ಬೆಂಗಳೂರು : ದಸರಾ ಮಹೋತ್ಸವದ ಹಿನ್ನೆಲೆ ಕೆಎಸ್‌ಆರ್‌ಟಿಸಿ 2000ಕ್ಕೂ ಅಧಿಕ ವಿಶೇಷ ಬಸ್‌ಗಳನ್ನು ರಸ್ತೆಗಿಳಿಸಲು ನಿರ್ಧರಿಸಿದೆ. ಅಕ್ಟೋಬರ್ 9ರಿಂದ 12ರ ವರೆಗೆ ಬೆಂಗಳೂರಿನಿಂದ ರಾಜ್ಯದ ವಿವಿಧ ಪ್ರದೇಶಗಳಿಗೆ ಹಾಗೂ ಅ.13 ಮತ್ತು 14ರಂದು ವಿವಿಧ ಪ್ರದೇಶಗಳಿಂದ ಬೆಂಗಳೂರಿಗೆ ಈ ವಿಶೇಷ ಬಸ್‌ಗಳ ಸಂಚಾರ ಇರಲಿದೆ. ಕರ್ನಾಟಕ ಸಾರಿಗೆ (ವೇಗದೂತ), ರಾಜಹಂಸ, ಸ್ಲೀಪರ್, ಐರಾವತ, ಐರಾವತ ಕ್ಲಬ್ ಕ್ಲಾಸ್ (ಮಲ್ಟಿ ಆಕ್ಸಲ್) ಇ.ವಿ ಪವರ್ ಪ್ಲಸ್, ಅಂಬಾರಿ ಕ್ಲಬ್ ಕ್ಲಾಸ್, …
Read More »ಓದಿನ ಹಸಿವು ನೀಗಿಸುವ ‘ಪುಸ್ತಕ ದಾಸೋಹ’
ಹುಬ್ಬಳ್ಳಿ: ನಿಮ್ಮ ಮನೆಯಲ್ಲಿ ಪುಸ್ತಕಗಳಿವೆಯೇ? ಬೇರೆಯವರೂ ಅವುಗಳನ್ನು ಓದಬೇಕೆ? ಹಾಗಿದ್ದರೆ, ಅವುಗಳನ್ನು ಅಲ್ಲಿಯೇ ದೂಳು ಹಿಡಿಸುವ ಅಥವಾ ಬಿಸಾಡುವ ಬದಲು; ಚುಟುಕು ಸಾಹಿತ್ಯ ಪರಿಷತ್ತಿಗೆ ನೀಡಿ. ನೀವು ಓದಿ, ಆಸ್ವಾದಿಸಿದ ಪುಸ್ತಕಗಳನ್ನು ಇತರರೂ ಓದಿ, ಆನಂದಿಸುವರು. ಓದಿನ ಅಭಿರುಚಿ, ಜ್ಞಾನ ಪಸರಿಸಿದ ಖುಷಿ ನಿಮಗೂ ಲಭಿಸುತ್ತದೆ. ಹೌದು, ಮನೆಯಲ್ಲಿ ಹೆಚ್ಚು ಪುಸ್ತಕ ಇಟ್ಟುಕೊಂಡವರಿಗೆ, ಅವುಗಳ ನಿರ್ವಹಣೆ ದೊಡ್ಡ ಸವಾಲು. ಓದಿನ ಆಸಕ್ತಿ ಇದ್ದವರಿಗೆ ಪುಸ್ತಕ ಕೊಳ್ಳುವುದು ಕಷ್ಟಸಾಧ್ಯ. ಇಂತಹವರ ನಡುವೆ …
Read More »ಗುಪ್ತಚರ ಏಜೆನ್ಸಿಗಳು ವಿಫಲವಾಗಿವೆ: ಗೃಹ ಸಚಿವ
ಗುಪ್ತಚರ ಏಜೆನ್ಸಿಗಳು ವಿಫಲವಾಗಿವೆ: ಗೃಹ ಸಚಿವ ಹುಬ್ಬಳ್ಳಿ: ‘ಕೇಂದ್ರ ಸರ್ಕಾರದ ಗುಪ್ತಚರ ಇಲಾಖೆಯ ವೈಫಲ್ಯದಿಂದ ಪಾಕಿಸ್ತಾನದವರು ಸುಲಭವಾಗಿ ಬೆಂಗಳೂರಿಗೆ ಬರುತ್ತಿದ್ದಾರೆ. ರಾಜ್ಯ ಪೊಲೀಸರಿಗೆ ಮಾಹಿತಿ ದೊರೆತ ತಕ್ಷಣ ಕೆಲವರನ್ನು ಬಂಧಿಸಲಾಗಿದೆ’ ಎಂದು ಗೃಹ ಸಚಿವ ಜಿ. ಪರಮೇಶ್ವರ್ ಹೇಳಿದರು. ನಗರದ ವಿಮಾನ ನಿಲ್ದಾಣದಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಕೇಂದ್ರ ಸರ್ಕಾರದ ಬಳಿ ರಾ (ಆರ್‌ಎಡಬ್ಲು), ಕೇಂದ್ರ ಗುಪ್ತಚರ, ಸಿಬಿಐ ಅಂಥ ಏಜೆನ್ಸಿಗಳು ಇದ್ದಾಗಲೂ ರಾಜ್ಯಕ್ಕೆ ನುಸುಳುಕೋರರು ಬಂದು ಪಾಸ್‌ಪೋರ್ಟ್ ಮಾಡಿಸಿಕೊಳ್ಳುತ್ತಿದ್ದಾರೆ …
