Breaking News

ಮೂಡಲಗಿ: ಸಮಗ್ರ ಕೃಷಿಯಲ್ಲಿ ಬಸವಣ್ಣಿ ಖುಷಿ

ಮೂಡಲಗಿ: ತಾಲ್ಲೂಕಿನ ಗುರ್ಲಾಪುರ ಗ್ರಾಮದ ರೈತ ಬಸವಣ್ಣಿ ಚಿಣ್ಣಪ್ಪ ಮುಗಳಖೋಡ ಒಂದೇ ಬೆಳೆ ನೆಚ್ಚಿಕೊಳ್ಳದೆ, ವಿವಿಧ ಬೆಳೆಗಳನ್ನು ಬೆಳೆಯುತ್ತ ಸಮಗ್ರ ಕೃಷಿಯಲ್ಲಿ ಯಶ ಕಂಡಿದ್ದಾರೆ. ಜತೆಗೆ, ಹೈನುಗಾರಿಕೆಯಲ್ಲಿ ಉತ್ತಮ ಆದಾಯ ಗಳಿಸುತ್ತಿದ್ದಾರೆ. ಬಿ.ಎಸ್ಸಿ ಪದವೀಧರರಾದ ಬಸವಣ್ಣಿ 40 ಎಕರೆ ಜಮೀನು ಹೊಂದಿದ್ದಾರೆ. ನೌಕರಿಗಾಗಿ ಬೆನ್ನು ಹತ್ತದೆ, ಒಕ್ಕಲುತನದಲ್ಲೇ ಖುಷಿ ಕಾಣುತ್ತಿದ್ದಾರೆ. ‘ನಾನು ಒಂದು ಸಾಲಿನಿಂದ ಇನ್ನೊಂದು ಸಾಲಿಗೆ 4 ಅಡಿ ಬಿಟ್ಟು, ಕಬ್ಬಿನ ಬೆಳೆ ನಾಟಿ ಮಾಡಿದ್ದೇನೆ. ಮಿಶ್ರ ಬೆಳೆಗಳಾಗಿ …

Read More »

ಬೆಳಗಾವಿ: ರಕ್ತದ ಸಂಗ್ರಹಕ್ಕೆ ಬೇಕಿದೆ ಇನ್ನಷ್ಟು ಜಾಗೃತಿ.

ಬೆಳಗಾವಿ: ಇಲ್ಲಿನ ಬೆಳಗಾವಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ(ಬಿಮ್ಸ್‌) ರಕ್ತನಿಧಿ ಕೇಂದ್ರವು ಜಿಲ್ಲೆಯ ವಿವಿಧೆಡೆ ರಕ್ತದಾನ ಶಿಬಿರ ನಡೆಸಿ, ವಾರ್ಷಿಕ 7 ಸಾವಿರಕ್ಕೂ ಅಧಿಕ ಯೂನಿಟ್‌ ರಕ್ತ ಸಂಗ್ರಹಿಸುತ್ತಿದೆ. ಆದರೆ, ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಾಗುವ ರೋಗಿಗಳಿಗೆ ಬೇಡಿಕೆಯಂತೆ ರಕ್ತ ಪೂರೈಸಲು ಕೆಲವೊಮ್ಮೆ ಖಾಸಗಿ ರಕ್ತನಿಧಿ ಕೇಂದ್ರಗಳ ನೆರವು ಪಡೆಯುತ್ತಿದೆ. ಜಿಲ್ಲಾಸ್ಪತ್ರೆಯಲ್ಲಿ ಬೆಳಗಾವಿ ಮಾತ್ರವಲ್ಲದೆ, ಅಕ್ಕಪಕ್ಕದ ಜಿಲ್ಲೆಗಳ ರೋಗಿಗಳು ದಾಖಲಾಗುತ್ತಾರೆ. ಇಲ್ಲಿ ಚಿಕಿತ್ಸೆ ಪಡೆಯುವವರಿಗೆ ಬಿಮ್ಸ್‌ ರಕ್ತನಿಧಿ ಕೇಂದ್ರದಿಂದ ರಕ್ತ ಪೂರೈಕೆಯಾಗುತ್ತದೆ. ಬಿಪಿಎಲ್‌ …

