Breaking News

ಧಾರವಾಡದ ಕವಿವಿ ಬೋಧಕೇತರ ಸಿಬ್ಬಂದಿಯಿಂದ ಮುಂಬಡ್ತಿಗಾಗಿ ಪ್ರತಿಭಟನೆ…6ನೇ ದಿನಕ್ಕೆ ಕಾಲಿಟ್ಟ ಪ್ರತಿಭಟನೆ ಧರಣಿ

–ಧಾರವಾಡದ ಕವಿವಿ ಬೋಧಕೇತರ ಸಿಬ್ಬಂದಿಯಿಂದ ಮುಂಬಡ್ತಿಗಾಗಿ ಪ್ರತಿಭಟನೆ…6ನೇ ದಿನಕ್ಕೆ ಕಾಲಿಟ್ಟ ಪ್ರತಿಭಟನೆ ಧರಣಿ.. : ಮುಂಬಡ್ತಿ ನೀಡುವಂತೆ ಆಗ್ರಹಿಸಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಬೋಧಕೇತರ ಸಿಬ್ಬಂದಿ ನಡೆಸುತ್ತಿರುವ ಮುಷ್ಕರ 6ನೇ ದಿನಕ್ಕೆ ಕಾಲಿಟ್ಟಿದೆ. ವೈ- ಕೇವಲ ಮುಂಬಡ್ತಿ ಮಾತ್ರವಲ್ಲ ಹಲವು ವರ್ಷಗಳಿಂದ ಸಿಬ್ಬಂದಿಗೆ ವೈದ್ಯಕೀಯ ವೆಚ್ಚ ಸಹಿತ ಭರಿಸಿಲ್ಲ. ಪರಿಹಾರ ಭತ್ಯೆ ಮತ್ತು ಹಬ್ಬದ ಮುಂಗಡ ಪಾವತಿ ಸಹ ಮಾಡಿಲ್ಲ ಎಂಬ ಇತ್ಯಾದಿ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಬೋಧಕೇತರ ಸಿಬ್ಬಂದಿ ಪ್ರತಿಭಟನೆ …

Read More »

ಭಾರತ ದೇಶ ಹಲವಾರು ಮತ, ಪಂಥ, ಸಂಪ್ರದಾಯಗಳಿಗೆ ಹೆಸರುವಾಸಿಯಾಗಿದೆ.

ಮೂಡಲಗಿ: ಭಾರತ ದೇಶ ಹಲವಾರು ಮತ, ಪಂಥ, ಸಂಪ್ರದಾಯಗಳಿಗೆ ಹೆಸರುವಾಸಿಯಾಗಿದೆ. ಈ ಎಲ್ಲ ಮತ, ಪಂಥ, ಸಂಪ್ರದಾಯಗಳು ಶಾಂತಿ ನೆಮ್ಮದಿಗಾಗಿಯೇ ಪ್ರಾರ್ಥನೆ ಮಾಡುತ್ತವೆ. ಅದರಲ್ಲಿ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳ ಕಠಿಣ ವ್ರತವು ತಪಸ್ಸು ಇದ್ದಂತೆ. ಹೀಗಾಗಿ ಎಲ್ಲ ಮಾಲಾಧಾರಿಗಳು ವ್ರತ ಮುಗಿದ ಮೇಲು ಸಮಾಜದಲ್ಲಿ ಯಾವುದೇ ಕಪ್ಪುಚುಕ್ಕೆ ಬಾರದಂತೆ ಬಾಳಿ ಬದುಕಬೇಕು ಆಗ ನೀವು ಮಾಲೆಧಾರಣೆ ಮಾಡಿದಕ್ಕೂ ಸಾರ್ಥಕವಾಗುತ್ತದೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು. ಸೋಮವಾರ ಡಿ-30 …

Read More »

