Breaking News

ಸೈಬರ್‌ ವಂಚನೆ: ₹8.64 ಕೋಟಿ ಕಳೆದುಕೊಂಡ ಜನ

ಬೆಳಗಾವಿ: ‘ನೀವು ಗಂಭೀರವಾದ ಅಪರಾಧ ಮಾಡಿದ್ದೀರಿ. ಆನ್‌ಲೈನ್‌ನಲ್ಲಿ ನಿಮಗೆ ಬಂದಿರುವ ಪಾರ್ಸೆಲ್‌ನಲ್ಲಿ ಮಾದಕ ದ್ರವ್ಯ ಕಂಡುಬಂದಿವೆ. ವಿಡಿಯೊ ಕರೆ ಮೂಲಕವೇ ನಾವು ನಡೆಸುವ ವಿಚಾರಣೆಗೆ ಹಾಜರಾಗಿ. ನಮ್ಮ ಕ್ಯಾಮೆರಾ ಕಣ್ಗಾವಲಿನಲ್ಲೇ ಇರಿ…’ ಇಂಥ ಕರೆಗಳು ನಿಮಗೂ ಬಂದರೆ ಎಚ್ಚರ. ಇಂಟರ್‌ನೆಟ್‌ ಹಾಗೂ ಕೃತಕ ಬುದ್ಧಿಮತ್ತೆ (ಎಐ) ಬಳಸಿಕೊಂಡು ಹೀಗೆ ಕರೆ ಮಾಡುತ್ತಿರುವ ವಂಚಕರು ಹಣಕ್ಕೆ ಪೀಡಿಸುತ್ತಿದ್ದಾರೆ. ಅವರಿಗೆ ಹೆದರಿ ಮಾಹಿತಿ ಹಂಚಿಕೊಂಡು ಸಂಕಷ್ಟಕ್ಕೆ ಸಿಲುಕಿದವರು, ನ್ಯಾಯ ಕೋರಿ ಬೆಳಗಾವಿ ನಗರ …

Read More »

ನಕಲಿ ಗೋಲ್ಡ್ ಪ್ಲ್ಯಾಕ್ ಸಿಗರೇಟ್ ಹಾಗೂ ಲೈಟ್ಸ್ ಪ್ಯಾಕ್ ಸಿಗರೇಟ್‌ ವಶ: ಇಬ್ಬರ ಬಂಧನ

ನವಲಗುಂದ: ಹುಬ್ಬಳ್ಳಿ-ವಿಜಯಪೂರ ರಾಷ್ಟ್ರೀಯ ಹೆದ್ದಾರಿ ಶೆಟ್ಟರ ಕೆರೆ ಹತ್ತಿರ ಅಂದಾಜು ₹5.40 ಲಕ್ಷ ಮೌಲ್ಯದ ನಕಲಿ ಗೋಲ್ಡ್ ಪ್ಲ್ಯಾಕ್ ಸಿಗರೇಟ್ ಹಾಗೂ ಲೈಟ್ಸ್ ಪ್ಯಾಕ್ ಸಿಗರೇಟ್‌ ಪ್ಯಾಕೇಟ್‌ಗಳನ್ನು ಸಾಗಿಸುತ್ತಿದ್ದ ವ್ಯಕ್ತಿಗಳನ್ನು ವಾಹನ ಸಮೇತ ಪೊಲೀಸರು ಬಂಧಿಸಿದ್ಧಾರೆ.   ಉಡುಪಿ ಸಂತೆಕಟ್ಟೆ ಮೂಲದ ಮಹ್ಮದ ನೌಶಾದ, ಬೆಂಗಳೂರು ಮೂಲದ ಮಹ್ಮದ ನಾಸಿರ್ ಬಂಧಿತ ಆರೋಪಿಗಳು. ಆರೋಪಿಗಳು 160 ಬಂಡಲ್‌ಗಳಲ್ಲಿ 3200 ನಕಲಿ ಸಿಗರೇಟ್ ಪಾಕೀಟ್‌ಗಳನ್ನು ಕಾರಿನಲ್ಲಿ ಸಾಗಿಸುತ್ತಿದ್ದರು. ಈ ಕುರಿತು ಬೆಂಗಳೂರು …

Read More »

