ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ 3 ದಿನಗಳಿಂದ ಕಡಿಮೆಯಾಗಿದ್ದ ಕೊರೊನಾ ಸೋಂಕು ಪ್ರಕರಣಗಳ ಸಂಖ್ಯೆಯಲ್ಲಿ ಇವತ್ತು ಏಕಾಏಕಿ ಜಿಗಿತ ಕಂಡು ಬಂದಿದೆ. ಇವತ್ತು 10 ಸೋಂಕಿತರ ಪೈಕಿ, 8 ಮಂದಿ ಪಾದರಾಯನಪುರದವರು. ಇಲ್ಲಿ ಪತ್ತೆಯಾದ ಪ್ರಕರಣಗಳ ಸಂಖ್ಯೆ 35ಕ್ಕೆ ಏರಿಕೆಯಾಗಿದೆ. ತಬ್ಲಿಘಿಯ ಸಂಪರ್ಕ ಹೊಂದಿದ್ದ ಲೆದರ್ ಫ್ಯಾಕ್ಟರಿಯ ಮಾಲೀಕ(ರೋಗಿ ನಂ.199)ನಿಂದ ಏಳು ಮಂದಿಗೆ ಸೋಂಕು ತಗುಲಿದೆ. ಕಾರ್ಮಿಕನೊಬ್ಬನ ಇಡೀ ಕುಟುಂಬವನ್ನು ಕ್ವಾರಂಟೈನ್ ಮಾಡಿದ ಬಳಿಕ ಪರೀಕ್ಷೆಗೆ ಒಳಪಡಿಸಿದಾಗ ಸೋಂಕು ಹರಡಿರುವುದು ಗೊತ್ತಾಗಿದೆ. …
Read More »ಮಾಸ್ಕ್ ಧರಿಸದಿದ್ದರೆ, ಸರಿಯಾಗಿ ವಿಲೇವಾರಿ ಮಾಡದಿದ್ದರೆ 1 ಸಾವಿರ ರೂ. ದಂಡ ಹಾಗೂ ಕೇಸ್
ಬೆಂಗಳೂರು: ಕೊರೊನಾ ಅವಾಂತರದ ಹಿನ್ನೆಲೆ ಮಾಸ್ಕ್ ಧರಿಸುವ ಕುರಿತು, ಎಲ್ಲೆಂದರಲ್ಲಿ ಉಗುಳುವ ಕುರಿತು ಈಗಾಗಲೇ ಹಲವು ರಾಜ್ಯಗಳಲ್ಲಿ ದಂಡ ಹಾಕಲಾಗುತ್ತಿದ್ದು, ಅದೇ ರೀತಿ ತಾಜ್ಯದಲ್ಲೂ ದಂಡ ಹಾಕಲು ಬಿಬಿಎಂಪಿ ನಿರ್ಧರಿಸಿದೆ. ಬಿಬಿಎಂಪಿ ಕಮೀಷನರ್ ಅನಿಲ್ ಕುಮಾರ್ ಮಾಹಿತಿ ನೀಡಿದ್ದು, ಸಿಲಿಕಾನ್ ಸಿಟಿಯಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಬಿಬಿಎಂಪಿ ಈ ನಿರ್ಧಾರ ಕೈಗೊಂಡಿದ್ದು, ಶುಕ್ರವಾರದಿಂದಲೇ ದಂಡ ಹಾಕಲು ಕ್ರಮ ಕೈಗೊಳ್ಳಲಾಗಿದೆ. ಸಾರ್ವಜನಿಕವಾಗಿ ಮಾಸ್ಕ್ ಹಾಕದಿದ್ದರೆ, ಸಾರ್ವಜನಿಕ ಪ್ರದೇಶದಲ್ಲಿ ಉಗುಳಿದರೆ, ಎಲ್ಲೆಂದರಲ್ಲಿ …
Read More »ಕೊರೊನಾ ಮಹಾಮಾರಿ ಬಡವರು, ಕೂಲಿಕಾರ್ಮಿಕರನ್ನು ಕಣ್ಣೀರಿನಲ್ಲಿ ಕೈತೊಳೆಯುವಂತೆ ಮಾಡಿದೆ.