Read More »

ಕಾಂಗ್ರೆಸ್‌ ಅಧಿವೇಶನದ ಶತಮಾನೋತ್ಸವ ಆಚರಣೆಗೆ ಆರಂಭವಾಗದ ಸಿದ್ಧತೆ

ಬೆಳಗಾವಿ: ನಗರದಲ್ಲಿ ಮಹಾತ್ಮ ಗಾಂಧೀಜಿ ಅಧ್ಯಕ್ಷತೆಯಲ್ಲಿ 1924ರಲ್ಲಿ ನಡೆದ ಕಾಂಗ್ರೆಸ್‌ ಅಧಿವೇಶನದ ಶತಮಾನೋತ್ಸವ ನೆನಪಿಗೆ ವರ್ಷವಿಡೀ ವಿಶೇಷ ಕಾರ್ಯಕ್ರಮ ಆಯೋಜಿಸಲು ರಾಜ್ಯ ಸರ್ಕಾರ ಉದ್ದೇಶಿಸಿದೆ. ಅದಕ್ಕೆ ಬಜೆಟ್‌ನಲ್ಲಿ ₹2 ಕೋಟಿ ಅನುದಾನ ಮೀಸಲಿಟ್ಟಿದೆ. ಆದರೆ, ಕಾರ್ಯಕ್ರಮದ ಸಿದ್ಧತೆ ಇನ್ನೂ ಆರಂಭಗೊಂಡಿಲ್ಲ. 1924ರ ಡಿಸೆಂಬರ್ 25 ಮತ್ತು 26ರಂದು ಬೆಳಗಾವಿಯಲ್ಲಿ (ಈಗಿನ ವೀರಸೌಧದ ಸ್ಥಳದಲ್ಲಿ) 39ನೇ ಕಾಂಗ್ರೆಸ್‌ ಅಧಿವೇಶನ ನಡೆದಿತ್ತು. ಗಾಂಧೀಜಿ ಅಧ್ಯಕ್ಷತೆ ವಹಿಸಿದ್ದ ಏಕೈಕ ಕಾಂಗ್ರೆಸ್‌ ಅಧಿವೇಶನವಿದು. ಇದೇ ಡಿಸೆಂಬರ್‌ 25ಕ್ಕೆ …

Read More »

ಕಾರ್ಮಿಕರ ಮೇಲೆ ಹಲ್ಲೆ: ಓರ್ವ ವಶಕ್ಕೆ

ಬೆಳಗಾವಿ: ಇಲ್ಲಿನ ವಡಗಾವಿಯ ಬನಶಂಕರಿ ಗಲ್ಲಿಯಲ್ಲಿ ಬಿಹಾರ ಮೂಲದ ಕಾರ್ಮಿಕರ ಮೇಲೆ ಗುರುವಾರ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಶಹಾಪುರ ಠಾಣೆ ಪೊಲೀಸರು ಒಬ್ಬನನ್ನು ವಶಕ್ಕೆ ಪಡೆದಿದ್ದಾರೆ. ‘ದಶರಥ ಧಾಮಣೇಕರ ಅವರ ವಿದ್ಯುತ್ ಮಗ್ಗದಲ್ಲಿ ಬಿಹಾರ ಮೂಲದ ನಾಲ್ವರು ಕಾರ್ಮಿಕರು ದುಡಿಯುತ್ತಿದ್ದಾರೆ‌.ಹೊರರಾಜ್ಯದವರು ಇಲ್ಲಿ ಬಂದು ಕೆಲಸ ಮಾಡುತ್ತಿರುವ ಕಾರಣ, ನಮಗೆ ಉದ್ಯೋಗ ಸಿಗುತ್ತಿಲ್ಲ ಎಂದು ಸ್ಥಳೀಯ ಯುವಕರು ಹಲ್ಲೆ ನಡೆಸಿದ್ದಾರೆ. ಈ ಪೈಕಿ ಒಬ್ಬನನ್ನು ವಶಕ್ಕೆ ಪಡೆದಿದ್ದು, ತನಿಖೆ ಮುಂದುವರಿಸಿದ್ದೇವೆ. ತಪ್ಪೆಸಗಿದ …

