Breaking News

ರಾಜ್ಯದ ಸಂಸದರು ಗಂಡಸರೋ ಅಥವಾ ಹೆಂಗಸರೋ :ಸಿ.ಎಂ ಇಬ್ರಾಹಿಂ ಆಕ್ರೋಶ

ಹುಬ್ಬಳ್ಳಿ, ಸೆಪ್ಟೆಂಬರ್‌ 06: ಮುಡಾ ಹಾಗೂ ವಾಲ್ಮೀಕಿ ಹಗರಣದಲ್ಲಿಯೇ ಸರ್ಕಾರ, ಪ್ರತಿಪಕ್ಷಗಳು ಕಾಲಹರಣ ಮಾಡುತ್ತಿದೆ. ಇದರಿಂದ ರಾಜ್ಯದಲ್ಲಿ ಅಭಿವೃದ್ಧಿ ಮರೀಚಿಕೆಯಾಗಿದೆ ಎಂದು ಕಾಂಗ್ರೆಸ್‌ ಸರ್ಕಾರ ಹಾಗೂ ಬಿಜೆಪಿ ವಿರುದ್ಧ ಮಾಜಿ ಸಚಿವ ಸಿ.ಎಂ ಇಬ್ರಾಹಿಂ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.   ಹುಬ್ಬಳ್ಳಿ ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕಳೆದ ಒಂದೂವರೆ ವರ್ಷದಿಂದ ಆರೋಪ ಹಾಗೂ ಪ್ರತ್ಯಾರೋಪದಲ್ಲಿಯೇ ಕಾಲಹರಣ ಹಾಕಲಾಗುತ್ತಿದ್ದು, ಸರಿಯಾಗಿ ನಮ್ಮ ವಿರೋಧ ಪಕ್ಷ ವಿರೋಧ ಪಕ್ಷವಾಗಿ ಕೆಲಸ …

Read More »

ಇಬ್ಬರು `IAS’, ಮೂವರು `IFS’ ಅಧಿಕಾರಿಗಳನ್ನು ವರ್ಗಾವಣೆ

ಬೆಂಗಳೂರು : ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ ಮಾಡಲಾಗಿದ್ದು, ರಾಜ್ಯ ಸರ್ಕಾರ ಇಬ್ಬರು ಐಎಎಸ್, ಮೂವರು ಐಎಫ್ ಎಸ್ ಅಧಿಕಾರಿಗಳನ್ನು ದಿಢೀರ್ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಐಎಎಸ್ ಅಧಿಕಾರಿ ಟಿ.ಹೆಚ್.ಎಂ.ಕುಮಾರ್ ಅವರನ್ನು ಸಹಕಾರ ಸೊಸೈಟಿ ರಿಜಿಸ್ಟ್ರಾರ್ ಆಗಿ ಹಾಗೂ ಡಾ.ರಾಜೇಂದ್ರ ಅವರನ್ನು ಸಣ್ಣ ಕೈಗಾರಿಕಾ ನಿಗಮ ಎಂಡಿಯನ್ನಾಗಿ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.   ಇನ್ನು ಐಎಫ್ ಎಸ್ ಅಧಿಕಾರಿ ಬಿ.ಪಿ. ರವಿ, ರುಥ್ರೆನ್ ಪಿ ಹಾಗೂ ಐಎಸ್ …

Read More »

ಬೈಕ್ ಗೆ ಲಾರಿ ಡಿಕ್ಕಿ: ಮೂವರು ಕಾರ್ಮಿಕರ ಸಾವು

ರಾಮನಗರ: ತಾಲ್ಲೂಕಿನ ಮಾಯಗಾನಹಳ್ಳಿಯ ಬೆಂಗಳೂರು- ಮೈಸೂರು ರಾಷ್ಟ್ರೀಯ ಹೆದ್ದಾರಿಯ ಸರ್ವಿಸ್ ರಸ್ತೆಯಲ್ಲಿರುವ ಪೆಟ್ರೋಲ್ ಬಂಕ್ ಎದುರು ಶುಕ್ರವಾರ ಲಾರಿಯೊಂದು ಬೈಕ್ ಗೆ ಡಿಕ್ಕಿ ಹೊಡೆದಿದ್ದರಿಂದ ಮೂವರು ಕಾರ್ಮಿಕರು ಮೃತಪಟ್ಟಿದ್ದಾರೆ. ಕಟ್ಟಡ ನಿರ್ಮಾಣ ಕಾರ್ಮಿಕರಾದ ಗುರುಮೂರ್ತಿ (39), ಶೇಕ್ ಅಫೀಸ್ (45) ಹಾಗೂ ವೆಂಕಟೇಶ್ (50) ಮೃತರು. ಘಟನೆಯಲ್ಲಿ ಹನುಮಂತ ಅವರು ಗಾಯಗೊಂಡಿದ್ದು, ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೆಲಸದ ನಿಮಿತ್ತ ನಾಲ್ವರು ಕಾರ್ಮಿಕರು ಒಂದೇ ಬೈಕ್ ನಲ್ಲಿ ಹೋಗುತ್ತಿದ್ದರು. ಆಗ ಎದುರಿಗೆ ಬಂದ …

