್ಲಿ …

Read More »

ಹೊಂಡಕ್ಕೆ ಬಿದ್ದು ಮಹಿಳೆ ಆತ್ಮಹತ್ಯೆ

ಮುಂಡಗೋಡ: ಮಹಿಳೆಯೊಬ್ಬರು ಆತ್ಮಹತ್ಯೆಗೆ ಯತ್ನಿಸಿ ‌ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ ಘಟನೆ ಪಟ್ಟಣದ ಬಸವನ‌ ಹೊಂಡದಲ್ಲಿ ಜು. 23ರ ಮಂಗಳವಾರ ನಡೆದಿದೆ. ಪಟ್ಟಣದ ಅಂಬೇಡ್ಕರ್ ಓಣಿಯ ರುಕ್ಮಿಣಿ ನಾಗೇಂದ್ರ ವಡ್ಡರ(50) ಮೃತಪಟ್ಟ ಮಹಿಳೆ. ಮಹಿಳೆ (ಜು.23) ಇಂದು ಬೆಳಿಗ್ಗೆ ಆತ್ಮಹತ್ಯೆ ಮಾಡಿಕೊಳ್ಳಲು ಬಸವನ ಹೊಂಡದಲ್ಲಿ ಎಂಬಲ್ಲಿ ಹೊಂಡಕ್ಕೆ ಬಿದ್ದಿದ್ದಾರೆ. ಇದನ್ನು ನೋಡಿದ ಸಾರ್ವಜನಿಕರು ಆಕೆಯನ್ನು ಹೊಂಡದಿಂದ ಮೇಲಕ್ಕೆತ್ತಿದ್ದಾರೆ. ಅದಾಗಲೇ ಮಹಿಳೆ ಚಿಂತಾಜನಕ ಸ್ಥಿತಿಯಲ್ಲಿದ್ದರು. ತಕ್ಷಣವೇ ಸಾರ್ವಜನಿಕರು ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ …

Read More »

ಕಮಲಾ ಹ್ಯಾರಿಸ್ ಗೆಲುವಿಗೆ ತಮಿಳುನಾಡಿನಲ್ಲಿ ವಿಶೇಷ ಪ್ರಾರ್ಥನೆ

ಚೆನ್ನೈ: ಅಮೆರಿಕದ ಅಧ್ಯಕ್ಷೀಯ ಚುನಾವಣೆಯಿಂದ ಹಾಲಿ ಅಧ್ಯಕ್ಷ ಜೋ ಬೈಡನ್ ಹಿಂದೆ ಸರಿದ ಬೆನ್ನಲ್ಲೇ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದಿಂದ ಕಮಲಾ ಹ್ಯಾರಿಸ್ ನಾಮನಿರ್ದೇಶನಗೊಂಡಿದ್ದು ಅತ್ತ ಹ್ಯಾರಿಸ್ ಹೆಸರು ಅಂತಿಮಗೊಳ್ಳುತ್ತಿದ್ದಂತೆ ಇತ್ತ ತಮಿಳುನಾಡಿನಲ್ಲಿ ಪೂರ್ವಜರ ಕುಟುಂಬದಿಂದ ಮುಂಬರುವ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ವಿರುದ್ಧ ಗೆಲುವು ಸಾಧಿಸಲಿ ಎಂದು ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ. ಅಂದಹಾಗೆ ಕಮಲಾ ಹ್ಯಾರಿಸ್ ತಾಯಿ ತಮಿಳುನಾಡು ಮೂಲದವರು ಹಾಗಾಗಿ ತಮಿಳುನಾಡಿನಲ್ಲಿ ಕಮಲಾ ಪೂರ್ವಜರು ಇಂದಿಗೂ ನೆಲೆಸಿದ್ದು ಅದರಂತೆ ಈ …

Read More »