ಬೆಂಗಳೂರು, ಜುಲೈ 30: ಮದ್ಯಪಾನ ಆರೋಗ್ಯ ಹಾನಿಕಾರ ಅಂದ್ರೂ ಮದ್ಯ ಕುಡಿಯುವರ ಸಂಖ್ಯೆ ಕಡಿಮೆಯಾಗಿಲ್ಲ. ಒಂದು ತಿಂಗಳ ಹಿಂದೆಯಷ್ಟೆ ಬಿಯರ್ ಬೆಲೆ ಏರಿಕೆಯಾಗಿತ್ತು. ಇದೀಗ ಮತ್ತೆ ಬಿಯರ್ ಬೆಲೆ ಏರಿಕೆಯಾಗಿದೆ. ಬಿಯರ್ ಕುಡಿಯುವವರಿಗೆ ಉತ್ಪಾದನಾ ಕಂಪನಿಗಳು ಮತ್ತೊಮ್ಮೆ ಶಾಕ್ ನೀಡಿವೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಮದ್ಯ ಪ್ರಿಯರಿಗೆ ಶಾಕ್ ಮೇಲೆ ಶಾಕ್ ಎದುರಾಗುತ್ತಿದೆ. ಕಳೆದ ಒಂದು ತಿಂಗಳ ಹಿಂದಷ್ಟೇ ಬಿಯರ್ ಕಂಪನಿಗಳು ಬಿಯರ್ ಬೆಲೆಯನ್ನು ಏರಿಕೆ ಮಾಡಿದ್ದು, …
Read More »ಕರ್ನಾಟಕದಲ್ಲಿ ‘ಜಲ ಕಂಟಕ’ : ವರ್ಷದ ಆರಂಭದಲ್ಲೇ ಕೋಡಿ ಶ್ರೀಗಳು ನುಡಿದಿದ್ದ ಭವಿಷ್ಯ ನಿಜವಾಯ್ತಾ?
ಬೆಳಗಾವಿ : ರಾಜ್ಯದಲ್ಲಿ ಭೀಕರ ಮಳೆ ಯಾಗುತ್ತಿದ್ದು ಅಪಾರ ಪ್ರಮಾಣದ ಮಳೆಯಿಂದ ಅನೇಕ ಕಡೆಗಳಲ್ಲಿ ಅಪಾರ ಪ್ರಮಾಣದ ಸಾವು ನೋವುಗಳು ಸಂಭವಿಸಿವೆ.ಇದೀಗ ಕರ್ನಾಟಕದಲ್ಲಿ ಸೃಷ್ಟಿಯಾಗಿರುವ ಜಲ ಕಂಟಕದ ಬಗ್ಗೆ ಕೋಡಿಮಠದ ಡಾ. ಶ್ರೀ ಶಿವಾನಂದ ಶಿವಯೋಗಿರಾಜೇಂದ್ರ ಸ್ವಾಮೀಜಿ ಅವರು ವರ್ಷದ ಆರಂಭದಲ್ಲೇ ನುಡಿದಿದ್ದ ಭವಿಷ್ಯ ನಿಜವಾಗಿದೆ. ಹೌದು ರಾಜ್ಯದಲ್ಲಿ ಯಾವಾಗ ಮುಂಗಾರು ಮಳೆ ಆರಂಭವಾಯಿತೊ ಅಂದಿನಿಂದ ಇವತ್ತಿನವರೆಗೂ ರಾಜ್ಯದ ಅನೇಕ ಕಡೆಗಳಲ್ಲಿ ಭಾರಿ ಪ್ರಮಾಣದ ಮಳೆಯಿಂದ ಅನೇಕ ಜನರ …
Read More »ಕಾಂಗ್ರೆಸ್ ಹಗರಣ, ಭ್ರಷ್ಟಾಚಾರಗಳ ವಿರುದ್ಧ ಚಕ್ರವ್ಯೂಹ ರಚನೆ; ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿಕೆ
ನವದೆಹಲಿ: ಇಡೀ ದೇಶ ಚಕ್ರವ್ಯೂಹದಲ್ಲಿ ಸಿಲುಕಿದೆ. ದೇಶವನ್ನು ಪ್ರಧಾನಿ ಮೋದಿ, ಅಮಿತ್ ಶಾ, ಮೋಹನ್ ಭಾಗವತ್, ಅಜಿತ್ ದೋವೆಲ್, ಅಂಬಾನಿ, ಅದಾನಿ ಈ ಆರು ಜನರ ಚಕ್ರವ್ಯೂಹದಲ್ಲಿ ಸಿಲುಕಿಸಲಾಗಿದೆ ಎಂಬ ರಾಹುಲ್ ಗಾಂಧಿ ಅವರ ಹೇಳಿಕೆಗೆ ತಿರುಗೇಟು ನೀಡಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಚಕ್ರವ್ಯೂಹ ರಚಿಸಲಾಗುತ್ತಿದೆ. ಆದರೆ ಅದು ಕಾಂಗ್ರೆಸ್ ನವರ ಹಗರಣ, ಭ್ರಷ್ಟಾಚಾರಗಳ ವಿರುದ್ಧ ಎಂದು ಹೇಳಿದ್ದಾರೆ. ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಹ್ಲಾದ್ ಜೋಶಿ, ಕಾಂಗ್ರೆಸ್ ಹಗರಣಗಳು …
Read More »ಕೋರೆ ಜನ್ಮದಿನ: ಉಚಿತ ಹೃದ್ರೋಗ ಚಿಕಿತ್ಸೆ
ಬೆಳಗಾವಿ: ‘ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಅವರ 77ನೇ ಜನ್ಮದಿನದ ಅಂಗವಾಗಿ, ಇಲ್ಲಿನ ಡಾ.ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದಲ್ಲಿ 100 ಜನರಿಗೆ ಆಂಜಿಯೊಗ್ರಫಿ ಹಾಗೂ 25 ಹೃದ್ರೋಗಿಗಳಿಗೆ ಆಂಜಿಯೊಪ್ಲಾಸ್ಟಿಯನ್ನು ಉಚಿತವಾಗಿ ಮಾಡಲಾಗುವುದು’ ಎಂದು ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಕರ್ನಲ್ ಡಾ.ಎಂ. ದಯಾನಂದ ತಿಳಿಸಿದರು. ‘ಆರ್ಥಿಕವಾಗಿ ಹಿಂದುಳಿದವರು ಮಾತ್ರ ಇದನ್ನು ಬಳಸಿಕೊಳ್ಳಲು ಸಾಧ್ಯ. ಈಗಾಗಲೇ ಸರ್ಕಾರದ ವೈದ್ಯಕೀಯ ಸವಲತ್ತು, ವಿಮೆ ಅನುಕೂಲ ಇದ್ದವರಿಗೆ ಬರುವುದಿಲ್ಲ. …
Read More »ಸಕಾರಾತ್ಮಕ ಸುದ್ದಿಗೆ ಆದ್ಯತೆ ನೀಡಿ: ಶಾಸಕ ನಿಖಿಲ್ ಕತ್ತಿ
ಹುಕ್ಕೇರಿ: ಪತ್ರಕರ್ತರು ಸಮಾಜದ ಅಂಕು ಡೊಂಕುಗಳನ್ನು ತಿದ್ದಿ, ಜನಪ್ರತಿನಿಧಿಗಳನ್ನು ಸರಿಯಾದ ಮಾರ್ಗದಲ್ಲಿ ನಡೆಯುವಂತೆ ಮಾಡುವ ಚಾಕಚಕ್ಯತೆ ಹೊಂದಿರಬೇಕು. ಜಗತ್ತಿನಲ್ಲಿ ನಡೆಯುವ ದಿನನಿತ್ಯದ ಆಗು ಹೋಗುಗಳನ್ನು ಗಮನಿಸಿ ಸಕಾರಾತ್ಮಕ ಹಾಗೂ ಸ್ಥಳೀಯ ಸುದ್ದಿಗಳನ್ನು ನಿಖರವಾಗಿ, ನಿಷ್ಪಕ್ಷವಾಗಿ ಬರೆದು ಜನಮನ್ನಣೆ ಪಡೆಯಬೇಕು ಎಂದು ಶಾಸಕ ನಿಖಿಲ್ ಕತ್ತಿ ಹೇಳಿದರು. ತಾಲ್ಲೂಕು ಪಂಚಾಯ್ತಿ ಸಭಾ ಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ದಿಲೀಪ ಕುರಂದವಾಡೆ …
Read More »ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಆಚರಣೆ ಪೂರ್ವಭಾವಿ ಸಭೆ
