Breaking News

ವಿದ್ಯುತ್ ತಂತಿ ಸ್ಪರ್ಶಿಸಿ ತಂದೆ, ಮಗ ಸೇರಿ ಮೂವರು ಮೃತಪಟ್ಟ ಘಟನೆ ರವಿವಾರ ಸಂಭವಿಸಿದೆ.

ಬೆಳಗಾವಿ: ಕರ್ನಾಟಕದ ಗಡಿ ಭಾಗಕ್ಕೆ ಹೊಂದಿಕೊಂಡಿರುವ ಮಹಾರಾಷ್ಟ್ರದ ಮಿರಜ್ ತಾಲೂಕಿನ ಮೈಶಾಳ ಗ್ರಾಮದಲ್ಲಿ ವಿದ್ಯುತ್ ತಂತಿ ಸ್ಪರ್ಶಿಸಿ ತಂದೆ, ಮಗ ಸೇರಿ ಮೂವರು ಮೃತಪಟ್ಟ ಘಟನೆ ರವಿವಾರ ಸಂಭವಿಸಿದೆ. ಮೈಶಾಳ ಗ್ರಾಮದ ಪಾರೀಶನಾಥ ಹೊನಮೋರೆ(40), ಸಾಯಿರಾಜ ಪಾರೀಶನಾಥ ಹೊನಮೋರೆ(13), ಪ್ರದೀಪ ಶ್ರೀಕೃಷ್ಣ ಮೋಠೆ (35) ಮೃತಪಟ್ಟಿದ್ದು, ಹೇಮಂತ ಹೊನಮೋರೆ(14) ಗಂಭೀರ ಗಾಯಗೊಂಡು ಮಿರಜ್ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ರವಿವಾರ ಬೆಳಗ್ಗೆ ಹೊಲದಲ್ಲಿ ಮೇವು ಸಂಗ್ರಹಿಸಿ ಇಡುವಾಗ ವಿದ್ಯುತ್ ತಂತಿ ಮುರಿದು ಬಿದ್ದಿತ್ತು. …

Read More »

ಇಬ್ಬರು ಪುಟ್ಟ ಮಕ್ಕಳೊಂದಿಗೆ ಬಾವಿಗೆ ಹಾರಿ ಮಹಿಳೆ ಆತ್ಮಹತ್ಯೆ

ಬೆಳಗಾವಿ: ಕೌಟುಂಬಿಕ ಕಲಹದಿಂದ ಬೇಸತ್ತ ಮಹಿಳೆ ತನ್ನ ಇಬ್ಬರು ಮಕ್ಕಳೊಂದಿಗೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ರಾಯಬಾಗ ತಾಲೂಕಿನ ಬೊಮ್ಮನಾಳ ಗ್ರಾಮದಲ್ಲಿ ರವಿವಾರ ಬೆಳಗ್ಗೆ(ಸೆ29) ನಡೆದಿದೆ. ಯಲ್ಲವ್ವ ಅರ್ಜುನ ಕರಿಹೋಳ (30) ಎಂಬಾಕೆ ಸಾತ್ವಿಕ್ (5) ಹಾಗೂ ಒಂದು ವರ್ಷದ ಮುತ್ತಪ್ಪ ನೊಂದಿಗೆ ಬಾವಿಗೆ ಹಾರಿ ಪ್ರಾಣ ಕಳೆದುಕೊಂಡಿದ್ದಾರೆ. ಮೃತಪಟ್ಟ ದುರ್ದೈವಿಗಳು.ಸ್ಥಳಕ್ಕೆ ರಾಯಬಾಗ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

Read More »

ಹಿಂದೂ ಎಂದರೆ ಹಿಂದಕ್ಕೆ ಹೋಗುವ ಜನ. ಹಿಂದೂಗಳು ಮುಂದಕ್ಕೆ ಬಾರದ ಜನ ಹಾಗೂ ಬೇರೆಯವರನ್ನು ಮುಂದಕ್ಕೆ ಬಿಡುವುದಿಲ್ಲ ಎಂದ ಕೆ.ಎಸ್‌.ಭಗವಾನ್‌

