Breaking News

ಮುನಿರತ್ನ ಪ್ರಕರಣದ ಹಿಂದೆ ಸಿ.ಡಿ ಶಿವು ಇದ್ದಾನೆ ?: ಶಾಸಕ ರಮೇಶ ಜಾರಕಿಹೊಳಿ

ಅಥಣಿ: ‘ಮುನಿರತ್ನ ಪ್ರಕರಣದ ಹಿಂದೆ ಸಿ.ಡಿ ಶಿವು ಇದ್ದಾನೆ. ಅವನ ವಿರೋಧಿಗಳೆಲ್ಲ ಜೈಲಿನಲ್ಲಿದ್ದಾರೆ. ಈ ಕೆಲಸ ಬಿಟ್ಟರೆ, ಅವನಿಗೆ ಬೇರೇನೂ ಗೊತ್ತಿಲ್ಲ’ ಎಂದು ಶಾಸಕ ರಮೇಶ ಜಾರಕಿಹೊಳಿ ಅವರು ಪರೋಕ್ಷವಾಗಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಡಿಕೆಶಿ ಕಂಪನಿಯವರು ಮೊದಲು ನನ್ನ ಬಲಿ ಪಡೆದರು. ನಂತರ ದೇವೇಗೌಡರ ಕುಟುಂಬದ ಬಲಿ ಪಡೆದರು. ಈಗ ಮುನಿರತ್ನ ಬಲಿ ಪಡೆದಿದ್ದಾರೆ’ ಎಂದರು. ‘ಸಿ.ಡಿ ಶಿವು …

Read More »

ಶಿಕ್ಷಕರಿಗೆ ‘ರಾಷ್ಟ್ರ ನಿರ್ಮಾಣ ಪ್ರಶಸ್ತಿ’ ಪ್ರದಾನ

ಚಿಕ್ಕೋಡಿ: ‘ಶಿಕ್ಷಕರು ಮಕ್ಕಳಿಗೆ ಗುರಿಯ ಬಗ್ಗೆ ಹೇಳಿಕೊಡಬೇಕು. ಮಕ್ಕಳಲ್ಲಿ ಏಕಾಗ್ರತೆ ಮೂಡಿಸಬೇಕು, ನಗು ನಗುತ್ತ ಪಾಠ ಮಾಡಬೇಕು’ ಎಂದು ರಾಜ್ಯ ಮಟ್ಟದ ಉತ್ತಮ ಪ್ರಶಸ್ತಿ ಪುರಸ್ಕೃತ ಶಿಕ್ಷಕಿ ಪದ್ಮಶ್ರೀ ರೂಗೆ ಸಲಹೆ ನೀಡಿದರು. ಪಟ್ಟಣದ ಆರ್.ಡಿ ಹೈಸ್ಕೂಲ್‌ನ ಧೋಂಡಿರಾಜ್ ಸಭಾ ಭವನದಲ್ಲಿ ರೋಟರಿ ಕ್ಲಬ್ ಸಹಯೋಗದಲ್ಲಿ ಶನಿವಾರ ‘ರಾಷ್ಟ್ರ ನಿರ್ಮಾಣ ಪ್ರಶಸ್ತಿ’ಯನ್ನು ಶಿಕ್ಷಕರಿಗೆ ವಿತರಿಸಿ ಅವರು ಮಾತನಾಡಿದರು. ಶಿಕ್ಷಕ ಉಮೇಶ ತೋಟದ ಮಾತನಾಡಿ, ‘ಶಿಕ್ಷಕರನ್ನು ಮಕ್ಕಳು ಅನುಕರಣೆ ಮಾಡುತ್ತಾರೆ. ಹೀಗಾಗಿ …

Read More »

ಲೋಕ ಅದಾಲತ್‌: 400 ಬಾಕಿ ಪ್ರಕರಣ ಇತ್ಯರ್ಥ

ಸವದತ್ತಿ: ಇಲ್ಲಿನ ನ್ಯಾಯಾಲಯ ಸಂಕೀರ್ಣದಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘದಿಂದ ರಾಷ್ಟ್ರೀಯ ಲೋಕ ಅದಾಲತ್ ನಡೆಯಿತು. ಅದಾಲತ್‌ನಲ್ಲಿ ಬಾಕಿ ಇರುವ 1388 ಪ್ರಕರಣಗಳನ್ನು ಕೈಗೆತ್ತಿಕೊಂಡು 400 ಪ್ರಕರಣಗಳನ್ನು ಸಂಧಾನದ ಮೂಲಕ ಇತ್ಯರ್ಥಪಡಿಸಿ ಸುಮಾರು ₹ 94 ಲಕ್ಷದಷ್ಟು ವಸೂಲಾತಿ ಮಾಡಲಾಯಿತು. 3440 ವ್ಯಾಜ್ಯಪೂರ್ವ ಪ್ರಕರಣಗಳ ಪೈಕಿ 702ನ್ನು ಇತ್ಯರ್ಥಪಡಿಸಿ ಸುಮಾರು ₹ 1.15 ಕೋಟಿ ವಸೂಲಾತಿ ಮಾಡಲಾಗಿದೆ ಎಂದು ನ್ಯಾಯಾಧೀಶ ಶಶಿಧರ ಎಂ. ಗೌಡ ತಿಳಿಸಿದರು. ಈ …

