Breaking News

ಅಪ್ರಾಪ್ತ ಮಕ್ಕಳಿಗೆ ವಾಹನ ಚಾಲನೆಗೆ ಕೊಡುವ ಪೋಷಕರೇ ತಪ್ಪದೇ ಈ ಸುದ್ದಿ ಓದಿ!

ಬೆಂಗಳೂರು : ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ಪಾಲಕರು ವಾಹನ ಚಲಾಯಿಸಲು ಅವಕಾಶ ಮಾಡಿಕೊಡುವ ಮುನ್ನ ಈ ಸುದ್ದಿಯನ್ನು ಒಮ್ಮೆ ಓದಿ. ವಾಹನ ಚಲಾಯಿಸಿ ಅಪಘಾತ ಉಂಟು ಮಾಡಿದರೆ, ವಾಹನದ ಮಾಲೀಕರು ಸಂಬಂಧಪಟ್ಟವರಿಗೆ ಪರಿಹಾರ ನೀಡಬೇಕೇ ಹೊರತು ವಿಮಾ ಕಂಪನಿಯಲ್ಲ ಎಂದು ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿದೆ. ವಿಮಾ ಕಂಪನಿಯ ಮೇಲೆ ಹೊಣೆಗಾರಿಕೆ ವಹಿಸಿದ ಮೋಟಾರು ವಾಹನ ಅಪಘಾತ ನ್ಯಾಯಮಂಡಳಿಯ ತೀರ್ಪು ರದ್ದುಗೊಳಿಸಿ ನ್ಯಾಯಮೂರ್ತಿ ಹಂಚಾಟೆ ಸಂಜೀವ್‌ಕುಮಾರ್ ಈ ತೀರ್ಪು ನೀಡಿದ್ದಾರೆ. …

Read More »

ಬೆಂಗಳೂರಿನ ಮೊದಲ ‘ಡಬಲ್ ಡೆಕ್ಕರ್ ಫ್ಲೈಓವರ್’ ಕೊನೆಗೂ ಸಿದ್ಧ

ಬೆಂಗಳೂರು: ಹಲವಾರು ವಿಳಂಬಗಳ ನಂತರ, ಬೆಂಗಳೂರಿನ ಮೊದಲ ಡಬಲ್ ಡೆಕ್ಕರ್ ಫ್ಲೈಓವರ್ ಅಂತಿಮವಾಗಿ ಸಿದ್ಧವಾಗಿದೆ.ರಾಗಿಗುಡ್ಡದಿಂದ ಸೆಂಟ್ರಲ್ ಸಿಲ್ಕ್ ಬೋರ್ಡ್ ವರೆಗೆ ಯೆಲ್ಲೋ ಲೈನ್ (ಆರ್ ವಿ ರಸ್ತೆ- ಬೊಮ್ಮಸಂದ್ರ) ಉದ್ದಕ್ಕೂ 3.3 ಕಿ.ಮೀ ಉದ್ದದ ರಸ್ತೆ ಮೇಲ್ಸೇತುವೆ ಪೂರ್ಣಗೊಂಡಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್ ಸಿಎಲ್) ತಿಳಿಸಿದೆ. ಅಧಿಕಾರಿಗಳ ಅಂತಿಮ ತಪಾಸಣೆಯ ನಂತರ ಜೂನ್ 15 ರಂದು ಅಥವಾ ನಂತರ ಮೇಲ್ಸೇತುವೆಯಲ್ಲಿ (ರಾಗಿಗುಡ್ಡದಿಂದ ಸಿಎಸ್ಬಿವರೆಗೆ) ವಾಹನ …

Read More »

ರೇಣುಕಾಸ್ವಾಮಿ ಮೃತದೇಹ ಸಾಗಿಸಿದ್ದ‌ ಸ್ಜಾರ್ಪಿಯೋ ಕಾರು ಸೀಜ್!

ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ಇದೀಗ ರೇಣುಕಾಸ್ವಾಮಿ ಮೃತದೇಹ ಸಾಗಿಸಲು ಬಳಸಿದ್ದ ಸ್ಕಾರ್ಪಿಯೋ ಕಾರನ್ನು ಸೀಜ್‌ ಮಾಡಿದ್ದಾರೆ. ರೇಣುಕಾಸ್ವಾಮಿ ಹತ್ಯೆ ಬಳಿಕ ಮೃತದೇಹವನ್ನು ಸಾಗಿಸಲು ಬಳಸಿದ್ದಾರೆ ಎನ್ನಲಾಗಿರುವ KA 03 MU 8821 ನಂಬರ್ ನ ಕಾರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಕಾರು ಆರ್.ಆರ್.ನಗರ ದರ್ಶನ್ ಅಭಿಮಾನಿ ಸಂಘದ ಅಧ್ಯಕ್ಷ ಮನೆ ಬಳಿ‌ ಇತ್ತು. ಇದೀಗ ಪೊಲೀಸರು ಕಾರು ಸೀಜ್ ಮಾಡಿ‌ …

