Breaking News

ಸದ್ಯಕ್ಕೆ ನಮಲ್ಲಿ ಯಾವುದೇ ಗೊಂದಲ, ಭಿನ್ನಾಭಿಪ್ರಾಯಗಳಿಲ್ಲ : ಯತ್ನಾಳ್‌

ಬೆಂಗಳೂರು,ಸೆ.13-ಪಕ್ಷದಲ್ಲಿ ಉಂಟಾಗಿದ್ದ ಸಣ್ಣಪುಟ್ಟ ಸಮಸ್ಯೆಗಳನ್ನು ಸಂಘ ಪರಿವಾರದ ನಾಯಕರು ಪರಿಹರಿಸಿದ್ದಾರೆ. ಸದ್ಯಕ್ಕೆ ನಮಲ್ಲಿ ಯಾವುದೇ ಗೊಂದಲ, ಭಿನ್ನಾಭಿಪ್ರಾಯಗಳಿಲ್ಲ ಎಂದು ಮಾಜಿ ಸಚಿವ ಹಾಗೂ ಬಿಜೆಪಿಯ ಭಿನ್ನಮತೀಯ ನಾಯಕ ಬಸನಗೌಡ ಪಾಟೀಲ್‌ ಯತ್ನಾಳ್‌ ಸ್ಪಷ್ಟಪಡಿಸಿದ್ದಾರೆ.   ರಾಜಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿನ್ನೆ ಸಭೆ ಬಳಿಕ ಹೈಕಮಾಂಡ್‌ ನಿರ್ಧಾರಕ್ಕೆ ನಾವು ಬದ್ದರಾಗಿದ್ದೇವೆ ಎಂದು ಪರಿವಾರದ ನಾಯಕರಿಗೆ ನಮ ತೀರ್ಮಾನವನ್ನು ತಿಳಿಸಿದ್ದೇವೆ. ನಮಲ್ಲಿ ಗೊಂದಲ ಮತ್ತು ಭಿನ್ನಾಭಿಪ್ರಾಯಗಳು ಇಲ್ಲವೇ ಇಲ್ಲ. ನಾಯಕತ್ವ ಪ್ರಶ್ನೆಯೂ …

Read More »

ಕೇಜ್ರಿವಾಲ್ ಬಿಡುಗಡೆ: ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮಿಸಿದ AAP ಕಾರ್ಯಕರ್ತರು

ನವದೆಹಲಿ: ಭ್ರಷ್ಟಾಚಾರ ಪ್ರಕರಣದಲ್ಲಿ ಬಂಧಿತರಾಗಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರಿಗೆ ಜಾಮೀನು ಸಿಗುತ್ತಿದ್ದಂತೆ ಎಎಪಿ ಕಚೇರಿ ಎದುರು ಕಾರ್ಯಕರ್ತರ ಸಂಭ್ರಮಾಚರಣೆ ಮುಗಿಲು ಮುಟ್ಟಿತ್ತು. ಪಕ್ಷದ ಪ್ರಧಾನ ಕಚೇರಿ ಎದುರು ಜಮಾಯಿಸಿದ ಎಎಪಿ ಕಾರ್ಯಕರ್ತರು ಸಿಹಿ ಹಂಚಿ, ಪಟಾಕಿ ಸಿಡಿಸಿ, ನರ್ತಿಸಿ ಸಂಭ್ರಮಿಸಿದ್ದಾರೆ. ಮುಖ್ಯಮಂತ್ರಿಗಳ ನಿವಾಸದ ಎದುರು ಕೇಜ್ರಿವಾಲ್‌ ಪತ್ನಿ ಸುನೀತಾ ಕೇಜ್ರಿವಾಲ್‌ ಅವರು ಪಕ್ಷದ ಕಾರ್ಯಕರ್ತರೊಂದಿಗೆ ಸೇರಿ ಸಿಹಿ ಹಂಚಿದ್ದಾರೆ. ಜತೆಗೆ ಕಾರ್ಯಕರ್ತರು ಕೂಗುತ್ತಿದ್ದ ‘ಬಂದರು, ಬಂದರು ಕೇಜ್ರಿವಾಲ್ ಬಂದರು. …

