ಗದಗ: ದೇವಾಲಯಗಳನ್ನು ಗುರಿಯಾಗಿಸಿಕೊಂಡು ಕಳವು ಮಾಡುತ್ತಿದ್ದ ಅಮಾನತುಗೊಂಡ ಜೈಲು ವಾರ್ಡನ್ ಸೇರಿದಂತೆ ಮೂವರ ತಂಡವನ್ನು ಪೊಲೀಸರು ಬಂಧಿಸಿದ್ದಾರೆ. ಅಮಾನತಾಗಿರುವ ಬಂಧಿಖಾಕಾನೆ ಇಲಾಖೆ ನೌಕರ ಶ್ರೀಕಾಂತ ಗುಡದೂರ, ಆತನ ಸಹಚರರಾದ ಪ್ರಸಾದ ಸಿಳ್ಳಿಕೇತರ, ಗುರುಪ್ರಸಾದ ಸಿಳ್ಳಿಕೇತರ ಬಂಧಿತ ಆರೋಪಿಗಳಾಗಿದ್ದಾರೆ. ಇವರು ಗದಗ, ಹಾವೇರಿ, ವಿಜಯನಗರ, ಶಿವಮೊಗ್ಗ, ಚಿತ್ರದುರ್ಗ ಜಿಲ್ಲೆಯ ಹಲವು ದೇವಾಲಯಗಳಲ್ಲಿ ಕಳವು ಮಾಡಿರುವುದು ತನಿಖೆಯ ವೇಳೆ ಬೆಳಕಿಗೆ ಬಂದಿದೆ. ವಿಜಯನಗರ ಜಿಲ್ಲೆಯ ಕೊಟ್ಟೂರು, ಹರಪನಹಳ್ಳಿ, ಶಿವಮೊಗ್ಗ ಜಿಲ್ಲೆಯ ಆನವಟ್ಟಿ, ಚಿತ್ರದುರ್ಗ ಜಿಲ್ಲೆಯ …
Read More »ಪ್ರತಿದಿನ ಬೆಳಗ್ಗೆ ಎದ್ದಾಗ ಹಲ್ಲುಜ್ಜದೆ ನೀರು ಕುಡಿಯುತ್ತೀರಾ? ಇಲ್ಲಿದೆ ನೋಡಿ ಉಪಯುಕ್ತ ಮಾಹಿತಿ.
ಕೆಲವರು ಬೆಳಗ್ಗೆ ಎದ್ದಾಗ ಹಲ್ಲುಜ್ಜದೆ ನೀರು ಕುಡಿಯುತ್ತಾರೆ. ಈ ರೀತಿ ಕುಡಿಯುವುದು ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು ಎಂದು ಭಾವಿಸಿದ್ದಾರೆ. ಹಲ್ಲುಜ್ಜದೆ ನೀರು ಕುಡಿಯುವುದು ನಿಜವಾಗಿಯೂ ಉತ್ತಮವೇ? ನಿಮ್ಮಲ್ಲಿ ಈ ಪ್ರಶ್ನೆ ಕಾಡುತ್ತಿದ್ದರೆ, ಅದಕ್ಕೆ ಉತ್ತರ ಇಲ್ಲಿದೆ ನೋಡಿ. ಹಲ್ಲುಜ್ಜುವ ಮೊದಲು ನೀರು ಕುಡಿಯುವುದ ಉತ್ತಮ. ಇದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ. ನಿಮ್ಮ ಆಹಾರವನ್ನು ಸರಿಯಾಗಿ ಜೀರ್ಣಗೊಳಿಸುತ್ತದೆ. ಮಲಬದ್ಧತೆ, ಮೊಡವೆ, ಹೊಟ್ಟೆಯ ಸಮಸ್ಯೆ ಹಾಗೂ ಅಜೀರ್ಣ ಸಮಸ್ಯೆಯಂತಹ ಅನೇಕ ತೊಂದರೆಗಳನ್ನು ತಡೆಗಟ್ಟುತ್ತದೆ. ಇದಿಷ್ಟೇ …
Read More »ನನ್ನ ದಾಖಲೆ ಸೇಫ್. ಅದನ್ನು ಮುರಿಯಲು ಯಾರಿಂದಲೂ ಸಾಧ್ಯವಿಲ್ಲ ಎಂದ ಮುತ್ತಯ್ಯ ಮುರಳೀಧರನ್!
