Breaking News

6 ವರ್ಷದ ಬಾಲಕನೊಂದಿಗೆ ಇಬ್ಬರು ಮಕ್ಕಳ ತಾಯಿ ಪರಾರಿ!

ವಿಜಯಪುರ: 16 ವರ್ಷದ ಯುವಕನೊಬ್ಬನನ್ನು ಪುಸಲಾಯಿಸಿ ಕರೆದುಕೊಂಡು, 28 ವರ್ಷದ ಗೃಹಿಣಿಯೊಬ್ಬಳು ಪರಾರಿಯಾಗಿರುವ (Woman Eloped with boy) ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ. ಮಹಿಳೆ ವಿವಾಹಿತೆಯಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ಒಂದು ಮಗುವನ್ನು ಎತ್ತಿಕೊಂಡು (Viral News) ಇನ್ನೊಂದನ್ನು ಬಿಟ್ಟು ಆಕೆ ಪರಾರಿಯಾಗಿದ್ದಾಳೆ! ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ಪಟ್ಟಣದಲ್ಲಿ ಈ ಘಟನೆ ನಡೆದಿದೆ. ಮಲ್ಲಿಕಾರ್ಜುನ್ ಹಿರೇಮಠ (16) ಹಾಗೂ ಮಲ್ಲಮ್ಮ (28) ಓಡಿಹೋದವರು. ಇವರಿಬ್ಬರೂ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, …

Read More »

ಕೆಎಲ್‌ಇ ಆಸ್ಪತ್ರೆಯಲ್ಲಿ ಮಗುವಿಗೆ ಮರುಜನ್ಮ

ಬೆಳಗಾವಿ: ಜನ್ಮತಃವಾಗಿ ‘ಕರೋನರಿ ಕ್ಯಾಮೆರಾಲ ಫಿಸ್ತುಲಾ’ ಎಂಬ ಹೃದ್ರೋಗದಿಂದ ಬಳಲುತ್ತಿದ್ದ 20 ತಿಂಗಳ ಮಗುವಿಗೆ ಮರುಜನ್ಮ ನೀಡುವಲ್ಲಿ ಕೆಎಲ್‌ಇ ಸಂಸ್ಥೆಯ ಡಾ.ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೆಂದ್ರದ ಹೃದ್ರೋಗ ತಜ್ಞರು ಯಶಸ್ವಿಯಾಗಿದ್ದಾರೆ. ಕಿತ್ತೂರು ತಾಲ್ಲೂಕಿನ ಎಂ.ಕೆ.ಹುಬ್ಬಳ್ಳಿ ಮೂಲದ 20 ತಿಂಗಳ ಮಗು ಪ್ರಾಣಾಪಾಯದಿಂದ ಪಾರಾಗಿದೆ. ಸುಮಾರು 2,000 ಮಕ್ಕಳಲ್ಲಿ ಒಬ್ಬರಿಗೆ ಇಂಥ ಕಾಯಿಲೆ ಕಂಡುಬರುತ್ತದೆ. ಮಗುವಿಗೆ ಮೇಲಿಂದ ಮೇಲೆ ಶೀತ, ಕೆಮ್ಮು, ಉಸಿರಾಟದ ತೊಂದರೆ, ಆಯಾಸ ಮತ್ತು …

Read More »

