Breaking News

ಪೋಲಿಸರಿಗೆ ಲಘು ಉಪಹಾರ ನೀಡಿದ ದಿಗ್ಗಜ್ಜರು ತಂಡ

  ಘಟಪ್ರಭಾ- ಪೋಲಿಸ್ ಇಲಾಖೆಯ ಸಿಬ್ಬಂದಿಗಳಿಗೆ ಲಘು ಉಪಹಾರ ಸೇವೆಯನ್ನ ದಿಗ್ಗಜ್ಜರು ತಂಡದಿಂದ ಮಾಡಲಾಯಿತು, ಕಚೋರಿಗಳನ್ನ ಪ್ರತಿ ಸಿಬ್ಬಂದಿಗಳಿಗೆ ವಿತರಿಸಿ ಪೋಲಿಸರಿಗೆ ಧನ್ಯವಾದ ಅರ್ಪಿಸಿದ್ದು ಆಕರ್ಷಕವಾಗಿತ್ತು. ಈ ಸಂದರ್ಭದಲ್ಲಿ ಮಾರುತಿ ಚೌಕಾಶಿ. ಬಸವರಾಜ ಹುಬ್ಬಳ್ಳಿ. ಶಿವಾನಂದ ಕರ್ಪೂರಮಠ.ಕುಮಾರ ಕರೋಶಿ.ಮಹೇಶ ನಾಯಿಕ.ಚನ್ನಮಲ್ಲಿಕಾರ್ಜನ ಕರ್ಪೂರಮಠ ಮತ್ತು ಮಹಾಂತೇಶ ಉಪಸ್ಥಿತರಿದ್ದರು

Read More »

ಬೆಂಗಳೂರು ರೌಂಡ್ ಹಾಕಿ ಲಾಕ್‍ಡೌನ್ ಪರಿಶೀಲಿಸಿದ ಸಿಎಂ ಯಡಿಯೂರಪ್ಪ

ಬೆಂಗಳೂರು : ಕೊರೋನಾ ಲಾಕ್‌ಡೌನ್ ಮೊದಲ ಹಂತದ ಅಂತಿಮ ಚರಣದಲ್ಲಿರುವ ಸಂದರ್ಭದಲ್ಲಿ ಜನರ ತೊಂದರೆಗೆ ಕಿವಿಗೊಡಲು ಖುದ್ದು ಸಿಎಂ ಯಡಿಯೂರಪ್ಪ ರೋಡಿಗಿಳಿದರು. ಭಾನುವಾರ ಅಧಿಕಾರಿಗಳ ಸಮೇತ ಯಡಿಯೂರಪ್ಪ ಬೆಂಗಳುರಿನ ಸಿಟಿ ರೌಂಡ್ಸ್ ಕೈಗೊಂಡು ಜನ ಮತ್ತು ವ್ಯಾಪಾರಸ್ಥರು ಅನುಭವಿಸುತ್ತಿರುವ ಸಮಸ್ಯೆಗಳನ್ನು ಆಲಿಸಿದರು. ಸಿಟಿ ರೌಂಡ್ಸ್ ವೇಳೆ ಮುಖ್ಯಮಂತ್ರಿಗೆ ವ್ಯಾಪಾರಿಗಳಿಂದ ದೂರುಗಳ ಸುರಿಮಳೆಯೇ ಆಯಿತು. ವ್ಯಾಪಾರ ಕಮ್ಮಿ, ಪಾಸ್ ಕೊಡ್ತಿಲ್ಲ. ಪೊಲೀಸರು ಬಿಡ್ತಿಲ್ಲ ಎಂದು ವ್ಯಾಪಾರಿಗಳು ಗೋಳು ತೋಡಿಕೊಂಡರು. ಈ ಮಧ್ಯೆ …

Read More »

ನನ್ನಂಥವರಿಗೆ ಡಾ. ರಾಜ್ ಸ್ಫೂರ್ತಿ’ : ಹೆಚ್.ಡಿ.ಕುಮಾರಸ್ವಾಮಿ

ಬೆಂಗಳೂರು : ನನ್ನಂಥವರು ವರನಟ ಡಾ. ರಾಜ್ ಅವರ ಸಿನಿಮಾಗಳನ್ನು ನೋಡಿ ಸ್ಫೂರ್ತಿಗೊಂಡಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ‌.ಡಾ. ರಾಜ್ ಕುಮಾರ್ ಜಗತ್ತು ಕಂಡ ಮೇರು ನಟರಾಗಿದ್ದರು ಎಂದು ಟ್ವಿಟರ್ ನಲ್ಲಿ ಅವರು ತಿಳಿಸಿದ್ದಾರೆ. ಕನ್ನಡ ಸಿನಮಾ ಲೋಕದ ಉತ್ತುಂಗದ ಸ್ಟಾರ್ ಅಷ್ಟೇ ಅಲ್ಲ. ತಮ್ಮ ನಾಡು ನುಡಿಯ ಬಗ್ಗೆ ಅದಮ್ಯ ಕಾಳಜಿ ಇಟ್ಟುಕೊಂಡಿದ್ದ ಹೋರಾಟಗಾರ ಎಂದು ಹೇಳಿದ್ದಾರೆ. ತಮ್ಮ ಅಭಿನಯ ಮತ್ತು ಬದುಕು ಎರಡರ ಮೂಲಕವೂ ಸಾಂಸ್ಕೃತಿಕ …