ಇಂಧನ ಪೂರೈಕೆ ಟ್ಯಾಂಕರ್‌ ಸಂಚಾರ ಸ್ಥಗಿತ‌

ಧಾರವಾಡ: ಹುಬ್ಬಳ್ಳಿ-ಧಾರವಾಡದಲ್ಲಿ ಪೆಟ್ರೋಲ್‌, ಡೀಸೆಲ್‌ ಪೂರೈಕೆ ಟ್ಯಾಂಕರ್‌ ಸಂಚಾರಕ್ಕೆ ವಿಧಿಸಿದ ನಿರ್ಬಂಧ ತೆರವಿಗೆ ಆಗ್ರಹಿಸಿ ಐಒಸಿಎಲ್‌ ಮತ್ತು ಎಚ್‌ಪಿಸಿಎಲ್‌ ಟ್ರಾನ್ಸ್‌ಪೋರ್ಟರ್‌ ಕಂಟ್ರಾಕ್ಟರ್ಸ್‌ ಸಂಘಟನೆ ಮತ್ತು ಉತ್ತರ ಕರ್ನಾಟಕ ಟ್ಯಾಂಕರ್‌ ಡ್ರೈವರ್ಸ್ ಅಂಡ್‌ ಹೆಲ್ಪರ್ಸ್ ಸಂಘದವರು ಶನಿವಾರ ಟ್ಯಾಂಕರ್‌ ಸಂಚಾರ ಸ್ಥಗಿತಗೊಳಿಸಿ, ಪ್ರತಿಭಟನೆ ಆರಂಭಿಸಿದರು.   ‘ಬೆಳಿಗ್ಗೆ 8 ರಿಂದ ಮಧ್ಯಾಹ್ನ 12 ಮತ್ತು ಮಧ್ಯಾಹ್ನ 4 ರಿಂದ ರಾತ್ರಿ 9ರವರೆಗಿನ ಅವಧಿಯಲ್ಲಿ ಟ್ಯಾಂಕರ್‌ಗಳಿಗೆ ಹುಬ್ಬಳ್ಳಿ-ಧಾರವಾಡ ಪ್ರವೇಶಿಸಲು ನಿರ್ಬಂಧಿಸಿರುವುದನ್ನು ತೆರವುಗೊಳಿಸಬೇಕು. ಶನಿವಾರ ಟ್ಯಾಂಕರ್‌ಗಳಿಗೆ …

Read More »

ಅಪೌಷ್ಟಿಕತೆ ಹೋಗಲಾಡಿಸಲು ಕ್ರಮ: ಕಾಂಬಳೆ

ಚಿಕ್ಕೋಡಿ: ‘ಪೋಷಣ್‌ ಅಭಿಯಾನದ ಮೂಲಕ ಗರ್ಭಿಣಿಯರು, ಬಾಣಂತಿಯರು ಮತ್ತು ಮಕ್ಕಳಿಗೆ ಪೌಷ್ಟಿಕಯುಕ್ತ ಆಹಾರ ನೀಡಿ, ಅಪೌಷ್ಟಿಕತೆ ಹೋಗಲಾಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದು ಚಿಕ್ಕೋಡಿ ಸಿಡಿಪಿಒ ಸಂತೋಷ ಕಾಂಬಳೆ ಹೇಳಿದರು. ತಾಲೂಕಿನ ಇಂಗಳಿ ಗ್ರಾಮದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಿಡಿಪಿಒ ಕಚೇರಿ ಆಯೋಜಿಸಿದ್ದ ‘ಪೋಷಣ್‌ ಅಭಿಯಾನ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.   ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಸ್.ಎಚ್.ಸಿದ್ದಪ್ಪಾ ಮಾತನಾಡಿ, ‘ಎಲ್ಲರೂ ಸೇರಿ ಅಭಿಯಾನ ಯಶಸ್ವಿಗೊಳಿಸೋಣ’ ಎಂದರು. ಪ್ರಾಥಮಿಕ ಆರೋಗ್ಯ …

Read More »

ಕಂದಾಯ‌ ಅಧಿಕಾರಿಗೆ ಪ್ರಶಸ್ತಿ

ಬೆಳಗಾವಿ: ಕಂದಾಯ ಇಲಾಖೆಯ ವಿವಿಧ ಸೇವೆಗಳನ್ನು ಸಾರ್ವಜನಿಕರಿಗೆ ಅತ್ಯುತ್ತಮವಾಗಿ ಒದಗಿಸಿದ ಕಾರಣಕ್ಕೆ ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯ ವಿಪತ್ತು ನಿರ್ವಹಣಾ ಸಮಾಲೋಚಕ ನಿಂಗನಗೌಡ ಚನಬಸನಗೌಡರ ಅವರಿಗೆ ‘ಅತ್ಯುತ್ತಮ ಕಂದಾಯ ಅಧಿಕಾರಿ-2024’ ಪ್ರಶಸ್ತಿ ಲಭಿಸಿದೆ. ಕಂದಾಯ ಇಲಾಖೆಯ ಸಚಿವ ಕೃಷ್ಣ ಬೈರೇಗೌಡ ಅವರು ಬೆಂಗಳೂರಿನ ವಿಕಾಸಸೌಧದಲ್ಲಿ ಶುಕ್ರವಾರ ಜರುಗಿದ ಸಮಾರಂಭದಲ್ಲಿ ನಿಂಗನಗೌಡ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ವಿ.ರಶ್ಮಿ ಸೇರಿದಂತೆ ಕಂದಾಯ ಇಲಾಖೆಯ ಹಿರಿಯ ಅಧಿಕಾರಿಗಳು ಸಮಾರಂಭದಲ್ಲಿ …