ಬೆಳಗಾವಿಯಲ್ಲಿ ಮಾತೋಶ್ರೀ ಅಹಿಲ್ಯಾಬಾಯಿ ಹೋಳ್ಕರ್ ಅವರ ತ್ರಿಶತಾಬ್ದಿ ಆಚರಣೆ

ಬೆಳಗಾವಿಯಲ್ಲಿ ಮಾತೋಶ್ರೀ ಅಹಿಲ್ಯಾಬಾಯಿ ಹೋಳ್ಕರ್ ಅವರ ತ್ರಿಶತಾಬ್ದಿ ಆಚರಣೆ ಮಾತೋಶ್ರೀ ಅಹಿಲ್ಯಾಬಾಯಿ ಹೋಳ್ಕರ್ ಅವರ ತ್ರಿಶತಾಬ್ದಿ ಆಚರಣೆ ಬೆಳಗಾವಿಯಲ್ಲಿ ಕಾರ್ಯಕ್ರಮದ ಆಯೋಜನೆ ಅಹಿಲ್ಯಾಬಾಯಿ ಹೋಳ್ಕರ್ ಕಿರುನಾಟಕ ಪ್ರದರ್ಶನ ಸಾಧಕರನ್ನು ಗೌರವಿಸಿದ ಗಣ್ಯರು “ಉನ್ನತಿ ಟ್ರಸ್ಟ್ ಬೆಳಗಾವಿ, ರಾಷ್ಟ್ರ ಸೇವಿಕಾ ಸಮಿತಿ ಬೆಳಗಾವಿ, ಮತ್ತು ಸಾಮಾಜಿಕ ಸಾಮರಸ್ಯ ವೇದಿಕೆ ಬೆಳಗಾವಿಯ ಸಂಯುಕ್ತಾಶ್ರಯದಲ್ಲಿ ಮಾತೋಶ್ರೀ ಅಹಿಲ್ಯಾಬಾಯಿ ಹೋಳ್ಕರ್ ರವರ ತ್ರಿಶತಾಬ್ದಿ ಆಚರಣೆಯನ್ನು ಮಾಡಲಾಯಿತು. ಕಾರ್ಯಮಕ್ಕೆ ಮುಖ್ಯ ಅಥಿತಿಯಾಗಿ ಸಂಶೋಧಕ, ಲೇಖಕರು ಆದ ಶ್ರೀ …

Read More »

ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾಮಗಾರಿ ಆರಂಭಿಸಿ…. ಬೆಳಗಾವಿ ಮಹಾಪಾಲಿಕೆ ನಾಲಾ ಕಾಮಗಾರಿಗೆ ವಡಗಾಂವ ಆನಂದನಗರದ ರಹಿವಾಸಿಗಳ ತೀವ್ರ ವಿರೋಧ…

ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾಮಗಾರಿ ಆರಂಭಿಸಿ…. ಬೆಳಗಾವಿ ಮಹಾಪಾಲಿಕೆ ನೀತಿಗೆ ಖಂಡನೆ ನಾಲಾ ಕಾಮಗಾರಿಗೆ ತೀವ್ರ ವಿರೋಧ… ವಡಗಾಂವ ಆನಂದನಗರದ ರಹಿವಾಸಿಗಳಿಂದ ಅಸಮಾಧಾನ ಬೆಳಗಾವಿ ವಡಗಾಂವನ ಆನಂದ ನಗರದ 2ನೇ ಅಡ್ಡ ರಸ್ತೆಯಲ್ಲಿ ಬೆಳಗಾವಿ ಮಹಾನಗರ ಪಾಲಿಕೆಯ ವತಿಯಿಂದ ನಿರ್ಮಿಸಲಾಗುತ್ತಿರುವ ನಾಲಾ ಕಾಮಗಾರಿಗೆ ಜನರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಯಾರಿಗೂ ನೋಟಿಸ್ ನೀಡದೇ ಏಕಾಏಕಿ ಮಾರ್ಕಿಂಗ್ ಮಾಡಿ ಕಾಮಗಾರಿ ಆರಂಭಿಸಿದ್ದು, ಜನರಲ್ಲಿ ಗೊಂದಲವನ್ನು ಮೂಡಿಸಿದೆ. ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಕಾನೂನುಬದ್ಧ …

Read More »

ದೇಶದಲ್ಲಿ ಶೋಕಾಚರಣೆ ಜಾರಿಯಲ್ಲಿರುವಾಗ; ಶ್ರೀರಾಮಸೇನೆ ಡಿ.31 ರಂದು ಪಾಶ್ಚಾತ್ಯ ಹೊಸ ವರ್ಷ ಆಚರಿಸದಿರಿ; ಶ್ರೀರಾಮಸೇನೆ

ದೇಶದಲ್ಲಿ ಶೋಕಾಚರಣೆ ಜಾರಿಯಲ್ಲಿರುವಾಗ; ಶ್ರೀರಾಮಸೇನೆ ಡಿ.31 ರಂದು ಪಾಶ್ಚಾತ್ಯ ಹೊಸ ವರ್ಷ ಆಚರಿಸದಿರಿ; ಶ್ರೀರಾಮಸೇನೆ ಮಾಜಿ ಪಿಎಂ ಮನಮೋಹನಸಿಂಗ್ ನಿಧನ ಹಿನ್ನೆಲೆ ದೇಶದಲ್ಲಿ ಶೋಕಾಚರಣೆ ಜಾರಿಯಲ್ಲಿದೆ ಹೋಟೆಲನಲ್ಲಿ ಕುಡಿತ-ಕುಣಿತಕ್ಕೆ ಅವಕಾಶ ನಿಡದಿರಿ ಡಿಸೆಂಬರ್ 31 ಪಾಶ್ಚಾತ್ಯ ಹೊಸ ವರ್ಷ ಆಚರಿಸದಂತೆ ಬೆಳಗಾವಿಯ ಶ್ರೀರಾಮ ಸೇನೆ ಒತ್ತಾಯಿಸಿದೆ. ಡಿಸೆಂಬರ್ 31ರ ರಾತ್ರಿ ವಿದೇಶಿ ಹೊಸ ವರ್ಷ ನಿಮಿತ್ಯ ಕುಡಿತ, ಕುಣಿತ, ನಶೆ, ಮಾದಕವಸ್ತುಗಳ ಸೇವನೆ,ಅಶ್ಲೀಲತೆ, ವ್ಯಭಿಚಾರ ಮುಂತಾದ ಅನೈತಿಕ ಚಟುವಟಿಕೆಗಳು ಪ್ರತಿ …

Read More »

ಅಂಬೇಡ್ಕರ್ ಕುರಿತು ಅಮಿತ್​​​ ಶಾ ಹೇಳಿಕೆ ಖಂಡಿಸಿ ಬಳ್ಳಾರಿಯ ಕಂಪ್ಲಿ ಸಂಪೂರ್ಣ ಬಂದ್​!

ಬಳ್ಳಾರಿ: ಡಾ. ಬಿ.ಆರ್​​​. ಅಂಬೇಡ್ಕರ್​​​​ ಅವರ ಕುರಿತಾದ ಕೇಂದ್ರ ಗೃಹ ಸಚಿವ ಅಮಿತ್​​​ ಶಾ ಹೇಳಿಕೆ ಖಂಡಿಸಿ ಇಂದು ಜಿಲ್ಲೆಯ ಕಂಪ್ಲಿ ತಾಲೂಕು ಸಂಪೂರ್ಣ ಬಂದ್​ ಆಗಿದೆ. ಸಂವಿಧಾನ ಶಿಲ್ಪಿ ಅಂಬೇಡ್ಕರ್​​​ ಅವರ ಬಗ್ಗೆ ಬಿಜೆಪಿಗರು ಅವಮಾನ ಮಾಡುವುದೇ ಕಾಯಕ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿರುವ ವಿವಿಧ ಸಂಘಟನೆಗಳ ಪ್ರತಿಭಟನಕಾರರು ಬೆಳಗ್ಗೆ 6 ಗಂಟೆಯಿಂದಲೇ ಬಂದ್​ ಆರಂಭಿಸಿದ್ದಾರೆ. ಬಂದ್​ ಇದ್ದರೂ ಕಂಪ್ಲಿಯಲ್ಲಿ ಎಂದಿನಂತೆ ದಿನಸಿ ಮಾರುಕಟ್ಟೆಗಳು, ಮತ್ತು ಆಟೋ, ಕ್ಯಾಬ್​ ಮಾತ್ರ ಓಪನ್ …