Read More »

ಹಿರಿಯ ಐಪಿಎಸ್‌‍ ಅಧಿಕಾರಿಗಳಾದ ಶರತ್‌ಚಂದ್ರ, ಹೇಮಂತ್‌ ನಿಂಬಾಳ್ಕರ್‌ ವರ್ಗಾವಣೆ

ಬೆಂಗಳೂರು: ಹಿರಿಯ ಐಪಿಎಸ್‌‍ ಅಧಿಕಾರಿಗಳಾದ ಕೆ.ವಿ.ಶರತ್‌ಚಂದ್ರ ಹಾಗೂ ಹೇಮಂತ್‌ ಎಂ.ನಿಂಬಾಳ್ಕರ್‌ ಅವರನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಶುಕ್ರವಾರ ಆದೇಶ ಹೊರಡಿಸಿದೆ. ಗುಪ್ತಚರ ವಿಭಾಗದ ಎಡಿಜಿಪಿಯಾಗಿದ್ದ ಕೆ.ವಿ.ಶರತ್‌ಚಂದ್ರ ಅವರನ್ನು ಪೊಲೀಸ್‌‍ ನೇಮಕಾತಿ ವಿಭಾಗದ ಎಡಿಜಿಪಿಯಾಗಿ ವರ್ಗಾವಣೆ ಮಾಡಲಾಗಿದೆ ಮತ್ತು ಹೆಚ್ಚುವರಿಯಾಗಿ ಸಂಚಾರ ಹಾಗೂ ರಸ್ತೆ ಸುರಕ್ಷತಾ ಮುಖ್ಯಸ್ಥರಾಗಿಯೂ ಜವಾಬ್ದಾರಿ ನೀಡಲಾಗಿದೆ.   ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತರಾಗಿದ್ದ ಹೇಮಂತ್‌ ಎಂ.ನಿಂಬಾಳ್ಕರ್‌ ಅವರನ್ನು ರಾಜ್ಯ ಪೊಲೀಸ್‌‍ ಗುಪ್ತಚರ ವಿಭಾಗದ …

Read More »

SIP: 10,000 ರೂ. ಮಾಸಿಕ ಎಸ್‌ಐಪಿಯನ್ನು 10 ಕೋಟಿಯಾಗಿಸಲು ಎಷ್ಟು ಸಮಯ ಬೇಕು?

ನವದೆಹಲಿ, ಸೆಪ್ಟೆಂಬರ್‌ 13: ಮ್ಯೂಚುವಲ್ ಫಂಡ್‌ನಲ್ಲಿ ಹೂಡಿಕೆ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗುತ್ತಿದೆ. ಜನರ ಆದಾಯ ಹಾಗೂ ಉಳಿತಾಯ ಪ್ರವೃತ್ತಿಗಳು ಹೆಚ್ಚಾಗುತ್ತಿದ್ದು, ಎಲ್ಲರೂ ಹೂಡಿಕೆಯತ್ತ ಗಮನಹರಿಸುತ್ತಿದ್ದಾರೆ. ಅದ್ಯಾಗೂ ಇಲ್ಲಿ ವ್ಯವಸ್ಥಿತ ಹೂಡಿಕೆ ಯೋಜನೆ (ಎಸ್‌ಐಪಿ) ಪ್ರಮುಖ ಪಾತ್ರ ವಹಿಸುತ್ತದೆ.   ಒಬ್ಬರು ಉದ್ಯೋಗವನ್ನು ಪ್ರಾರಂಭಿಸಿದಾಗ ಅಥವಾ ವ್ಯಾಪಾರ ಅಥವಾ ಯಾವುದೇ ಇತರ ಆದಾಯದ ಮೂಲದಿಂದ ತಮ್ಮ ಗಳಿಕೆಯನ್ನು ಪ್ರಾರಂಭಿಸಿದಾಗ, ಅವರು ಆ ಹಂತದಲ್ಲಿ ಹಣವನ್ನು ಉಳಿಸುವ ಬಗ್ಗೆ ಕನಸು ಕಾಣುತ್ತಾರೆ. ಅವರು, …

Read More »

ನಟ ದರ್ಶನ್ & ಗ್ಯಾಂಗ್’ ಗೆ ಮತ್ತೆ ಜೈಲೇ ಗತಿ : ಸೆ. 17 ರವರೆಗೆ ನ್ಯಾಯಾಂಗ ಬಂಧನ ವಿಸ್ತರಣೆ.!

