ಹುಬ್ಬಳ್ಳಿ: ರೈಲ್ವೆ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಇಲಾಖೆಯ ನೌಕರನೊಬ್ಬ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಮುಂದಾಗಿ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾನೆ. ನದೀಂ ಎಂಬಾತನನ್ನು ಕೇಶ್ವಾಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ನದೀಂ ನೈಋತ್ಯ ರೈಲ್ವೆಯ ಮುಖ್ಯ ಕಚೇರಿಯ ಆರ್ಥಿಕ ವಿಭಾಗದಲ್ಲಿ ಕ್ಲರ್ಕ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾನೆ. ತನಗೆ ರೈಲ್ವೆ ನೇಮಕಾತಿ ವಿಭಾಗದಲ್ಲಿ ಪರಿಚಿತರಿದ್ದಾರೆ. ಕೆಲಸ ಕೊಡಿಸುವೆ, ಅದಕ್ಕಾಗಿ ಹಣ ಕೊಡುವಂತೆ ಹೇಳಿದ್ದಾನೆ. ಕೊಡಲು ಆಗದಿದ್ದರೆ ನಮ್ಮ ಹಿರಿಯ ಅಧಿಕಾರಿಗಳನ್ನು …
Read More »ಪ.ಪಂ ಸದಸ್ಯ ನಾಗರಾಜ ಅಪಹರಣ: ತಾಯಿ ಆಸ್ಪತ್ರೆಗೆ ದಾಖಲು
ಚನ್ನಮ್ಮನ ಕಿತ್ತೂರು (ಬೆಳಗಾವಿ ಜಿಲ್ಲೆ): ಇಲ್ಲಿನ ಪಟ್ಟಣ ಪಂಚಾಯಿತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನದ ಚುನಾವಣೆ ಹಿನ್ನೆಲೆಯಲ್ಲಿ, ಬಿಜೆಪಿ ಸದಸ್ಯ ನಾಗರಾಜ ಅಸುಂಡಿ ಅಪಹರಣ ಪ್ರಕರಣದಿಂದ, ತೀವ್ರ ನೊಂದು ಅನಾರೋಗ್ಯಕ್ಕೆ ಈಡಾಗಿರುವ ಅವರ ತಾಯಿಯನ್ನು ಧಾರವಾಡ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೃದಯ ಸಂಬಂಧಿ ಕಾಯಿಲೆಯಿಂದ ಅವರು ಬಳಲುತ್ತಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಸಾರ್ವಜನಿಕ ವೇದಿಕೆಯಲ್ಲಿ ಪುತ್ರನ ಅಪಹರಣ ಪ್ರಕರಣದಿಂದ ನೊಂದು ತಂದೆ ದುಃಖಿಸುತ್ತಿದ್ದಾರೆ. ಈ ಬಗ್ಗೆ ಪೊಲೀಸರಿಗೆ ದೂರು …
Read More »ದರ್ಶನ್ ವಿಚಾರದಲ್ಲಿ ಸರ್ಕಾರದ ಮಧ್ಯಸ್ಥಿಕೆ ಇಲ್ಲ-ಗೃಹ ಸಚಿವ
ತುಮಕೂರು, ಸೆಪ್ಟೆಂಬರ್ 03: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ದರ್ಶನ್‌ನನ್ನು ಇತ್ತೀಚಿಗೆ ಪರಪ್ಪನ ಅಗ್ರಹಾರ ಜೈಲಿನಿಂದ ಬಳ್ಳಾರಿ ಕೇಂದ್ರ ಕಾರಾಗ್ರಹಕ್ಕೆ ಸ್ಥಳಾಂತರ ಮಾಡಲಾಗಿದೆ. ಇದೀಗ ಬಳ್ಳಾರಿ ಜೈಲಿನಲ್ಲಿ ದರ್ಶನ್‌ಗೆ ಅಧಿಕಾರಿಗಳು ಸರ್ಜಿಕಲ್ ಚೇರ್ ನೀಡಿರುವ ಬಗ್ಗೆ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಮಾತನಾಡಿದ್ದು, ಅದು ನಮ್ಮ ಕಾರಾಗೃಹ ಇಲಾಖೆಗೆ ಬಿಟ್ಟಿರುವ ವಿಚಾರ. ನಾವ್ಯಾರು ಹಾಗೂ ರಾಜ್ಯ ಸರ್ಕಾರ ಇದರಲ್ಲಿ ಮಧ್ಯಸ್ಥಿಕೆ ವಹಿಸಲ್ಲ ಎಂದು ಹೇಳಿದ್ದಾರೆ. ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ …
Read More »ದರ್ಶನ್ ತಪ್ಪು ಮಾಡಿ ಜೈಲಿಗೆ ಹೋಗಿದ್ದಾರೆ : ಜಮೀರ್
ಹಾವೇರಿ,ಸೆ.3- ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ತಪ್ಪು ಮಾಡಿದ ಕಾರಣಕ್ಕಾಗಿ ಜೈಲಿಗೆ ಹೋಗಿದ್ದಾರೆ. ಇದರಲ್ಲಿ ನನ್ನ ಹೆಸರನ್ನು ಏಕೆ ಥಳಕು ಹಾಕಲಾಗುತ್ತಿದೆ ಎಂದು ವಸತಿ ಸಚಿವ ಜಮೀರ್ ಅಹಮದ್‌ಖಾನ್ ಆಕ್ಷೇಪ ವ್ಯಕ್ತಪಡಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದರ್ಶನ್ ನನ್ನ ಆತೀಯ ಸ್ನೇಹಿತರು. ಅದರಲ್ಲಿ ಎರಡು ಮಾತಿಲ್ಲ. ಆದರೆ ಕಾನೂನು ಪ್ರಕಾರ, ಏನು ನಡೆಯಬೇಕೋ ಅದೇ ನಡೆಯುತ್ತದೆ. ಮಾಧ್ಯಮಗಳು ಉದ್ದೇಶಪೂರಕವಾಗಿ ನನ್ನ ಹೆಸರನ್ನು ಪ್ರಸ್ತಾಪ ಮಾಡುತ್ತಿದೆ. ಇದಕ್ಕೂ, ನನಗೂ …
Read More »ಚಾರ್ಜ್ಶೀಟ್ ಸಲ್ಲಿಕೆ ಹೊತ್ತಲ್ಲೇ ಜೈಲಧಿಕಾರಿಗಳ ಬಳಿ ಈ ಒಂದು ಸೌಲಭ್ಯಕ್ಕೆ ಬೇಡಿಕೆ ಇಟ್ಟ ದರ್ಶನ್!
ಬಳ್ಳಾರಿ: ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜ್ಯಾತಿಥ್ಯ ಸಿಗುತ್ತಿದೆ ಎಂಬ ಸುದ್ದಿ ಭಾರಿ ವಿವಾದಕ್ಕೆ ಗುರಿಯಾದ ಬೆನ್ನಲ್ಲೇ ಬಳ್ಳಾರಿಯ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರವಾಗಿರುವ ನಟ ದರ್ಶನ್, ಜೈಲಧಿಕಾರಿಗಳ ಮುಂದೆ ಹೊಸದೊಂದು ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ. ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ2 ಆರೋಪಿಯಾಗಿ ನಟ ದರ್ಶನ್ ಜೈಲು ಪಾಲಾಗಿದ್ದಾರೆ. ಬೆಂಗಳೂರಿನ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಇರುವಾಗ ರೌಡಿ ವಿಲ್ಸನ್ ನಾಗನ ಜತೆ ಕುಳಿತು, ಸಿಗರೇಟ್ ಸೇದುತ್ತಾ ಕಾಫಿ ಕುಡಿಯುತ್ತಿರುವ ಫೋಟೋ ಸೋರಿಕೆಯಾಗಿ …
Read More »ಬಿಜೆಪಿಯವರು ‘ಆಪರೇಷನ್ ಕಮಲ’ ಮಾಡಲು ಯತ್ನಿಸಿದ್ದರು : ಹೊಸ ಬಾಂಬ್ ಸಿಡಿಸಿದ ಸಚಿವ ಬೋಸರಾಜ್!
