Breaking News

ಚಿನ್ನದ ಬೆಲೆ 1 ಲಕ್ಷ ರೂಪಾಯಿ ಸಮೀಪಕ್ಕೆ, ಶುರುವಾಯ್ತು ಹೊಸ ಆತಂಕ!

ಚಿನ್ನದ ಬೆಲೆಯಲ್ಲಿ ಇದೀಗ ಭಾರಿ ಏರಿಕೆ ಕಂಡುಬರುತ್ತಿದೆ. ಅದರಲ್ಲೂ ಇಸ್ರೇಲ್ & ಇರಾನ್ ನಡುವೆ ಇನ್ನೇನು ಯುದ್ಧ ಶುರುವಾಯ್ತು ಅಂತಾ ಹೇಳಿದಾಗ ಚಿನ್ನದ ಬೆಲೆಯಲ್ಲಿ ಭರ್ಜರಿ ಏರಿಕೆ ಕೂಡ ಕಂಡುಬರುತ್ತಿದೆ. ಬಂಗಾರಕ್ಕೆ ವಿಪರೀತ ಡಿಮ್ಯಾಂಡ್ ಬಂದಿರುವ ಹಿನ್ನೆಲೆ ಈ ರೀತಿಯಾಗಿ ಚಿನ್ನದ ಬೆಲೆ ಏರಿಕೆ ಕಾಣುತ್ತಿದೆ. ಇನ್ನೇನು 1 ಲಕ್ಷ ರೂಪಾಯಿ ಸಮೀಪಕ್ಕೆ ಚಿನ್ನ ಬಂದು ಕೂತಿದೆ. ಹಾಗಾದ್ರೆ ಚಿನ್ನದ ಬೆಲೆ ಶೀಘ್ರದಲ್ಲೇ 1 ಲಕ್ಷ ರೂಪಾಯಿ ಆಗುತ್ತಾ? ಇದು …

Read More »

ನ.20 ರೊಳಗೆ ‘HSRP’ ನಂಬರ್ ಪ್ಲೇಟ್ ಅಳವಡಿಸಿಕೊಳ್ಳದಿದ್ದರೆ ದಂಡ ಫಿಕ್ಸ್!

ಬೆಂಗಳೂರು: ವಾಹನಗಳಿಗೆ ಹೆಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಅಳವಡಿಕೆಯನ್ನು ಕಡ್ಡಾಯಗೊಳಿಸಲಾಗಿತ್ತು. ಅಳವಡಿಸದೇ ಇದ್ದರೇ ದಂಡ ಕಟ್ಟೋದಕ್ಕೆ ರೆಡಿಯಾಗಿ ಎನ್ನಲಾಗಿತ್ತು. ಆದರೇ ಈಗ ವಾಹನ ಸವಾರರಿಗೆ ಬಿಗ್ ರಿಲೀಫ್ ಎನ್ನುವಂತೆ ನವೆಂಬರ್.20ರವರೆಗೆ ಹೆಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಅಳವಡಿಕೆಗೆ ಹೈಕೋರ್ಟ್ ಗಡುವು ವಿಸ್ತರಿಸಿದೆ.   ಅತಿ ಸುರಕ್ಷಿತ ನೋಂದಣಿ ಫಲಕ (High Security Registration Plates- HSRP) ಅಳವಡಿಕೆಗೆ ಕಾಲಾವಕಾಶ ನೀಡುವಂತೆ ಹೈಕೋರ್ಟ್ ನಲ್ಲಿ ಸಲ್ಲಿಸಿದ್ದಂತ …

Read More »

ಅದ್ಧೂರಿ ದಸರಾ, ನವರಾತ್ರಿ ಉತ್ಸವ ಯಶಸ್ವಿ : ಮೈಸೂರು ಜಿಲ್ಲಾಡಳಿತಕ್ಕೆ ಸಿಎಂ ಸಿದ್ದರಾಮಯ್ಯ ಅಭಿನಂದನೆ!