Read More »

3 ವರ್ಷಗಳಲ್ಲಿ ಹೊಸ ಕ್ರೀಡಾಂಗಣ ಸಿದ್ಧ: ಸಚಿವ ಸತೀಶ ಜಾರಕಿಹೊಳಿ

3 ವರ್ಷಗಳಲ್ಲಿ ಹೊಸ ಕ್ರೀಡಾಂಗಣ ಸಿದ್ಧ: ಸಚಿವ ಸತೀಶ ಜಾರಕಿಹೊಳಿ ಬೆಳಗಾವಿ: ‘ಕ್ರೀಡಾಪಟುಗಳಿಗೆ ಅಗತ್ಯವಿರುವ ಎಲ್ಲ ಆಧುನಿಕ ಸೌಲಭ್ಯ ಒಳಗೊಂಡ ಜಿಲ್ಲಾ ಕ್ರೀಡಾಂಗಣದ ಕಾಮಗಾರಿ ಮೂರು ವರ್ಷಗಳಲ್ಲಿ ಪೂರ್ಣಗೊಳ್ಳಲಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು. ಇಲ್ಲಿನ ರಾಮತೀರ್ಥ ನಗರದಲ್ಲಿ ನೂತನ ಜಿಲ್ಲಾ ಕ್ರೀಡಾಂಗಣ ನಿರ್ಮಾಣಕ್ಕೆ ಸೋಮವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ‘ಆವರಣ ಗೋಡೆ ನಿರ್ಮಾಣ, ನೆಲ ಸಮತಟ್ಟುಗೊಳಿಸುವುದು ಸೇರಿದಂತೆ ಮೊದಲ ಹಂತದ ಕಾಮಗಾರಿಗಳು ಒಂದು …

Read More »

ವಿಜಯೇಂದ್ರ ರಾಜ್ಯಾಧ್ಯಕ್ಷ ಸ್ಥಾನ ಎಂದೂ ಒಪ್ಪಲ್ಲ, ಬಿಜೆಪಿಗೆ ಭ್ರಷ್ಟ ಎಂಬ ಲೇಬಲ್‌ ಕೊಟ್ಟಿದ್ದೇ ಬಿವೈ ವಿಜಯೇಂದ್ರ:ರಮೇಶ್ ಜಾರಕಿಹೊಳಿ

ಚಿಕ್ಕೋಡಿ: ಬಿಜೆಪಿ ( BJP) ನಾಯಕರ ಜೊತೆ ಆರ್‌ಎಸ್‌ಎಸ್ (RSS) ನಡೆಸಿದ ಸಂಘಟನಾ ಸಭೆ ವಿಚಾರವಾಗಿ ಶಾಸಕ ರಮೇಶ್ ಜಾರಕಿಹೊಳಿ (Ramesh Jarkiholi) ಪ್ರತಿಕ್ರಿಯೆ ನೀಡಿದ್ದು, ಈ ಸಂದರ್ಭದಲ್ಲಿ ಸ್ವಪಕ್ಷೀಯ ನಾಯಕರ ವಿರುದ್ಧವೇ ಗುಡುಗಿದ್ದಾರೆ. ರಾಜ್ಯಾಧ್ಯಕ್ಷ ವಿಜಯೇಂದ್ರ (BY Vijayendra) ವಿರುದ್ದ ಮತ್ತೊಮ್ಮೆ ಗುಡುಗಿರುವ ರಮೇಶ್ ಜಾರಕಿಹೊಳಿ, ವಿಜಯೇಂದ್ರನನ್ನು ರಾಜ್ಯಾಧ್ಯಕ್ಷ (BJP State President) ಎಂದು ಒಪ್ಪಿಲ್ಲ ಒಪ್ಪುವುದೂ ಇಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.   ವಿಜಯೇಂದ್ರವ ರಾಜ್ಯಾಧ್ಯಕ್ಷ ಸ್ಥಾನ …

Read More »

ಗೋಣಿಚೀಲದ ಪ್ಯಾಂಟ್! ಈ ಪಲಾಝೋ ಬೆಲೆ ಕೇವಲ 60 ಸಾವಿರ ರೂ.