Read More »

ಮೋಳೆ ಗ್ರಾಮದ ಮಹಿಳೆ ರೂಪಾಬಾಯಿ ಬಾಳು ರೂಪನವರ (31) ಕೌಟುಂಬಿಕ ಕಲಹಕ್ಕೆ ಬೇಸತ್ತು ನೇಣು ಹಾಕಿಕೊಂಡು ಆತ್ಮಹತ್ಯೆ

ಕಾಗವಾಡ: ತಾಲ್ಲೂಕಿನ ಮೋಳೆ ಗ್ರಾಮದ ಮಹಿಳೆ ರೂಪಾಬಾಯಿ ಬಾಳು ರೂಪನವರ (31) ಕೌಟುಂಬಿಕ ಕಲಹಕ್ಕೆ ಬೇಸತ್ತು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತ ರೂಪಾಬಾಯಿ ಪತಿ ಯೋಧನಾಗಿದ್ದು ಮನೆಯಲ್ಲಿ ಪ್ರತಿದಿನವು ಅತ್ತೆ ಮಾವ ಕಿರುಕುಳ ನೀಡುತ್ತಿದ್ದರು ಎಂದು ಮೃತರ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಥಣಿ ಸಿಪಿಐ ರವೀಂದ್ರ ನಾಯ್ಕೋಡಿ, ಕಾಗವಾಡ ಠಾಣೆ ಪಿಎಸ್‌ಐ ಎಂ.ಬಿ. ಬಿರಾದರ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಪ್ರಕರಣ ದಾಖಲಾಗಿದೆ.

Read More »

ಕಳಸಾ ಬಂಡೂರಿ ಯೋಜನೆ ಅನುಷ್ಠಾನಕ್ಕೆ ಪ್ರಾಮಾಣಿಕ ಪ್ರಯತ್ನ: ಶೆಟ್ಟರ್

ಬೆಳಗಾವಿ: ‘ಕಳಸಾ-ಬಂಡೂರಿ ಯೋಜನೆಯಡಿ ರಾಜ್ಯಕ್ಕೆ 13 ಟಿಎಂಸಿ ಅಡಿ ನೀರು ಹಂಚಿಕೆಯಾಗಿದ್ದು, ಅಧಿಸೂಚನೆಯೂ ಹೊರಬಿದ್ದಿದೆ. ಆದರೆ, ಅರಣ್ಯ ಮತ್ತು ಪರಿಸರ ಇಲಾಖೆಯಿಂದ ಕಾಮಗಾರಿಗೆ ಅನುಮತಿಯಷ್ಟೇ ಸಿಗಬೇಕಿದೆ. ನನ್ನ ಅಧಿಕಾರವಧಿಯಲ್ಲಿ ಈ ಯೋಜನೆ ಅನುಷ್ಠಾನಕ್ಕೆ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ’ ಎಂದು ಬೆಳಗಾವಿ ಕ್ಷೇತ್ರದ ಸಂಸದ ಜಗದೀಶ ಶೆಟ್ಟರ್‌ ಭರವಸೆ ನೀಡಿದರು. ಇಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕರ್ನಾಟಕ, ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಕ್ಕೆ ನೀರು ಹಂಚಿಕೆಗೊಳಿಸಿ, ಮಹದಾಯಿ ನ್ಯಾಯಾಧಿಕರಣ ತೀರ್ಪು ಕೊಟ್ಟಿದೆ. ಹಾಗಾಗಿ …

Read More »