Read More »ಹಾಲಿನ ಪುಡಿ ಬಿಕರಿಗೆ ಗ್ರಹಣ: ಗೋದಾಮಿನಲ್ಲಿ ಉಳಿದ 3,854 ಕ್ವಿಂಟಲ್ ದಾಸ್ತಾನು
ಧಾರವಾಡ/ ಬೆಳಗಾವಿ: ರಾಜ್ಯದ ವಿವಿಧ ಜಿಲ್ಲೆಯ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟಗಳಿಂದ ಪೂರೈಸಿದ ಹಾಲಿನಿಂದ ತಯಾರಿಸಿದ್ದ 3,854 ಕ್ವಿಂಟಲ್ ಕೆನೆರಹಿತ ಹಾಲಿನ ಪುಡಿ ಮಾರಾಟವಾಗದೆ ಧಾರವಾಡ ಜಿಲ್ಲಾ ಹಾಲು ಒಕ್ಕೂಟದ (ಧಾಮುಲ್) ಗೋದಾಮಿನಲ್ಲಿಯೇ ಉಳಿದಿದೆ. ಒಕ್ಕೂಟಗಳಿಗೆ ಪೂರೈಸುವ ಹಾಲು ಮಾರಾಟ ಮಾಡಿದ ನಂತರವೂ ಉಳಿಯುವ ಹಾಲಿನಿಂದ ಈ ಕೆನೆರಹಿತ ಪುಡಿ ತಯಾರಿಸಲಾಗುತ್ತಿದೆ. ಹಾಲಿನ ಕೊರತೆ ಎದುರಿಸುತ್ತಿದ್ದ ರಾಜಸ್ಥಾನ, ಮಧ್ಯಪ್ರದೇಶ, ದೆಹಲಿ, ಮಹಾರಾಷ್ಟ್ರ, ಕೇರಳ ಮತ್ತಿತರ ರಾಜ್ಯಗಳ ಡೇರಿಗಳು ಟೆಂಡರ್ ಪ್ರಕ್ರಿಯೆ …
Read More »ರಮೇಶ ಕತ್ತಿ ರಾಜೀನಾಮೆ: ರಾಜಕೀಯ ಧ್ರುವೀಕರಣಕ್ಕೆ ಕಾರಣವಾದ ‘ಬಿಡಿಸಿಸಿ’
ಬೆಳಗಾವಿ: ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿಗೆ ರಮೇಶ ಕತ್ತಿ ರಾಜೀನಾಮೆ ನೀಡುವ ಮೂಲಕ, ಜಿಲ್ಲೆಯ ರಾಜಕಾರಣದಲ್ಲಿ ಮತ್ತೊಮ್ಮೆ ಧ್ರುವೀಕರಣ ಆರಂಭವಾಗಿದೆ. ಲೋಕಸಭಾ ಚುನಾವಣೆಯಲ್ಲಿ ಬದ್ಧ ವೈರಿಗಳಾಗಿದ್ದವರು ಈಗ ದೋಸ್ತಿ ಆಗಿದ್ದರೆ; ಆಗ ಗೆಳೆಯರಾಗಿದ್ದವರು ಈಗ ವಿರೋಧಿಗಳು. ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಟಿಕೆಟ್‌ಗೆ ಅಣ್ಣಾಸಾಹೇಬ ಜೊಲ್ಲೆ ಹಾಗೂ ರಮೇಶ ಕತ್ತಿ ಪೈಪೋಟಿ ನಡೆಸಿದ್ದರು. ಇದೇ ಕ್ಷೇತ್ರದಿಂದ ಇಬ್ಬರೂ ಒಂದೊಂದು ಬಾರಿ ಸಂಸದರಾಗಿದ್ದಾರೆ. ಬಿಜೆಪಿ ಅಣ್ಣಾಸಾಹೇಬ ಅವರಿಗೆ ಅವಕಾಶ ನೀಡಿತು. ಮುನಿಸಿಕೊಂಡ …
Read More »ಶಬರಿ ಕೊಳ್ಳ ಪ್ರವಾಸಿ ತಾಣ ಮಾಡಲು ಕ್ರಮ: ಸಂಸದ ಜಗದೀಶ ಶೆಟ್ಟರ್