77 ಮಕ್ಕಳಿದ್ದರೂ ಪ್ರೌಢಶಾಲೆ ಇಲ್ಲ

ರಾಯಬಾಗ (ಬೆಳಗಾವಿ ಜಿಲ್ಲೆ): ತಾಲ್ಲೂಕಿನ ಮಂಟೂರ ಗ್ರಾಮದಲ್ಲಿ 77 ವಿದ್ಯಾರ್ಥಿಗಳಿದ್ದರೂ ಪ್ರೌಢಶಾಲೆ ಇಲ್ಲ. ಪ್ರೌಢಶಿಕ್ಷಣಕ್ಕಾಗಿ ಮಕ್ಕಳು ಪಕ್ಕದ ನಿಪನಾಳ ಗ್ರಾಮಕ್ಕೆ ಅಲೆಯಬೇಕಾದ ಪರಿಸ್ಥಿತಿ ಇದೆ. ಇದು ಮಕ್ಕಳ ಕಲಿಕೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ.   ಗ್ರಾಮಕ್ಕೆ ಒಂದು ‍ಪ್ರೌಢಶಾಲೆ ಮಂಜೂರು ಮಾಡುವಂತೆ ಗ್ರಾಮಸ್ಥರು ಶಾಸಕರಿಗೆ, ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದಾರೆ. ಯಾರೊಬ್ಬರೂ ಕಿವಿಗೊಟ್ಟಿಲ್ಲ. ಶಿಕ್ಷಣ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ, ಮಕ್ಕಳ ಸಂಕಷ್ಟ ದೂರು ಮಾಡುವ …

Read More »

ಬೆಳಗಾವಿ ವ್ಯಾಕ್ಸಿನ್‌ ಡಿಪೋ ಆವರಣದಲ್ಲಿ ಕೆಟ್ಟು ನಿಂತಿರುವ ಹಳೆಯ ಆಂಬುಲೆನ್ಸ್‌ಗಳು

ಬೆಳಗಾವಿ: ಇಲ್ಲಿನ ವ್ಯಾಕ್ಸಿನ್‌ ಡಿಪೋ ಆವರಣದಲ್ಲಿ ಕೆಟ್ಟು ನಿಂತಿರುವ ಹಳೆಯ ಆಂಬುಲೆನ್ಸ್‌ಗಳು ದೂಳು ತಿನ್ನುತ್ತಿವೆ. ಕೆಲವು ವಾಹನಗಳ ಕಿಟಕಿ, ಬಾಗಿಲು ಮುರಿದಿದ್ದರೆ, ಹಲವು ವಾಹನಗಳು ತುಕ್ಕು ಹಿಡಿಯುತ್ತಿವೆ. 50 ಲಕ್ಷಕ್ಕೂ ಅಧಿಕ ಜನಸಂಖ್ಯೆ ಹೊಂದಿದ ಬೆಳಗಾವಿ ಜಿಲ್ಲೆಯಲ್ಲಿ ಜನರಿಗೆ ಈ ಆಂಬುಲೆನ್ಸ್‌ಗಳು ಉತ್ತಮ ಸೇವೆ ಒದಗಿಸಿದ್ದವು. ತ್ವರಿತವಾಗಿ ರೋಗಿಗಳು ಆಸ್ಪತ್ರೆ ಸೇರಲು ನೆರವಾಗಿದ್ದವು. ಇದರೊಂದಿಗೆ ಬೇರೆ ಐದು ವಾಹನಗಳನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ ಬಳಸಲಾಗುತ್ತಿತ್ತು. ಆದರೆ, …

Read More »

ಬೆಳಗಾವಿ | ಉದ್ಯೋಗ ಮೇಳ 22ರಂದು

ಬೆಳಗಾವಿ: ‘ಇಲ್ಲಿನ ಭಾವುರಾವ್‌ ಕಾಕತಕರ ಕಾಲೇಜಿನಲ್ಲಿ ರೋಟರಿ ಕ್ಲಬ್‌ ಬೆಲಗಮ್‌-ವೇಣುಗ್ರಾಮ ಹಾಗೂ ಬೆಂಗಳೂರಿನ ಸ್ಪೆಕ್ಟ್ರಂ ಟ್ಯಾಲೆಂಟ್‌ ಮ್ಯಾನೇಜ್‌ಮೆಂಟ್‌ ಲಿಮಿಟೆಡ್ ಸಹಯೋಗದಲ್ಲಿ ಜೂನ್‌ 22ರಂದು ಬೆಳಿಗ್ಗೆ 9ರಿಂದ ಮಧ್ಯಾಹ್ನ 3ರವರೆಗೆ ಎರಡನೇ ಆವೃತ್ತಿಯ ಬೃಹತ್‌ ಉದ್ಯೋಗ ಮೇಳ ಆಯೋಜಿಸಲಾಗಿದೆ’ ಎಂದು ಕ್ಲಬ್ ಅಧ್ಯಕ್ಷ ಸಂಜೀವ್‌ ದೇಶಪಾಂಡೆ ಹೇಳಿದರು. ಇಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈ ಭಾಗದ ಉದ್ಯೋಗಕಾಂಕ್ಷಿಗಳಿಗೆ ನೆರವಾಗುವ ದೃಷ್ಟಿಯಿಂದ ಆಯೋಜಿಸಿದ ಮೇಳದಲ್ಲಿ 50ಕ್ಕೂ ಅಧಿಕ ಪ್ರತಿಷ್ಠಿತ ಕಂಪನಿಗಳು ಭಾಗವಹಿಸಲಿವೆ. …

