Breaking News

ಕುಡುಕರ ಅವಾಂತರದಿಂದ ಮತ್ತೊಂದು ಕೊಲೆ!

ಬೆಂಗಳೂರು: ಕೊರೊನಾ ಲಾಕ್‍ಡೌನ್‍ನಿಂದಾಗಿ 43 ದಿನಗಳಿಂದ ಮದ್ಯ ಸಿಗದೆ ಪರದಾಡಿದ್ದ ಕುಡುಕರು ಸೋಮವಾರ ನಿಟ್ಟುಸಿರು ಬಿಟ್ಟಿದ್ದರು. ಆದರೆ ಮದ್ಯ ಸೇವಿಸಿ ಸುಮ್ಮನಿರದ ಕೆಲವರು ಕೊಲೆ, ಹಲ್ಲೆಗೆ ನಡೆಸಿರುವ ಘಟನೆಗಳು ವರದಿಯಾಗುತ್ತಲೇ ಇವೆ. ಇಂತಹದ್ದೇ ಘಟನೆಯೊಂದು ಸಿಲಿಕಾನ್ ಸಿಟಿ ಬೆಂಗಳೂರಿನ ಕಾಮಾಕ್ಷಿಪಾಳ್ಯದಲ್ಲಿ ನಡೆದಿದೆ. ಪುರುಷೋತ್ತಮ್ ಕೊಲೆಯಾದ ವ್ಯಕ್ತಿ. ಕಾಮಾಕ್ಷಿಪಾಳ್ಯದ ಆದಿತ್ಯ ಬಾರ್ ಮುಂದೆ ಕೊಲೆ ನಡೆದಿದ್ದು, ದುಷ್ಕರ್ಮಿಗಳು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ. ಈ ಕುರಿತು ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ಭೇಟಿ …

Read More »

2ನೇ ದಿನವೂಮದ್ಯ ಮಾರಾಟದಲ್ಲಿ ಬಂಪರ್- 197 ಕೋಟಿ ರೂ. ಮದ್ಯ ಮಾರಾಟ

ಬೆಂಗಳೂರು: ರಾಜ್ಯದಲ್ಲಿ ಲಾಕ್‍ಡೌನ್ ನಿಯಮಗಳ ಸಡಿಲಿಕೆಯ 2ನೇ ದಿನವೂ ಮದ್ಯ ಮಾರಾಟ ಜೋರಾಗಿದ್ದು, ಇಂದು 197 ಕೋಟಿ ರೂ. ಮೌಲ್ಯದ ಮದ್ಯ ಮಾರಾಟ ಮಾಡಲಾಗಿದೆ ಎಂದು ಕೆಎಸ್‍ಬಿಸಿಎಲ್ ಅಧಿಕಾರಿ ತಿಳಿಸಿದ್ದಾರೆ. ಇಂದು ಬೆಳಿಗ್ಗೆಯಿಂದ ಸಂಜೆಯವರೆಗೂ ಮಾರಾಟವಾಗಿರುವ ಮದ್ಯದ ಮಾಹಿತಿ ನೀಡಲಾಗಿದ್ದು, 36.37 ಲಕ್ಷ ಲೀಟರ್ ಭಾರತೀಯ ಮದ್ಯ ಹಾಗೂ 7.02 ಲಕ್ಷ ಲೀಟರ್ ಬಿಯರ್ ಮಾರಾಟ ಮಾಡಲಾಗಿದೆ. ಉಳಿದಂತೆ ಬೆಳಗ್ಗೆಯಿಂದ ನಾಲ್ಕು ಗಂಟೆಯವರೆಗೆ ಕರ್ನಾಟಕ ಪಾನೀಯ ನಿಗಮ (ಕೆಎಸ್‍ಬಿಸಿಎಲ್‍) ನಿಂದ …

Read More »

ಸಾರ್ವಜನಿಕ ಸೇವೆಗೆ ನೈರುತ್ಯ ರೈಲ್ವೆ ಸನ್ನದ್ಧ- ಮುಂಜಾಗ್ರತಾ ಕ್ರಮ ಹೇಗಿದೆ ಗೊತ್ತಾ?