Read More »

ನಕಲಿ ವಿದ್ಯಾರ್ಥಿಗಳ ಹೆಸರಲ್ಲಿ ಹಣ ದುರುಪಯೋಗ: ತನಿಖೆಗೆ ಜಿ.ಪಂ ಸಿಇಒ ಆದೇಶ

ವಿಜಯಪುರ: 2023-24ನೇ ಸಾಲಿನಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಪ್ರಥಮ ಪ್ರಯತ್ನದಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿರುವ ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳಿಗೆ ಸಮಾಜ ಕಲ್ಯಾಣ ಇಲಾಖೆ ಕೊಡುವ ₹20 ಸಾವಿರ ನಗದು ಯೋಜನೆಯ ಹಣವನ್ನು ಇಲಾಖೆ ಸಿಬ್ಬಂದಿ ನುಂಗಿ ಹಾಕಿರುವ ಪ್ರಕರಣದ ತನಿಖೆಗೆ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ್‌ ಆದೇಶಿಸಿದ್ದಾರೆ.   ‘ಪ್ರಜಾವಾಣಿ’ಯಲ್ಲಿ ಗುರುವಾರ ಪ್ರಕಟವಾದ ‘ನಕಲಿ ವಿದ್ಯಾರ್ಥಿಗಳ ಹೆಸರಿನಲ್ಲಿ ಹಣ ಗುಳುಂ!’ ವಿಶೇಷ ವರದಿಗೆ ಪ್ರತಿಕ್ರಿಯಿಸಿರುವ ಜಿಲ್ಲಾ …

Read More »

ಲಕ್ಷ್ಮೇಶ್ವರ: ರೈತನ ಕೈ ಹಿಡಿದ ತರಕಾರಿ ಕೃಷಿ

ಲಕ್ಷ್ಮೇಶ್ವರ: ಅಲ್ಪಸ್ವಲ್ಪ ಭೂಮಿಯಲ್ಲೇ ಕಷ್ಪಪಟ್ಟು, ವಿವಿಧ ತರಕಾರಿಗಳನ್ನು ಬೆಳೆದು ಸೈ ಎನಿಸಿಕೊಂಡವರು ತಾಲ್ಲೂಕಿನ ಗುಲಗಂಜಿಕೊಪ್ಪ ಗ್ರಾಮದ ರಾಮನಗೌಡ ಶಂಕರಗೌಡ ದುರುಗನಗೌಡ್ರ. ಮೂಲತಃ ಲಕ್ಷ್ಮೇಶ್ವರ ತಾಲ್ಲೂಕು ಗುಲಗಂಜಿಕೊಪ್ಪದ ನಿವಾಸಿಯಾದ ರಾಮನಗೌಡ್ರ ಈಗ ಲಕ್ಷ್ಮೇಶ್ವರದ ರಂಭಾಪುರಿ ನಗರದ ಆಶ್ರಯ ಕಾಲೊನಿಯಲ್ಲಿ ವಾಸವಾಗಿದ್ದಾರೆ.   ಲಕ್ಷ್ಮೇಶ್ವರದ ಮಾನ್ವಿ ಎಂಬುವವರಿಗೆ ಸೇರಿದ ಆರು ಎಕರೆ ತೋಟವನ್ನು ವರ್ಷಕ್ಕೆ ₹50 ಸಾವಿರದಂತೆ ಇವರು ಲಾವಣಿ ಆಧಾರದ ಮೇಲೆ ಪಡೆದುಕೊಂಡು ವಿವಿಧ ತರಕಾರಿ, ಗಲಾಟೆ ಹೂವು ಬೆಳೆಯುತ್ತಿದ್ದಾರೆ. ಹದಿನೈದು ಗುಂಟೆಯಲ್ಲಿ …

Read More »