Read More »

ಅಮೆಜಾನ್‌ ಪಾರ್ಸೆಲ್‌ ನೊಳಗೆ ವಿಷಕಾರಿ ಹಾವು-ಮಹಿಳೆ ಬಚಾವ್

ಬೆಂಗಳೂರು: ಆನ್‌ ಲೈನ್‌ ವಸ್ತುಗಳು ಡೆಲಿವರಿ ಮಾಡಿದ ನಂತರ ತಾವು ಆರ್ಡರ್‌ ಮಾಡಿದ ವಸ್ತುವಿನ ಬದಲು ಬೇರೇನೊ ಬಂದಿರುವುದು ಸಾಮಾನ್ಯವಾಗಿದ್ದು, ಈಗಾಗಲೇ ಇಂತಹ ಹಲವು ಘಟನೆ ನಡೆದಿತ್ತು. ಆದರೆ ಈ ಬಾರಿ ಅಮೆಜಾನ್‌ ಕಳುಹಿಸಿದ್ದ ವಸ್ತು ಕಂಡು ಬೆಂಗಳೂರಿನ ಮಹಿಳೆಯೊಬ್ಬರು ಕಂಗಾಲಾಗಿ ಹೋದ ಘಟನೆ ನಡೆದಿದೆ.   ಉದ್ಯಾನನಗರಿಯ ಸರ್ಜಾಪುರ್‌ ರಸ್ತೆ ನಿವಾಸಿಯಾಗಿರುವ ಮಹಿಳೆ ಅಮೆಜಾನ್‌ ನಲ್ಲಿ Xbox ಕಂಟ್ರೋಲರ್‌ ಅನ್ನು ಆರ್ಡರ್‌ ಮಾಡಿದ್ದರು. ಕೆಲವು ದಿನಗಳ ನಂತರ ಅಮೆಜಾನ್‌ ನಿಂದ …

Read More »

ದರ್ಶನ್‌ಗೆ ಜಾಮೀನು ಸಿಗೋ ಹಿಂದಿನ ದಿನ ಎಲ್ಲಾ ಊರು ಬಿಟ್ಬಿಡಿ; ವಾರ್ನಿಂಗ್ ಕೊಟ್ಟ ಅಭಿಮಾನಿ

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನವಾಗಿರುವ ದರ್ಶನ್ ಮತ್ತು ಗ್ಯಾಂಗ್‌ಗೆ ಪೊಲೀಸರು ಶಾಕ್ ಮೇಲೆ ಶಾಕ್ ಕೊಡುತ್ತಿದ್ದಾರೆ. ಪ್ರಕರಣದಲ್ಲಿ ಯಾರೊಬ್ಬರು ತಪ್ಪಿಸಿಕೊಳ್ಳದಂತೆ ಎಲ್ಲಾ ಸಾಕ್ಷಿಗಳನ್ನು ಕಲೆಹಾಕುತ್ತಿದ್ದಾರೆ. ದರ್ಶನ್ ಅಭಿಮಾನಿಗಳು ಮಾತ್ರ ತಮ್ಮ ಬಾಸ್ ತಪ್ಪೇ ಮಾಡಿಲ್ಲ, ಇದೆಲ್ಲಾ ಕುತಂತ್ರ ಎಂದು ನೆಚ್ಚಿನ ನಟನ ಬೆಂಬಲಕ್ಕೆ ನಿಂತಿದ್ದಾರೆ. ನಿರ್ಮಾಪಕ ಉಮಾಪತಿ ಗೌಡ ದರ್ಶನ್‌ರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದವರು. ಬಳಿಕ ಇಬ್ಬರ ಜೊತೆ ಮನಸ್ತಾಪವಾಗಿ ದೂರವಾಗಿದ್ದರು. ದರ್ಶನ್ ಉಮಾಪತಿಗೆ ಬಹಿರಂಗವಾಗಿಯೇ ವಾರ್ನಿಂಗ್ ಮಾಡಿದ್ದರು. ತಗಡು …

