Breaking News

NEETಲೋಪ: ಸುಪ್ರೀಂ ತರಾಟೆ; ತಪ್ಪಾಗಿದ್ದರೆ ಒಪ್ಪಿಕೊಳ್ಳಿ : ಎನ್‌ಟಿಎಗೆ ತಾಕೀತು

ಹೊಸದಿಲ್ಲಿ: ನೀಟ್‌-ಯುಜಿ ಅಕ್ರಮದ ವಿಚಾರಣೆ ವೇಳೆ ಮಂಗಳವಾರ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ)ಯನ್ನು ಸರ್ವೋಚ್ಚ ನ್ಯಾಯಾಲಯ ತರಾಟೆಗೆ ತೆಗೆದುಕೊಂಡಿದೆ. “ನೀಟ್‌-ಯುಜಿ 2024 ಪರೀಕ್ಷೆ ಸಂದರ್ಭ ಸಾಸಿವೆ ಕಾಳಿನಷ್ಟು ಲೋಪ ಆಗಿದ್ದರೂ ಆ ಕುರಿತು ಸಮಗ್ರ ತನಿಖೆ ನಡೆಸಬೇಕು. ಪರೀಕ್ಷೆಗಾಗಿ ವಿದ್ಯಾರ್ಥಿಗಳು ಭಾರೀ ಪರಿಶ್ರಮ ನಡೆಸಿರುತ್ತಾರೆ ಎಂಬುದನ್ನು ನಾವು ಮರೆಯುವ ಹಾಗಿಲ್ಲ. ಒಂದು ವೇಳೆ ನಿಮ್ಮಿಂದ ತಪ್ಪಾಗಿದ್ದರೆ ಒಪ್ಪಿಕೊಳ್ಳಿ’ ಎಂದು ಎನ್‌ಟಿಎಗೆ ಸರ್ವೋಚ್ಚ ನ್ಯಾಯಾಲಯ ಸೂಚಿಸಿದೆ. ನೀಟ್‌ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳಿಗೆ ಕೃಪಾಂಕಕ್ಕೆ ತಕರಾರು, …

Read More »

ಮಧ್ಯಮ ವರ್ಗಕ್ಕೆ ಸಿಹಿ ಸುದ್ದಿ: ತೆರಿಗೆ ವಿನಾಯಿತಿ ಮಿತಿ 5 ಲಕ್ಷ ರೂ.ಗೆ ಏರಿಕೆ ಸಾಧ್ಯತೆ

ನವದೆಹಲಿ: ಆದಾಯ ತೆರಿಗೆ ಇಳಿಕೆಯಾದರೆ ಅನುಭೋಗ ಪ್ರಮಾಣದಲ್ಲಿ ಏರಿಕೆಯಾಗಲಿದ್ದು, ಮಧ್ಯಮ ವರ್ಗಕ್ಕೆ ವರದಾನವಾಗುತ್ತದೆ. ಇದು ಸಬ್ಸಿಡಿ, ಕಲ್ಯಾಣ ಯೋಜನೆಗಳಿಗಿಂತ ಮಿಗಿಲಾಗಿದ್ದು, ಮುಂದಿನ ತಿಂಗಳು ಮಂಡನೆಯಾಗಲಿರುವ ಕೇಂದ್ರ ಬಜೆಟ್ ನಲ್ಲಿ ತೆರಿಗೆ ವಿನಾಯಿತಿ ಮಿತಿಯನ್ನು 5 ಲಕ್ಷ ರೂ.ಗೆ ಹೆಚ್ಚಿಸುವ ಸಾಧ್ಯತೆ ಇದೆ. ಮೈತ್ರಿಕೂಟದ ಬಲದಿಂದ ಮೋದಿ ಪ್ರಧಾನಿಯಾಗಿರುವುದರಿಂದ ಎಂದಿನಂತೆ ಈ ಬಾರಿ ಬಜೆಟ್ ಇರುವುದಿಲ್ಲ. ಮಿತ್ರ ಪಕ್ಷಗಳ ಸಲಹೆಯನ್ನು ಕೂಡ ಪರಿಗಣಿಸಬೇಕಿದೆ. ಈ ಬಾರಿ ವೈಯಕ್ತಿಕ ಆದಾಯ ತೆರಿಗೆ ಮಿತಿ ಹೆಚ್ಚಿಸಲಾಗುವುದು …

Read More »