171 ಶಾಲಾ ಕೊಠಡಿ ನಿರ್ಮಾಣ: ಹುಕ್ಕೇರಿ

ಚಿಕ್ಕೋಡಿ: ‘ಕಳೆದ ಎರಡು ವರ್ಷಗಳಲ್ಲಿ ವಾಯವ್ಯ ಶಿಕ್ಷಕರ ಮತಕ್ಷೇತ್ರದಲ್ಲಿ ₹30 ಕೋಟಿ ಮೊತ್ತದಲ್ಲಿ 171 ಶಾಲಾ ಕೊಠಡಿ, ತಲಾ ₹50 ಲಕ್ಷ ಅನುದಾನದಲ್ಲಿ 3 ಪಿಯು ಕಾಲೇಜು ಕಟ್ಟಡಗಳು ನಿರ್ಮಾಣವಾಗುತ್ತಿವೆ’ ಎಂದು ವಿಧಾನ ಪರಿಷತ್ ಸದಸ್ಯ, ಕರ್ನಾಟಕ ಸರ್ಕಾರದ ದೆಹಲಿಯ ವಿಶೇಷ ಪ್ರತಿನಿಧಿ 2 ಪ್ರಕಾಶ ಹುಕ್ಕೇರಿ ಹೇಳಿದರು.   ಪಟ್ಟಣದ ಹೊರ ವಲಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಉಪ ನಿರ್ದೇಶಕರ ಕಾರ್ಯಾಲಯ, ಶಾಲಾ ಶಿಕ್ಷಣ ಇಲಾಖೆ, …

Read More »

ಈಜು ರಿಲೆ: ದಾಖಲೆ ಬರೆದ ತಾಯಿ-ಮಗ

ಬೆಳಗಾವಿ: ಇಲ್ಲಿನ ಸ್ವಿಮ್ಮರ್ಸ್ ಕ್ಲಬ್ ಮತ್ತು ಅಕ್ವೇರಿಯಸ್ ಸ್ವಿಮ್ ಕ್ಲಬ್‌ನ ಈಜುಪಟುಗಳಾದ ಜ್ಯೋತಿ ಕೋರಿ (ಹೊಸಟ್ಟಿ) ಹಾಗೂ ಅವರ ಪುತ್ರ ವಿಹಾನ್‌ ಜತೆಯಾಗಿ, ಕೆಎಲ್‌ಇ ಸಂಸ್ಥೆಯ ಸುವರ್ಣ ಜೆಎನ್‌ಎಂಸಿ ಈಜುಕೊಳದಲ್ಲಿ ಗುರುವಾರ ನಡೆದ ‘ನಾನ್‌ಸ್ಟಾಪ್‌ ಸ್ವಿಮ್ಮಿಂಗ್‌ ರಿಲೆ’ಯಲ್ಲಿ 12 ಗಂಟೆ, 22 ನಿಮಿಷ ಈಜಿ ಇಂಡಿಯಾ ಅಂಡ್‌ ಏಷ್ಯಾ ಬುಕ್‌ ಆಫ್‌ ರೆಕಾರ್ಡ್ಸ್‌ ಮತ್ತು ಏಷ್ಯಾ ಬುಕ್‌ ಆಫ್‌ ರೆಕಾರ್ಡ್ಸ್‌ ಸೇರಿದರು.   44 ವರ್ಷ ವಯಸ್ಸಿನ ಜ್ಯೋತಿ ಮತ್ತು …

Read More »

ಶಿವಾಪುರ ಅಡವಿಸಿದ್ದೇಶ್ವರ ಜಾತ್ರೆ ಇಂದಿನಿಂದ

ಮೂಡಲಗಿ: ತಾಲ್ಲೂಕಿನ ಶಿವಾಪುರ (ಹ) ಗ್ರಾಮದ ಅಂಬಲಿ ಒಡೆಯ ಅಡವಿಸಿದ್ಧೇಶ್ವರ ಜಾತ್ರೆ ಸೆ. 6ರಿಂದ 9ರವರೆಗೆ ಪೀಠಾಧಿಪತಿ ಅಡವಿಸಿದ್ಧರಾಮ ಸ್ವಾಮೀಜಿ ನೇತೃತ್ವದಲ್ಲಿ ನಡೆಯಲಿದೆ. ಸೆ.6ರಂದು ಬೆಳಿಗ್ಗೆ ಜಾತ್ರೆಯು ಷಟಸ್ಥಲ್‌ ಧ್ವಜಾರೋಹಣದೊಂದಿಗೆ ಆರಂಭವಾಗುವುದು. ನಿಡಗುಂದಿಕೊಪ್ಪದ ಅಭಿನವ ಚನ್ನಬಸವ ಸ್ವಾಮೀಜಿ ಸಾನ್ನಿಧ್ಯ ವಹಿಸುವರು.   ಮುಖ್ಯ ಅತಿಥಿಗಳಾಗಿ ಗೋಕಾಕದ ಅಶೋಕ ಪೂಜೇರಿ, ಭೀಮಪ್ಪ ಗಡಾದ, ಸರ್ವೋತ್ತಮ ಜಾರಕಿಹೊಳಿ ಭಾಗವಹಿಸುವರು. ಬೆಳಿಗ್ಗೆ 10ಕ್ಕೆ ಆರೋಗ್ಯ ಉಚಿತ ತಪಾಸಣೆ ಇರುವುದು. ಸಂಜೆ 4ಕ್ಕೆ ತಾಯಂದಿರಿಂದ ಬಸವ …