Read More »

ಇಂದು ಬೆಳಗ್ಗೆ 11 ಗಂಟೆಗೆ ರಾಜ್ಯ ಸರ್ಕಾರದ ಮಹತ್ವದ ‘ಸಚಿವ ಸಂಪುಟ ಸಭೆ’

ಇಂದು ಬೆಳಗ್ಗೆ 11 ಗಂಟೆಗೆ ರಾಜ್ಯ ಸರ್ಕಾರದ ಮಹತ್ವದ ‘ಸಚಿವ ಸಂಪುಟ ಸಭೆ’ ಬೆಂಗಳೂರು : ಜೂನ್ 13ರ ಗುರುವಾರ ಬೆಳಿಗ್ಗೆ 11:00 ಗಂಟೆಗೆ ರಾಜ್ಯ ಸಚಿವ ಸಂಪುಟದ 2024ನೇ ಸಾಲಿನ 9ನೇ ಸಭೆಯನ್ನು ವಿಧಾನಸೌಧದ ಸಚಿವ ಸಂಪುಟ ಸಭಾಮಂದಿರದಲ್ಲಿ ಕರೆಯಲಾಗಿದೆ. ಲೋಕಸಭೆ ಚುನಾವಣೆ ಬಳಿಕ ಮೊದಲ ಬಾರಿಗೆ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ರಾಜ್ಯ ಸಚಿವ ಸಂಪುಟ ಸಭೆ ಇಂದು ನಡೆಯಲಿದೆ. ಸಚಿವ ಸಂಪುಟ ಸಭೆಯಲ್ಲಿ ರಾಜ್ಯ ಸರ್ಕಾರಿ ನೌಕರರಿಗೆ …

Read More »

ಕೆಪಿಎಸ್‌ಸಿಯಿಂದ 79 ಹುದ್ದೆಗಳ ಹೆಚ್ಚುವರಿ ಆಯ್ಕೆಪಟ್ಟಿ ಪ್ರಕಟ..!

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗವು ಅಧಿಸೂಚಿಸಿರುವ ರಾಜ್ಯದ ವಿವಿಧ ಇಲಾಖೆಗಳಲ್ಲಿನ ಉಳಿಕೆ ಮೂಲ ವೃಂದದ – 1122 ಕಿರಿಯ ಸಹಾಯಕರು / ದ್ವಿತೀಯ ದರ್ಜೆ ಸಹಾಯಕರ ಹುದ್ದೆಗಳ ಅಂತಿಮ ಆಯ್ಕೆಪಟ್ಟಿಯನ್ನು ದಿನಾಂಕ: 09-01-2023 ಹಾಗೂ ಪರಿಷ್ಕøತ ಅಂತಿಮ ಆಯ್ಕೆಪಟ್ಟಿಯನ್ನು ದಿನಾಂಕ: 14-03-2023 ಮತ್ತು ಹೆಚ್ಚುವರಿ ಆಯ್ಕೆಪಟ್ಟಿಯನ್ನು ದಿನಾಂಕ: 05-05-2023 ರಂದು ಪ್ರಕಟಿಸಲಾಗಿರುತ್ತದೆ. ಪ್ರಸ್ತುತ ಸದರಿ ಹುದ್ದೆಗಳ ಹೆಚ್ಚುವರಿ ಆಯ್ಕೆಪಟ್ಟಿಗಾಗಿ 16 ಇಲಾಖೆಗಳಿಂದ ಸ್ವೀಕೃತವಾದ ಪ್ರಸ್ತಾವನೆಯ ಕಾಲನುಕ್ರಮದನುಸಾರ 79 ಹುದ್ದೆಗಳ ಹೆಚ್ಚುವರಿ …

Read More »

ಇಸ್ಟೀಟ್​ ಅಡ್ಡೆ ಮೇಲೆ ದಾಳಿ: ತಪ್ಪಿಸಿಕೊಳ್ಳಲು ಕೆರೆಗೆ ಹಾರಿದ ವ್ಯಕ್ತಿ ನೀರಿನಲ್ಲಿ ಮುಳುಗಿ ಸಾವು