ಜೂನ್ ತಿಂಗಳಲ್ಲಿ ಮಳೆ ಕೊರತೆ, ಉತ್ತರ ಭಾರತದಲ್ಲಿ ತೀವ್ರ ತಾಪ: ಹವಾಮಾನ ಇಲಾಖೆ

ನವದೆಹಲಿ: ದೇಶದಾದ್ಯಂತ ಜೂನ್‌ ತಿಂಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಲಿದೆ. ದೇಶದ ಉತ್ತರ ಮತ್ತು ವಾಯುವ್ಯ ಪ್ರದೇಶಗಳಲ್ಲಿ ತೀವ್ರ ತಾಪಮಾನ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮಂಗಳವಾರ ಹೇಳಿದೆ. ಮುಂಗಾರು ಮಳೆ ಕುರಿತು ಮುನ್ಸೂಚನೆ ನೀಡಿರುವ ಐಎಂಡಿ, ‘ಜೂನ್‌ ತಿಂಗಳಲ್ಲಿ ಸುರಿಯುವ ಒಟ್ಟಾರೆ ಮಳೆ ಪ್ರಮಾಣವು, ದೇಶದ ದೀರ್ಘಕಾಲದ ಸರಾಸರಿ (ಎಲ್‌ಪಿಎ) 92 ಸೆಂಟಿ ಮೀಟರ್‌ಗಿಂತಲೂ ಕಡಿಮೆ ಇರಲಿದೆ’ ಎಂದು ಅಂದಾಜಿಸಿದೆ.   ಮೇ 30ರಂದು ಕೇರಳದಲ್ಲಿ ನೈಋತ್ಯ …

Read More »

ದರ್ಶನ್, ಪವಿತ್ರಾಗೌಡ ರಕ್ಷಣೆಗೆ ಮುಂದಾಯ್ತಾ ಸರ್ಕಾರ.? SPP ಬದಲಾವಣೆಗೆ ಸಿಎಂ ಮೇಲೆ ಮೂವರು ಪ್ರಭಾವಿ ಸಚಿವರ ಒತ್ತಡ?

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್, ಪವಿತ್ರಾಗೌಡ ಅವರನ್ನು ಗ್ಯಾಂಗ್ ನಿಂದ ಎಸ್.ಪಿ.ಪಿ. ಬದಲಾವಣೆಗೆ ಸರ್ಕಾರ ಚಿಂತನೆ ನಡೆಸಿದೆ ಎನ್ನಲಾಗಿದೆ. ಎಸ್.ಪಿ.ಪಿ. ಪ್ರಸನ್ನಕುಮಾರ್ ಅವರನ್ನು ಬದಲಾವಣೆ ಮಾಡಲು ಸರ್ಕಾರ ಚಿಂತನೆ ನಡೆಸಿದ್ದು, ದರ್ಶನ್ ರಕ್ಷಣೆಗೆ ಸರ್ಕಾರ ಮುಂದಾಗಿದೆ ಆದರೆ, ಎಸ್.ಪಿ.ಪಿ. ಬದಲಾಯಿಸಿದರೆ ಮತ್ತಷ್ಟು ಅನುಮಾನ ಬರುವ ಸಾಧ್ಯತೆ ಹಿನ್ನೆಲೆಯಲ್ಲಿ ಇನ್ನೂ ಸರ್ಕಾರ ಅಂತಿಮ ನಿರ್ಧಾರಕ್ಕೆ ಬಂದಿಲ್ಲ. ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್, ಪವಿತ್ರಾ ಗೌಡ ರಕ್ಷಣೆಗೆ ಮೂವರು ಪ್ರಭಾವಿ …

Read More »

ಒಂದೇ ಭಾರತ ರೈಲು ಬೆಳಗಾವಿಯವರೆಗೆ ವಿಸ್ತರಿಸಲು ಮಹತ್ವದ ಸಭೆ ನಡೆಸಿದ ಈರಣ್ಣ ಕಡಾಡಿ

ಬೆಳಗಾವಿ:- ಹುಬ್ಬಳ್ಳಿ ನೈರುತ್ಯ ರೈಲ್ವೆ ವಿಭಾಗದ ಪ್ರಧಾನ ವ್ಯವಸ್ಥಾಪಕರ ಕಛೇರಿಯಲ್ಲಿ ಇಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿಯವರು ಬೆಳಗಾವಿ ಜಿಲ್ಲೆಯ ರೈಲ್ವೆ ಇಲಾಖೆಗೆ ಸಂಬAಧಪಟ್ಟAತಹ ವಿಷಯಗಳ ಕುರಿತು ಪ್ರಧಾನ ವ್ಯವಸ್ಥಾಪಕರು ಹಾಗೂ ಅಧಿಕಾರಿಗಳ ಜೊತೆ ಮಹತ್ವದ ಸಭೆ ನಡೆಸಿದರು. ಈ ಸಂದರ್ಭದಲ್ಲಿ ಬೆಳಗಾವಿ ಜಿಲ್ಲೆಯ ಜನರ ಬಹುದಿನಗಳ ಬೇಡಿಕೆಯಾದ ಒಂದೇ ಭಾರತ ರೈಲನ್ನು ಬೆಳಗಾವಿಯವರೆಗೆ ವಿಸ್ತರಿಸಲು ಇರುವ ತೊಡಕುಗಳು ಹಾಗೂ ಅದರ ನಿವಾರಣೆಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು ಹಾಗೂ ಆದಷ್ಟು …