Read More »

ಕಾರ್ಮಿಕರ ಊಟದಲ್ಲಿಯೂ ರಾಜಕೀಯ : ತನಿಖೆಗೆ ಸಿದ್ದರಾಮಯ್ಯ ಒತ್ತಾಯ

ಬೆಂಗಳೂರು : ಬೆಂಗಳೂರು ನಗರದಲ್ಲಿ ಕಾರ್ಮಿಕರಿಗೆ ಸಿದ್ದ ಆಹಾರ ಮತ್ತು ಆಹಾರ ಸಾಮಾಗ್ರಿಗಳನ್ನು ವಿತರಿಸುವ ಕಾರ್ಮಿಕ ಇಲಾಖೆಯ ಯೋಜನೆಯನ್ನು ಬಿಜೆಪಿ ರಾಜಕೀಯವಾಗಿ ದುರುಪಯೋಗಗೊಳಿಸುತ್ತಿದ್ದು ಪಾರದರ್ಶಕತೆ ಇಲ್ಲದೆ ನಡೆಯುತ್ತಿರುವ ಈ ಯೋಜನೆಯ ಬಗೆಗಿನ ದೂರುಗಳ ಬಗ್ಗೆ ತನಿಖೆ ನಡೆಸಬೇಕೆಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರನ್ನು ಒತ್ತಾಯಿಸಿದ್ದಾರೆ. ಕಟ್ಟಡ ನಿರ್ಮಾಣ ಮತ್ತು ಇತರ ನಿರ್ಮಾಣ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ನಿಧಿಯಿಂದ ನೀಡಲಾಗುತ್ತಿರುವ ಆಹಾರದ ಪೊಟ್ಟಣಗಳನ್ನು ಬಿಜೆಪಿ …

Read More »

ಸರಳವಾಗಿ ಅಂಬೇಡ್ಕರ್ ಜಯಂತಿ ಆಚರಿಸಲು ಡಿಸಿಎಂ ಕಾರಜೋಳ‌ ಮನವಿ

ಬೆಂಗಳೂರು. : ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ರಾಷ್ಟದಾದ್ಯಂತ ಲಾಕ್ ಡೌನ್ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಏಪ್ರಿಲ್ 14 ರಂದು ಸಂವಿಧಾನ ಶಿಲ್ಪಿ , ಭಾರತ ರತ್ನ, ಮಹಾ ಮಾನವತಾವಾದಿ ಡಾ. ಬಿ. ಆರ್ . ಅಂಬೇಡ್ಕರ್ ರವರ 129 ನೇ ಜನ್ಮ ದಿನಾಚರಣೆ ಪ್ರಯುಕ್ತ ಅಂದು ಬೆಳಿಗ್ಗೆ 10.00 ಗಂಟೆಗೆ ವಿಧಾನಸೌಧದ ಮುಂಭಾಗ ದಲ್ಲಿರುವ ಅವರ ಪ್ರತಿಮೆಗೆ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ, ಉಪಮುಖ್ಯಮಂತ್ರಿಗಳಾದ ಶ್ರೀ‌ ಗೋವಿಂದ ಎಂ‌ ಕಾರಜೋಳ ಮತ್ತು ಇತರೇ …

Read More »