ರಾಮದುರ್ಗ: ‘ತಾಲ್ಲೂಕಿನ ಸುರೇಬಾನ ಸಮೀಪದ ಶಬರಿ ಕೊಳ್ಳದ ದೇವಸ್ಥಾನವನ್ನು ಪ್ರವಾಸಿ ತಾಣ ಮಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು’ ಎಂದು ಸಂಸದ ಜಗದೀಶ ಶೆಟ್ಟರ್ ಹೇಳಿದರು. ತಾಲ್ಲೂಕಿನ ಶಬರಿ ಕೊಳ್ಳದ ದೇವಸ್ಥಾನಕ್ಕೆ ಶನಿವಾರ ಭೇಟಿ ನೀಡಿ ದೇವಿ ದರ್ಶನದ ನಂತರ ಮಾತನಾಡಿದ ಅವರು, ತಾಲ್ಲೂಕಿನಲ್ಲಿರುವ ಐತಿಹಾಸಿಕ ಶಬರಿಕೊಳ್ಳದಲ್ಲಿ ಅಗತ್ಯ ಮೂಲ ಸೌಲಭ್ಯಗಳನ್ನು ದೊರಕಿಸಿ ಅಭಿವೃದ್ಧಿ ಪಡಿಸುವಂತೆ ಕೇಂದ್ರ ಪ್ರವಾಸೋದ್ಯಮ ಸಚಿವರನ್ನು ಭೇಟಿ ಮಾಡಿ ಚರ್ಚಿಸುವುದಾಗಿ ತಿಳಿಸಿದರು. ರಾಮದುರ್ಗ ಮಂಡಲ ಅಧ್ಯಕ್ಷ ಡಾ. ಕೆ.ವಿ …
Read More »ಉರ್ದು ಪ್ರಾಥಮಿಕ ಶಾಲೆಯನ್ನು ಉನ್ನತೀಕರಿಸಿ ಪ್ರೌಢಶಾಲೆಯನ್ನಾಗಿ ಶೀಘ್ರದಲ್ಲಿಯೇ ಮಾಡಲಾಗುವುದು’ ಎಂದ ಶಾಸಕ ಗಣೇಶ ಹುಕ್ಕೇರಿ
ಚಿಕ್ಕೋಡಿ: ‘ಚಿಕ್ಕೋಡಿ ಸದಲಗಾ ಕ್ಷೇತ್ರ ವ್ಯಾಪ್ತಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದು, ಅಲ್ಪಸಂಖ್ಯಾತರ ಬೇಡಿಕೆಗಳನ್ನು ಆದ್ಯತೆ ಮೇರೆಗೆ ಈಡೇರಿಸಲಾಗುತ್ತಿದೆ. ಹಿರೇಕೋಡಿ ಗ್ರಾಮದ ಸರ್ಕಾರಿ ಹಿರಿಯ ಉರ್ದು ಪ್ರಾಥಮಿಕ ಶಾಲೆಯನ್ನು ಉನ್ನತೀಕರಿಸಿ ಪ್ರೌಢಶಾಲೆಯನ್ನಾಗಿ ಶೀಘ್ರದಲ್ಲಿಯೇ ಮಾಡಲಾಗುವುದು’ ಎಂದು ಶಾಸಕ ಗಣೇಶ ಹುಕ್ಕೇರಿ ಭರವಸೆ ನೀಡಿದರು. ತಾಲ್ಲೂಕಿನ ಹಿರೇಕೋಡಿ ಗ್ರಾಮದಲ್ಲಿ ಶನಿವಾರ ಮುಸ್ಲಿಂ ಸಮುದಾಯದವರಿಗಾಗಿ ₹20 ಲಕ್ಷ ವೆಚ್ಚದ ಶಾದಿ ಮಹಲ್ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ‘ಮುಸ್ಲಿಂ ಸಮುದಾಯದ ಜನರಿಗೆ …
Read More »ರಾಜ್ಯದ ಗರ್ಭಿಣಿ ಮತ್ತು ಬಾಣಂತಿಯರು ಸೈಬರ್ ವಂಚಕರಿಂದ ಎಚ್ಚರದಿಂದ ಇರಬೇಕು’: ಹೆಬ್ಬಾಳಕರ