Read More »

ಪದೇಪದೆ ಖಾಸಗಿ ಅಂಗ ತೋರಿಸಿ, ಅದೇ ಪರೀಕ್ಷೆ ಮಾಡಿಸಿಕೊಳ್ಳಲು ಮುಜುಗರ ವಾಗುತ್ತದೆ.; ಪ್ರಜ್ವಲ್‌ ರೇವಣ್ಣ ಅಲವತ್ತು

ಬೆಂಗಳೂರು: ಈಗಾಗಲೇ ಎರಡು ಪ್ರಕರಣದಲ್ಲಿ ಪುರುಷತ್ವ ಪರೀಕ್ಷೆಗೆ ಒಳಪಟ್ಟಿದ್ದೇನೆ. ಪದೇಪದೆ ಅದೇ ಪರೀಕ್ಷೆ ನಡೆಸಲು ನನಗೂ ಮುಜುಗರವಾಗುತ್ತಿದೆ. ನನ್ನನ್ನು ಮುಜುಗರಕ್ಕೀಡು ಮಾಡಲೆಂದೇ ಇದನ್ನು ಮಾಡುತ್ತಿರುವಂತೆ ಕಾಣುತ್ತಿದೆ ಎಂದು ನ್ಯಾಯಾಧೀಶರ ಮುಂದೆ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ಅಲವತ್ತುಕೊಂಡಿದ್ದಾರೆ. ವಿಶೇಷ ತನಿಖಾ ತಂಡ (ಎಸ್‌ಐಟಿ) ಅಧಿಕಾರಿಗಳು ಪ್ರಜ್ವಲ್‌ ರೇವಣ್ಣ ಅವರನ್ನು ವಶಕ್ಕೆ ಪಡೆದಿರುವ ಅವಧಿ ಮಂಗಳವಾರಕ್ಕೆ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ 42ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ನ್ಯಾಯಾ ಲಯವು ಪ್ರಜ್ವಲ್‌ ರೇವಣ್ಣ ಅವರನ್ನು ನ್ಯಾಯಾಂಗ …

Read More »

ರಾಜ್ಯದ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ‘ಕೆಂಪೇಗೌಡ ಜಯಂತಿ’ ಆಚರಣೆಗೆ 1 ಲಕ್ಷ ವಿತರಣೆ : ರಾಜ್ಯ ಸರ್ಕಾರ ಘೋಷಣೆ

ಬೆಂಗಳೂರು : ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲಿ ಕೆಂಪೇಗೌಡರ ಜಯಂತಿ ಆಚರಿಸಲು 1 ಲಕ್ಷ ನೀಡಲಾಗುವುದು. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಕೆಂಪೇಗೌಡರ ಬಗ್ಗೆ ವಿದ್ಯಾರ್ಥಿಗಳಿಗೆ ವಿಚಾರಸಂಕಿರಣ ಏರ್ಪಡಿಸಲು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ರೂ.1 ಲಕ್ಷ ನೀಡಲಾಗುವುದು” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತಿಳಿಸಿದರು. ಕೆಂಪೇಗೌಡರ ಜಯಂತಿ ಆಚರಣೆ ಸಂಬಂಧ ವಿಧಾನಸೌಧದಲ್ಲಿಏರ್ಪಡಿಸಿದ್ದ ಪೂರ್ವಭಾವಿ ಸಭೆ ಹಾಗೂ ನಂತರ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಲಾ ಮಕ್ಕಳಿಗೆ ಕೆಂಪೇಗೌಡರ ಕುರಿತು ಚರ್ಚಾಸ್ಪರ್ಧೆ ಏರ್ಪಡಿಸಲಾಗುವುದು. ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ …

Read More »

ಎರಡು ಬೈಕ್‌ ಡಿಕ್ಕಿ: ಮೂವರ ಸಾವು

ರಾಯಬಾಗ : ಎರಡು ಬೈಕ್‌ಗಳ ಡಿಕ್ಕಿಯಲ್ಲಿ ಮೂವರು ಮತಪಟ್ಟು, ಮಗುವೊಂದು ಗಂಭೀರವಾಗಿ ಗಾಯಗೊಂಡಿರುವ ಘಟನೆ ಮುಧೋಳ-ನಿಪ್ಪಾಣಿ ರಾಜ್ಯ ಹೆದ್ದಾರಿಯ ಕಂಕಣವಾಡಿ ಬಳಿ ಭಾನುವಾರ ತಡರಾತ್ರಿ ನಡೆದಿದೆ.   ಘಟನೆಯಲ್ಲಿ ಕಂಕಣವಾಡಿ ಗ್ರಾಮದ ಸುಕದೇವ ರಾಯಪ್ಪ ಪೂಜಾರಿ (60), ಚಿಮ್ಮಡ ಗ್ರಾಮದ ನಿವಾಸಿಗಳಾದ ಸದಾಶಿವ ಹಣಮಂತ ದೊಡಮನಿ (45), ಕಿರಣ ಸದಾಶಿವ ದೊಡಮನಿ(20) ಮೃತಪಟ್ಟಿದ್ದಾರೆ.