ನವದೆಹಲಿ: ಫ್ಯಾಷನ್ ವೇಗವಾಗಿ ಬದಲಾಗುವ ಒಂದು ವಿಷಯವಾಗಿದೆ. ಪ್ರತಿಯೊಂದು ಕ್ಷೇತ್ರದಲ್ಲೂ ಬದಲಾವಣೆ ಇರುತ್ತದೆ, ಫ್ಯಾಶನ್ ತುಂಬಾ ವೇಗವಾಗಿ ಬದಲಾಗುತ್ತದೆ. ಕೆಲವೊಮ್ಮೆ ಇಂತಹ ಕೆಲವು ಫ್ಯಾಷನ್‌ಗಳು ಜನರನ್ನು ಬೆಚ್ಚಿ ಬೀಳಿಸುತ್ತವೆ. ಇದೀಗ ಅಂತಹ ಒಂದು ಫ್ಯಾಶನ್ ನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇಲ್ಲಿಯವರೆಗೆ ನೀವು ಅನೇಕ ರೀತಿಯ ಬಟ್ಟೆಗಳಿಂದ ಮಾಡಿದ ಪಲಾಝೋ ಪ್ಯಾಂಟ್​​ಗಳನ್ನು ನೋಡಿರಬಹುದು. ನೀವು ವಿವಿಧ ಬಣ್ಣಗಳು ಮತ್ತು ಬೆಲೆಗಳ ಪಲಾಜೋಗಳನ್ನು ನೋಡಿರಬೇಕು ಮತ್ತು ಖರೀದಿಸಿರಬೇಕು. ಆದರೆ ನೀವು …

Read More »

ಮುನಿರತ್ನ ವಿರುದ್ಧ ಇನ್ನೂ ಎರಡು ಆಡಿಯೋ ಇದೆಚಾಲುವರಾಜು ಸ್ಫೋಟಕ ಹೇಳಿಕೆ

ಬೆಂಗಳೂರು: ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ಇನ್ನೂ ಎರಡು ಆಡಿಯೋಗಳಿವೆ. ಅವುಗಳನ್ನು ನಾಳೆ ಬಿಡುಗಡೆ ಮಾಡುತ್ತೇನೆ ಎಂದು ಗುತ್ತಿಗೆದಾರ ಚಾಲುವರಾಜು ಸ್ಫೋಟಕ ಹೇಳಿಕೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ, ಮಾತನಾಡಿದ ಚಲುವರಾಜು, ಮುನಿರತ್ನ ಅವರ ಇನ್ನೂ ಎರಡು ಆಡಿಯೋ ನಾಳೆ ಬಿಡುಗಡೆ ಮಾಡುತ್ತೇನೆ. ಹನುಮಂತರಾಯಪ್ಪ ಜೊತೆ ಮಾತನಾಡಿರುವ ಆಡಿಯೋ ಹಾಗೂ 30% ಕಮಿಷನ್ ವಿಚಾರದ ಆಡಿಯೋಗಳನ್ನು ನಾಳೆ ಬಿಡುಗಡೆ ಮಾಡುತ್ತೇನೆ ಎಂದಿದ್ದಾರೆ. ಶಾಸಕ ಮುನಿರತ್ನ ಕಳೆದ ಮೂರು ವರ್ಷಗಳಿಂದ ತನಗೆ ಕೊಡಬಾರದ ಹಿಂಸೆ …

Read More »

ಕಪ್ಪಗಿದ್ದಾಳೆ ಎಂದು ನಿಂದಿಸಿದ ಪತಿ, ಮನನೊಂದು ನೇಣಿಗೆ ಶರಣಾದ ನವವಿವಾಹಿತೆ!