Read More »

ಕೊತ್ತಂಬರಿ ಸೊಪ್ಪು ಬೆಳೆದು ₹2.5 ಲಕ್ಷ ಗಳಿಸಿದ ರೈತ

ಚಿಕ್ಕೋಡಿ (ಬೆಳಗಾವಿ ಜಿಲ್ಲೆ): ತಾಲ್ಲೂಕಿನ ಕೇರೂರ ಗ್ರಾಮದ ರೈತ ಅಪ್ಪಾಸಾಬ ರೇಂದಾಳೆ ಅವರು, ಒಂದು ಎಕರೆಯಲ್ಲಿ ಕೊತ್ತಂಬರಿ ಸೊಪ್ಪು ಬೆಳೆದು ₹2.5 ಲಕ್ಷ ಆದಾಯ ಗಳಿಸಿದ್ದಾರೆ. ಅಪ್ಪಾಸಾಬ ಅವರಿಗೆ 8 ಎಕರೆ ಜಮೀನಿದೆ. 7 ಎಕರೆಯಲ್ಲಿ ಕಬ್ಬು ಬೆಳೆದಿದ್ದು, 1 ಎಕರೆಯಲ್ಲಿ ಕೊತ್ತಂಬರಿ ಬೀಜ ಬಿತ್ತಿದ್ದರು. ಹದ ಮಳೆ ಸುರಿದಿದ್ದರಿಂದ ಉತ್ತಮ ಇಳುವರಿ ಬಂದಿದೆ. ಕೊತ್ತಂಬರಿ ಸೊಪ್ಪಿನ ದರ ಏರಿಕೆಯಿಂದಾಗಿ ಕೈತುಂಬ ಹಣವೂ ಸಿಕ್ಕಿದೆ. ಕೆ.ಜಿಗೆ ₹370ರ ದರದಲ್ಲಿ ಅಶೋಕ ತಳಿಯ …

Read More »

ಚಾಮುಂಡಿ ಬೆಟ್ಟದಲ್ಲಿ ಮಹಿಷ ದಸರಾ ಇಂದು: ನಿಷೇಧಾಜ್ಞೆ

ಮೈಸೂರು: ಮಹಿಷ ದಸರಾ ಆಚರಣೆ ಸಮಿತಿಯು ಭಾನುವಾರ (ಸೆ.29) ‘ಮಹಿಷ ಮಂಡಲೋತ್ಸವ’ದ ಅಂಗವಾಗಿ, ಬೆಳಿಗ್ಗೆ 8.30ಕ್ಕೆ ಚಾಮುಂಡಿ ಬೆಟ್ಟದಲ್ಲಿ ಮಹಿಷ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿ, ಪುರಭವನದಲ್ಲಿ ಕಾರ್ಯಕ್ರಮ ನಡೆಸಲಿದ್ದು, ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಕಾರ್ಯಕ್ರಮದ ಕುರಿತು ತಮ್ಮ ಫೇಸ್‌ಬುಕ್‌ ಪುಟದಲ್ಲಿ ಪ್ರತಿಕ್ರಿಯಿಸಿರುವ ಮಾಜಿ ಸಂಸದ ಪ್ರತಾಪ ಸಿಂಹ, ‘ಬೆಟ್ಟದಲ್ಲಿ ಮಹಿಷನಿಗೆ ಪುಷ್ಪಾರ್ಚನೆ? ಬನ್ನಿ, ನೋಡೆ ಬಿಡೋಣ’ ಎಂದು ಹೇಳಿದ್ದಾರೆ. ಕೆಲವು ದಿನಗಳ ಹಿಂದೆ ಅವರು, ಮಹಿಷ ದಸರಾಕ್ಕೆ ಪ್ರತಿಯಾಗಿ ಚಾಮುಂಡಿ ಬೆಟ್ಟ …

Read More »