Read More »

ದರ್ಶನ್​ ಅಭಿಮಾನಿಗಳಿಂದ ಜೀವ ಬೆದರಿಕೆ: ಪ್ರಥಮ್​

ಬೆಂಗಳೂರು: ನಟ ದರ್ಶನ್ ಅಭಿಮಾನಿಗಳಿಂದ ನಿರಂತರ ಜೀವ ಬೆದರಿಕೆ ಕರೆಗಳು ಬರುತ್ತಿರುವ ಹಿನ್ನೆಲೆಯಲ್ಲಿ​ ಬಿಗ್​ಬಾಸ್​ ವಿಜೇತ ಹಾಗೂ ನಟ ಪ್ರಥಮ್​ ಜ್ಞಾನ ಭಾರತಿ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ದೂರು ನೀಡಿರುವ ಬಗ್ಗೆ ಪ್ರಥಮ್ ಅವರು​ ತಮ್ಮ ಎಕ್ಸ್​ ಖಾತೆಯ ಮೂಲಕ ಖಚಿತಪಡಿಸಿದ್ದಾರೆ. ಅಲ್ಲದೆ, ದರ್ಶನ್​ ಅಭಿಮಾನಿಗಳಿಗೆ ಬುದ್ಧಿಮಾತು ಸಹ ಹೇಳಿದ್ದಾರೆ. ಜೀವನ ದೊಡ್ಡದು, ಯಾರಿಗೋಸ್ಕರವೋ ಹಾಳು ಮಾಡಿಕೊಳ್ಳಬೇಡಿ. ನಾನು ಶಾಂತಿಯಿಂದಲೇ ಇದ್ದೆ. ಆದರೆ, ನೀವು ಅತಿಯಾಗಿ ನಮ್ಮ ‘ಕರ್ನಾಟಕದ …

Read More »

ಸ್ವ-ಇಚ್ಛಾ ಹೇಳಿಕೆ ದಾಖಲಿಸಿದ ದರ್ಶನ್

ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಬಂಧನವಾಗಿ ವಾರಕ್ಕೂ ಹೆಚ್ಚು ಸಮಯವಾಗಿದೆ. ಪೊಲೀಸರು ಸತತ ವಿಚಾರಣೆ ಮಾಡುತ್ತಲೇ ಇದ್ದಾರೆ. ಸ್ಥಳ ಮಹಜರು, ಸಾಕ್ಷ್ಯಗಳ ಸಂಗ್ರಹದಲ್ಲಿ ನಿರತರಾಗಿದ್ದಾರೆ. ಇದರ ನಡುವೆ ದರ್ಶನ್, ಪೊಲೀಸರ ಮುಂದೆ ಸ್ವ-ಇಚ್ಛಾ ಹೇಳಿಕೆ ದಾಖಲಿಸಿದ್ದಾರೆ ಎನ್ನಲಾಗುತ್ತಿದೆ.     ಕೊಲೆ ಪ್ರಕರಣದಲ್ಲಿ ದರ್ಶನ್ (Darshan Thoogudeepa) ಬಂಧನವಾಗಿ ವಾರಕ್ಕೂ ಹೆಚ್ಚು ಸಮಯವಾಗಿದೆ. ಕಳೆದ ಎಂಟು ದಿನದಿಂದಲೂ ದರ್ಶನ್ ಕಾಮಾಕ್ಷಿಪಾಳ್ಯ ಪೊಲೀಸರ ವಶದಲ್ಲಿದ್ದಾರೆ. ಸತತ ವಿಚಾರಣೆ, ತನಿಖೆಗಳು ನಡೆಯುತ್ತಲೇ ಇವೆ. ಇತ್ತೀಚೆಗಷ್ಟೆ …

Read More »