ಅನುಪಮಾ ಪರಮೇಶ್ವರನ್ ಎಫ್‍ಬಿ ಹ್ಯಾಕ್, ಫೋಟೋ ಮಾರ್ಫ್- ಗರಂ ಆದ ನಟಸಾರ್ವಭೌಮ ಬೆಡಗಿ

ಬೆಂಗಳೂರು: ಸಿನಿಮಾ ತಾರೆಯ ಫೋಟೋಗಳನ್ನು ಎಡಿಟ್ ಮಾಡಿ ವಿಕೃತಗೊಳಿಸುವುದನ್ನು ಕಿಡಿಗೇಡಿಗಳು ಮಾಡುತ್ತಲೇ ಇರುತ್ತಾರೆ. ಇದಕ್ಕಾಗಿ ಹಲವು ನಟಿಯರು ಮುಜುಗರಕ್ಕೆ ಈಡಾಗಿರುವುದೂ ಉಂಟು. ಇದೀಗ ನಟ ಸಾರ್ವಭೌಮ ಬೆಡಗಿ ಸಹ ಇಂತಹದ್ದೇ ಕಷ್ಟಕ್ಕೆ ಸಿಲುಕಿಕೊಂಡಿದ್ದು, ಬೇರೆ ಯುವತಿಯ ದೇಹಕ್ಕೆ ಅನುಪಮಾ ಪರಮೇಶ್ವರನ್ ಮುಖವನ್ನು ಜೋಡಿಸಲಾಗಿದೆ ಇದನ್ನು ಕಂಡ ಅವರು ಆಶ್ಚರ್ಯಕ್ಕೊಳಗಾಗಿದ್ದಾರೆ. ಇಂಟರ್ನೆಟ್ ಜಾಲಾಡಿದರೆ ನೈಜ ಫೋಟೋಗಳಿಗಿಂತ ಫೇಕ್, ಎಡಿಟೆಡ್, ಮಾರ್ಫ್ ಮಾಡಿದ ಫೋಟೋಗಳು ಕಾಣುವುದೇ ಹೆಚ್ಚು. ಅದರಲ್ಲೂ ನಟ, ನಟಿಯರ ಫೋಟೋಗಳನ್ನು …

Read More »

ಚಿಕ್ಕಮಗಳೂರು:ಮಲೆನಾಡಲ್ಲಿ ಮಳೆ ಅಬ್ಬರ- ಬೃಹತ್ ಗಾತ್ರದ ಆಲಿಕಲ್ಲು ಪತ್ತೆ

ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರಿನ ಮಲೆನಾಡು ಭಾಗದಲ್ಲಿ ಮಳೆ ಅಬ್ಬರ ಮುಂದುವರಿದಿದೆ. ಭಾನುವಾರ ಜಿಲ್ಲೆಯ ಮೂಡಿಗೆರೆ ಹಾಗೂ ಶೃಂಗೇರಿ ಭಾಗದಲ್ಲಿ ಧಾರಾಕಾರ ಮಳೆಯಾಗಿದರೆ ಕೊಪ್ಪ ಹಾಗೂ ಎನ್.ಆರ್.ಪುರದಲ್ಲಿ ಸಾಧಾರಣ ಮಳೆಯಾಗಿದೆ. ಮೂಡಿಗೆರೆ ತಾಲೂಕಿನ ಕಳಸ ಭಾಗದಲ್ಲಿ ಧಾರಾಕಾರ ಮಳೆಯಾಗಿದ್ದು, ಆಲಿಕಲ್ಲು ಸಮೇತ ವರುಣ ಅಬ್ಬರಿಸಿದ್ದಾನೆ. ಬೃಹತ್ ಗಾತ್ರದ ಆಲಿಕಲ್ಲನ್ನು ಹಿಡಿದು ಯುವಕರು ಫೋಟೋ ಕ್ಲಿಕ್ಕಿಸಿಕೊಂಡು ಖುಷಿ ಪಟ್ಟಿದ್ದಾರೆ. ಇತ್ತ ಶೃಂಗೇರಿಯ ಸುತ್ತಮುತ್ತಲೂ ಭಾರೀ ಮಳೆಯಾಗಿದೆ. ಮಳೆ ದೇವರೆಂದೇ ಖ್ಯಾತಿಯಾಗಿರುವ ಕಿಗ್ಗಾದ ಋಷ್ಯಶೃಂಗ …

Read More »

ಇನ್ಫೋಸಿಸ್ ಫೌಂಡೇಶನ್‍ನಿಂದ 220ಕ್ಕೂ ಅಧಿಕ ಕಾರ್ಮಿಕರಿಗೆ ಆಹಾರದ ಕಿಟ್

ಹುಬ್ಬಳ್ಳಿ: ಸುಧಾಮೂರ್ತಿ ಅವರ ಇನ್ಫೋಸಿಸ್ ಫೌಂಡೇಶನ್ ನೀಡಿರುವ ಆಹಾರ ಧಾನ್ಯಗಳ ಕಿಟ್‍ಗಳನ್ನು ಭಾನುವಾರ 220ಕ್ಕೂ ಹೆಚ್ಚು ಕಾರ್ಮಿಕರಿಗೆ ವಿತರಿಸಲಾಯಿತು. ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿನ ಕರ್ನಾಟಕ ರಾಜ್ಯ ಆಹಾರ ನಿಗಮ (ಕೆಎಸ್‍ಸಿಎಫ್‍ಸಿ) 8 ಗೋದಾಮುಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ 220ಕ್ಕೂ ಹೆಚ್ಚು ಕಾರ್ಮಿಕರು, ಲಾರಿ ಚಾಲಕರು, ಕ್ಲೀನರ್‌ಗಳಿಗೆ ಆಹಾರ ಇಲಾಖೆಯ ಜಂಟಿ ನಿರ್ದೇಶಕ ಸದಾಶಿವ ಮರ್ಜಿ, ಇಸ್ಕಾನ್‍ನ ಸಾಯಿನಾಥ್ ವಿತರಿಸಿದರು ಇನ್ಫೋಸಿಸ್ ಫೌಂಡೇಶನ್ ನೀಡಿರುವ ಆಹಾರ ಧಾನ್ಯಗಳ ಪ್ರತಿ ಕಿಟ್‍ನಲ್ಲಿ 5 ಕೆ.ಜಿ. ಅಕ್ಕಿ, …