ಬೆಳಗಾವಿ: ‘ಮಹಾತ್ಮ ಗಾಂಧೀಜಿ ಅಧ್ಯಕ್ಷತೆಯಲ್ಲಿ ಬೆಳಗಾವಿಯಲ್ಲಿ 1924ರಲ್ಲಿ ನಡೆದ ಕಾಂಗ್ರೆಸ್ ಅಧಿವೇಶನಕ್ಕೆ ಈಗ 100 ವರ್ಷ ತುಂಬಿದೆ. ಸರ್ಕಾರಿ ಮಾರ್ಗಸೂಚಿಯಂತೆ, ಅರ್ಥಪೂರ್ಣವಾಗಿ ಅಧಿವೇಶನದ ಶತಮಾನೋತ್ಸವ ಆಚರಿಸಲಾಗುವುದು’ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಹೇಳಿದರು. ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ‘ಶತಮಾನೋತ್ಸವ ಆಚರಣೆಗೆ ಸರ್ಕಾರ ಬಜೆಟ್‌ನಲ್ಲಿ ₹2 ಕೋಟಿ ಅನುದಾನ ಮೀಸಲಿಟ್ಟಿದೆ. ಇದನ್ನು ಸಮರ್ಪಕವಾಗಿ ಬಳಸಿಕೊಳ್ಳಲಾಗುವುದು’ ಎಂದರು. ‘ಕಾಂಗ್ರೆಸ್ ಅಧಿವೇಶನದಲ್ಲಿ ಅಂಗೀಕರಿಸಿದ್ದ ಗೊತ್ತುವಳಿಗಳ …
Read More »ಘಟಪ್ರಭಾ ನದಿ ಪ್ರವಾಹ: 42 ಗ್ರಾಮಗಳು ಬಾಧಿತ
ಬೆಳಗಾವಿ: ಜಿಲ್ಲೆಯಲ್ಲಿ ಸೋಮವಾರ ಮಳೆ ಅಬ್ಬರ ತಗ್ಗಿದೆ. ಆದರೆ, ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಮಳೆ ಇದೆ. ಹೀಗಾಗಿ ಕೃಷ್ಣಾ ಮತ್ತು ಅದರ ಉಪ ನದಿಗಳಲ್ಲಿ ನೀರಿನ ಮಟ್ಟ ಯಥಾಸ್ಥಿತಿಯಿದೆ. 44 ಸೇತುವೆಗಳು ಮುಳುಗಿವೆ. ಮಹಾರಾಷ್ಟ್ರದ ರಾಜಾಪುರ ಬ್ಯಾರೇಜ್‌ನಿಂದ 2.45 ಲಕ್ಷ ಕ್ಯುಸೆಕ್ ನೀರು ಹರಿಸಲಾಗುತ್ತಿದೆ. ದೂಧಗಂಗಾ ನದಿಯಿಂದ 48,570 ಕ್ಯುಸೆಕ್ ಸೇರಿ 2.93 ಲಕ್ಷ ಕ್ಯುಸೆಕ್‌ಗೂ ಅಧಿಕ ನೀರು ಚಿಕ್ಕೋಡಿ ತಾಲ್ಲೂಕಿನ ಕಲ್ಲೋಳ ಬ್ಯಾರೇಜ್‌ನಲ್ಲಿ ಹರಿಯುತ್ತಿದೆ. ನವೀಲುತೀರ್ಥ ಅಣೆಕಟ್ಟೆಯಿಂದ 5 ಸಾವಿರ …
Read More »ಮುಂಬೈನಲ್ಲಿ ಮಹಿಳೆಯನ್ನು ಕೊಂದು ಸಿಕ್ಕಿಬಿದ್ದ ಕಲಬುರಗಿ ಮೂಲದ ದಾವೂದ್ ಶೇಖ್