Read More »

ಗುತ್ತಿಗೆದಾರನ ಸಾವಿಗೂ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೂ ಯಾವುದೇ ಸಂಬಂಧವಿಲ್ಲ:ಡಿ. ಕೆ ಶಿ

ಬೆಂಗಳೂರು : ನಮ್ಮದು ಸ್ವಚ್ಛ ಆಡಳಿತದ ಸರ್ಕಾರ. ಗುತ್ತಿಗೆದಾರನ ಸಾವಿಗೂ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೂ ಯಾವುದೇ ಸಂಬಂಧವಿಲ್ಲ ಎಂದು ಉಪಮುಖ್ಯಮಂತ್ರಿ ಡಿ. ಕೆ ಶಿವಕುಮಾರ್ ತಿಳಿಸಿದರು. ಇಂದು ಸದಾಶಿವನಗರದ ತಮ್ಮ ನಿವಾಸದ ಬಳಿ ಮಾಧ್ಯದಮವರೊಂದಿಗೆ ಮಾತನಾಡಿದ ಅವರು, ಈ ಪ್ರಕರಣದಲ್ಲಿ ಪ್ರಿಯಾಂಕ್ ಖರ್ಗೆ ಅವರ ಪಾತ್ರವಿಲ್ಲ. ಆತ್ಮಹತ್ಯೆ ಪತ್ರದಲ್ಲಿ ಅವರ ಹೆಸರು ಯಾರೂ ಬರೆದಿಲ್ಲ. ಬೇರೆಯವರ ಮೇಲೆ ಆರೋಪ ಮಾಡಿದಾಕ್ಷಣ ಇವರು ರಾಜೀನಾಮೆ ನೀಡಲು ಸಾಧ್ಯವಿಲ್ಲ. ಪ್ರಿಯಾಂಕ್ ಖರ್ಗೆ ಅವರ …

Read More »

ನಿಷೇಧಿತ ಗಾಂಜಾ, ಎಂಡಿಎಂಎ ಪೌಡರ್​ ಮಾರಾಟ ಮಾಡಲು ಯತ್ನಿಸಿದ ನಾಲ್ವರನ್ನ ಸೆನ್ ಅಪರಾಧ ದಳದ ಪೊಲೀಸರು ಬಂಧಿಸಿದ್ದಾರೆ.

ಉಡುಪಿ : ಮಾದಕ ವಸ್ತು, ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ನಾಲ್ಕು ಮಂದಿಯನ್ನು ಸೆನ್‌ ಅಪರಾಧ ದಳದ ಪೊಲೀಸರು ಬಂಧಿಸಿದ ಘಟನೆ ನಡೆದಿದೆ. ಬಂಧಿತರಿಂದ ಲಕ್ಷಾಂತರ ರೂ. ಮೌಲ್ಯದ ಮಾದಕ ವಸ್ತು ಸಹಿತ ಮಾರಾಟಕ್ಕೆ ಬಳಸಿದ ಅಪಾರ ಪ್ರಮಾಣದ ಸೊತ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಉಡುಪಿ-ಕಾರ್ಕಳ ಹೆದ್ದಾರಿಯ ನೀರೆ ಎಂಬಲ್ಲಿನ ಸಾರ್ವಜನಿಕ ರಸ್ತೆಯಲ್ಲಿ ಕೆಲವು ವ್ಯಕ್ತಿಗಳು ಕಾರಿನಲ್ಲಿ ನಿಷೇಧಿತ ಮಾದಕ ವಸ್ತು ಗಾಂಜಾ ಹಾಗೂ ಎಂಡಿಎಂಎ ಪೌಡರ್‌ ಅನ್ನು ಮಾರಾಟ ಮಾಡಲು ಯತ್ನಿಸುತಿದ್ದರು. ಈ …

