Breaking News

ಸಿದ್ದರಾಮಯ್ಯ ಅಧಿಕಾರದಲ್ಲಿ ಇದ್ದಿದ್ದರೆ ಗುಡಿಸಿ ಗುಂಡಾತರ ಮಾಡ್ತಿದ್ರು: ಸಂಸದ ಮುನಿಸ್ವಾಮಿ

ಕೋಲಾರ: ಲಾಕ್‍ಡೌನ್ ಮುಂದುವರೆಸಿರುವ ಪ್ರಧಾನಿ ಮೋದಿ ಬಡವರಿಗೆ ಯಾವುದೇ ಯೋಜನಗಳನ್ನು ನೀಡಿಲ್ಲ ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ಕೋಲಾರದಲ್ಲಿ ಸಂಸದ ಎಸ್.ಮುನಿಸ್ವಾಮಿ ತಿರುಗೇಟು ನೀಡಿದ್ದಾರೆ. ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ ತರಕಾರಿ ಖರೀದಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅಧಿಕಾರದಲ್ಲಿ ಇದ್ದಿದ್ದರೆ ಗುಡಿಸಿ ಗುಂಡಾತರ ಮಾಡುತ್ತಿದ್ದರು. ಪ್ರಧಾನಿ ಮೋದಿ ಮಾಡುತ್ತಿರುವ ಯೋಜನೆಗಳನ್ನು ಜನ ವೀಕ್ಷಿಸುತ್ತಿದ್ದಾರೆ. ಪ್ರಧಾನಿ ಮೋದಿ ಏನ್ಮಾಡ್ತಿದ್ದಾರೆ ಎಂದು ಇಡೀ ಪ್ರಪಂಚಕ್ಕೆ ಗೊತ್ತಿದೆ ಮೋದಿ ಅವರು …

Read More »

ಚಿಕ್ಕೋಡಿ: ಲಾಕ್‍ಡೌನ್ ಹಿನ್ನೆಲೆಯಲ್ಲಿ ರೈತರು ತಾವು ಬೆಳೆದಿದ್ದ ಬೆಳೆಗಳನ್ನು ಕೆಲವರು ಉಚಿತವಾಗಿ ಜನರಿಗೆ ನೀಡುತ್ತಿದ್ದಾರೆ.

ಚಿಕ್ಕೋಡಿ/ಬೆಳಗಾವಿ: ಲಾಕ್‍ಡೌನ್ ಹಿನ್ನೆಲೆಯಲ್ಲಿ ರೈತರು ತಾವು ಬೆಳೆದಿದ್ದ ಬೆಳೆಗಳನ್ನು ಕೆಲವರು ಉಚಿತವಾಗಿ ಜನರಿಗೆ ನೀಡುತ್ತಿದ್ದಾರೆ. ಇನ್ನೂ ಕೆಲವರು ತಿಪ್ಪೆಗೆ ಸುರಿಯುತ್ತಿದ್ದಾರೆ. ಆದರೆ ಇಲ್ಲೊಬ್ಬ ರೈತ ತಾನು ಬೆಳೆದ ತರಕಾರಿಯನ್ನ ಕುರಿ ಮತ್ತು ಮೇಕೆಗಳಿಗೆ ಮೇವು ನೀಡಿರುವ ಘಟನೆ ಜಿಲ್ಲೆಯ ಮೂಡಲಗಿ ತಾಲೂಕಿನ ತುಕ್ಕಾನಟ್ಟಿ ಗ್ರಾಮದಲ್ಲಿ ನಡೆದಿದೆ. ರೈತ ಗುರುನಾಥ್ ಹುಕ್ಕೇರಿ ತನ್ನ ಎರಡು ಎಕರೆ ಜಮೀನಿನಲ್ಲಿ ಒಂದು ಎಕರೆಯಲ್ಲಿ ಎಲೆಕೋಸು, ಇನ್ನೊಂದು ಎಕರೆಯಲ್ಲಿ ಹೂಕೋಸು ಬೆಳೆಯನ್ನ ಬೆಳೆಸಿದ್ದರು. ಸುಮಾರು 2 …

Read More »

ಬೆಂಗ್ಳೂರಲ್ಲಿ 40 ಹಾಟ್‍ಸ್ಪಾಟ್ – ಯಾವ ವಾರ್ಡಿನಲ್ಲಿ ಎಷ್ಟು ಮಂದಿಗೆ ಸೋಂಕು?