ಕೋಲಾರ, ಜೂ.12: ಜಿಲ್ಲೆಯ ಶ್ರೀನಿವಾಸಪುರ(Srinivaspur) ತಾಲೂಕಿನ ಗುಡಸವಾರಪಲ್ಲಿ ಗ್ರಾಮದ ಬಳಿ ಇಸ್ಪೀಟ್​(Gambling) ಆಡುತ್ತಿದ್ದ ವ್ಯಕ್ತಿಯೊಬ್ಬ ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ಕೆರೆಗೆ ಹಾರಿ ತನ್ನ ಜೀವವನ್ನೇ ಕಳೆದುಕೊಂಡಿರುವ ಘಟನೆ ನಡೆದಿದೆ. ನರಸಿಂಹ (45) ಮೃತ ರ್ದುದೈವಿ. ಗುಡಸವಾರ ಪಲ್ಲಿ ಗ್ರಾಮದ ಕೊಂಡರೆಡ್ಡಿಚೆರವು ಎನ್ನುವ ಕೆರೆಯ ದಡದಲ್ಲಿ ಇಸ್ಪೀಟ್​ ಅಡ್ಡೆ ನಡೆಯುತ್ತಿದ್ದು, ಅಲ್ಲಿ ಹತ್ತು ಹನ್ನೆರಡು ಜನ ಇಸ್ಪೀಟ್​ ಆಡುತ್ತಿದ್ದರು. ಈ ವೇಳೆ ಪೊಲೀಸರು ಬರ್ತಿದ್ದಾರೆ ಎನ್ನುವ ಮಾಹಿತಿ ತಿಳಿಯುತ್ತಿದ್ದಂತೆ ಅಲ್ಲಿದ್ದವರೆಲ್ಲ ಚೆಲ್ಲಾಪಿಲ್ಲಿಯಾಗಿ ಓಡಿ ಹೋಗಿದ್ದಾರೆ. ಅದರಲ್ಲಿ …

Read More »

ದರ್ಶನ್ ಸರ್ವನಾಶ ಆಗ್ತಾರೆ ಕರ್ಮ ಬಿಡಲ್ಲ; ರೇಣುಕಾ ಸ್ವಾಮಿ ತಾಯಿ

ರೇಣುಕಾ ಸ್ವಾಮಿ (Renuka Swami) ಸಾವಿನಿಂದ ಅವರ ಕುಟುಂಬಕ್ಕೆ ಸಾಕಷ್ಟು ದುಃಖ ಉಂಟಾಗಿದೆ. ರೇಣುಕಾ ಸ್ವಾಮಿ ಪತ್ನಿ ಈಗ ಮೂರು ತಿಂಗಳ ಗರ್ಭಿಣಿ. ರೇಣುಕಾ ಸ್ವಾಮಿ ಅವರ ತಾಯಿ ರತ್ನಪ್ರಭಾ ದರ್ಶನ್​ಗೆ ಹಿಡಿ ಶಾಪ ಹಾಕಿದ್ದಾರೆ. ‘ನನ್ನ ಮಗ ಯಾವಾಗಲೂ ಹೋಗುವಂತೆ ಹೋಗಿದ್ದ. ಅವನ ಕಿಡ್ನ್ಯಾಪ್ ಮಾಡಿದ್ದಾರೆ. ಮದುವೆ ಆದ ಬಳಿಕ ಮನೆ ಕೆಲಸದಲ್ಲೇ ತೊಡಗಿಕೊಳ್ಳುತ್ತಿದ್ದ. ಯಾವಾಗಲೂ ಅವನು ಡಿಸ್ಟರ್ಬ್ ಆದಂತೆ ಕಾಣುತ್ತಿರಲಿಲ್ಲ. ನಮಗೆ ಮಗನ ಬಗ್ಗೆ ಹೇಳಿದ್ರೆ ನಾವೇ ತಿದ್ದಿ ಹೇಳುತ್ತಿದ್ದೆವು. …

Read More »