Read More »

ಜಿ.ಪಂ., ತಾ.ಪಂ. ಮೀಸಲು: ಸಮಯ ಕೇಳಿದ ರಾಜ್ಯ ಸರಕಾರ

ಬೆಂಗಳೂರು: ರಾಜ್ಯದ ತಾ.ಪಂ. ಹಾಗೂ ಜಿ.ಪಂ. ಕ್ಷೇತ್ರಗಳಿಗೆ ಮೀಸಲಾತಿ ನಿಗದಿಪಡಿಸಲು ರಾಜ್ಯ ಸರ್ಕಾರ ಮತ್ತೆ 3 ವಾರ ಕಾಲಾವಕಾಶ ಕೇಳಿದೆ. ನ್ಯಾಯಾಲಯಕ್ಕೆ ನೀಡಿದ ಭರವಸೆಯಂತೆ ನಿಗದಿತ ಅವಧಿಯಲ್ಲಿ ಜಿ.ಪಂ., ತಾ.ಪಂ. ಕ್ಷೇತ್ರ ಪುನರ್‌ವಿಂಗಡಣೆ ಹಾಗೂ ಮೀಸಲಾತಿ ಪ್ರಕಟಿಸಲು ವಿಫ‌ಲವಾಗಿರುವ ರಾಜ್ಯ ಸರ್ಕಾರದ ವಿರುದ್ಧ ರಾಜ್ಯ ಚುನಾವಣಾ ಆಯೋಗ ಸಲ್ಲಿಸಿರುವ ನ್ಯಾಯಾಂಗ ನಿಂದನೆ ಅರ್ಜಿ ಜತೆಗೆ, ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ ಮೀಸಲಾತಿ ಪ್ರಕಟಿಸಲು ಏಕಸದಸ್ಯ ನ್ಯಾಯಪೀಠ ಆದೇಶ ಪಾಲಿಸುವಲ್ಲಿ ಸರ್ಕಾರ …

Read More »

ಸಚಿವರಿಗೆ ಸಿಟ್ಟಿನಿಂದಲೇ ಕ್ಲಾಸ್ ತೆಗೆದುಕೊಂಡರು.ಸಿಎಂ

ಬೆಂಗಳೂರು:- ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಸಚಿವರ ವಿರುದ್ಧವೇ ಸಿದ್ದರಾಮಯ್ಯ ಸಿಟ್ಟಾಗಿದ್ದಾರೆ. ಕೆಲವು ಮಂದಿ ಸಚಿವರು ಅಧಿಕಾರಿಗಳನ್ನು ‘ಸರ್, ಸರ್’ ಎಂದು ಸಂಬೋಧಿಸಿ ಮಾತನಾಡುತ್ತಿದ್ದರು. ಇದನ್ನು ಕಂಡ ಸಿಎಂ ಸಿದ್ದರಾಮಯ್ಯ ಸಿಟ್ಟಾದರು. ಅಷ್ಟೇ ಅಲ್ಲ, ಕೆಲವು ಸಚಿವರಿಗೆ ಸಿಟ್ಟಿನಿಂದಲೇ ಕ್ಲಾಸ್ ತೆಗೆದುಕೊಂಡರು. ಯಾವೊಬ್ಬ ಸಚಿವರೂ ಅಧಿಕಾರಿಗಳನ್ನು ‘ಸರ್’ ಎಂದು ಕರೆಯಕೂಡದು ಎಂದು ಅಧಿಕಾರಿಗಳೆದುರಿಗೇ ನೇರವಾಗಿ ಸಿಎಂ ಹೇಳಿದರು. ಸಾಂವಿಧಾನಿಕವಾಗಿ ನೀವು (ಸಚಿವರು) ಇಲಾಖೆಯ ನಾಯಕರು. ಅಧಿಕಾರಿ ವರ್ಗ ನಿಮ್ಮ ಕೈಯಡಿ …

Read More »