ಬೆಂಗಳೂರು: ಸಿಲಿಕಾನ್ ಸಿಟಿ, ಗ್ರೀನ್‍ಸಿಟಿ ಎಂದು ಕರೆಸಿಕೊಳ್ಳೋ ಬೆಂಗಳೂರು ಈಗ ಕೊರೊನಾ ಹಾಟ್‍ಸ್ಪಾಟ್ ಆಗುತ್ತಿದೆ. ಬೆಂಗಳೂರಿನಲ್ಲಿ 2 ದಿನಗಳ ಅಂತರದಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಜೊತೆಗೆ, ಟಿಪ್ಪುನಗರ, ಆನಂದಪುರ ವಾರ್ಡ್‌ಗಳನ್ನು ಸೀಲ್‍ಡೌನ್ ಮಾಡಲಾಗಿದ್ದು, 40 ಹಾಟ್‍ಸ್ಪಾಟ್‍ಗಳ ಮೇಲೆ ಸರ್ಕಾರ ತೀವ್ರ ನಿಗಾ ಇರಿಸಿದೆ. ಲಾಕ್‍ಡೌನ್ ಮಾಡಿ ಎಷ್ಟೇ ಮನವಿ ಮಾಡಿ, ಬುದ್ಧಿ ಹೇಳಿದರೂ ಜನರು ಕೇಳುತ್ತಿಲ್ಲ. ಸುಖಾಸುಮ್ಮನೇ ಮನೆಯಿಂದ ಹೊರಗೆ ಬರುತ್ತಿದ್ದಾರೆ. ಇದರ ಪರಿಣಾಮವೇ ರಾಜ್ಯದಲ್ಲಿನ ಕೊರೊನಾ ಲಿಸ್ಟ್ ನಲ್ಲಿ ಬೆಂಗಳೂರು …

Read More »

ಕೇಂದ್ರ ಸರ್ಕಾರ ಹಳೆ ಮಾರ್ಗಸೂಚಿಗಳನ್ನು ಮುಂದುವರಿಸಲು ರಾಜ್ಯ ಸರ್ಕಾರಗಳಿಗೆ ಸೂಚನೆ

ನವದೆಹಲಿ: ಲಾಕ್‍ಡೌನ್ ವಿಸ್ತರಿಸಿ ಅಧಿಕೃತ ಆದೇಶ ಹೊರಡಿಸಿರುವ ಕೇಂದ್ರ ಸರ್ಕಾರ ಹಳೆ ಮಾರ್ಗಸೂಚಿಗಳನ್ನು ಮುಂದುವರಿಸಲು ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿದೆ. ಈ ನಡುವೆ ಏಪ್ರಿಲ್ 20ರ ಬಳಿಕ ಹೊಸ ಮಾರ್ಗಸೂಚಿ ಬರುವ ಸಾಧ್ಯತೆ ಇದೆ. ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಮೇ 3ರ ವರೆಗೂ ಲಾಕ್‍ಡೌನ್ ವಿಸ್ತರಿಸಿ ಘೋಷಣೆ ಮಾಡಿದ್ದಾರೆ. ಇದಾದ ಬಳಿಕ ಕೇಂದ್ರ ಗೃಹ ಇಲಾಖೆ ಇದರ ಅಧಿಕೃತ ಆದೇಶ ಪ್ರಕಟಿಸಿದ್ದು, ಮೇ 2ವರೆಗೂ ರಾಷ್ಟ್ರೀಯ ತುರ್ತು ನಿರ್ವಹಣೆ …

Read More »

ಏನಿದು ‘ಹೆಲಿಕಾಪ್ಟರ್ ಮನಿ’? ಭಾರತದಲ್ಲಿ ಸಾಧ್ಯವೇ?