ಹುಬ್ಬಳ್ಳಿ: ಕೊರೊನಾ ಲಾಕ್‍ಡೌನ್‍ನಿಂದ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಸಡಿಲಿಕೆ ಕೊಡಲಾಗಿದೆ. ಈ ಹಿನ್ನೆಲೆಯಲ್ಲಿ ನೈರುತ್ಯ ರೈಲ್ವೆಯ ಆಡಳಿತ ಕಚೇರಿ, ಹುಬ್ಬಳ್ಳಿ-ಧಾರವಾಡ ಜಿಲ್ಲೆಯ ಗ್ಯಾರೇಜ್ ಮತ್ತು ವರ್ಕ್‌ಶಾಪ್ ಮೇ 4ರಿಂದ ಶೇ.33 ಸಿಬ್ಬಂದಿಯೊಂದಿಗೆ ಕೆಲಸ ಆರಂಭಿಸಿವೆ. ಅಧಿಕಾರಿಗಳು ಮತ್ತು ಸಿಬ್ಬಂದಿ ಮತ್ತೆ ಕೆಲಸಕ್ಕೆ ಹಾಜರಾಗುತ್ತಿರುವುದರಿಂದ ಕೋವಿಡ್-19 ವೈರಸ್ ಹರಡುವುದನ್ನು ತಡೆಗಟ್ಟಲು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಹುಬ್ಬಳ್ಳಿಯಲ್ಲಿನ ಗ್ಯಾರೇಜ್ ಮತ್ತು ವರ್ಕ್‌ಶಾಪ್ ಪ್ರವೇಶದ್ವಾರದಲ್ಲಿ ದೇಹ ತಾಪಮಾನ ಸ್ಕ್ರೀನಿಂಗ್ ಸ್ಮಾರ್ಟ್ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಕಾರ್ಯಾಗಾರಕ್ಕೆ …

Read More »

ಜಿಲ್ಲೆಯಲ್ಲಿ ಇಂದಿನವರೆಗೆ ಒಟ್ಟು 73 ಜನರಲ್ಲಿ ಸೋಂಕು ಪತ್ತೆಯಾಗಿರುತ್ತದೆ. ಇದೀಗ ಒಟ್ಟಾರೆ 34 ಜನರು ಗುಣಮುಖ

ಬೆಳಗಾವಿ: ಕೊರೊನಾ ಸೋಂಕು ತಗುಲಿದ್ದ  ಒಬ್ಬ ಮಹಿಳೆಯು ಸೇರಿದಂತೆ ಒಟ್ಟು 8 ಜನರು ಸಂಪೂರ್ಣ ಗುಣಮುಖರಾಗಿದ್ದು, ಇಂದು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿರುತ್ತದೆ. ಬೆಳಗಾವಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಬಿಮ್ಸ್) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ  ರಾಯಬಾಗ ತಾಲ್ಲೂಕು ಕುಡಚಿಯ 5 ಜನರು ಮತ್ತು ಬೆಳಗಾವಿ ತಾಲ್ಲೂಕಿನ ಹಿರೇಬಾಗೇವಾಡಿಯ ಮೂವರು ಗುಣಮುಖರಾಗಿ ಬಿಡುಗಡೆ ಹೊಂದಿರುತ್ತಾರೆ ಎಂದು ಬಿಮ್ಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ ಬಿಡುಗಡೆ ಹೊಂದಿದವರ ವಿವರ:  ಪಿ-224 ಪಿ-225 ಪಿ-243 ಪಿ-244 ಪಿ-245 ಪಿ-289 ಪಿ-294 …

Read More »

ಚಿಕ್ಕೋಡಿ:ಕರ್ತವ್ಯ ನಿರತ ವೈದ್ಯರು ಹಾಗೂ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ವ್ಯಕ್ತಿಯ ವಿರುದ್ಧ ಕ್ರಮ

ಚಿಕ್ಕೋಡಿ: ತಾಲ್ಲೂಕಿನ ಯಕ್ಸಂಬಾದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕರ್ತವ್ಯ ನಿರತ ವೈದ್ಯರು ಹಾಗೂ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಮಂಗಳವಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಉಪವಿಭಾಗಾಧಿಕಾರಿ ರವೀಂದ್ರ ಕರಲಿಂಗನ್ನವರ ಅವರಿಗೆ ಮನವಿ ಸಲ್ಲಿಸಿದರು. ಯಕ್ಸಂಬಾದ ಸಮೂದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಮಲ್ಲಿಕಾರ್ಜುನ ಪೂಗತ್ಯಾನಟ್ಟಿ ಇವರು ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ಸಂದರ್ಭದಲ್ಲಿ ಕುಡಿದ ಮತ್ತಿನಲ್ಲಿ ಬಂದ ಶಮನೇವಾಡಿಯ ಸಂಜೀವಕುಮಾರ …

Read More »

ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರು ನಾಳೆಯಿಂದ ಜಿಲ್ಲೆಯಾದ್ಯಂತ ಸಂಚರಿಸಿ ಜನರ ಅಹವಾಲು ಸ್ವೀಕರಿಸಲಿದ್ದಾರೆ.