ಮಡಿಕೇರಿ: ಕೊರೊನಾ ಮಹಾಮಾರಿ ಬಡವರು, ಕೂಲಿಕಾರ್ಮಿಕರನ್ನು ಕಣ್ಣೀರಿನಲ್ಲಿ ಕೈತೊಳೆಯುವಂತೆ ಮಾಡಿದ್ದು, ಲಾಕ್‍ಡೌನ್ ಆಗಿರುವುದರಿಂದ ಕೂಲಿ ಕೆಲಸ ಇಲ್ಲದೆ ಗಂಜಿ ಕುಡಿದು ಬದುಕು ದೂಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕಿನ ಹಂಚಿತ್ತಿಟ್ಟು ಗ್ರಾಮದಲ್ಲಿ ಇಂತಹ ಮನಕಲಕುವ ಸ್ಥಿತಿ ಇದ್ದು, ಮಹಿಳೆ ಶಾಂತಮ್ಮ, ಬೆನ್ನು ಮೂಳೆ ಮುರಿದುಕೊಂಡು 13 ವರ್ಷದಿಂದ ಹಾಸಿಗೆ ಹಿಡಿದಿರುವ ಮಗನನ್ನು ಸಾಕುತ್ತಿದ್ದಾರೆ. ಕೂಲಿ ಮಾಡುತ್ತಿದ್ದ ಶಾಂತಮ್ಮ ಅದೇ ಹಣದಿಂದ ತನ್ನ ಮಗ ವಿಠಲನಿಗೆ ಮಂಗಳೂರಿನ ವೆನ್‍ಲಾಕ್ …
Read More »ಕೊರೊನಾದಿಂದ ಮುಕ್ತಗೊಂಡ ಉತ್ತರ ಕನ್ನಡ- ಕೊನೆಯ ಸೋಂಕಿತ ಡಿಸ್ಚಾರ್ಜ್
ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಕೋವಿಡ್-19 ಸೋಂಕಿನಿಂದ ಬಳಲುತ್ತಿದ್ದ ಕೊನೆಯ ಸೋಂಕಿತ ವ್ಯಕ್ತಿ ಕಾರವಾರದ ಪತಂಜಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. 36 ವರ್ಷದ ಭಟ್ಕಳ ಮೂಲದ ಸೋಂಕಿತ ಸಂಖ್ಯೆ 260 ಪತಂಜಲಿ ಆಸ್ಪತ್ರೆಯಲ್ಲಿ ಕಳೆದ ಒಂದು ತಿಂಗಳಿಂದ ಚಿಕಿತ್ಸೆ ಪಡೆಯುತ್ತಿದ್ದ. ಸದ್ಯ ಆತನ ಕೋವಿಡ್‍ನಿಂದ ಗುಣಮುಖರಾಗಿದ್ದು, ಇಂದು ರಾತ್ರಿ ಆತನ ಡಿಸ್ಚಾರ್ಜ್ ನೊಂದಿಗೆ ಜಿಲ್ಲೆ ಈಗ ಕೊರೊನಾ ಪ್ರಕರಣದಿಂದ ಮುಕ್ತವಾಗಿದೆ. ಮಾರ್ಚ್ 17ರಂದು ದುಬೈನಿಂದ ವಾಪಸ್ಸಾಗಿದ್ದ 36 ವರ್ಷದ ವ್ಯಕ್ತಿಯಲ್ಲಿ …
Read More »ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಸೋಂಕು ತಗುಲಿದ್ದ 67 ವರ್ಷದ ವೃದ್ಧೆ ಸಾವನ್ನಪ್ಪಿದ್ದಾರೆ.