Read More »

ವಂಚನೆ ಪ್ರಕರಣ : ಆರೋಪಿ ಐಶ್ವರ್ಯ ಗೌಡ ವಿರುದ್ಧ ಮಾಜಿ ಸಂಸದ ಡಿ ಕೆ ಸುರೇಶ್ ದೂರು

ಬೆಂಗಳೂರು : ತಮ್ಮ ಹೆಸರು ದುರುಪಯೋಗ ಮಾಡಿಕೊಂಡು ವಂಚನೆ ಮಾಡಿದ ಆರೋಪದ ಹಿನ್ನೆಲೆ ಐಶ್ವರ್ಯ ಗೌಡ ವಿರುದ್ಧ ಮಾಜಿ ಸಂಸದ ಡಿ. ಕೆ ಸುರೇಶ್ ಅವರು ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಇಂದು ದೂರು ನೀಡಿದ್ದಾರೆ. ಹಲವಾರು ಜನರಿಗೆ ಚಿನ್ನಾಭರಣ ಹಾಗೂ ಹಣ ವಂಚನೆ ಮಾಡುತ್ತಿರುವ ಐಶ್ವರ್ಯ ಗೌಡ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮಾಜಿ ಸಂಸದ ಡಿ. ಕೆ ಸುರೇಶ್ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ. …

Read More »

ದಾಬಸ್ ಪೇಟೆ ಬಳಿ ಸರಣಿ ಅಪಘಾತ: ಓರ್ವ ಸಾವು, ಹಲವರಿಗೆ ಗಾಯ

ನೆಲಮಂಗಲ: ಇಲ್ಲಿಯ ದಾಬಸ್ ಪೇಟೆಯ ಕೈಗಾರಿಕಾ ಪ್ರದೇಶದಲ್ಲಿ ಇಂದು ಬೆಳಂಬೆಳಗ್ಗೆ ಸರಣಿ ರಸ್ತೆ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಓರ್ವ ಸ್ಥಳದಲ್ಲೇ ಮೃತಪಟ್ಟರೆ, ಹಲವರು ಗಾಯಗೊಂಡಿದ್ದಾರೆ. ವೀರಣ್ಣ(55) ಮೃತ ದುರ್ದೈವಿ. ದಾಬಸ್ ಪೇಟೆಯ ರಾಷ್ಟ್ರೀಯ ಹೆದ್ದಾರಿ 48ರ ಎಡೇಹಳ್ಳಿ ಬಳಿ ಇಂದು ಬೆಳಗ್ಗೆ ಈ ಸರಣಿ ಅಪಘಾತ ಸಂಭವಿದೆ. ಕೈಗಾರಿಕಾ ಪ್ರದೇಶದ ಹೆಬ್ಬಾಗಿಲು ಮುಂಭಾಗದಲ್ಲಿ ಪ್ಯಾಸೆಂಜರ್ ಆಟೋ, ಕಾರು ಮತ್ತು ಲಾರಿ ನಡುವೆ ಸರಣಿ ಅಪಘಾತವಾಗಿದ್ದು, ಘಟನೆಯಲ್ಲಿ ವೀರಣ್ಣ ಸ್ಥಳದಲ್ಲೇ ಮೃತಪಟ್ಟರೆ, ಎಂಬಿಬಿಎಸ್ ಓದುತ್ತಿದ್ದ …

Read More »