ಬೆಂಗಳೂರು : ನಟ ದರ್ಶನ್ & ಗ್ಯಾಂಗ್ ಗೆ ಜೈಲೇ ಗತಿ ಆಗಿದ್ದು, ಸೆ.17 ರವರೆಗೆ ನ್ಯಾಯಾಂಗ ಬಂಧನ ವಿಸ್ತರಣೆ ಮಾಡಿ ಬೆಂಗಳೂರಿನ 24 ನೇ ಎಸಿಎಂಎಂ ಕೋರ್ಟ್ ಆದೇಶ ಹೊರಡಿಸಿದೆ. ಆರೋಪಿಗಳ ನ್ಯಾಯಾಂಗ ಬಂಧನ ಅವಧಿ ಅಂತ್ಯವಾದ ಹಿನ್ನೆಲೆ ಎಲ್ಲಾ 17 ಆರೋಪಿಗಳನ್ನು ಅವರು ಇರುವ ಜೈಲುಗಳಿಂದಲೇ ವಿಡಿಯೋ ಕಾನ್ಫರೆನ್ಸ್ ಮೂಲಕ ಬೆಂಗಳೂರಿನ 24 ನೇ ಎಸಿಎಂಎಂ ಕೋರ್ಟ್ ಗೆ ಹಾಜರುಪಡಿಸಿದ್ದರು. ವಿಚಾರಣೆ ನಡೆಸಿದ ಕೋರ್ಟ್ ಆದೇಶ ಹೊರಡಿಸಿದೆ. …

Read More »

ಬೆಳಗಾವಿ ಪಾಲಿಕೆ ಅಧಿಕಾರಿಗಳಿಗೆ ಹೈಕೋರ್ಟ್ ‘ಪಾಠ’

ಬೆಳಗಾವಿ: ₹20 ಕೋಟಿ ತಲೆದಂಡದಿಂದ ತಪ್ಪಿಸಿಕೊಳ್ಳಲು, ಕಾಮಗಾರಿಗೆ ಬಳಸಿಕೊಂಡ ಭೂಮಿಯನ್ನು ಮರಳಿ ನೀಡಲು ಮಹಾನಗರ ಪಾಲಿಕೆ ಮುಂದಾಗಿದೆ. ಇದಕ್ಕೆ ಭೂ ಮಾಲೀಕರೂ ಒಪ್ಪಿಕೊಂಡಿದ್ದಾರೆ. ಇದರ ಮೂಲಕ ಪಾಲಿಕೆ ಅಧಿಕಾರಿಗಳು, ಜನಪ್ರತಿನಿಧಿಗಳೂ ಕೂಡ ಹೊಸ ‘ಪಾಠ’ ಕಲಿತಂತಾಗಿದೆ.   ಹೈಕೋರ್ಟ್‌ನ ಧಾರವಾಡ ಪೀಠದಲ್ಲಿ ಈ ಕುರಿತು ಬುಧವಾರ ನಡೆದ ವಿಚಾರಣೆ ವೇಳೆ ಎರಡೂ ಕಡೆಯ ಕಕ್ಷಿಗಾರರು ಒಪ್ಪಿಗೆ ಸೂಚಿಸಿದರು. ಈ ವ್ಯಾಜ್ಯ ಗುರುವಾರ (ಸೆ.12) ನಿಗದಿಯಾಗಿತ್ತು. ಆದರೆ, ಒಂದು ದಿನ ಮುಂಚಿತವಾಗಿಯೇ …

Read More »