ಹುಬ್ಬಳ್ಳಿ : ಕಳೆದ ಕೆಲವು ದಿನಗಳ ಹಿಂದೆ ಮಂಡ್ಯ ಕಾಂಗ್ರೆಸ್ ಶಾಸಕ ಗಣಿಗ ರವಿಕುಮಾರ್ ಅವರು ಬಿಜೆಪಿ ಅವರು ಕಾಂಗ್ರೆಸ್ ಶಾಸಕರಿಗೆ 100 ಕೋಟಿ ಆಫರ್ ನೀಡಿ ಖರೀದಿಸುತ್ತಿದ್ದಾರೆ ಎಂದು ಸ್ಪೋಟಕ ವಾದಂತಹ ಆರೋಪ ಮಾಡಿದ್ದರು. ಇದಾದ ಬಳಿಕ ಇದೀಗ ಸಚಿವ ಎನ್.ಎಸ್ ಬೋಸರಾಜ್ ಅವರು, ನಮ್ಮ ಪಕ್ಷದ 9 ಜನರನ್ನು ಸಂಪರ್ಕಿಸಿದ್ದು, ಈ ಮೂಲಕ ಬಿಜೆಪಿ ಆಪರೇಷನ್ ಕಮಲಕ್ಕೆ ಯತ್ನಿಸಿದೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ. ಹುಬ್ಬಳ್ಳಿಯಲ್ಲಿ …
Read More »ಗಣೇಶ ಹಬ್ಬಕ್ಕೆ 1500 ಹೆಚ್ಚುವರಿ ಕೆಎಸ್‌ಆರ್‌ಟಿಸಿ ಬಸ್
ಬೆಂಗಳೂರು: ಗೌರಿ-ಗಣೇಶ ಹಬ್ಬದ ಪ್ರಯುಕ್ತ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಿಂದ ಸೆ.5 ರಿಂದ 7 ರವರೆಗೆ 3 ದಿನ ಬೆಂಗಳೂರಿನಿಂದ ವಿವಿಧ ಜಿಲ್ಲೆಗಳಿಗೆ 1500 ಹೆಚ್ಚುವರಿ ವಿಶೇಷ ಬಸ್ ಸೌಲಭ್ಯ ಕಲ್ಪಿಸಲಾಗಿದೆ. ಜತೆಗೆ ಸೆ. 8 ರಂದು ಬೆಂಗಳೂರಿಗೆ ಬರಲು ವಿವಿಧ ರಾಜ್ಯ ಹಾಗೂ ಅಂತಾರಾಜ್ಯ ಗಳಿಂದಲೂ ವಿಶೇಷ ಸಾರಿಗೆ ವ್ಯವಸ್ಥೆ ಇರಲಿದೆ. ಯಾವ್ಯಾವ ಜಿಲ್ಲೆಗಳಿಗೆ ಬಸ್ ಸಂಚಾರ: ಸ್ವರ್ಣಗೌರಿ ವ್ರತ, ಗಣೇಶ ಚತುರ್ಥಿ ಹಾಗೂ ವಾರಾಂತ್ಯ ಭಾನುವಾರ ರಜೆ …
Read More »ನಿನ್ನ ಬಟ್ಟೆ ಬಿಚ್ಚಿಸಿ, ಬೆತ್ತಲೆ ಮೆರವಣಿಗೆ ಮಾಡಿಸ್ತೀನಿ!,ನಾಲಿಗೆ ಹರಿಬಿಟ್ಟ ಕೈ ಶಾಸಕ ರಾಜು ಕಾಗೆ
ನಿನ್ನ ಬಟ್ಟೆ ಬಿಚ್ಚಿಸಿ, ಬೆತ್ತಲೆ ಮೆರವಣಿಗೆ ಮಾಡಿಸ್ತೀನಿ! ಬೆಳಗಾವಿ: ಅಭಿವೃದ್ಧಿ ಕೆಲಸಗಳಿಗಿಂತ ಜಾಸ್ತಿ ತಮ್ಮ ವಿವಾದಾತ್ಮಕ ಹೇಳಿಕೆಗಳಿಂದಲೇ (Controversy Statement) ನಮ್ಮ ರಾಜ್ಯದ ಹಲವು ಶಾಸಕರು (MLA), ಸಚಿವರು (Ministers) ಸುದ್ದಿಯಾಗ್ತಾರೆ. ಈ ಸಾಲಿಗೆ ಬೆಳಗಾವಿ (Belagavi) ಜಿಲ್ಲೆಯ ಕಾಗವಾಡ (Kagawada) ಕ್ಷೇತ್ರದ ಕಾಂಗ್ರೆಸ್ ಶಾಸಕ (Congress MLA) ರಾಜು ಕಾಗೆ (Raju Kage) ಸೇರುತ್ತಾರೆ. ಇದೀಗ ಇದೇ ರಾಜು ಕಾಗೆ ವಿವಾದಾತ್ಮಕ ಹೇಳಿಕೆ ನೀಡಿ, ಮತ್ತೆ ಸುದ್ದಿಯಾಗಿದ್ದಾರೆ. “ನನ್ನ …