ನವದೆಹಲಿ: ಕೊರೊನಾ ಬಂದ ಮೇಲೆ ಬಿಸಿನೆಸ್‍ಗಳು ನೆಲ ಕಚ್ಚಿದೆ. ದೇಶದ ಆರ್ಥಿಕತೆಯ ಮೇಲೆ ಭಾರೀ ಪೆಟ್ಟಾಗಿದೆ. ಈ ಸಂದರ್ಭದಲ್ಲಿ ‘ಹೆಲಿಕಾಪ್ಟರ್ ಮನಿ’ಯನ್ನು ಜಾರಿಗೊಳಿಸಿದರೆ ದೇಶದ ಆರ್ಥಿಕತೆ ಮೇಲಕ್ಕೆ ಎತ್ತಬಹುದು ಎನ್ನುವ ದೇಶದಲ್ಲಿ ಚರ್ಚೆ ಜೋರಾಗಿ ಆರಂಭಗೊಂಡಿದೆ. ಹೌದು. ಕುಸಿಯುತ್ತಿರುವ ಆರ್ಥಿಕತೆಯನ್ನು ದಿಢೀರ್ ಮೇಲಕ್ಕೆ ಎತ್ತುವುದು ಸದ್ಯದ ಪರಿಸ್ಥಿತಿಯಲ್ಲಿ ಅಸಾಧ್ಯ. ಆದರೆ ‘ಹೆಲಿಕಾಪ್ಟರ್ ಮನಿ’ಯನ್ನು ಜಾರಿಗೆ ತಂದರೆ ಇದಕ್ಕೆ ಪರಿಹಾರ ಸಿಗಬಹುದು ಎಂದು ತೆಲಂಗಾಣ ಮುಖ್ಯಮಂತ್ರಿ ಕೆಸಿ ಚಂದ್ರಶೇಖರ್ ರಾವ್ ಕೇಂದ್ರ …

Read More »

ಜಮಖಂಡಿ ಶಾಸಕರು ಖುದ್ದಾಗಿ ಹೊಲಗಳಿಗೆ ಭೇಟ್ಟಿ ನೀಡಿ ಸಮಸ್ಯೆಆಲಿಸಿದರು

ಜಮಖಂಡಿ :ರೈತರ ಜಮೀನಿಗೆ ಖುದ್ದಾಗಿ ಭೇಟಿ ಕೊಟ್ಟು ಅವರು ಬೆಳೆದಿರುವ ಬೆಳೆಗಳನ್ನು ವೀಕ್ಷಣೆ ಮಾಡಿ ಅವರಿಗೆ ಆಗತಕ್ಕಂತಹ ಹಾನಿಯ ಸಂಪೂರ್ಣ ಮಾಹಿತಿ ಪಡೆದುಕೊಂಡು ರೈತರಿಗೆ ಆತ್ಮಸ್ಥೈರ್ಯ ತುಂಬುತ್ತಾ ಅದರ ಜೊತೆ ಇವತ್ತು ಮಾರುಕಟ್ಟೆಯಲ್ಲಿ ಅವರು ಬೆಳೆದ ಬೆಳೆಗಳನ್ನು ಮಾರಲು ಆಗುತ್ತಿಲ್ಲ ಇಂತಹ ಸಂದರ್ಭದಲ್ಲಿ ರೈತರಿಗೆ ಅನುಕೂಲ ಮಾಡಿಕೊಡುವಂತಹ ಉದ್ದೇಶವನ್ನು ಇಟ್ಟುಕೊಂಡು ರೈತರಿಂದ ನೇರವಾಗಿ ಖರೀದಿ ಮಾಡಿ ಜಮಖಂಡಿಯಲ್ಲಿ ಇರತಕ್ಕಂತಹ ಬಡಜನರಿಗೆ ಉಚಿತವಾಗಿ ಕೊಡತಕ್ಕಂತಹ ಯೋಜನೆಯನ್ನು ಹಮ್ಮಿಕೊಂಡಿದ್ದೇನೆ ಈ ಯೋಜನೆಯಿಂದ ರೈತರಿಗೆ …

Read More »