ನನ್ನ ದಾಖಲೆ ಸೇಫ್. ಅದನ್ನು ಮುರಿಯಲು ಯಾರಿಂದಲೂ ಸಾಧ್ಯವಿಲ್ಲ ಎಂದ ಮುತ್ತಯ್ಯ ಮುರಳೀಧರನ್! ನವದೆಹಲಿ: ಶ್ರೀಲಂಕಾದ ಲೆಜೆಂಡರಿ ಕ್ರಿಕೆಟಿಗ ಮುತ್ತಯ್ಯ ಮುರಳೀಧರನ್, ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿ ಮುಂದುವರಿದಿದ್ದಾರೆ. ಈ ಆಫ್ ಸ್ಪಿನ್ನರ್ ಟೆಸ್ಟ್ ಸ್ವರೂಪದಲ್ಲಿ 800 ವಿಕೆಟ್ ಪಡೆದಿರುವುದು ವಿಶ್ವದಾಖಲೆಯಾಗಿದೆ. ಈ ದಾಖಲೆಯನ್ನು ಯಾವುದೇ ಬೌಲರ್ನಿಂದ ಮುರಿಯಲು ಸಾಧ್ಯವಿಲ್ಲ ಎಂದಿರುವ ಮುರಳೀಧರನ್, ಟೆಸ್ಟ್ ಕ್ರಿಕೆಟ್ ಭವಿಷ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಇತ್ತೀಚೆಗೆ ಮಾಧ್ಯಮ …
Read More »ರಾಜ್ಯದ ‘ವಿವಿಧ ಹಗರಣ’ಗಳ ತನಿಖೆಗಳ ಪ್ರಗತಿ, ಸಮನ್ವಯ ಕಾರ್ಯಗಳಿಗೆ ಸಮಿತಿ ರಚಿಸಿ ಸಿಎಂ ಆದೇಶ
ರಾಜ್ಯದ ‘ವಿವಿಧ ಹಗರಣ’ಗಳ ತನಿಖೆಗಳ ಪ್ರಗತಿ, ಸಮನ್ವಯ ಕಾರ್ಯಗಳಿಗೆ ಸಮಿತಿ ರಚಿಸಿ ಸಿಎಂ ಆದೇಶ ಬೆಂಗಳೂರು: ಬಿಜೆಪಿ ಸರ್ಕಾರದ ಅವಧಿಯ ಹಗರಣಗಳ ಬಗ್ಗೆ ತನಿಖೆ ನಡೆಸುವುದಾಗಿ ಈಗಾಗಲೇ ರಾಜ್ಯ ಕಾಂಗ್ರೆಸ್ ಸರ್ಕಾರ ಘೋಷಣೆ ಮಾಡಲಾಗಿತ್ತು. ಈಗ ಮುಂದುವರೆದ ಭಾಗವಾಗಿ ವಿವಿಧ ಹಗರಣಗಳ ತನಿಖೆಗಳ ಪ್ರಗತಿ, ಸಮನ್ವಯ ಕಾರ್ಯಗಳಿಗೆ ಗೃಹ ಸಚಿವ ಡಾ.ಜಿ ಪರಮೇಶ್ವರ್ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿ ಸಿಎಂ ಸಿದ್ಧರಾಮಯ್ಯ ಆದೇಶಿಸಿದ್ದಾರೆ. ಇಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ನಡವಳಿಯನ್ನು …
Read More »ಪ್ಲೈಓವರ್ ಕಾಮಗಾರಿ ನಡೆಸುತ್ತಿದ್ದ ಕಾರಣ ಮೇಲಿಂದ ಕಬ್ಬಿಣದ ರಾಡ್
: ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ ಅವರ ಭದ್ರತಾ ಕರ್ತವ್ಯಕ್ಕೆ ತೆರಳುತ್ತಿದ್ದ ಪೊಲೀಸ್ ಅಧಿಕಾರಿವೊಬ್ಬರ ತಲೆಯ ಮೇಲೆ ಪ್ಲೈಓವರ್ ಕಾಮಗಾರಿಯ ಕಬ್ಬಿಣದ ರಾಡ್ ಬಿದ್ದು ಗಂಭೀರವಾಗಿ ಗಾಯಗೊಂಡಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಉಪನಗರ ಠಾಣೆಯ ಸಿಬ್ಬಂದಿ ಎಎಸ್‌ಐ ನಬಿರಾಜ್ ದಾಯಣ್ಣವರ ಎಂಬಾತರೇ ಗಂಭೀರವಾಗಿ ಗಾಯಗೊಂಡಿದ್ದು, ಹಳೇ ಕೋರ್ಟ್ ಸರ್ಕಲ್ ಬಳಿಯಲ್ಲಿ ತೆರಳುತ್ತಿದ್ದಾಗ ಪ್ಲೈಓವರ್ ಕಾಮಗಾರಿ ನಡೆಸುತ್ತಿದ್ದ ಕಾರಣ ಮೇಲಿಂದ ಕಬ್ಬಿಣದ ರಾಡ್ ಏಕಾಏಕಿ ಬಿದ್ದಿದೆ. ಪರಿಣಾಮ ತೀವ್ರವಾಗಿ …