ಮೈಸೂರು : ಅದ್ಧೂರಿಯಾಗಿ ಮತ್ತು ಅಷ್ಟೇ ಅಚ್ಚುಕಟ್ಟಾಗಿ ದಸರಾ ಆಯೋಜಿಸಿ, ಇಡೀ ನವರಾತ್ರಿ ಉತ್ಸವವನ್ನು ಯಶಸ್ವಿಯಾಗಿಸಿದ ಮೈಸೂರು ಜಿಲ್ಲಾಡಳಿತಕ್ಕೆ ಸಿಎಂ ಸಿದ್ದರಾಮಯ್ಯ ಅಭಿನಂದನೆ ತಿಳಿಸಿದ್ದಾರೆ. ಈ ಕುರಿತು ಟ್ವಿಟ್ ಮಾಡಿರುವ ಸಿಎಂ ಸಿದ್ದರಾಮಯ್ಯ, ಅಂಬಾರಿ ಏರಿದ ತಾಯಿ ಚಾಮುಂಡೇಶ್ವರಿಗೆ ಅತಿ ಹೆಚ್ಚು ಬಾರಿ ಮುಖ್ಯಮಂತ್ರಿಯಾಗಿ ಪುಷ್ಪಾರ್ಚನೆ ಅರ್ಪಿಸುವ ಭಾಗ್ಯ ನನ್ನ ಪಾಲಿಗೆ ಒದಗಿ ಬಂದಿರುವುದು ಸಂತಸದ ಜೊತೆಗೆ ಧನ್ಯತಾಭಾವವನ್ನು ಮೂಡಿಸಿದೆ. ಕಳೆದ ವರ್ಷ ಭೀಕರ ಬರಗಾಲದ ಕಾರಣದಿಂದ ಸಂಪ್ರದಾಯ ಮತ್ತು …

Read More »

ಪೊದೆಯಲ್ಲಿ ಸಿಕ್ಕ ನವಜಾತ ಹೆಣ್ಣು ಶಿಶುವನ್ನು ದತ್ತು ಪಡೆದ ಇನ್ಸ್‌ಪೆಕ್ಟರ್‌!

ಗಾಜಿಯಾಬಾದ್‌: ಉತ್ತರ ಪ್ರದೇಶದ ಗಾಜಿಯಾಬಾದ್‌ನ ಪೊದೆಯೊಂದರಲ್ಲಿ ಸಿಕ್ಕ ನವಜಾತ ಹೆಣ್ಣು ಶಿಶುವನ್ನು ಇನ್ಸ್‌ಪೆಕ್ಟರ್‌ವೊಬ್ಬರು ರಕ್ಷಿಸಿದ್ದು, ಬಳಿಕ ಅವರೇ ಈಗ ಅದನ್ನು ದತ್ತು ಪಡೆಯಲು ನಿರ್ಧರಿಸಿದ್ದಾರೆ. ಪೊದೆಯಲ್ಲಿ ಶಿಶು ಅಳುತ್ತಿರುವುದನ್ನು ಕಂಡ ಸ್ಥಳೀಯರು ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ಕೂಡಲೇ ದುಢಿಯಾ ಪೀಪಲ್‌ ಪೊಲೀಸ್‌ ಠಾಣೆ ಇನ್ಸ್‌ಪೆಕ್ಟರ್‌ ಪುಷ್ಪೇಂದ್ರ ಸಿಂಗ್‌ ಸ್ಥಳಕ್ಕಾಗಮಿಸಿ ಮಗುವನ್ನು ರಕ್ಷಿಸಿದ್ದಾರೆ. ಮಗುವಿನ ಹೆತ್ತವರು ಪತ್ತೆಯಾಗದ ಕಾರಣ, ಸಿಂಗ್‌ ತಮ್ಮ ಪತ್ನಿ ಬಳಿ ಚರ್ಚಿಸಿ ಅಂತಿಮವಾಗಿ ತಾವೇ ದತ್ತು ಪಡೆಯಲು ಮುಂದಾಗಿದ್ದಾರೆ. …

Read More »

ಅರ್ಚಕರಿಗೆ 5 ಲಕ್ಷ ರೂ. ಜೀವ ವಿಮೆಗೆ ಕ್ರಮ: ರಾಮಲಿಂಗಾ ರೆಡ್ಡಿ?