Read More »

ವಿಜಯಪುರದಲ್ಲಿ ಕೊರೊನಾ ಸೋಂಕಿತ ವೃದ್ಧೆಯ ಪತಿ ಸಾವು

ವಿಜಯಪುರ: ಕೊರೊನಾ ಸೋಂಕಿತ ವೃದ್ಧೆಯ ಪತಿ ಭಾನುವಾರ ರಾತ್ರಿ ಮೃತಪಟ್ಟಿದ್ದು, ಸೋಂಕಿಗೆ ಬಲಿಯಾಗಿರಬಹುದೇ ಎನ್ನುವ ಪ್ರಶ್ನೆ ಎದ್ದಿದೆ. ಇಂದು ಮಧ್ಯಾಹ್ನ ವೃದ್ಧೆಗೆ ಪಾಸಿಟಿವ್ ಬಂದಿತ್ತು. ಈ ಬೆನ್ನಲ್ಲೇ ವೃದ್ಧೆಯ ಸಂಪರ್ಕದಲ್ಲಿದ್ದ ವ್ಯಕ್ತಿಗಳನ್ನು ಕ್ವಾರಂಟೈನ್ ಮಾಡಲಾಗಿತ್ತು. ಒಟ್ಟು 24 ಮಂದಿಯನ್ನು ಕ್ವಾರಂಟೈನ್ ಮಾಡಲಾಗಿದ್ದು ಇಂದು ರಾತ್ರಿ ವೃದ್ಧೆಯ ಪತಿ(69) ಮೃತಪಟ್ಟಿದ್ದಾರೆ. ಕೊರೊನಾಗೆ ವೃದ್ಧ ಮೃತಪಟ್ಟಿದ್ದಾರೋ ಎನ್ನುವುದು ಅಧಿಕೃತವಾಗಿ ತಿಳಿದು ಬಂದಿಲ್ಲ. ಸಾವಿಗೀಡಾದ ವ್ಯಕ್ತಿಯ ವೈದ್ಯಕೀಯ ಪರೀಕ್ಷೆಯ ವರದಿಗೆ ವಿಜಯಪುರ ಜಿಲ್ಲಾಡಳಿತ ಈಗ …

Read More »

ಲಾಕ್‍ಡೌನ್ ಉಲ್ಲಂಘಿಸಿ ಪ್ರವಾಸ- ರೆಸಾರ್ಟಿನಲ್ಲಿ ಮೋಜು, ಮಸ್ತಿ

ಮಡಿಕೇರಿ: ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನಲ್ಲಿ ಲಾಕ್‍ಡೌನ್ ಉಲ್ಲಂಘಿಸಿ ಕೆಲ ವ್ಯಕ್ತಿಗಳು ಪ್ರವಾಸ ಕೈಗೊಂಡಿದ್ದು, ರೆಸಾರ್ಟಿನಲ್ಲಿ ಮೋಜು ಮಸ್ತಿ ನಡೆಸಿದ್ದಾರೆ. ಹೆಮ್ಮಾರಿ ಕೊರೊನಾ ವೈರಸ್ ನಿಯಂತ್ರಿಸಲು ದೇಶವನ್ನು ಲಾಕ್‍ಡೌನ್ ಮಾಡಿ ಜನರು ಮನೆಯಲ್ಲಿರುವಂತೆ ಕೇಂದ್ರ ಸರ್ಕಾರ ಮನವಿ ಮಾಡಿಕೊಂಡಿದೆ. ವೈದ್ಯರು, ಪೊಲೀಸರು ಹಗಲು ರಾತ್ರಿ ಎನ್ನದೆ ತಮ್ಮ ಪ್ರಾಣವನ್ನು ಲೆಕ್ಕಿಸದೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆದರೆ ಬೆಂಗಳೂರಿನ ಜನರಿಗೆ ಮಾತ್ರ ಇದೆಲ್ಲಕ್ಕಿಂತ ಮೋಜು ಮಸ್ತಿ ಪ್ರವಾಸವೇ ಮುಖ್ಯವಾಗಿದೆ. ಇಂತಹ ಪರಿಸ್ಥಿತಿಯಲ್ಲಿಯೂ ಕೆಲ …

Read More »