Breaking News

ಮಂಡ್ಯ ಸಾಹಿತ್ಯ ಸಮ್ಮೇಳನ: ‘ದಕ್ಷಿಣ’ದ ಸಮ್ಮೇಳನಕ್ಕೆ ‘ಉತ್ತರ’ದವರ ಕೂಗು

ಬೆಳಗಾವಿ: ಮಂಡ್ಯದಲ್ಲಿ ನಡೆಯಲಿರುವ 87ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನಕ್ಕೆ ಉತ್ತರ ಕರ್ನಾಟಕದವರನ್ನೇ ಸರ್ವಾಧ್ಯಕ್ಷರಾಗಿ ಆಯ್ಕೆ ಮಾಡಬೇಕೆಂಬ ಕೂಗು ಸಾಮಾಜಿಕ ಜಾಲತಾಣಗಳಲ್ಲಿ ಎದ್ದಿದೆ. ಈ ಭಾಗದ ಸಾಹಿತಿಗಳು, ಕವಿಗಳು, ಲೇಖಕರು ಜಾಲತಾಣಗಳಲ್ಲಿ ಈ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದು, ‘ಉತ್ತರ ಕರ್ನಾಟಕದವರಿಗೆ ಅವಕಾಶ ನೀಡಬೇಕು’ ಎಂದು ಗಟ್ಟಿಯಾಗಿ ಧ್ವನಿ ಎತ್ತಿದ್ದಾರೆ. ಕೆಲವರು ಇಂಥವರನ್ನೇ ಆಯ್ಕೆ ಮಾಡಬೇಕೆಂದು ತಿಳಿಸಿದ್ದಾರೆ. ಈ ಕುರಿತಾಗಿ ನಡೆಯುತ್ತಿರುವ ಚರ್ಚೆಯೂ ಕಾವೇರುತ್ತಿದೆ. ‘ಈವರೆಗೆ ನಡೆದಿರುವ ಅಖಿಲ ಭಾರತ …

Read More »

ಜೈ ಶ್ರೀರಾಮ್‌’ ಘೋಷಣೆ ಕೂಗಿದರೆ ಧಾರ್ಮಿಕ ಭಾವನೆ ಕೆರಳದು

ಬೆಂಗಳೂರು: ಜೈ ಶ್ರೀರಾಮ್‌’ ಎಂದು ಘೋಷಣೆ ಕೂಗುವುದು ಧಾರ್ಮಿಕ ಭಾವನೆಗಳನ್ನು ಕೆರಳಿಸುತ್ತದೆ’ ಎಂಬ ವಾದ ಅರ್ಥವಾಗುತ್ತಿಲ್ಲ ಎಂದು ಹೇಳಿರುವ ಹೈಕೋರ್ಟ್‌, ಮಸೀದಿಯಲ್ಲಿ ಜೈ ಶ್ರೀರಾಮ್‌ ಘೋಷಣೆ ಕೂಗಿ ಧಾರ್ಮಿಕ ಭಾವನೆಗಳನ್ನು ಕೆರಳಿಸಿದ ಆರೋಪದಲ್ಲಿ ಇಬ್ಬರು ಯುವಕರ ವಿರುದ್ಧ ದಾಖಲಿಸಲಾಗಿದ್ದ ಪ್ರಕರಣವನ್ನು ರದ್ದುಪಡಿಸಿದೆ. 2023ರ ಸೆ. 24ರಂದು ರಾತ್ರಿ ಸುಮಾರು 10.50ರ ವೇಳೆಗೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಐತ್ತೂರು ಗ್ರಾಮದ ಮರ್ದಾಳದ ಬದ್ರಿಯಾ ಜುಮ್ಮಾ ಮಸೀದಿಯ ಆವರಣ ಪ್ರವೇಶಿಸಿ ಜೈ …

Read More »

ಡಿ.16 ರಿಂದ 27ರವರೆಗೆ ಚಳಿಗಾಲದ ಅಧಿವೇಶನ ನಡೆಸುವ ಚಿಂತನೆ?