ಬೆಳಗಾವಿ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರು ನಾಳೆಯಿಂದ ಜಿಲ್ಲೆಯಾದ್ಯಂತ ಸಂಚರಿಸಿ ಜನರ ಅಹವಾಲು ಸ್ವೀಕರಿಸಲಿದ್ದಾರೆ. ನಾಳೆ ದಿ. 6 ರಂದು ಸ್ವ ಕ್ಷೇತ್ರ ಯಮಕನಮರಡಿಯಲ್ಲಿ ಮಧ್ಯಾಹ್ನ 12 ಗಂಟೆಗೆ ಭೇಟಿ ನೀಡಲಿದ್ದಾರೆ. ದಿ.7 ರಂದು ಬೆಳಿಗ್ಗೆ 10 ಗಂಟೆಗೆ ಬೆಳಗಾವಿಯಲ್ಲಿ ಲಭ್ಯವಿರುವ ಅವರು ಖಾನಾಪೂರ ತಾಲೂಕಿನ ಇಟಗಿಯಲ್ಲಿ ಬೆಳಿಗ್ಗೆ 11 ಗಂಟೆಗೆ, ಹಿರೇಮುನ್ನೋಳ್ಳಿಯಲ್ಲಿ 11.30 ಗಂಟೆಗೆ, ಪಾರೀಶ್ವಾಡದಲ್ಲಿ12 ಗಂಟೆಗೆ ಮತ್ತು 12.30. ಗಂಟೆಗೆ ಹಿರೇಹಟ್ಟಿಹೋಳಿಯಲ್ಲಿ ಭೇಟಿ ನೀಡಿ ಜನರ …

Read More »

ಮುಜರಾಯಿ ದೇವಾಲಯಗಳನ್ನೂ ತೆರೆಯಲು ಮುಂದಾದ ಸರ್ಕಾರ; ಸಚಿವ ಶ್ರೀನಿವಾಸ ಪೂಜಾರಿ ಮಾಹಿತಿ

ರಾಜ್ಯದಲ್ಲಿ ಮುಜರಾಯಿ ಇಲಾಖೆ ದೇವಾಸ್ಥಾನಗಳನ್ನು ತೆರೆಯಲಾಗುವುದು. ಆದರೆ, ದೇವಾಲಯದ ಒಳಗೆ ನೂಕು ನುಗ್ಗಲಿಗೆ ಅವಕಾಶ ಇಲ್ಲ. ಭಕ್ತರು ಸರಥಿ ಸಾಲಿನಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡೆ ದೇವರ ದರ್ಶನ ಪಡೆಯಬೇಕು ಎಂದು ಸಚಿವ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ. ಬೆಂಗಳೂರು (ಮೇ 05); ರಾಜ್ಯದಲ್ಲಿ ಶೀಘ್ರದಲ್ಲೇ ಮುಜರಾಯಿ ಇಲಾಖೆಯ ಎಲ್ಲಾ ದೇವಾಲಯಗಳು ತೆರೆಯಲಿವೆ. ಭಕ್ತರು ಸಾಮಾಜಿಕ ಅಂತರ ಕಾಯ್ದುಕೊಂಡೇ ದೇವರ ದರ್ಶನ ಪಡೆಯಬೇಕು ಎಂದು ಮುಜಾರಾಯಿ ಇಲಾಖೆ ಸಚಿವ  ಮಾಹಿತಿ ನೀಡಿದ್ದಾರೆ.    …

Read More »

ಇಂದು ಸೋಂಕಿಗೆ ಮತ್ತೊಬ್ಬರು ಬಲಿಯಾಗಿದ್ದಾರೆ. ಇಂದು ಒಂದೇ ದಿನದಲ್ಲಿ 22 ಜನರಲ್ಲಿ ಕೊರೊನಾ ಸೋಂಕು ದೃಢ