Read More »

ವಾರಿಮಾಸ್ತಿಹೊಳ್ಳಿಯ ಲಕ್ಷ್ಮೀದೇವಿಯ ಗುಡಿಯ ಕೀಲಿ ಮುರಿದು ಒಳನುಗ್ಗಿದ ಕಳ್ಳರು 1.40 ಲಕ್ಷ ಮೌಲ್ಯದ ಬಂಗಾರ ಮತ್ತು ಬೆಳ್ಳಿ ಆಭರಣವನ್ನು ದೋಚಿ ಪರಾರಿ

ಯಮಕನಮರಡಿ: ಭಾನುವಾರ ತಡರಾತ್ರಿ ವಾರಿಮಾಸ್ತಿಹೊಳ್ಳಿಯ ಲಕ್ಷ್ಮೀದೇವಿಯ ಗುಡಿಯ ಕೀಲಿ ಮುರಿದು ಒಳನುಗ್ಗಿದ ಕಳ್ಳರು 1.40 ಲಕ್ಷ ಮೌಲ್ಯದ ಬಂಗಾರ ಮತ್ತು ಬೆಳ್ಳಿ ಆಭರಣವನ್ನು ದೋಚಿ ಪರಾರಿಯಾಗಿದ್ದಾರೆ. ಘಟನೆ ಸೋಮವಾರ ಬೆಳಿಗ್ಗೆ ಗಮನಕ್ಕೆ ಬಂದಿದೆ. ದೇವಿಯ ಕೊರಳಿನಲ್ಲಿರುವ ಬಂಗಾರ ಬೋರಮಾಳ, ಎಕ್ಸರಾ ಸರ ಎರಡು, ಬೆಳ್ಳಿಯ ಕುದುರೆ ಒಂದು, ಒಂದೂವರೆ ಕೆಜಿ ಬೆಳ್ಳಿಯ ದೇವಿಯ ಮುಖವಾಡ, 500 ಗ್ರಾಂ ದೇವಿಯ ಕಿರೀಟ ಕಳವಾಗಿದೆ.   ಈ ಘಟನಾ ಸ್ಥಳಕ್ಕೆ ಯಮಕನಮರಡಿ ಪಿಎಸ್‌ಐ …

Read More »

ಮುನವಳ್ಳಿ: ಪಟ್ಟಣದ ವಿಠ್ಠಲ ಮಂದಿರದಿಂದ ಜೂನ್‌ 26ರಂದು 30ನೇ ಆಷಾಡಿವಾರಿ ಪಾದಯಾತ್ರೆ ಪ್ರಾರಂಭ

ಮುನವಳ್ಳಿ: ಪಟ್ಟಣದ ವಿಠ್ಠಲ ಮಂದಿರದಿಂದ ಜೂನ್‌ 26ರಂದು 30ನೇ ಆಷಾಡಿವಾರಿ ಪಾದಯಾತ್ರೆ ಪ್ರಾರಂಭವಾಗಲಿದೆ. ಸುಕ್ಷೇತ್ರ ಆಳಂದಿಯವರೆಗೆ ವಾಹನಗಳ ಮೂಲಕ ಹೊರಟು ಜೂನ್‌ 30ಕ್ಕೆ ಆಳಂದಿಯಿಂದ ಪಾದಯಾತ್ರೆ ಮೂಲಕ ಪಂಢರಪುರವನ್ನು ಜುಲೈ 17 ರಂದು ತಲುಪಲಿದೆ. ಜುಲೈ 17 ರಂದು ಆಷಾಡ ಏಕಾದಶಿ ಮುಗಿಸಿ ಜುಲೈ 18 ರಂದು ಮರಳಿ ತಮ್ಮ ತಮ್ಮ ಗ್ರಾಮಗಳಿಗೆ ವಾಹನ ಮೂಲಕ ಬೆಲಾಗುವುದು. ಸಂಪ್ರದಾಯದಂತೆ ಪ್ರತಿವರ್ಷದಂತೆ ಈ ವರ್ಷವೂ ಜ್ಞಾನೇಶ್ವರ ಮಹಾರಾಜರ ಆಷಾಡಿವಾರಿ ಪಾಲಕಿ ಮಹೋತ್ಸವ …

Read More »