ಬೆಂಗಳೂರು: ಬರುವ ಡಿಸೆಂಬರ್‌ನಲ್ಲಿ ನಡೆಯಬೇಕಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮತ್ತು ಕಾಂಗ್ರೆಸ್‌ ಅಧಿವೇಶನ ಹಾಗೂ ಚಳಿಗಾಲದ ಅಧಿವೇಶನಗಳ ದಿನಾಂಕಗಳು ಪರಸ್ಪರ ಒಂದಕ್ಕೊಂದು ಅಡ್ಡಿಯಾಗುವ ಸಾಧ್ಯತೆ ಇದ್ದು, ಚಳಿಗಾಲದ ಅಧಿವೇಶನದ ದಿನಾಂಕ ನಿಗದಿ ಈಗ ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ. ರಾಜ್ಯದಲ್ಲಿ ಪ್ರಸ್ತುತ ಅಕ್ಟೋಬರ್‌-ನವೆಂಬರ್‌ ತಿಂಗಳಿಡೀ ಉಪಚುನಾವಣೆಯ ಕಾವು ಏರಲಿದ್ದು, ಡಿಸೆಂಬರ್‌ 20 ರಿಂದ 22 ರವರೆಗೆ ಮಂಡ್ಯದಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಹಾಗೂ ಡಿ.26 ಮತ್ತು 27 …

Read More »

ಭವಿಷ್ಯದ ಕೌಶಲ್ಯಗಳಿಗೆ ಒತ್ತು ನೀಡಿದರೆ ಉದ್ಯೋಗಾವಕಾಶ’

ಬೆಳಗಾವಿ: ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ತರಬೇತಿ ಪಡೆಯುವ ಮೂಲಕ ಕೌಶಲ್ಯಾಧಾರಿತ ಉದ್ಯೋಗಾವಕಾಶಗಳು ದೊರಕುವಂತೆ ಮಾಡಬಹುದು. ಈ ಸಂಬಂಧ ಜಿಲ್ಲೆಯ ದೊಡ್ಡ ಕೈಗಾರಿಕೆಗಳೊಂದಿಗೆ ಸಭೆ ನಡೆಸಿ ಬೇಡಿಕೆಗಳ ಪಟ್ಟಿ ರಚಿಸಬೇಕು. ಭವಿಷ್ಯದ ಕೌಶಲ್ಯಗಳಿಗೆ ಒತ್ತು ನೀಡುವ ಮೂಲಕ ಜಾಗತಿಕ ಉದ್ಯೋಗ ಮಾರುಕಟ್ಟೆಯಲ್ಲಿ ಹೆಚ್ಚಿನ ಉದ್ಯೋಗಗಳು ಜಿಲ್ಲೆಯ ಉದ್ಯೋಗಾಕಾಂಕ್ಷಿಗಳಿಗೆ ದೊರಕಲಿವೆ ಎಂದು ಕರ್ನಾಟಕ ಕೌಶಲ್ಯ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ| ಇ.ವಿ ರಮಣರೆಡ್ಡಿ ಹೇಳಿದರು. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಕರ್ನಾಟಕ ಕೌಶಲ್ಯ …

Read More »

ನಾನೂ ಸೀನಿಯರ್‌ ಲೀಡರ್‌, ರಾಜ್ಯಕ್ಕೆ ದಲಿತ ಸಿಎಂ ಪ್ರಸ್ತಾವ ಬಂದರೆ ಮುಂಚೂಣಿಯಲ್ಲಿರುವೆ

ಸಂಸತ್ತಿಗೆ ಕರ್ನಾಟಕ ಕಾಂಗ್ರೆಸ್‌ನಿಂದ ಗೆದ್ದ ಹಿರಿಯರ ಪೈಕಿ ಜಾಫ‌ರ್‌ ಶರೀಫ್, ಶಂಕರಾನಂದ ಅವರನ್ನು ಬಿಟ್ಟರೆ ಬಿಟ್ಟರೆ ನಾನೇ ಅತೀ ಹೆಚ್ಚು ಬಾರಿ ಗೆದ್ದವನು. ನನಗೆ ಹಿರಿತನ ಇದ್ದೇ ಇದೆ. ರಾಜ್ಯದ ಒಟ್ಟಾರೆ ಜನಸಂಖ್ಯೆಯ ಶೇ.25ರಷ್ಟು ಎಸ್‌ಸಿ, ಎಸ್‌ಟಿಗಳಿದ್ದರೂ ಹಿರಿಯರಾದ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಯಾರಿಗೂ ಈವರೆಗೆ “ದಲಿತ ಸಿಎಂ’ ಆಗುವ ಅವಕಾಶ ಸಿಕ್ಕಿಲ್ಲ. ಸುಮಾರು 25 ವರ್ಷಗಳಿಂದ ಈ ಕೂಗು ಇದೆ. ಇವಿಷ್ಟೂ ರಾಜ್ಯ ಕಾಂಗ್ರೆಸ್‌ನ ಹಿರಿಯ ಮುಖಂಡ, ಎಡಗೈ …

Read More »

ಜೈಲಿನಿಂದ ಮೊಬೈಲ್‌ ಬಳಸಿ ಪತ್ನಿಗೆ ಬೆದರಿಕೆ ಹಾಕಿದ ಕೈದಿ!