ಮೈಸೂರು: ಹಿಂದೂ ಎಂದರೆ ಹಿಂದಕ್ಕೆ ಹೋಗುವ ಜನ. ಹಿಂದೂಗಳು ಮುಂದಕ್ಕೆ ಬಾರದ ಜನ ಹಾಗೂ ಬೇರೆಯವರನ್ನು ಮುಂದಕ್ಕೆ ಬಿಡುವುದಿಲ್ಲ ಎಂದು ಹಿರಿಯ ಸಾಹಿತಿ ಪ್ರೊ.ಕೆ.ಎಸ್‌.ಭಗವಾನ್‌(K. S. Bhagawan) ಮತ್ತೆ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ. ಮೈಸೂರಿನ ಟೌನ್‌ಹಾಲ್‌ನಲ್ಲಿ ಭಾನುವಾರ ನಡೆದ ಮಹಿಷಾ ಮಂಡಲೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,ಹಿಂದೂ ಧರ್ಮ ಅಂದರೆ ಅದು ಹಿಂದೂಗಳ ಧರ್ಮ ಅಲ್ಲ. ಗಂಡಸರನ್ನು ಮಾತ್ರ ಬ್ರಾಹ್ಮಣರು ಅಂತಾರೆ ಹೊರತು ಹೆಂಗಸರನ್ನು ಬ್ರಾಹ್ಮಣರು ಎನ್ನುವುದಿಲ್ಲ ಅವರನ್ನೂ ಶೂದ್ರರು ಎನ್ನುತ್ತಾರೆ.ದೇವಸ್ಥಾನ ಕಟ್ಟುವುದು …

Read More »

ಯುವ ದಸರಾ” ಕಾರ್ಯಕ್ರಮದ ಸ್ಥಳ ಪರಿಶೀಲಿಸಿದ ಸಚಿವ ಡಾ.ಹೆಚ್.ಸಿ.ಮಹದೇವಪ್ಪ

ಮೈಸೂರು : ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಹೆಚ್.ಸಿ.ಮಹದೇವಪ್ಪ ಅವರು ನಗರದ ಹೊರವಲಯದ ಉತ್ತನಹಳ್ಳಿ ಸಮೀಪದಲ್ಲಿ ನಡೆಯುವ ಯುವ ದಸರಾ ಕಾರ್ಯಕ್ರಮ ಸ್ಥಳವನ್ನು ಇಂದು ಪರಿಶೀಲಿಸಿದರು. ಕಾರ್ಯಕ್ರಮದ ಆಯೋಜನೆ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿದ ಸಚಿವರು, ನಾಡಹಬ್ಬ ದಸರಾ ಮಹೋತ್ಸವದಲ್ಲಿ ನಡೆಯುವ ಆಕರ್ಷಕ ಕಾರ್ಯಕ್ರಮಗಳಲ್ಲಿ “ಯುವ ದಸರಾ” ಪ್ರಮುಖವಾಗಿದ್ದು, ಮೈಸೂರು ನಗರ ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಗಳಿಂದ ಜನರು ಕಾರ್ಯಕ್ರಮ ವೀಕ್ಷಣೆಗೆ ಆಗಮಿಸುವರು. ಹೀಗಾಗಿ ಅಗತ್ಯ ಸೌಲಭ್ಯವನ್ನು ಕಲ್ಪಿಸುವಂತೆ …

Read More »