ಬೆಂಗಳೂರು: ಮುಜರಾಯಿ ಇಲಾಖೆಯಡಿ ಬರುವ ದೇವಸ್ಥಾನದ ಅರ್ಚಕ ಹಾಗೂ ನೌಕರರಿಗೆ 5 ಲಕ್ಷ ರೂ. ಮೌಲ್ಯದ ಜೀವ ವಿಮೆ ನೀಡಬೇಕು ಎನ್ನುವ ಆಶಯವಿದೆ ಎಂದು ಮುಜರಾಯಿ ಮತ್ತು ಸಾರಿಗೆ ಇಲಾಖೆಯ ಸಚಿವ ರಾಮಲಿಂಗಾ ರೆಡ್ಡಿ ಅಭಿಪ್ರಾಯಪಟ್ಟರು. ಚಾಮರಾಜಪೇಟೆಯ ಶ್ರೀ ರಾಮೇಶ್ವರ ಸ್ವಾಮಿ ಕಲ್ಯಾಣ ಮಂಟಪದಲ್ಲಿ ನಡೆದ ಹಿಂದೂ ಧಾರ್ಮಿಕ ಇಲಾಖೆಯ ನೌಕರರ, ಅರ್ಚಕರ ಮಕ್ಕಳಿಗೆ ವಿದ್ಯಾರ್ಥಿ ವೇತನ, ಮೃತ ಅರ್ಚಕರ ಕುಟುಂಬಕ್ಕೆ ಮರಣ ಉಪಾದಾನ ವಿರಣೆ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಉದ್ಘಾಟಿಸಿ …

Read More »

ಇಂದು ಸವದತ್ತಿ ಶ್ರೀ ಕ್ಷೇತ್ರ ಯಲ್ಲಮ್ಮನ ಗುಡ್ಡಕ್ಕೆ ಸಿಎಂ ಸೇರಿ ಸಚಿವರ ದಂಡು

ಬೆಳಗಾವಿ: ಬೆಳಗಾವಿ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿಯಿಂದ ಸವದತ್ತಿಯ ಶ್ರೀ ಕ್ಷೇತ್ರ ಯಲ್ಲಮ್ಮನ ಗುಡ್ಡದಲ್ಲಿ ಕೈಗೊಳ್ಳಲಾದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಲೋಕಾರ್ಪಣೆ ಸಮಾರಂಭ ಅಕ್ಟೋಬರ್ 13 ರಂದು ಬೆಳಗ್ಗೆ 11 ಗಂಟೆಗೆ ನಡೆಯಲಿದೆ.   ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟನೆ ನೆರವೇರಿಸಲಿದ್ದು, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವರಾದ ಸತೀಶ್ ಜಾರಕಿಹೊಳಿ, ಹೆಚ್.ಕೆ. ಪಾಟೀಲ, ರಾಮಲಿಂಗಾರೆಡ್ಡಿ, ಲಕ್ಷ್ಮಿ ಹೆಬ್ಬಾಳ್ಕರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಶಾಸಕ ವಿಶ್ವಾಸ್ ವೈದ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ವಿಶೇಷ …

Read More »