ಥಾಣೆ, ಜು 30 (ಪಿಟಿಐ) : ನವಿ ಮುಂಬೈನ ಉರಾನ್ ರೈಲು ನಿಲ್ದಾಣದ ಬಳಿ 20 ವರ್ಷದ ಮಹಿಳೆಯ ಶವ ಪತ್ತೆಯಾದ ಎರಡು ದಿನಗಳ ನಂತರ, ಆಕೆಯನ್ನು ಕೊಂದ ಆರೋಪದ ಮೇಲೆ ಕರ್ನಾಟಕ ಮೂಲದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆರೋಪಿ ದಾವೂದ್ ಶೇಖ್ ನನ್ನು ಕರ್ನಾಟಕದ ಗುಲ್ಬರ್ಗಾದ ಶಹಾಪುರ ಪ್ರದೇಶದಲ್ಲಿ ಬಂಧಿಸಲಾಗಿದೆ ಎಂದು ಉಪ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ. ಶನಿವಾರ ಮಧ್ಯರಾತ್ರಿ 2 ಗಂಟೆ …
Read More »ಕರೊನಾಗೆ ಕೊರೊನಿಲ್ ಔಷಧಿ; ಹೇಳಿಕೆ ತೆಗೆಯುವಂತೆ ರಾಮದೇವ್ಗೆ ದೆಹಲಿ ಕೋರ್ಟ್ ಸೂಚನೆ
ನವದೆಹಲಿ: ಕರೊನಾ ಸಾಂಕ್ರಾಮಿಕ ಸಮಯದಲ್ಲಿ ಲಕ್ಷಾಂತರ ಜನರ ಸಾವಿಗೆ ಅಲೋಪತಿ ವೈದ್ಯರೇ ಕಾರಣ ಎಂದು ದೂಷಿಸಿರುವ ಮತ್ತು ಪತಂಜಲಿಯ ಕೊರೊನಿಲ್ ಔಷಧವನ್ನು ಚಿಕಿತ್ಸೆಯಾಗಿ ಪ್ರಚಾರ ಮಾಡುವ ಎಲ್ಲಾ ಹೇಳಿಕೆಗಳನ್ನು ಮೂರು ದಿನಗಳಲ್ಲಿ ಹಿಂಪಡೆಯುವಂತೆ ಬಾಬಾ ರಾಮ್‌ದೇವ್ ಅವರಿಗೆ ನ್ಯಾಯಾಲಯ ಸೂಚಿಸಿದೆ. ನ್ಯಾಯಮೂರ್ತಿ ಅನುಪ್ ಜೈರಾಮ್ ಭಂಭಾನಿ ಅವರಿದ್ದ ಪೀಠವು, ಇನ್ನು ಮುಂದೆ ಇಂತಹ ಹೇಳಿಕೆಗಳನ್ನು ನೀಡದಂತೆ ರಾಮ್‌ದೇವ್ ಅವರಿಗೆ ಸೂಚಿಸಿದೆ. ಮತ್ತು ಸಾಮಾಜಿಕ ಜಾಲತಾಣದಲ್ಲಿನ ಹೇಳಿಕೆಗಳನ್ನು ಮೂರು ದಿನಗಳಲ್ಲಿ ತೆಗೆದುಹಾಕುವಂತೆ ಸೂಚಿಸಿದೆ. …
Read More »ಪ್ರವಾಹದಲ್ಲಿ ಕೊಚ್ಚಿ ಹೋದ ಪುಸ್ತಕ, ಕಣ್ಣೀರಿಟ್ಟ ವಿದ್ಯಾರ್ಥಿನಿ!
ಬಾಗಲಕೋಟೆ: ರಾಜ್ಯದಲ್ಲಿ ಕೆಲವಾರಗಳಿಂದ ವರುಣನ ಆರ್ಭಟ ನಿಲ್ಲುತ್ತಲೇ ಇಲ್ಲ. ಈಗಾಗಲೇ ಕೆಲ ಜಿಲ್ಲೆಗಳು ವರುಣನ ಅಬ್ಬರಕ್ಕೆ ಜಲಾವೃತವಾಗಿದ್ದು, ಘಟಪ್ರಭಾ ನದಿ ಪ್ರವಾಹದಿಂದ, ಬಾಗಲಕೋಟೆಯ (Bagalkote) ಮುಧೋಳ ತಾಲೂಕಿನ ಮಿರ್ಜಿ ಗ್ರಾಮ ಸಂಪೂರ್ಣವಾಗಿ ಜಲಾವೃತವಾಗಿದೆ. ಇನ್ನು ಈ ಗ್ರಾಮದಲ್ಲಿ ಭಾರೀ ಪ್ರಮಾಣದಲ್ಲಿ ನೀರು ನುಗ್ಗಿದ್ದರಿಂದ, ನೂರಾರು ಮನೆಗಳು ಜಲಾವೃತವಾಗಿ (Flood), ಈಗಾಗಲೇ ಕಾಳಜಿ ಕೇಂದ್ರಕ್ಕೆ ಜನರು ಸ್ಥಳಾಂತರವೂ ಆಗಿದ್ದಾರೆ. ಮಳೆಯಬ್ಬರದಿಂದ ಮಿರ್ಜಿ ಗ್ರಾಮ ನದಿಯಂತಾಗಿದ್ದು, ಈಗಾಗಲೇ 70 ಕುಟುಂಬಗಳು ಮನೆಗೆ ಬೀಗ …
Read More »