ರೇಣುಕಾಸ್ವಾಮಿ ಹತ್ಯೆ; ಕಠಿಣ ಶಿಕ್ಷೆಗೆ ಒತ್ತಾಯ

ಹುಬ್ಬಳ್ಳಿ: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಹತ್ಯೆ ಕುರಿತು ಸಮರ್ಪಕವಾಗಿ ತನಿಖೆ ನಡೆಸಿ, ಮೃತನ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಕರ್ನಾಟಕ ರಾಜ್ಯ ಬೇಡ ಜಂಗಮ ಸಂಘಟನೆ ವತಿಯಿಂದ ಆಗ್ರಹಿಸಲಾಯಿತು. ನಗರದ ಮಿನಿವಿಧಾನಸೌಧದಲ್ಲಿ ತಹಶೀಲ್ದಾರ್‌ ಕಚೇರಿ ಸಿಬ್ಬಂದಿಗೆ ಸಂಘಟನೆಯ ಮುಖಂಡರು ಈ ಕುರಿತು ಬುಧವಾರ ಮನವಿ ಸಲ್ಲಿಸಿದರು. ಮೃತ ರೇಣುಕಾಸ್ವಾಮಿ ಕುಟುಂಬಕ್ಕೆ ಭದ್ರತೆ ಒದಗಿಸಬೇಕು. ₹1 ಕೋಟಿ ಪರಿಹಾರ ನೀಡಬೇಕು. ಸರ್ಕಾರಿ ಉದ್ಯೋಗ ನೀಡಬೇಕು ಎಂದು ಒತ್ತಾಯಿಸಿದರು. ಸಂಘಟನೆಯ ಯುವ …

Read More »

ಮುಂಗಾರು: ಚುರುಕುಗೊಂಡ ಬಿತ್ತನೆ

ಉಪ್ಪಿನಬೆಟಗೇರಿ: ಗ್ರಾಮ ಸೇರಿದಂತೆ ಸುತ್ತಲಿನ ಗ್ರಾಮದ ರೈತಾಪಿ ಜನರು ಮುಂಗಾರು ಬಿತ್ತನೆಗೆ ಸಿದ್ದತೆ ಮಾಡ ತೊಡಗಿದ್ದು, ಗೊಬ್ಬರ, ಬಿತ್ತನೆ ಬೀಜ ಖರೀದಿಗೆ ಮುಂದಾಗಿದ್ದಾರೆ. ಕಳೆದೊಂದು ವಾರ ಸುರಿದ ಮಳೆಗೆ ಕೃಷಿ ಭೂಮಿ ಹಸಿಯಾಗಿ ಈಗ ಹದಕ್ಕೆ ಬಂದಿದ್ದು, ಬಿತ್ತನೆ ಕಾರ್ಯ ಚುರುಕುಗೊಂಡಿವೆ.   ಕಳೆದ ಹತ್ತುದಿನಗಳ ಹಿಂದೆ ಅಡ್ಡ ಮಳೆ, ಮುಂಗಾರು ಮಳೆ ಸರಿಯಾದ ಪ್ರಮಾಣದಲ್ಲಿ ಆಗದ ಕಾರಣ ಕೃಷಿ ಚಟುವಟಿಕೆಗೆ ಹಿನ್ನಡೆಯಾಗಿತ್ತು. ಈಗ ರೈತಾಪಿ ಜನ ರಾಸಾಯನಿಕ ಗೊಬ್ಬರ …

Read More »

ಅಕ್ಷರ ಕಲಿಕೆಗೆ ಮಕ್ಕಳ ಹರಸಾಹಸ

ರಾಮದುರ್ಗ : ಮಳೆ ಬಂದರೆ ಎಲ್ಲರಿಗೂ ಸಂಭ್ರಮ. ಆದರೆ, ತಾಲ್ಲೂಕಿನ ಲಕ್ಷ್ಮಿನಗರದ ಗ್ರಾಮದ ಮಕ್ಕಳಿಗೆ ಇದು ಸಂಕಟ. ಪ್ರತಿ ಮಳೆಗಾಲದಲ್ಲೂ ಈ ಗ್ರಾಮ ನಡುಗಡ್ಡೆ ಆಗುತ್ತದೆ. ‌ಲಕ್ಷ್ಮಿ ನಗರದಲ್ಲಿ ಪ್ರಾಥಮಿಕ ಶಾಲೆ ಇಲ್ಲ. ಹೀಗಾಗಿ ಅಲ್ಲಿನ ಮಕ್ಕಳು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣಕ್ಕೆ 2 ಕಿ.ಮೀ ನಡೆದು ಪಕ್ಕದ ಉಡಚಮ್ಮನಗರ ಗ್ರಾಮಕ್ಕೆ ಹೋಗಬೇಕು. ಮಳೆ ಬಂದಾಗಲೆಲ್ಲ ಹರಿಯುವ ಸತ್ಯಮ್ಮನ ಹಳ್ಳವನ್ನು ಸುರಕ್ಷಿತವಾಗಿ ದಾಟಿಕೊಂಡು, ಮಕ್ಕಳು ಶಾಲೆಗೆ ತಲುಪಬೇಕು. ಇದು ಅನಿವಾರ್ಯ. ‘ಹಳ್ಳದ ಹರಿವು …

Read More »