ಬೆಳಗಾವಿ: ‘ಪೋಷಣ್ ಟ್ರ್ಯಾಕರ್ ಆಯಪ್ ಹ್ಯಾಕ್ ಮಾಡುತ್ತಿರುವ ಮಾಹಿತಿ ಸಿಕ್ಕಿದ್ದು, ರಾಜ್ಯದ ಗರ್ಭಿಣಿಯರು ಮತ್ತು ಬಾಣಂತಿಯರು ಸೈಬರ್ ವಂಚಕರಿಂದ ಎಚ್ಚರದಿಂದ ಇರಬೇಕು’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಹೇಳಿದರು. ಇಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಪೋಷಣ್ ಆಯಪ್‌ನಲ್ಲಿ ಅಂಗನವಾಡಿ ಕೇಂದ್ರಗಳ ಮಕ್ಕಳ ಹಾಜರಾತಿ, ಗರ್ಭಿಣಿಯರು ಮತ್ತು ಬಾಣಂತಿಯರ ಸಂಖ್ಯೆ, ಅವರಿಗೆ ಬಿಡುಗಡೆಯಾದ ಹಣ ಮತ್ತಿತರ ವಿವರ ಹಾಕಿರುತ್ತೇವೆ. ಇದನ್ನೇ ಬಳಸಿಕೊಂಡು ಕೆಲವು ವಂಚಕರು ಲಿಂಕ್ …
Read More »ಅ. 8ಕ್ಕೆ ಚನ್ನಮ್ಮನ ಕಿತ್ತೂರಿಗೆ ಸಚಿವ ಕೃಷ್ಣ ಬೈರೇಗೌಡ ಭೇಟಿ: ಶಾಸಕ ಬಾಬಾಸಾಹೇಬ
ಕಿತ್ತೂರು: ‘ಇಲ್ಲಿಯ ಕೋಟೆ ಆವರಣಕ್ಕೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅ. 8ಕ್ಕೆ ಭೇಟಿ ನೀಡಿ, ಮಹತ್ವಾಕಾಂಕ್ಷೆಯ ಯೋಜನೆ ಆಗಿರುವ ‘ಥೀಮ್ ಪಾರ್ಕ್’ ಸೇರಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ’ ಎಂದು ಶಾಸಕ ಬಾಬಾಸಾಹೇಬ ಪಾಟೀಲ ತಿಳಿಸಿದರು. ಕೋಟೆ ಆವರಣದೊಳಗೆ ನಡೆದಿರುವ ಸ್ವಚ್ಛತೆ ಮತ್ತು ಇತರ ಸಿದ್ಧತಾ ಕಾರ್ಯ ವೀಕ್ಷಣೆಗೆ ಅಧಿಕಾರಿಗಳ ಜತೆ ಶನಿವಾರ ಆಗಮಿಸಿದ್ದ ಅವರು ಪತ್ರಕರ್ತರೊಂದಿಗೆ ಮಾತನಾಡಿದರು. ಅ. 23 ರಿಂದ 25 ರವರೆಗೆ ನಡೆಯಲಿರುವ ‘ಚನ್ನಮ್ಮನ …
Read More »ಬೆಳಗಾವಿ: ಕಳಸಾ-ಬಂಡೂರಿ ಯೋಜನೆಗೆ ವಿರೋಧ
ಬೆಳಗಾವಿ: ‘ಕಳಸಾ-ಬಂಡೂರಿ ನಾಲಾ ಯೋಜನೆ ಅನುಷ್ಠಾನ ಪರಿಸರಕ್ಕೆ ಮಾರಕವಾಗಲಿದೆ. ಇದರ ಬಗ್ಗೆ ಮಹದಾಯಿ ಜಲವಿವಾದ ನ್ಯಾಯಾಧಿಕರಣ ನೀಡಿದ ತೀರ್ಪು ಕೂಡ ಅವೈಜ್ಞಾನಿಕವಾಗಿದೆ’ ಎಂದು ವಿವಿಧ ಪರಿಸರ ಸಂಘಟನೆಗಳ ಕಾರ್ಯಕರ್ತರು ಜಂಟಿ ಹೇಳಿಕೆ ನೀಡಿದರು. ಪರ್ಯಾವರಣಿ, ಪರಿಸರಕ್ಕಾಗಿ ನಾವು, ಪರಿವರ್ತನಾ, ಗ್ರಾಕೂಸ್ ಹಾಗೂ ಜಾಗೃತಿ ಮಹಿಳಾ ಒಕ್ಕೂಟದ ಪದಾಧಿಕಾರಿಗಳು ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಒಕ್ಕೊರಲಿನಿಂದ ಯೋಜನೆಗೆ ವಿರೋಧ ವ್ಯಕ್ತಪಡಿಸಿದರು. ನಿತಿನ್ ಧೋಂಡ ಮಾತನಾಡಿ, ‘ನ್ಯಾಯಾಧಿಕರಣದ ತೀರ್ಪಿನ ಪ್ರಕಾರ, ಕುಡಿಯುವ ನೀರಿನ ಅಗತ್ಯತೆ …
Read More »