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ಮತ್ತೆ ಅಟ್ಟಹಾಸ ಮೆರೆಯುತ್ತಿದೆ. ಇಂದು ಸೋಂಕಿಗೆ ಮತ್ತೊಬ್ಬರು ಬಲಿಯಾಗಿದ್ದಾರೆ. ಇಂದು ಒಂದೇ ದಿನದಲ್ಲಿ 22 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ.ಈ ಮೂಲಕ ಕರ್ನಾಟಕದಲ್ಲಿ ಸೋಂಕಿತರ ಸಂಖ್ಯೆ 673ಕ್ಕೆ ಏರಿಕೆಯಾಗಿದೆ. ದಾವಣೆಗೆರೆಯಲ್ಲಿ ಕೊರೊನಾ ಸೋಂಕಿಗೆ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ಇಂದು ಒಂದೇ ದಿನ ಸೋಂಕಿಗೆ ಇಬ್ಬರು ಬಲಿಯಾಗಿದ್ದು, ಈ ಮೂಲಕ ಕರ್ನಾಟಕದಲ್ಲಿ ಕೊರೊನಾಗೆ ಬಲಿಯಾದವರ ಸಂಖ್ಯೆ 29ಕ್ಕೆ ಏರಿಕೆಯಾಗಿದೆ. ದಾವಣಗೆರೆ ಜಿಲ್ಲೆಯೊಂದರಲ್ಲೇ ಇಂದು 12 ಜನರಲ್ಲಿ ಸೋಂಕು …

Read More »

ಡೀಸೆಲ್ 7.10 ರೂ., ಪೆಟ್ರೋಲ್ ಬೆಲೆ 1.67 ರೂ. ಏರಿಕೆ…

ನವದೆಹಲಿ: ಮದ್ಯದ ಮೇಲೆ ಶೇ.70 ರಷ್ಟು ‘ವಿಶೇಷ ಕೊರೊನಾ ದರ’ ತೆರಿಗೆ ವಿಧಿಸಿದ ದೆಹಲಿಯ ಕೇಜ್ರಿವಾಲ್ ಸರ್ಕಾರ ಈಗ ಪೆಟ್ರೋಲ್ ಮತ್ತು ಡೀಸೆಲ್ ವ್ಯಾಟ್ ತೆರಿಗೆಯನ್ನು ಏರಿಕೆ ಮಾಡಿದೆ. ಪೆಟ್ರೋಲ್ ಮೇಲೆ ಶೇ.27 ಡೀಸೆಲ್ ಮೇಲೆ ಶೇ.16.75 ವ್ಯಾಟ್ ನಿಗದಿಯಾಗಿತ್ತು. ಆದರೆ ಈಗ ಪಟ್ರೋಲ್ ಮೇಲೆ ಶೇ.30, ಡೀಸೆಲ್ ಮೇಲೆ ಶೇ.30ರಷ್ಟು ವ್ಯಾಟ್ ಏರಿಕೆ ಮಾಡಲಾಗಿದೆ. ವ್ಯಾಟ್ ಏರಿಕೆಯಿಂದಾಗಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 1.67 ರೂ., ಡೀಸೆಲ್ ಬೆಲೆ …

Read More »

ರಾಯಚೂರಿನಲ್ಲಿ ಮಧ್ಯಾಹ್ನವೇ ಮದ್ಯದಂಗಡಿಗಳು ಕ್ಲೋಸ್

ರಾಯಚೂರು: ಲಾಕ್‍ಡೌನ್ ಸಡಿಲಿಕೆ ಹಿನ್ನೆಲೆ ಮದ್ಯದಂಗಡಿಗಳನ್ನ ತೆರೆದಿರುವ ಕಾರಣಕ್ಕೆ ರಾಯಚೂರಿನಲ್ಲಿ ರಸ್ತೆಗಳಲ್ಲಿ ಜನರ ಓಡಾಟವೂ ಹೆಚ್ಚಾಗಿದೆ. ಮದ್ಯದಂಗಡಿ ಮುಂದೆ ಜನರ ಕ್ಯೂ ದೊಡ್ಡದಿದೆ ಇದರ ಜೊತೆಗೆ ಜನ ಎಲ್ಲಾ ನಿಯಮಗಳನ್ನ ಗಾಳಿಗೆ ತೂರಿ ಗುಂಪು ಗುಂಪಾಗಿ ಓಡಾಡುತ್ತಿದ್ದಾರೆ. ಹೀಗಾಗಿ ರಾಯಚೂರಿನಲ್ಲಿ ಮಧ್ಯಾಹ್ನ ಎರಡು ಗಂಟೆಗೆ ಎಲ್ಲ ಬಂದ್ ಮಾಡಲಾಗಿದೆ. ನಿನ್ನೆ ಸಂಜೆ 7 ಗಂಟೆವರೆಗೆ ಮದ್ಯದಂಗಡಿ ತೆರೆಯಲಾಗಿತ್ತು. ಜನರ ಓಡಾಟ ವಿಪರೀತವಾಗಿದ್ದರಿಂದ ಇಂದಿನಿಂದ ಮಧ್ಯಾಹ್ನ ಎರಡು ಗಂಟೆಗೆ ಮದ್ಯದಂಗಡಿ ಬಂದ್ …

Read More »