6ರಿಂದ ಬೆಳಗಾವಿ-ಮನಗೂರು ರೈಲು ಸಂಚಾರ : ಈರಣ್ಣ ಕಡಾಡಿ

ಮೂಡಲಗಿ: ‘ಬೆಳಗಾವಿ ಜಿಲ್ಲೆಯ ಜನರ ಬಹುದಿನಗಳ ಬೇಡಿಕೆಯಂತೆ ಬೆಳಗಾವಿ-ಮನಗೂರು ವಿಶೇಷ ಎಕ್ಸ್‌ಪ್ರೆಸ್‌ ರೈಲು ಸಂಚಾರವು ಅಕ್ಟೋಬರ್‌ 16ರಿಂದ ಪ್ರಾರಂಭವಾಗಲಿದೆ ಎಂದು ನೈರುತ್ಯ ರೈಲ್ವೆ ಇಲಾಖೆ ಆದೇಶ ಹೊರಡಿಸಿದೆ’ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ತಿಳಿಸಿದ್ದಾರೆ.   ಹಬ್ಬದಸಂದರ್ಭದಲ್ಲಿ ಪ್ರಯಾಣಿಕರ ದಟ್ಟಣೆ ನಿವಾರಿಸುವ ಉದ್ದೇಶದಿಂದ ವಿಶೇಷ ಎಕ್ಸ್‌ಪ್ರೆಸ್‌ ರೈಲಿನ ಸಂಚಾರಕ್ಕೆ ರೈಲ್ವೆ ಇಲಾಖೆ ಅನುಮೋದನೆ ನೀಡಿದೆ. ಬೆಳಗಾವಿ-ಮನಗೂರು (07335) ಎಕ್ಸ್‌ಪ್ರೆಸ್‌ ಅ.16ರಿಂದ 2025ರ ಮಾರ್ಚ್‌ 30ರವರೆಗೆ ವಾರದಲ್ಲಿ ನಾಲ್ಕು ಬಾರಿ (ಭಾನುವಾರ, …

Read More »

ಬೆಳಗಾವಿ: ನಗರವೂ ಸೇರಿದಂತೆ ಜಿಲ್ಲೆಯಲ್ಲಿ ಈ ಬಾರಿ ಸಂಭ್ರಮದಿಂದ ನಡೆದ ದಸರಾ ಉತ್ಸವ

ಬೆಳಗಾವಿ: ನಗರವೂ ಸೇರಿದಂತೆ ಜಿಲ್ಲೆಯಲ್ಲಿ ಈ ಬಾರಿ ಸಂಭ್ರಮದಿಂದ ನಡೆದ ದಸರಾ ಉತ್ಸವ ಶನಿವಾರ ಸಂಪನ್ನಗೊಂಡಿತು. ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಕಳೆದ ವರ್ಷ ದಸರೆ ಕಳೆಗುಂದಿತ್ತು. ಈ ವರ್ಷ ಉತ್ತಮ ಮಳೆ-ಬೆಳೆ ಹಿನ್ನೆಲೆಯಲ್ಲಿ ಹಬ್ಬದ ಸಂಭ್ರಮ ಇಮ್ಮಡಿಗೊಂಡಿತ್ತು. ಶುಕ್ರವಾರ ಆಯುಧ ಪೂಜೆ ಮತ್ತು ಶನಿವಾರ ವಿಜಯದಶಮಿ ಕಾರ್ಯಕ್ರಮ ನೆರವೇರಿದವು. ಹಬ್ಬದ ಪ್ರಯುಕ್ತ ನಗರದ ವಿವಿಧ ದೇವಸ್ಥಾನಗಳನ್ನು ವಿದ್ಯುದ್ದೀಪಗಳಿಂದ ಅಲಂಕರಿಸಲಾಗಿತ್ತು. ಮಕ್ಕಳು, ಯುವಜನರು, ಮಹಿಳೆಯರು ಸೇರಿ ಎಲ್ಲ ಭಕ್ತರು ಬೆಳಿಗ್ಗೆಯಿಂದಲೇ ದೇಗುಲಗಳತ್ತ ಹೆಜ್ಜೆಹಾಕಿ, …