ಕಿತ್ತೂರು ಉತ್ಸವ’ ಬೆಳಗಾವಿಯಲ್ಲಿ ಒಂದು ದಿನ ಕಾರ್ಯಕ್ರಮ

ಚನ್ನಮ್ಮನ ಕಿತ್ತೂರು: ‘ಅ. 23 ರಿಂದ 25 ರವರೆಗೆ ಆಚರಿಸುವ ‘ರಾಣಿ ಚನ್ನಮ್ಮನ ಕಿತ್ತೂರು ಉತ್ಸವ’ದ ಅಂಗವಾಗಿ ಬೆಳಗಾವಿ ನಗರದವರ ಬೇಡಿಕೆಯಂತೆ ಒಂದು ದಿನ ಅಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗುವುದು’ ಎಂದು ಶಾಸಕ ಬಾಬಾಸಾಹೇಬ ಪಾಟೀಲ ಮಾಹಿತಿ ನೀಡಿದರು. ಪತ್ರಕರ್ತರೊಂದಿಗೆ ಗುರುವಾರ ಮಾತನಾಡಿ, ‘ಕಿತ್ತೂರಲ್ಲಿಯೂ ಮೂರು ದಿನ ಅದ್ಧೂರಿಯಾಗಿ ಸಾಂಸ್ಕೃತಿಕ ಕಾರ್ಯಕ್ರಮ ಸೇರಿ ವಿವಿಧ ಕ್ರೀಡಾಕೂಟಗಳು ನಡೆಯಲಿವೆ’ ಎಂದರು.   ‘ಬಾಲಿವುಡ್ ಕಲಾವಿದರನ್ನು ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಆಮಂತ್ರಿಸುವ ಚಿಂತನೆ ನಡೆದಿದೆ. …

Read More »

ಮನೆಯಲ್ಲಿ ವನ್ಯಜೀವಿ ಮಾಂಸ, ಜಿಂಕೆ ಕೊಂಬು ಪತ್ತೆ: ಇಬ್ಬರ ಬಂಧನ

ಖಾನಾಪುರ: ತಾಲ್ಲೂಕಿನ ಗೋಟಗಾಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಜಾಂಬೇಗಾಳಿ ಗ್ರಾಮದ ಮನೆಯೊಂದರಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ವನ್ಯಜೀವಿ ಮಾಂಸ ಮತ್ತು ಜಿಂಕೆ ಕೊಂಬುಗಳನ್ನು ಅರಣ್ಯ ಅಧಿಕಾರಿಗಳು ಗುರುವಾರ ಪತ್ತೆಹಚ್ಚಿ, ಇಬ್ಬರನ್ನು ಬಂಧಿಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅಧಿಕಾರಿಗಳು ಜಾಂಬೇಗಾಳಿ ಗ್ರಾಮದ ಮಹ್ಮದಲಿ ಹಲಸಿಕರ, ಮೌಲಾಲಿ ಹಲಸಿಕರ ಎಂಬುವವರನ್ನು ಬಂಧಿಸಿದ್ದಾರೆ.   ಬಂಧಿತರಿಂದ ಕಾಡುಕೋಣದ ಮಾಂಸ ಮತ್ತು ಜಿಂಕೆಯ ಕೊಂಬುಗಳನ್ನು ವಶಕ್ಕೆ ಪಡೆಯಲಾಗಿದೆ. ಬಂಧಿತರನ್ನು ಮತ್ತು ದಾಳಿ ಸಂದರ್ಭದಲ್ಲಿ ದೊರೆತ …

Read More »