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಸೋಂಕು ತಗುಲಿದ್ದ 67 ವರ್ಷದ ವೃದ್ಧೆ ಸಾವನ್ನಪ್ಪಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದದ ಕಸಬಾ ನಿವಾಸಿ ಸಾವನ್ನಪ್ಪಿದ ಮಹಿಳೆ. ಚಿಕಿತ್ಸೆ ಫಲಕಾರಿಯಾಗದೇ ಇಂದು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಜಿಲ್ಲೆಯಲ್ಲಿ ಇದು ಮೂರನೇ ಸಾವು ಆಗಿದ್ದು, ಮಂಗಳೂರಿನ ಜನತೆ ಆತಂಕಕ್ಕೊಳಗಾಗಿದ್ದಾರೆ. ವೃದ್ಧೆಯ ಸಾವನ್ನು ವೆನ್‍ಲಾಕ್ ಆಸ್ಪತ್ರೆ ದೃಢಪಡಿಸಿದೆ. ವೃದ್ಧೆ (ರೋಗಿ ಸಂಖ್ಯೆ-409) ನಾಲ್ಕು ದಿನಗಳಿಂದ ಕೆಮ್ಮು, ಜ್ವರ ಮತ್ತು ಉಸಿರಾಟದ ತೊಂದರೆಯಿಂದ ಬಳಲುತತಿದ್ದರು. ಮೊದಲು ಬಂಟ್ವಾಳ …
Read More »ನಡೆದು ನಡೆದು ಸಾವನ್ನಪ್ಪಿದ್ದ ಮಹಿಳೆ-ಕುಟುಂಬಕ್ಕೆ 3 ಲಕ್ಷ ರೂ. ಪರಿಹಾರ
ರಾಯಚೂರು: ಕೊರೊನಾ ಲಾಕ್‍ಡೌನ್ ಹಿನ್ನೆಲೆ ಬಳ್ಳಾರಿಯಲ್ಲಿ ಸಾವನ್ನಪ್ಪಿದ್ದ ರಾಯಚೂರಿನ ಸಿಂಧನೂರಿನ ಕಟ್ಟಡ ಕಾರ್ಮಿಕ ಮಹಿಳೆ ಗಂಗಮ್ಮ ಕುಟುಂಬಕ್ಕೆ ಕೊನೆಗೂ ಕಾರ್ಮಿಕ ಕಲ್ಯಾಣ ಮಂಡಳಿ ಪರಿಹಾರ ನೀಡಿದೆ. ಗಂಗಮ್ಮನ ಇಬ್ಬರು ಮಕ್ಕಳ ಹೆಸರಲ್ಲಿ ತಲಾ 1 ಲಕ್ಷ 50 ಸಾವಿರದಂತೆ ಮೂರು ಲಕ್ಷ ರೂಪಾಯಿಯ ಎರಡು ಭದ್ರತಾ ಠೇವಣಿಯ ಬಾಂಡ್‍ಗಳನ್ನು ನೀಡಲಾಗಿದೆ. ಎರಡು ವರ್ಷದ ಅವಧಿಯ ಎರಡು ಬಾಂಡ್‍ಗಳನ್ನು ನೀಡುವ ಮೂಲಕ ಮಂಡಳಿ ಮಕ್ಕಳ ಸಹಾಯಕ್ಕೆ ಮುಂದಾಗಿದೆ. ಗಂಗಮ್ಮ ಮಂಡಳಿಯ ನೋಂದಾಯಿತ …
Read More »ಮಂಗಳೂರಿನ ಮಹಿಳೆಗೆ ಕೊರೊನಾ ಸೋಂಕು ತಗುಲಿರೋದು ಇಂದು ದೃಢಪಟ್ಟಿದೆ…..
ಜನಪ್ರತಿನಿಧಿಗಳು ಹಾಗೂ ಅವರ ಕಾರ್ಯದರ್ಶಿಗಳು ಸ್ಪಂದಿಸಿದ ರೀತಿ ನನ್ನನ್ನು ಮಂತ್ರಮುಗ್ದನ್ನಾಗಿಸಿದೆ.
ಬೆಂಗಳೂರು: ನಟ ಅನಿರುದ್ಧ್ ಕಿರುತೆರೆಯ ಧಾರಾವಾಹಿ ಮೂಲಕ ಮನೆ ಮಾತಾಗಿದ್ದು, ಜೊತೆ ಜೊತೆಯಲಿ ಸೀರಿಯಲ್‍ನಿಂದ ಕನ್ನಡಿಗರ ಮನ ಗೆದ್ದಿದ್ದಾರೆ. ಹೀಗಾಗಿ ಅವರಿಗೆ ಫ್ಯಾನ್ ಫಾಲೋವರ್ಸ್ ಹೆಚ್ಚಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಹ ಈ ಧಾರಾವಾಹಿ ಹವಾ ಹೆಚ್ಚಾಗಿದೆ. ನಟ ಅನಿರುದ್ಧ ಹೆಚ್ಚು ಪ್ರಸಿದ್ಧಿ ಪಡೆಯುತ್ತಿದ್ದಾರೆ. ನಟ ಅನಿರುದ್ಧ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಆಕ್ಟಿವ್ ಆಗಿದ್ದು, ತಮ್ಮ ವೃತ್ತಿ ಜೀವನದ ಕುರಿತು ಅಪ್‍ಡೇಟ್ ನೀಡುವುದರ ಜೊತೆಗೆ, ವೈಯಕ್ತಿಕ ವಿಚಾರಗಳನ್ನೂ ಹಂಚಿಕೊಳ್ಳುತ್ತಿರುತ್ತಾರೆ. ಅದೇ ರೀತಿ …
Read More »ಬೆಂಗಳೂರು:ಹಳ್ಳಿಗರ ನೆರವಿಗೆ ನಿಂತ ಶಾನ್ವಿಶ್ರೀವಾಸ್ತವ್………..