ಸ್ಟ್ಯಾಂಡ್ ಅಪ್ ಪೆಡಲಿಂಗ್ ಚಾಂಪಿಯನ್‌ಷಿಪ್: ಪುರುಷರ ರೇಸ್‌; ಆಕಾಶ್ ಪೂಜಾರ್ ಮಿಂಚು

ಮಂಗಳೂರು: ನಗರದ ಆಕಾಶ್‌ ಪೂಜಾರ್ ತಮಿಳುನಾಡಿನ ರಾಮೇಶ್ವರದಲ್ಲಿ ಭಾನುವಾರ ಕೊನೆಗೊಂಡ ರಾಷ್ಟ್ರೀಯ ಸ್ಟ್ಯಾಂಡ್ ಅಪ್ ಪೆಡಲಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಪದಕ ಗೆದ್ದು ಗಮನ ಸೆಳೆದರು. ಭಾರತ ಸರ್ಫಿಂಗ್ ಫೆಡರೇಷನ್ ಸಹಯೋಗದಲ್ಲಿ ತಮಿಳುನಾಡು ಸರ್ಫಿಂಗ್ ಸಂಸ್ಥೆ ಆಯೋಜಿಸಿದ್ದ ಚಾಂಪಿಯನ್‌ಷಿಪ್‌ನ ಪುರುಷರ 12 ಕಿಲೊಮೀಟರ್ ರೇಸ್‌ ವಿಭಾಗದಲ್ಲಿ ಕಂಚಿನ ಪದಕ ಗೆದ್ದ ಅವರು ಈ ವಿಭಾಗದಲ್ಲಿ ಪದಕ ಗೆದ್ದ 16 ವರ್ಷದೊಳಗಿನ ಭಾರತದ ಮೊದಲ ಸರ್ಫರ್ ಎಂದೆನಿಸಿಕೊಂಡರು. ಕರ್ನಾಟಕ ಇಲ್ಲಿ ಒಟ್ಟು 8 ಪಕದಗಳನ್ನು ಗಳಿಸಿ …

Read More »

ಲಿಂಬು, ಅಂಟವಾಳದಿಂದ ಪರಿಸರಸ್ನೇಹಿ ಮಾರ್ಜಕ

ಹುಬ್ಬಳ್ಳಿ: ಧಾರವಾಡದ ಕೃಷಿ ವಿಶ್ವವಿದ್ಯಾಲಯ ಕಳೆದ ವಾರ ಆಯೋಜಿಸಿದ್ದ ಕೃಷಿ ಮೇಳದಲ್ಲಿ ನವೋದ್ಯಮಿಗಳ ಉತ್ಸಾಹವೂ ಜನರನ್ನು ಸೆಳೆದವು. ಮೇಳದ ಫಲಪುಷ್ಪ ಪ್ರದರ್ಶನ ವಿಭಾಗದಲ್ಲಿ ಹತ್ತಾರು ನವೋದ್ಯಮಿಗಳು ತಮ್ಮ ಉದ್ಯಮವನ್ನು ಪರಿಚಯಿಸಿದರು. ಅವುಗಳಲ್ಲಿ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಪೂಜಾ ದೇಶಪಾಂಡೆ ಪರಿಸರಸ್ನೇಹಿ ಮಾರ್ಜಕಗಳನ್ನು (ಡಿಟೆರ್ಜೆಂಟ್‌), ಖಾನಾಪುರದ ಆರ್‌.ಐ.ಪಾಟೀಲರು ಕಬ್ಬಿನ ಹಾಲನ್ನು ವರ್ಷವಿಡೀ ಬಾಳುವಂತೆ ಮಾಡಿರುವುದರ ಜತೆಗೆ ಟೀ, ಕಾಫಿಗೆ ಸಕ್ಕರೆ ಬದಲು ಸಾವಯವ ಬೆಲ್ಲದ ಪುಡಿ ಬಳಸುವಂಥ ಕಬ್ಬಿನ ಉತ್ಪನ್ನ …

Read More »