Read More »ಸಿಎಂ ಪತ್ನಿಗೆ 50:50 ಸೈಟ್ ಹಂಚಿಕೆ ಮಾಡಿದ್ದು ತಪ್ಪು ಎಂದು ಒಪ್ಪಿಕೊಂಡ ‘ರಾಜ್ಯ ಸರ್ಕಾರ’
ಬೆಂಗಳೂರು: ಮುಖ್ಯಮಂತ್ರಿ ಸಿದ್ಧರಾಮಯ್ಯ ವಿರುದ್ಧದ ಮುಡಾ ಹಗರಣದಲ್ಲಿ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ ವಿಚಾರ ಹೈಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದೆ. ಈ ನಡುವೆ ರಾಜ್ಯ ಸರ್ಕಾರವು ಸಿಎಂ ಪತ್ನಿಗೆ 50:50 ಸೈಟ್ ಹಂಚಿಕೆ ಮಾಡಿದ್ದು ತಪ್ಪು ಎಂಬುದಾಗಿ ಸತ್ಯವನ್ನು ಒಪ್ಪಿಕೊಂಡಿದೆ. ಮುಡಾ ಹಿಂದಿನ ಆಯುಕ್ತರ ಅಮಾನತು ಆದೇಶದಲ್ಲಿ ಈ ಸತ್ಯ ಬಯಲಾಗಿದೆ. ಸಿಎಂ ಸಿದ್ಧರಾಮಯ್ಯ ವಿರುದ್ಧದ ಮುಡಾ ಹಗರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದ್ದು, ರಾಜ್ಯ ಸರ್ಕಾರವೇ ಸಿಎಂ ಪತ್ನಿಗೆ …
Read More »ಟಿಎಚ್‌ಒಗೆ ಪಿಡಿಒ ಅವಾಚ್ಯ ಪದ ಬಳಕೆ: ಖಂಡನೆ
ಸವದತ್ತಿ: ಇಂಚಲ ಪಿಡಿಒ, ತಾಲ್ಲೂಕು ಆರೋಗ್ಯಾಧಿಕಾರಿಗಳಿಗೆ ಅವಾಚ್ಯವಾಗಿ ಬೈದು, ನಿಂದಿಸಿದ್ದನ್ನು ಖಂಡಿಸಿ ಶಿಸ್ತುಕ್ರಮಕ್ಕೆ ಆಗ್ರಹಿಸಿ ಆರೋಗ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಸೋಮವಾರ ಪ್ರತಿಭಟಿಸಿ ತಹಶೀಲ್ದಾರ್ ಎಂ.ಎನ್. ಹೆಗ್ಗನ್ನವರ ಅವರಿಗೆ ಮನವಿ ಸಲ್ಲಿಸಿದರು. ಮುಖ್ಯ ವೈದ್ಯಾಧಿಕಾರಿ ಎಚ್.ಎಂ. ಮಲ್ಲನಗೌಡರ ಮಾತನಾಡಿ, ‘ಇಂಚಲ ಗ್ರಾಮದ ಪಿಎಚ್‌ಸಿಯಲ್ಲಿ ವೈದ್ಯಾಧಿಕಾರಿ ಹುದ್ದೆ ಖಾಲಿ ಇದ್ದು, ಪರ್ಯಾಯವಾಗಿ ಚಚಡಿಯ ಪಿಎಚ್‌ಸಿಯ ಡಾ.ವಿಶಾಲು ಗದಗ ಮತ್ತು ಡಾ. ನಾಗರಾಜಗೌಡ ಮಾಳಿಪಾಟೀಲರನ್ನು ಹೆಚ್ಚುವರಿಯಾಗಿ ನೇಮಿಸಲಾಗಿದೆ. ಸಾರ್ವಜನಿಕರಿಗೆ ಸಮಸ್ಯೆಯಾಗದಂತೆ ಇಲಾಖೆಯಿಂದ …
Read More »