ಬೆಂಗಳೂರು: ಶಾನ್ವಿ ಶ್ರೀವಾಸ್ತವ್ ಉತ್ತರ ಪ್ರದೇಶದ ವಾರಾಣಸಿಯವರಾದರೂ ಕನ್ನಡ ಚಿತ್ರರಂಗದಲ್ಲಿ ನೆಲೆ ಕಂಡುಕೊಂಡಿದ್ದಾರೆ. ಈಗಾಗಲೇ ಸ್ಯಾಂಡಲ್‍ವುಡ್‍ನಲ್ಲಿ ಹತ್ತಾರು ಸಿನಿಮಾಗಳನ್ನು ಮಾಡುವ ಮೂಲಕ ಗುರುತಿಸಿಕೊಂಡಿರುವ ಶಾನ್ವಿ, ತಮ್ಮ ನಟನೆ ಮೂಲಕವೇ ಕನ್ನಡಿಗರನ್ನು ಸೆಳೆದಿದ್ದಾರೆ. ಸ್ಯಾಂಡಲ್‍ವುಡ್ ಪ್ರಸಿದ್ಧ ನಟರೊಂದಿಗೆ ಶಾನ್ವಿ ತೆರೆ ಹಂಚಿಕೊಂಡಿದ್ದು, ಇತ್ತೀಚೆಗೆ ಶ್ರೀಮನ್ನಾರಾಯಣ ಚಿತ್ರದಲ್ಲೂ ಮೋಡಿ ಮಾಡಿದ್ದಾರೆ. ಹೀಗೆ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಅವರು, ತಾರಕ್, ಮಫ್ತಿ, ದಿ ವಿಲನ್ ಅವನೇ ಶ್ರೀಮನ್ನಾರಾಯಣ ಸೇರಿದಂತೆ ಹಲವು ಕನ್ನಡ ಸಿನಿಮಾಗಳಲ್ಲಿ …
Read More »ತಬ್ಲಿಘಿ ನಂಟು ಹೊರತಾದ ಒಂದೇ ಒಂದು ಪ್ರಕರಣವೂ ಬೆಳಗಾವಿಯಲ್ಲಿಲ್ಲ……
ಬೆಳಗಾವಿ – ಕೊರೋನಾ ಸೋಂಕು ದಿನದಿಂದ ದಿನಕ್ಕೆ ಬೆಳಗಾವಿ ಜಿಲ್ಲೆಯನ್ನು ಹಿಂಡಿ ಹಿಪ್ಪೆ ಮಾಡುತ್ತಿದೆ. ಇಂದು ಒಂದೇ ದಿನ 14 ಪಾಸಿಟಿವ್ ಪ್ರಕರಣ ಬಂದಿದೆ. ಹಿರೇಬಾಗೇವಾಡಿ ಎನ್ನುವ ಒಂದೇ ಊರಲ್ಲಿ 36 ಪ್ರಕರಣ ದೃಢಪಟ್ಟಿದೆ. ಕುಡಚಿ ಮತ್ತು ಸಂಕೇಶ್ವರ ಪಟ್ಟಣವೂ ನಲುಗಿಹೋಗಿದೆ. ಬೆಳಗಾವಿ ನಗರವನ್ನೂ ಸೋಂಕು ಕಂಗೆಡಿಸಿದೆ. ಇಂದಿನವರೆಗೆ ಬೆಳಗಾವಿ ಜಿಲ್ಲೆಯಲ್ಲಿ 69 ಜನರಿಗೆ ಪಾಸಿಟಿವ್ ಬಂದಿದೆ. ವಿಶೇಷವೆಂದರೆ ಇವೆಲ್ಲವೂ ತಬ್ಲಿಘಿಗಳ ನಿಜಾಮುದ್ದೀನ್ ನಂಟಿನಿಂದಲೇ ಬಂದಿದ್ದು. ತಬ್ಲಿಘಿ ನಂಟು ಹೊರತಾದ …
Read More »
Laxmi News 24×7