ಸರ್ಕಾರಿ ಭೂಮಿ ದುರ್ಬಳಕೆ: ಕುರಿಗಾಯಿಗಳ ಆಕ್ರೋಶ

ಲಿಂಗಸುಗೂರು: ತಾಲ್ಲೂಕಿನ ಚಿಕ್ಕ ಉಪ್ಪೇರಿ ಗ್ರಾಮದ ಸರ್ವೆ ನಂಬರ್ 62 ಸೇರಿ ಕಂದಾಯ ಮತ್ತು ಅರಣ್ಯ ಇಲಾಖೆಗಳಿಗೆ ಸೇ ರಿದ ಭೂಮಿಯಲ್ಲಿ ಅತಿಕ್ರಮಣ ಪ್ರವೇಶ ಮಾಡಿ ದುರ್ಬಳಕೆ ಮಾಡಿಕೊಂಡ ಕಾರಣ ಜಾನುವಾರು ಮೇಯಿಸಲು ಭೂಮಿ ಇಲ್ಲದಂಥ ಸ್ಥಿತಿ ನಿರ್ಮಾಣವಾಗಿದೆ ಎಂದು ಕುರಿಗಾಯಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.   ಆರ್.ಬಿ.ಶುಗರ್ಸ್‍ ಕಂಪನಿಯು ಸಕ್ಕರೆ ಕಾರ್ಖಾನೆ ಸ್ಥಾಪನೆ ಹೆಸರಲ್ಲಿ ಖರೀದಿ ಮಾಡಿಕೊಂಡ ಜಮೀನಲ್ಲದೆ ಹೆಚ್ಚುವರಿ ಜಮೀನಿನಲ್ಲಿ ಕಲ್ಲು ಗುಡ್ಡ, ಗಿಡ-ಮರ ಕಿತ್ತು ಸಮತಟ್ಟುಗೊಳಿಸುತ್ತಿದೆ. ತನ್ನ …

Read More »

ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಶೈಕ್ಷಣಿಕ ಕ್ಷೇತ್ರದ ಪ್ರಗತಿಗೆ ದೂರದೃಷ್ಟಿ ಚಿಂತನೆ, ಸಹಾಯ, ಸಹಕಾರದ ಪ್ರತಿಫಲವೇ ಈ ಸಾಧನೆ ಯುವ ನಾಯಕ ಸರ್ವೋತ್ತಮ ಜಾರಕಿಹೊಳಿ

ಗೋಕಾಕ- ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಮೂಡಲಗಿ ವಲಯದಲ್ಲಿ ಶಿಕ್ಷಣಕ್ಕೆ ಪ್ರಥಮ ಆದ್ಯತೆ ನೀಡಿದ್ದರಿಂದಲೇ ಈ ಭಾಗದಲ್ಲಿ ದಾಖಲೆಯ ಮಟ್ಟದಲ್ಲಿ ವಿವಿಧ ವೃತ್ತಿಪರ ಕೋರ್ಸಗಳಿಗೆ ಆಯ್ಕೆಯಾಗುವ ಮೂಲಕ ವಿದ್ಯಾರ್ಥಿಗಳು ಕ್ಷೇತ್ರದ ಕೀರ್ತಿಯನ್ನು ಹೆಚ್ಚಿಸಿದ್ದಾರೆ ಎಂದು ಯುವ ಮುಖಂಡ ಸರ್ವೋತ್ತಮ ಜಾರಕಿಹೊಳಿ ಹೇಳಿದರು. ರವಿವಾರದಂದು ನಗರದ ಎನ್‌ಎಸ್‌ಎಫ್ ಕಚೇರಿಯಲ್ಲಿ ೨೦೨೩-೨೪ ನೇ ಸಾಲಿನ ವ್ಯಾಸಂಗ ಮಾಡಿ ಉನ್ನತ ವೃತ್ತಿಪರ ಕೋರ್ಸಗಳಿಗೆ ಆಯ್ಕೆಗೊಂಡ ೫೫ ಸಾಧಕ ವಿದ್ಯಾರ್ಥಿಗಳನ್ನು ಸತ್ಕರಿಸಿ ಮಾತನಾಡಿದ ಅವರು, ಈ …

Read More »

ಯಾದಗಿರಿ | ಮಾರುಕಟ್ಟೆಗೆ ಲಗ್ಗೆ ಇಟ್ಟ ‘ಸೀತಾಫಲ’