Read More »ಬೆಳಗಾವಿ ಟೆಕ್‌ಮೀಟ್-2024 ಯಶಸ್ವಿ
ಬೆಳಗಾವಿ: ಬೆಳಗಾವಿ ಟೆಕ್ನಾಲಜಿ ಕಂಪನಿಗಳ ಸಂಘ (BeTCA) ವತಿಯಿಂದ ನಗರದಲ್ಲಿ ಭಾನುವಾರ ಆಯೋಜಿಸಿದ್ದ ‘ಬೆಳಗಾವಿ ಟೆಕ್ ಮೀಟ್-2024’ ಯಶಸ್ವಿಯಾಯಿತು. ವಿವಿಧ ಭಾಗಗಳಿಂದ ಬಂದಿದ್ದ ಉದ್ಯಮಿಗಳು, ತಾಂತ್ರಿಕ ತಜ್ಞರು ಸಮಾವೇಶದಲ್ಲಿ ಪಾಲ್ಗೊಂಡರು. ನವೀನ ತಂತ್ರಜ್ಞಾನಗಳ ಪರಿಚಯ, ವಿನಯಮ ಹಾಗೂ ಸ್ಟಾರ್ಟಪ್‌ಗಳ ಪ್ರತಿನಿಧಿಗಳು ಪಾಲ್ಗೊಂಡರು. ಬೆಳಗಾವಿಯಲ್ಲಿ ತಂತ್ರಜ್ಞಾನ ಅಭಿವೃದ್ಧಿಗೆ ಪೂರಕವಾದ ಚರ್ಚೆಗಳನ್ನು ನಡೆಸುವಲ್ಲಿ ಈ ಸಮಾವೇಶ ಯಶಸ್ವಿಯಾಯಿತು. ‘ಸ್ಟಾರ್ಟಪ್’ ಕುರಿತಾಗಿ ನಡೆದ ಗೋಷ್ಠಿಯಲ್ಲಿ ಸ್ಟಾರ್ಟಪ್‌ಗಳ ಆರಂಭಿಸುವುದು ಹೇಗೆ, ಆರ್ಥಿಕ ಚಟುವಟಿಕೆ ಕೈಗೊಳ್ಳುವುದು ಹೇಗೆ, …
Read More »ಭಾವೈಕ್ಯ ಸಾರಿದ ಹಿಂದೂ-ಮುಸ್ಲಿಂ ಯುವಕರು
ಕಾಗವಾಡ: ತಾಲ್ಲೂಕಿನ ಉಗಾರ ಬುದ್ರುಕ ಗ್ರಾಮದ ವಾರ್ಡ್ ನಂ.7ರಲ್ಲಿ ಪದ್ಮಶ್ರೀ ಕಾಲೊನಿಯಲ್ಲಿರುವ ಮಹೆಬೂಬ ಸುಬಾನಿ ದರ್ಗಾದ ಪಕ್ಕದಲ್ಲಿ ಹಿಂದೂ- ಮುಸ್ಲಿಂ ಯುವಕರು ಗಣೇಶ ಮೂರ್ತಿ ಪ್ರತಿಷ್ಠಾಪಿಸುವ ಮೂಲಕ ಭಾವೈಕ್ಯ, ಸಾಮರಸ್ಯದ ಸಂದೇ ಸಾರಿದ್ದಾರೆ. ಇಲ್ಲಿನ ಸುಮಾರು 30ಕ್ಕೂ ಹೆಚ್ಚು ಮುಸ್ಲಿಂ ಯುವಕರು ಹಾಗೂ 20ಕ್ಕೂ ಹೆಚ್ಚು ಹಿಂದೂ ಯುವಕರು ವಿಜೃಂಭಣೆಯಿಂದ ಗಣೇಶೋತ್ಸವ ಆಚರಿಸಿದರು. ಕಳೆದ 6 ವರ್ಷಗಳಿಂದ ಈ ರೀತಿಯ ಗಣೇಶೋತ್ಸವ ಆಚರಿಸುತ್ತಿದ್ದು ತಮ್ಮ ಗಣೇಶ ಮಂಡಳಿಗೆ ಹಿಂದೂ-ಮುಸ್ಲಿಂ ಮಂಡಳಿ …
Read More »ಪುಣೆ-ಬೆಳಗಾವಿ-ಹುಬ್ಬಳ್ಳಿ ವಂದೇ ಭಾರತ್ ರೈಲಿಗೆ ಮೋದಿಯಿಂದ ಚಾಲನೆ: ಶೆಟ್ಟರ್
ಬೆಳಗಾವಿ: ‘ಪುಣೆ-ಬೆಳಗಾವಿ ಮಧ್ಯೆ ವಂದೇ ಭಾರತ್ ರೈಲು ಆರಂಭಿಸಲು ನಡೆಸಿದ ಪ್ರಯತ್ನ ಈಗ ಸಾಕಾರಗೊಂಡಿದೆ. ಹುಬ್ಬಳ್ಳಿವರೆಗೆ ಸೇವೆ ವಿಸ್ತರಣೆಗೊಂಡಿದ್ದು, ಸೆ.15ರಂದು ಪ್ರಧಾನಿ ನರೇಂದ್ರ ಮೋದಿ ರೈಲಿಗೆ ಚಾಲನೆ ನೀಡಲಿದ್ದಾರೆ’ ಎಂದು ಸಂಸದ ಜಗದೀಶ್ ಶೆಟ್ಟರ್ ಹೇಳಿದರು. ಇಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕೆಲವು ತಿಂಗಳ ಹಿಂದೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಭೇಟಿಯಾಗಿ, ಪುಣೆ-ಬೆಳಗಾವಿ ಮಧ್ಯೆ ವಂದೇ ಭಾರತ್ ರೈಲು ಆರಂಭಿಸಬೇಕು. …