ಶಿವಮೊಗ್ಗ:ಜೈಲಿನಲ್ಲಿ ಈಗಲೂ ಮೊಬೈಲ್‌ ಸಿಗುತ್ತದೆ ಎಂಬ ಆರೋಪಗಳಿಗೆ ಮತ್ತೊಂದು ಪ್ರಕರಣ ಪುಷ್ಠಿ ನೀಡಿದ್ದು, ಸೋಗಾನೆಯಲ್ಲಿರುವ ಕೇಂದ್ರ ಕಾರಾಗೃಹದಿಂದ ತನ್ನ ಪತಿ ಕರೆ ಮಾಡಿ ಜೀವ ಬೆದರಿಕೆ ಒಡ್ಡುತ್ತಿದ್ದು ಹಣಕ್ಕೆ ಒತ್ತಾಯಿಸುತ್ತಿದ್ದಾನೆ ಎಂದು ಆರೋಪಿಸಿ ಮಹಿಳೆ ದೂರು ನೀಡಿದ್ದಾರೆ. ತುಂಗಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಚಿತ್ರದುರ್ಗ ಜೈಲಿನಿಂದ ಶಿವಮೊಗ್ಗ ಜಿಲ್ಲೆಗೆ ವರ್ಗಾವಣೆಯಾಗಿರುವ ಕೈದಿ ನಾಗರಾಜ ತನ್ನ ಪತ್ನಿಗೆ ಜೈಲಿನಿಂದಲೇ ಕರೆ ಮಾಡುತ್ತಿದ್ದಾನೆ ಎಂದು ಆರೋಪಿಸಲಾಗಿದೆ. 2024ರ ಮಾರ್ಚ್‌ ತಿಂಗಳಿಂದ ಹಲವು …

Read More »

ಅ.20ರಂದು ಬ್ರಿಗೇಡ್‌ ಹೆಸರು ಘೋಷಣೆ

ಶಿವಮೊಗ್ಗ: ಹುಬ್ಬಳಿಯಲ್ಲಿ ನಡೆದ ಸಭೆಯ ತೀರ್ಮಾನದಂತೆ ಅ.20ರಂದು ಬಾಗಲಕೋಟೆಯಲ್ಲಿ ಉತ್ತರ ಕರ್ನಾಟಕದ ಪ್ರಮುಖ ಕಾರ್ಯಕರ್ತರ ಸಮಾವೇಶ ನಡೆಯಲಿದೆ. ಅಲ್ಲಿ ಬ್ರಿಗೇಡ್‌ಗೆ ನಾಮಕರಣ, ಮುಂದಿನ ಕಾರ್ಯಕ್ರಮಗಳ ಬಗ್ಗೆ ಘೋಷಣೆ ಮಾಡಲಾಗುವುದು ಎಂದು ಮಾಜಿ ಡಿಸಿಎಂ ಕೆ.ಎಸ್‌. ಈಶ್ವರಪ್ಪ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಹಿಂದುಳಿದ ವರ್ಗ ದಲಿತ ವರ್ಗದ ಜತೆಗೆ ಎಲ್ಲಾ ಸಮುದಾಯದ ದೊಡ್ಡ ಸಂಘಟನೆ ಮಾಡಬೇಕು ಎಂದು ಅನೇಕ ಸಾಧು ಸಂತರ ಅಪೇಕ್ಷೆ ಇದೆ. ಇದಕ್ಕಾಗಿ ಹುಬ್ಬಳ್ಳಿಯಲ್ಲಿ ಒಂದು …

Read More »