Read More »

ಅರಮನೆಗೆ ಜನರ ಲಗ್ಗೆ

ಮೈಸೂರು: ವಿಜಯದಶಮಿ ಮೆರವಣಿಗೆ ವೀಕ್ಷಣೆ ಪಾಸ್‌ ಇದ್ದವರನ್ನು ಅರಮನೆ ಆವರಣದೊಳಗೆ ಬಿಡಲು ಸಾಕಷ್ಟು ಹೊತ್ತು ಕಾಯಿಸಿದ್ದಲ್ಲದೆ, ಎಲ್ಲ ಆಸನಗಳು ಭರ್ತಿಯಾಗಿವೆ ಎಂದು ಗೇಟ್‌ನಲ್ಲಿನ ಸಿಬ್ಬಂದಿ ತಿಳಿಸಿದ್ದರಿಂದ ಇಲ್ಲಿನ ವರಾಹ ದ್ವಾರದ ಬಳಿ ಶನಿವಾರ ಜನರು ಹಾಗೂ ಪೊಲೀಸ್ ಸಿಬ್ಬಂದಿ ನಡುವೆ ಮಾತಿನ ಚಕಮಕಿ ನಡೆಯಿತು.   ಪ್ರವೇಶ ಗೊಂದಲದಿಂದ ಆಕ್ರೋಶಗೊಂಡ ಜನರು ವರಾಹ ದ್ವಾರದ ಗೇಟ್‌ ತಳ್ಳಿ ಒಳ ನುಗ್ಗಿದರು. ಅರಮನೆ ಉದ್ಯಾನದ ಗುಲಾಬಿ ತೋಟದಲ್ಲೆಲ್ಲಾ ಅಡ್ಡಾದಿಡ್ಡಿಯಾಗಿ ಓಡಾಡಿದರು. ಭದ್ರತಾ ಸಿಬ್ಬಂದಿಯೂ …

Read More »

ಸಂಭ್ರಮದ ವಿಜಯದಶಮಿ: ರಾವಣನ ಪ್ರತಿಕೃತಿ ದಹನ

ಬೀದರ್: ಶ್ರೀರಾಮಲೀಲಾ ಸೇವಾ ಸಮಿತಿಯಿಂದ ವಿಜಯದಶಮಿ ಅಂಗವಾಗಿ ನಗರದ ಸಾಯಿ ಶಾಲೆಯ ಮೈದಾನದಲ್ಲಿ ಶನಿವಾರ ರಾತ್ರಿ ರಾವಣನ ಪ್ರತಿಕೃತಿ ದಹನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. 40 ಅಡಿ ಎತ್ತರದ ರಾವಣನ ಪ್ರತಿಕೃತಿಗೆ ಬಾಣದಿಂದ ಬೆಂಕಿ ಹೊತ್ತ ಬಿಲ್ಲನ್ನು ಬಿಟ್ಟು ದಹಿಸಲಾಯಿತು. ಎತ್ತರದ ಪ್ರತಿಕೃತಿಯೂ ಪಟಾಕಿಗಳೊಂದಿಗೆ ದಹನಗೊಂಡಿತು. ಜನ ಅದನ್ನು ನೋಡಿ ಸಂಭ್ರಮಿಸಿದರು. ಸೆಲ್ಫಿ, ಛಾಯಾಚಿತ್ರ ತೆಗೆದುಕೊಂಡರು. ವಿವಿಧ ಕಡೆಗಳಿಂದ ಅಪಾರ ಸಂಖ್ಯೆಯ ಜನ ಆಗಮಿಸಿದ್ದರು. ಪ್ರತಿಕೃತಿ ದಹನಕ್ಕೂ ಮುನ್ನ ರಾಮಲೀಲಾ ನಾಟಕ ಪ್ರಸ್ತುತ …

Read More »