Read More »ನಮ್ಮ ಸರ್ಕಾರ ಅಧಿಕಾರದಲ್ಲಿ ಇರುವವರೆಗೂ ಸಿದ್ದರಾಮಯ್ಯ ಅವರೇ ಸಿಎಂ: ದೇಶಪಾಂಡೆ
ಬೆಳಗಾವಿ: ‘ನಮ್ಮ ಸರ್ಕಾರ ಅಧಿಕಾರದಲ್ಲಿ ಇರುವವರೆಗೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ. ನಾನು ಸಿ.ಎಂ ಸ್ಥಾನದ ಆಕಾಂಕ್ಷಿಯಲ್ಲ’ ಎಂದು ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ.ದೇಶಪಾಂಡೆ ಹೇಳಿದರು. ಇಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಾವು ಅಧಿಕಾರಕ್ಕೆ ಬಂದು ಒಂದು ವರ್ಷವಾಗಿದೆ. ಇನ್ನೂ ನಾಲ್ಕು ವರ್ಷ ಅಧಿಕಾರ ನಡೆಸಬೇಕಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿ ಕೆಲಸ ಮಾಡುತ್ತಿದ್ದಾರೆ. ಹೀಗಿರುವಾಗ ಸಿ.ಎಂ ಬದಲಾವಣೆ ಬಗ್ಗೆ ಮಾತನಾಡುವುದು ತಪ್ಪಾಗುತ್ತದೆ. ಸಿದ್ದರಾಮಯ್ಯ ಬದಲಾವಣೆ ವಿಚಾರ ನನಗೆ ಕಾಣಿಸುತ್ತಿಲ್ಲ. …
Read More »ಬೆಂಗಳೂರಿಗರಿಗೆ ರಸ್ತೆ ಗುಂಡಿಗಳಿಂದ ಬಿಗ್ ರಿಲೀಫ್!
ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ ಎಷ್ಟು ಕಿರಿಕಿರಿ ನೀಡುತ್ತಿದೆಯೋ? ಅದೇ ಪ್ರಮಾಣದಲ್ಲಿ ತಲೆಬಿಸಿ ಕೊಡುವ ವಿಚಾರ ಅಂದ್ರೆ ರಸ್ತೆ ಗುಂಡಿಗಳು. ಮಳೆಬಂದರೆ ಗುಂಡಿ ಕಾಣದೆ ವಾಹನ ಸಮೇತ ಬೀಳುವ ಘಟನೆಗಳು, ಅಪಘಾತಗಳು ಸಾಮಾನ್ಯ. ಹೀಗಾಗಿ ರಸ್ತೆಗಿಳಿದವರೆಲ್ಲ ಗುಂಡಿಗಳಿಗೆ ಹಿಡಿಶಾಪ ಹಾಕುತ್ತಲೇ ಸಂಚರಿಸುತ್ತಿದ್ದರು. ಈ ವಿಚಾರ ರಾಜ್ಯ ಸರ್ಕಾರಕ್ಕೂ ದೊಡ್ಡ ತಲೆನೋವಾದ ಕಾರಣ ಬೆಂಗಳೂರಿನ ರಸ್ತೆ ಗುಂಡಿಗಳಿಗೆ ಮುಕ್ತಿ ನೀಡಬೇಕು ಎಂದು ಖುದ್ದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೇ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದರು. …
Read More »
Laxmi News 24×7