ಹುಬ್ಬಳ್ಳಿ ಗಲಭೆ ಪ್ರಕರಣ ವಾಪಸ್ ಪಡೆದಿದ್ದು ಸರಿ ಇದೆ : ಸಚಿವ ಮಧು ಬಂಗಾರಪ್ಪ

ಧಾರವಾಡ: ಮನೆ ಹುಡುಕಿಕೊಂಡು ಅಮಾಯಕರ ಮೇಲೆ ಪ್ರಕರಣ ದಾಖಲಿಸಿರುವ ಉದಾಹರಣೆಗಳು ಇರುವಾಗ ಹುಬ್ಬಳ್ಳಿಯಲ್ಲಿ ಪೊಲೀಸ್ ಠಾಣೆ ಮೇಲೆ ನಡೆದ ಗಲಭೆ ಪ್ರಕರಣ ವಾಪಸ್ ಪಡೆದಿರುವುದು ಸರ್ಕಾರದ ಸರಿಯಾದ ನಿರ್ಧಾರವೇ ಆಗಿದ್ದು, ಬಿಜೆಪಿ ಪ್ರತಿಭಟನೆ ಮಾಡಿಕೊಳ್ಳಲಿ ಅಥವಾ ಕೋರ್ಟ್‌ಗೆ ಹೋಗಲಿ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.   ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹುಬ್ಬಳ್ಳಿ ಗಲಭೆ ಇರಲಿ, ಮುಡಾ ಪ್ರಕರಣವೇ ಇರಲಿ. ಇದರಲ್ಲಿ ಯಾವ ಪಕ್ಷ ಎನ್ನುವುದು ಮುಖ್ಯವಲ್ಲ, …

Read More »

2 ಸಾವಿರ ರೂ ಲಂಚಕ್ಕೆ ಬೇಡಿಕೆ; ಉಪ ತಹಶೀಲ್ದಾರ್ ಲೋಕಾಯುಕ್ತ ಬಲೆಗೆ

ದಾವಣಗೆರೆ: ಬೋನಾಪೈಡ್ ಪ್ರಮಾಣಪತ್ರಕ್ಕಾಗಿ 2 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆಯಿಟ್ಟಿದ್ದ ಚನ್ನಗಿರಿ ತಾಲೂಕಿನ ಸಂತೆಬೆನ್ನೂರಿನ ಉಪ ತಹಶೀಲ್ದಾರ್ ಮಂಗಳವಾರ (ಅ.15) ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ. ಸಂತೇಬೆನೂರು ಉಪ ತಹಶೀಲ್ದಾರ್ ಸುಧಾ ಮೂಡಲಗಿರಿಯಪ್ಪ ಲೋಕಾಯುಕ್ತ ಬಲೆಗೆ ಬಿದ್ದವರು. ಚನ್ನಗಿರಿ ತಾಲೂಕಿನ ಹಿರೇಗಂಗೂರು ಗ್ರಾಮದ ಎಸ್.ಆರ್. ಕುಮಾರ್ ಎಂಬುವರು ಸಹೋದರ ಗಿರೀಶ್ ಅವರೊಂದಿಗೆ ಸೆ.26 ರಂದು ಬೋನಾಪೈಡ್ ಪ್ರಮಾಣಪತ್ರಕ್ಕಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಎಲ್ಲ ದಾಖಲೆಗಳು ಸರಿಯಾಗಿದ್ದರೂ ಗುರುತಿನ ಚೀಟಿ ಒದಗಿಸಲಾಗಿಲ್ಲ ಎಂಬ …

Read More »

ವಿಶ್ವದಾಖಲೆಯಾದ KDC ಡೆಂಟಲ್ ಕೇರ್ ಏಕಕಾಲಕ್ಕೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನಡೆದ ದಂತ ತಪಾಸಣಾ ಶಿಬಿರಗಳು.

ವಿಶ್ವದಾಖಲೆಯಾದ KDC ಡೆಂಟಲ್ ಕೇರ್ ಏಕಕಾಲಕ್ಕೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನಡೆದ ದಂತ ತಪಾಸಣಾ ಶಿಬಿರಗಳು. ಏಕ ಕಾಲದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಶಿಬಿರಗಳನ್ನು ಹಮ್ಮಿಕೊಂಡು ಸುಮಾರು 35 ಸಾವಿರ ವಿದ್ಯಾರ್ಥಿಗಳಿಗೆ ಉಚಿತ ದಂತ ತಪಾಸಣೆ ನಡೆಸಿದ ಶ್ರೀ ಯೆಡಿಯೂರು ಸಿದ್ದಲಿಂಗೇಶ್ವರ ಚಾರಿಟಬಲ್ ಟ್ರಸ್ಟ್‌ಗೆ ನೋಬಲ್ ವಿಶ್ವದಾಖಲೆ ಸಂಸ್ಥೆಯಿಂದ ಪ್ರಶಸ್ತಿ ಲಭಿಸಿದೆ. ರಾಮನಗರ ಜಿಲ್ಲೆಯ ರಾಮನಗರ, ಚನ್ನಪಟ್ಟಣ ನಗರಗಳು, ಬೆಂಗಳೂರು ಮತ್ತು ಹುಬ್ಬಳ್ಳಿ ನಗರಗಳಲ್ಲಿ ಏಕ ಕಾಲದಲ್ಲಿ …

Read More »