ಎಸ್‌ಎಸ್‌ಎಲ್‌ಸಿ ಪರೀಕ್ಷೆ-2: ಪರೀಕ್ಷೆ ನೋಂದಣಿಗೆ ಮಕ್ಕಳ ನಿರಾಸಕ್ತಿ

ಎಸ್‌ಎಸ್‌ಎಲ್‌ಸಿ ಪರೀಕ್ಷೆ-2: ಪರೀಕ್ಷೆ ನೋಂದಣಿಗೆ ಮಕ್ಕಳ ನಿರಾಸಕ್ತಿ ಬೆಳಗಾವಿ: ಜಿಲ್ಲೆಯಲ್ಲಿ ಎಸ್‌ಎಸ್‌ಎಲ್‌ಸಿ ವಾರ್ಷಿಕ-1ನೇ ಪರೀಕ್ಷೆ ಪೂರ್ಣಗೊಳಿಸದ 23,801 ವಿದ್ಯಾರ್ಥಿಗಳ ಪೈಕಿ 23,061 ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ವಾರ್ಷಿಕ-2 ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದಾರೆ. 760 ವಿದ್ಯಾರ್ಥಿಗಳು ಎರಡನೇ ಪ್ರಯತ್ನದಿಂದ ದೂರ ಸರಿದಿದ್ದಾರೆ. 2023-24ನೇ ಸಾಲಿನ ಪರೀಕ್ಷೆಯಲ್ಲಿ ಶೇ 64.93 ಫಲಿತಾಂಶ ದಾಖಲಿಸಿದ್ದ ಬೆಳಗಾವಿ ಶೈಕ್ಷಣಿಕ ಜಿಲ್ಲೆ 29ನೇ ಸ್ಥಾನ ಗಳಿಸಿತ್ತು. ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆ ಶೇ 69.82 ಫಲಿತಾಂಶದೊಂದಿಗೆ 25ನೇ ಸ್ಥಾನ ಗಳಿಸಿತ್ತು. ಬೆಳಗಾವಿಯಲ್ಲಿ …

Read More »

ಮೂಡಲಗಿ | ಶಾಂತಿಯುತ ಬಕ್ರೀದ್‌ ಆಚರಣೆಗೆ ಮನವಿ

ಮೂಡಲಗಿ: ‘ಬಕ್ರೀದ್‌ ಹಬ್ಬವನ್ನು ಶಾಂತಿ ಮತ್ತು ಸೌಹಾರ್ದದಿಂದ ಆಚರಿಸಬೇಕು. ಯಾವುದೇ ರೀತಿಯ ಅಹಿತಕರ ಘಟನೆಗಳಿಗೆ ಆಸ್ಪದ ನೀಡಬಾರದು’ ಎಂದು ಮೂಡಲಗಿಯ ಸಿಪಿಐ ಅಬ್ದುಲ್‌ ವಾಜೀದ್ ಪಟೇಲ್ ಹೇಳಿದರು. ಮೂಡಲಗಿಯ ಪೊಲೀಸ್‌ ಠಾಣೆಯಲ್ಲಿ ಬಕ್ರೀದ್‌ ನಿಮಿತ್ತ ಏರ್ಪಡಿಸಿದ್ದ ಶಾಂತಿ ಸಭೆ ಉದ್ಧೇಶಿಸಿ ಮಾತನಾಡಿದ ಅವರು, ಮೂಡಲಗಿಯು ಸಾಮರಸ್ಯಕ್ಕೆ ಹೆಸರಾಗಿದೆ. ಅಂಥ ಹೆಸರಿಗೆ ಚ್ಯುತಿಯಾಗದಂತೆ ಇರಬೇಕು. ಕಾನೂನು ಪಾಲನೆ ಮಾಡದಿರುವ ವ್ಯಕ್ತಿಗಳ ಮೇಲೆ ಕಾನೂನು ಕ್ರಮವನ್ನು ತೆಗೆದುಕೊಳ್ಳಲಾಗುಗುವುದು ಎಂದರು. ಪಿಎಸ್‌ಐ ಚಂದ್ರಶೇಖರ ಹೆರಕಲ್‌ …

Read More »