ವಾರದಲ್ಲಿ ಮೂರೇ ದಿನ ವಂದೇ ಭಾರತ ರೈಲು: ಪುಣೆ -ಹುಬ್ಬಳ್ಳಿ ನಡುವೆ ಸಂಚಾರ

ಬೆಳಗಾವಿ: ಪುಣೆ-ಹುಬ್ಬಳ್ಳಿ ಮಧ್ಯೆ ಸೆಪ್ಟೆಂಬರ್ 16ರಿಂದ ಸಂಚರಿಸಲಿರುವ ‘ವಂದೇ ಭಾರತ್’ ಎಕ್ಸ್‌ಪ್ರೆಸ್‌ ರೈಲು ಸೇವೆ ವಾರದಲ್ಲಿ ಮೂರು ದಿನಕ್ಕೆ ಸೀಮಿತವಾಗಿದೆ. ಹಿಂದಿನ ವೇಳಾಪಟ್ಟಿಯಂತೆ ವಾರದಲ್ಲಿ 6 ದಿನ ಪುಣೆ-ಹುಬ್ಬಳ್ಳಿ ಮಾರ್ಗದಲ್ಲಿ ವಂದೇ ಭಾರತ್‌ ರೈಲು ಸಂಚರಿಸಬೇಕಿತ್ತು. ಈ ಮಧ್ಯೆ, ಕೊಲ್ಹಾಪುರ ಮಾರ್ಗವಾಗಿಯೂ ಇದೇ ರೈಲು ಓಡಿಸಲು ರೈಲ್ವೆ ಇಲಾಖೆ ಮುಂದಾಗಿತ್ತು. ಇದಕ್ಕೆ ಮಹಾರಾಷ್ಟ್ರದ ಜನಪ್ರತಿನಿಧಿಗಳು ಅಲ್ಲದೇ ಬೆಳಗಾವಿ, ಧಾರವಾಡ ಜಿಲ್ಲೆ ಪ್ರಯಾಣಿಕರಿಂದ ಆಕ್ಷೇಪ ವ್ಯಕ್ತವಾಯಿತು. ‘ನೇರ ಕಾರ್ಯಾಚರಣೆ ಆರಂಭಗೊಂಡರೆ ಪುಣೆ-ಹುಬ್ಬಳ್ಳಿ …

Read More »

ಆರ್‌ಟಿಪಿಎಸ್, ವೈಟಿಪಿಎಸ್, ಘಟಕಗಳು ತಾತ್ಕಾಲಿಕ ಬಂದ್

ಶಕ್ತಿನಗರ (ರಾಯಚೂರು ಜಿಲ್ಲೆ): ರಾಜ್ಯದಲ್ಲಿ ಉತ್ತಮವಾಗಿ ಮಳೆಯಾಗಿದ್ದರಿಂದ ಜಲವಿದ್ಯುತ್‌ ಉತ್ಪಾದನೆ ಪ್ರಮಾಣ ಹೆಚ್ಚಿಸಿದ ಪರಿಣಾಮ ರಾಯಚೂರು ಶಾಖೋತ್ಪನ್ನ ವಿದ್ಯುತ್ ಸ್ಥಾವರದ (ಆರ್‌ಟಿಪಿಎಸ್) ಆರು ಘಟಕಗಳಲ್ಲಿ ಹಾಗೂ ಯರಮರಸ್ ಶಾಖೋತ್ಪನ್ನ ವಿದ್ಯುತ್ ಸ್ಥಾವರದ (ವೈಟಿಪಿಎಸ್) ಎರಡು ಘಟಕಗಳಲ್ಲಿ ತಾತ್ಕಲಿಕವಾಗಿ ವಿದ್ಯುತ್‌ ಉತ್ಪಾದನೆ ನಿಲ್ಲಿಸಲಾಗಿದೆ.   ಬಹುತೇಕ ಜಲಾಶಯಗಳು ಭರ್ತಿ ಹಂತಕ್ಕೆ ತಲುಪಿದ್ದರಿಂದ ಜಲವಿದ್ಯುತ್ ಕೇಂದ್ರಗಳು ಕಾರ್ಯಾರಂಭಿಸಿವೆ. ಶಾಖೋತ್ಪನ್ನ ಘಟಕಗಳ ಉತ್ಪಾದನೆ ತಾತ್ಕಲಿಕವಾಗಿ ಬಂದ್ ಮಾಡಲು ಕರ್ನಾಟಕ ವಿದ್ಯುತ್ ನಿಗಮ (ಕೆಪಿಸಿ) ಮುಂದಾಗಿದೆ. …

Read More »