ಕೌಟುಂಬಿಕ ಕಲಹದಿಂದ ಕುಡುಗೋಲಿನಿಂದ ಪತ್ನಿಯನ್ನೇ ಕೊಚ್ಚಿ ಕೊಲೆಗೈದ ಪತಿ

ಕಲಬುರ್ಗಿ: ಕೌಟುಂಬಿಕ ಕಲಹಕ್ಕೆ ಬೇಸತ್ತಂತ ಪತಿಯೊಬ್ಬ, ಪತ್ನಿಯನ್ನೇ ಕುಡುಗೋಲಿನಿಂದ ಕೊಚ್ಚಿ ಕೊಲೆಗೈದು, ಪೊಲೀಸ್ ಠಾಣೆಗೆ ತೆರಳಿ ಶರಣಾಗಿರುವಂತ ಘಟನೆ ಕಲಬುರ್ಗಿಯ ಸೇಡಂನ ಬೇಟಗೇರ(ಬಿ) ಗ್ರಾಮದಲ್ಲಿ ನಡೆದಿದೆ. ಕಲಬುರ್ಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ಬೇಡಗೇರ(ಬಿ) ಗ್ರಾಮದ ನಾಗಮ್ಮ ಹಾಗೂ ಶೇಖರಪ್ಪ ನಡುವೆ ಕೌಟುಂಬಿಕ ಕಲಹ ಉಂಟಾಗಿತ್ತು. ದಿನೇ ದಿನೇ ಹೆಚ್ಚಾಗಿ ಇದರಿಂದ ಬೇಸತ್ತು ಕೂಡ ಹೋಗಲಾಗಿತ್ತು ಎನ್ನಲಾಗಿದೆ. ಕೌಟುಂಬಿಕ ಕಲಹಕ್ಕೆ ಬೇಸತ್ತಿದ್ದಂತ ಶೇಖರಪ್ಪ ತನ್ನ ಪತ್ನಿ ನಾಗಮ್ಮ(42) ಎಂಬುವರನ್ನು ಕುಡುಗೋಲಿನಿಂದ ಕೊಚ್ಚಿ …

Read More »

Bigg Boss ಸೀಸನ್​-11ಕ್ಕೆ ಎಂಟ್ರಿ ಪಡೆದ ನಾಲ್ವರು ಸ್ಫರ್ಧಿಗಳು

ಬೆಂಗಳೂರು: ಕನ್ನಡದ ಹೆಸರಾಂತ ರಿಯಾಲಿಟಿ ಶೋ ಬಿಗ್​ಬಾಸ್ (Bigg Boss)​ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಈ ಬಾರಿಯೂ ನಟ ಕಿಚ್ಚ ಸುದೀಪ್​ ಅವರೇ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಈಗಾಗಲೇ ಯಶಸ್ವಿ 10 ಆವೃತ್ತಿಯನ್ನು ಮುಗಿಸಿರುವ ಬಿಗ್​ಬಾಸ್ ಶೋ 11ನೇ ಆವೃತ್ತಿಗೆ ಭರ್ಜರಿ ತಯಾರಿ ಮಾಡಿಕೊಂಡಿದೆ. ಈ ಬಾರಿ ಸ್ವರ್ಗ-ನರಕ ಎಂಬ ಥೀಮ್​ನಲ್ಲಿ ಕಾರ್ಯಕ್ರಮ ನಡೆಯಲಿದ್ದು, ಹೊಸ ಅಧ್ಯಾಯದ ಮೇಲೆ ಜನರು ಹೆಚ್ಚಿನ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ.   ಬಿಗ್​ಬಾಸ್​ ಸೀಸನ್​-11ರ ಮೊದಲ ಸ್ಫರ್ಧಿಯಾಗಿ ನಟಿ …

Read More »

ಗೃಹಲಕ್ಷ್ಮಿ ಫಲಾನುಭವಿಗಳಿಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಗುಡ್ ನ್ಯೂಸ್

ಬೆಳಗಾವಿ: ಖಾತೆಗೆ ಹಣದ ನಿರೀಕ್ಷೆಯಲ್ಲಿರುವ ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳಿಗೆ ಸಿಹಿ ಸುದ್ದಿ ಸಿಕ್ಕಿದೆ. ಗೃಹಲಕ್ಷ್ಮಿ ಯೋಜನೆಯ ಜುಲೈ ಕಂತಿನ ಹಣ ಬಿಡುಗಡೆ ಪ್ರಕ್ರಿಯೆ ನಡೆಯುತ್ತಿದೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದ್ದಾರೆ. ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳಿಗೆ ಜುಲೈ ಕಂತಿನ ಹಣ ಬಿಡುಗಡೆ ಪ್ರಕ್ರಿಯೆ ನಡೆಯುತ್ತಿದ್ದು, ಇದಾದ ಕೆಲವು ದಿನಗಳಲ್ಲಿ ಆಗಸ್ಟ್ ತಿಂಗಳ ಹಣವೂ ಬಿಡುಗಡೆಯಾಗಲಿದೆ ಇದು ನಿರಂತರ ಪ್ರಕ್ರಿಯೆಯಾಗಿದೆ ಎಂದು ಹೇಳಿದ್ದಾರೆ.   ರಾಜ್ಯದಲ್ಲಿ ಜಾರಿಗೊಳಿಸಲಾದ ಗ್ಯಾರಂಟಿ ಯೋಜನೆಗಳನ್ನು ಗಿಮಿಕ್ ಎಂದು …

Read More »