ದರ್ಶನ್ ರಕ್ಷಣೆಗೆ ‘ಕೈ-ಕಮಲ’ ನಾಯಕರಿಂದ ಕರೆ

ಬೆಂಗಳೂರು: ನಟ ದರ್ಶನ್‌ಗೆ ರಕ್ಷಣೆ ನೀಡುವಂತೆ ಅವರ ಜತೆಗೆ ನಿಕಟ ಬಾಂಧವ್ಯ ಹೊಂದಿರುವ ಹಲವು ರಾಜಕಾರಣಿಗಳು ಪೊಲೀಸರ ಮೇಲೆ ಒತ್ತಡ ಹಾಕಿದ್ದರು ಎಂಬುದು ಗೊತ್ತಾಗಿದೆ. ‘ರೇಣುಕಸ್ವಾಮಿ ಕೊಲೆಯಾದ ಬಳಿಕ ದರ್ಶನ್, ಹಲವು ರಾಜಕಾರಣಿಗಳಿಗೆ ಕರೆ ಮಾಡಿದ್ದರು. ಈ ಪೈಕಿ ಕಾಂಗ್ರೆಸ್‌ನ ಇಬ್ಬರು ಪ್ರಭಾವಿ ಮುಖಂಡರು ಹಾಗೂ ಬಿಜೆಪಿಯ ಒಬ್ಬರು, ಹಿರಿಯ ಪೊಲೀಸ್ ಅಧಿಕಾರಿಗಳ ಮೊಬೈಲ್‌ಗೆ ವಾಟ್ಸ್‌ಆಯಪ್‌ ಮೂಲಕ 100ಕ್ಕೂ ಹೆಚ್ಚು ಬಾರಿ ಕರೆ ಮಾಡಿದ್ದಾರೆ. ಆದರೆ, ಹಿರಿಯ ಅಧಿಕಾರಿ ಕರೆ …

Read More »

ಎಷ್ಟು ದೊಡ್ಡ ರಾಜ್ಯ ಕಟ್ಟಿದ್ರಿ ಅನ್ನೋದು ಮುಖ್ಯ ಅಲ್ಲ, ಯಾವ ಥರ ರಾಜನಾಗಿ ಬಾಳಿದ್ರಿ ಅನ್ನೋದು ಮುಖ್ಯ: ಕಿಚ್ಚ

ಸ್ಯಾಂಡಲ್‌ವುಡ್‌ನಲ್ಲಿ ಸದ್ಯ ಕಾಂಟ್ರವರ್ಸಿಗಳೇ ಮೇಳೈಸುತ್ತಿವೆ. ಚಂದನ್‌ ಶೆಟ್ಟಿ ಮತ್ತು ನಿವೇದಿತಾ ಗೌಡ ಅವರ ವಿಚ್ಛೇದನ ಸುದ್ದಿಯಿಂದ ಶುರುವಾದ ಈ ವಿವಾದದ ಬಿಸಿಗಾಳಿ, ಅದಾದ ಬಳಿಕ ಯುವ ರಾಜ್‌ಕುಮಾರ್‌ ಮತ್ತು ಶ್ರೀದೇವಿ ಅವರ ಡಿವೋರ್ಸ್‌ ವಿಚಾರವೂ ಮುನ್ನೆಲೆಗೆ ಬಂದಿತು. ದೊಡ್ಮನೆಯ ದಂಪತಿ ನಡುವೆಯೂ ಭಿನ್ನಾಭಿಪ್ರಾಯಗಳಿವೆಯೇ? ಎಂಬ ಅನುಮಾನವೂ ಅಭಿಮಾನಿ ವಲಯದಲ್ಲೂ ಬಿಸಿ ಬಿಸಿ ಚರ್ಚೆಯಾಯ್ತು. ಇವೆರಡರ ನಡುವೆ ನಟ ದರ್ಶನ್‌ ಮತ್ತವರ ಗ್ಯಾಂಗ್‌ನಿಂದ ನಡೆ ಕೊಲೆ ಇವೆಲ್ಲವನ್ನೂ ಮೀರಿಸಿತು. ಹೀಗಿರುವಾಗಲೇ ಈ …

Read More »