ಚಿಕ್ಕಬಳ್ಳಾಪುರ : ಪತ್ನಿ ಕಪ್ಪಗಿದ್ದಾಳೆ ಎಂದು ನಿಂದಿಸಿದ್ದು ಅಲ್ಲದೆ, ತವರು ಮನೆಯಿಂದ ವರದಕ್ಷಿಣೆ ತೆಗೆದುಕೊಂಡು ಬಾ ಎಂದು ಮಾನಸಿಕ ಮತ್ತು ದೈಹಿಕವಾಗಿ ಕಿರುಕುಳ ನೀಡಿದ ಹಿನ್ನೆಲೆಯಲ್ಲಿ ಮನನೊಂದ ಪತ್ನಿ ನೇಣಿಗೆ ಶರಣಾಗಿರುವ ಘಟನೆ ಚಿಕ್ಕಬಳ್ಳಾಪುರದ ಗಾಂಧಿನಗರದಲ್ಲಿ ನಡೆದಿದೆ. ಬಿಂದುಶ್ರೀ (22) ಆತ್ಮಹತ್ಯೆ ಮಾಡಿಕೊಂಡವರು. ಗಾಂಧಿನಗರದ ನಿವಾಸಿ ಟೈಲರ್ ವೃತ್ತಿಯ ಕೆ.ಬಿ.ದೇವರಾಜು ಅವರಿಗೆ ಬಿಂದುಶ್ರೀ ಏಕೈಕ ಪುತ್ರಿ. ಇವರನ್ನು ಆವಲಹಳ್ಳಿ ಸಮೀಪದ ಹಿರಂಡಹಳ್ಳಿ ಗ್ರಾಮದ ಮುನಿರಾಜು ಎಂಬವರ ಮಗ ಎಚ್.ಎಂ.ರಾಘವೇಂದ್ರ ಅವರಿಗೆ …

Read More »

ಮುನಿರತ್ನಂ ನಾಯ್ಡುಗೆ ಜೈಲು ಫಿಕ್ಸ್?

ದಲಿತ ಸಮುದಾಯದ ಬಗ್ಗೆ & ಒಕ್ಕಲಿಗ ಸಮುದಾಯದ ಕುರಿತು ಅಶ್ಲೀಲ ಪದ ಬಳಕೆ ಮಾಡಿ. ಬಿಬಿಎಂಪಿ ಗುತ್ತಿಗೆದಾರ & ಒಕ್ಕಲಿಗ ಸಮುದಾಯದ ವ್ಯಕ್ತಿಯ ಹೆಂಡತಿ & ತಾಯಿನ ಮಂಚಕ್ಕೆ ಕಳುಹಿಸು ಎಂದು ಕೆಟ್ಟದಾಗಿ ಮಾತನಾಡಿರುವ ಆರೋಪ, ಮುನಿರತ್ನಂ ನಾಯ್ಡು ವಿರುದ್ಧ ಕೇಳಿಬಂದಿದೆ. ಹೀಗೆ ಮುನಿರತ್ನಂ ನಾಯ್ಡು ವಿರುದ್ಧ ಇದೀಗ ಜಾತಿ ನಿಂದನೆ ಮತ್ತು ಕೊಲೆ ಬೆದರಿಕೆ ಕೇಸ್ ದಾಖಲು ಮಾಡಲಾಗಿದೆ. ಈ ನಡುವೆ ಪೊಲೀಸರು ದಾಖಲು ಮಾಡಿರುವ ಕೇಸ್ ನೋಡಿದರೆ, …

Read More »

ರಾಗಿಯಲ್ಲಿ ಮೂಡಿದ ಮೋದಿ ಚಿತ್ರ, ದಾಖಲೆ ಬರೆದ 13ರ ಬಾಲಕಿ

ಚೆನ್ನೈ,ಸೆ.16- ಹದಿಮೂರು ವರ್ಷದ ಶಾಲಾ ವಿದ್ಯಾರ್ಥಿಯೊಬ್ಬ 800 ಕೆಜಿ ತೂಕದ ರಾಗಿಯನ್ನು ಬಳಸಿ ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರವನ್ನು 12 ಗಂಟೆಗಳ ಕಾಲ ಬಿಡುವಿಲ್ಲದಂತೆ ಚಿತ್ರಿಸುವ ಮೂಲಕ ವಿಶ್ವದಾಖಲೆ ನಿರ್ಮಿಸಿದ್ದಾನೆ.ಪ್ರೀಸ್ಲಿ ಶೆಕಿನಾ ಅವರು ನಾಳಿನ ಅವರ ಜನದಿನದಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಗೌರವ ಸಲ್ಲಿಸುವ ವಿಶ್ವದ ಅತಿದೊಡ್ಡ ರಾಗಿ ಪೇಂಟಿಂಗ್‌ ಅನ್ನು ಅನಾವರಣಗೊಳಿಸಿದರು. ಪ್ರೀಸ್ಲಿ ಶೆಕಿನಾ ಚೆನ್ನೈನ ಕೋಲ್ಪಾಕ್ಕಂ ಪ್ರದೇಶದಲ್ಲಿ ವಾಸಿಸುತ್ತಿರುವ ಪ್ರತಾಪ್‌ ಸೆಲ್ವಂ ಮತ್ತು ಸಂಕೀರಾಣಿ ಅವರ …

Read More »