ಯಾದಗಿರಿ: ಜಿಲ್ಲೆಯ ಗುಡ್ಡಗಳಲ್ಲಿ ಯಥೇಚ್ಛವಾಗಿ ಬೆಳೆದ ಸೀತಾಫಲ ಹಣ್ಣುಗಳನ್ನು ವ್ಯಾಪಾರಿಗಳು ಅರಣ್ಯಕ್ಕೆ ತೆರಳಿ ಕಿತ್ತು ತಂದು ನಗರ ಪ್ರದೇಶಗಳಲ್ಲಿ ಮಾರುತ್ತಿದ್ದಾರೆ. ಯಾದಗಿರಿ ತಾಲ್ಲೂಕಿನ ಬಂದಳ್ಳಿ, ಯಡ್ಡಳ್ಳಿ, ಯರಗೋಳ, ಹತ್ತಿಕುಣಿ, ಆಶನಾಳ, ಬೆಳಗೇರಾ, ಅರಕೇರಾ (ಕೆ), ಕಟಗಿ, ಶಹಾಪುರ, ಗುರಮಠಕಲ್ ತಾಲ್ಲೂಕಿನ ಚಿಂತನಹಳ್ಳಿ, ಕಂದಕೂರ, ತಾತಳಗೇರಾ, ಬೋರಾಬಂಡ, ಧರ್ಮಪುರ, ಮಿನಸಾಪುರ ಸೇರಿದಂತೆ ವಿವಿಧ ಗುಡ್ಡಗಾಡು ಪ್ರದೇಶದಲ್ಲಿ ನೈಸರ್ಗಿಕವಾಗಿ ಸೀತಾಫಲ ಬೆಳೆದು ನಿಂತಿದೆ.   ಲಂಬಾಣಿ ಸಮಾಜದ ಮಹಿಳೆಯರು ನಗರದ ಹಳೆ ಬಸ್ …

Read More »

ಜೆರಾಕ್ಸ್‌ ಅಂಗಡಿಗಳಲ್ಲಿ ಪ್ರಶ್ನೆಪತ್ರಿಕೆ ಬಿಕರಿ?

ಕುಷ್ಟಗಿ: ಎಸ್‌ಎಸ್‌ಎಲ್‌ಸಿ ಮಧ್ಯವಾರ್ಷಿಕ ಪರೀಕ್ಷೆಯನ್ನು ಮುಖ್ಯಪರೀಕ್ಷೆ ಮಾದರಿಯಲ್ಲಿಯೇ ಏಕರೂಪದ ಪ್ರಶ್ನೆಪತ್ರಿಕೆಗಳ ಮೂಲಕ ನಡೆಸಿ ವಿದ್ಯಾರ್ಥಿಗಳಲ್ಲಿ ಪರೀಕ್ಷಾ ಭಯ ನಿವಾರಿಸುವ ಮತ್ತು ಪರೀಕ್ಷೆ ಪಾವಿತ್ರ್ಯ ಕುರಿತು ಮಕ್ಕಳು, ಪಾಲಕರಿಗೆ ಜಾಗೃತಿ ಮೂಡಿಸಿ ಗುಣಾತ್ಮಕ ಬದಲಾವಣೆ ತರುವ ನಿಟ್ಟಿನಲ್ಲಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಮಧ್ಯವಾರ್ಷಿಕ ಪರೀಕ್ಷೆ ನಡೆಸುತ್ತಿದೆ. ಆದರೆ ಸೂಕ್ತ ರೀತಿಯಲ್ಲಿ ನಿರ್ವಹಣೆ ಮತ್ತು ಸುರಕ್ಷತೆಯೇ ಇಲ್ಲದೆ ಅವ್ಯವಸ್ಥೆಯಿಂದಾಗಿ ಪ್ರಶ್ನೆಪತ್ರಿಕೆಗಳು ಹಣಕ್ಕೆ ಬಿಕರಿಯಾಗುತ್ತಿರುವ ಆರೋಪಗಳು ಕೇಳಿ ಬಂದಿವೆ. …

Read More »