ಮಂಡ್ಯ ಜಿಲ್ಲೆ ಸಂವಿಧಾನಶಿಲ್ಪಿ, ಭಾರತರತ್ನ, ಶೋಷಿತರು ಹಾಗೂ ತುಳಿತಕ್ಕೊಳಗಾದವರ ಧೀಶಕ್ತಿ ಡಾ.ಬಿ.ಆರ್.ಅಂಬೇಡ್ಕರ್ ಅವರ 129ನೇ ಜಯಂತ್ಯೋತ್ಸವ

ಮಂಡ್ಯ ಜಿಲ್ಲೆ ಸಂವಿಧಾನಶಿಲ್ಪಿ, ಭಾರತರತ್ನ, ಶೋಷಿತರು ಹಾಗೂ ತುಳಿತಕ್ಕೊಳಗಾದವರ ಧೀಶಕ್ತಿ ಡಾ.ಬಿ.ಆರ್.ಅಂಬೇಡ್ಕರ್ ಅವರ 129ನೇ ಜಯಂತ್ಯೋತ್ಸವವನ್ನು ಕೊರೋನಾ ಹಿನ್ನೆಲೆಯಲ್ಲಿ ಅತ್ಯಂತ ಸರಳವಾಗಿ ಕೃಷ್ಣರಾಜಪೇಟೆ ಪಟ್ಟಣದಲ್ಲಿ ಆಚರಿಸಲಾಯಿತು ರಾಜ್ಯದ ಪೌರಾಡಳಿತ, ರೇಷ್ಮೆ ಹಾಗೂ ಪೌರಾಡಳಿತ ಖಾತೆಗಳ ಸಚಿವರು ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ನಾರಾಯಣಗೌಡ ಬಾಬಾಸಾಹೇಬ್ ಡಾ. ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ ಪುಷ್ಪನಮನ ಸಲ್ಲಿಸಿದರು. ಪಟ್ಟಣದ ಮಿನಿವಿಧಾನಸೌಧದ ಸಭಾಂಗಣದಲ್ಲಿ ನಡೆದ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಗೂ …

Read More »

ಗ್ರಾಮದೇವತೆ ಶ್ರೀ ಮಾರಮ್ಮನವರ ದೇವಸ್ಥಾನದಲ್ಲಿ ಕೊರೋನಾ ಮಹಾಮಾರಿಯ ಬೆಚ್ಚಿ ಅಟ್ಟಹಾಸವನ್ನು ಮಟ್ಟಹಾಕಿ ಸಮಾಜದಲ್ಲಿ, ಶಾಂತಿ, ಸಮೃದ್ಧಿ ಹಾಗೂ ನೆಮ್ಮದಿಯನ್ನು ತಾಯಿ ಮಾರಮ್ಮನು ಕರುಣಿಸುವಂತೆ ಕೋರಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.

ಮಂಡ್ಯ ಜಿಲ್ಲೆ ಬಸರಾಳು ಪಟ್ಟಣದ ನಂದಹಳ್ಳಿ ಗ್ರಾಮದೇವತೆ ಶ್ರೀ ಮಾರಮ್ಮನವರ ದೇವಸ್ಥಾನದಲ್ಲಿ ಕೊರೋನಾ ಮಹಾಮಾರಿಯ ಬೆಚ್ಚಿ ಅಟ್ಟಹಾಸವನ್ನು ಮಟ್ಟಹಾಕಿ ಸಮಾಜದಲ್ಲಿ, ಶಾಂತಿ, ಸಮೃದ್ಧಿ ಹಾಗೂ ನೆಮ್ಮದಿಯನ್ನು ತಾಯಿ ಮಾರಮ್ಮನು ಕರುಣಿಸುವಂತೆ ಕೋರಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ವಿಶ್ವದಾದ್ಯಂತ ಕೊರೋನಾ ಅಟ್ಟಹಾಸವು ಎಲ್ಲೆ ಮೀರಿದೆ. ಕೊರೋನಾ ವೈರಾಣುಗಳನ್ನು ಸಂಹರಿಸಿ ತಾಯಿ ಮಾರಮ್ಮ ದೇವಿಯು ಆರೋಗ್ಯ, ಸಮೃದ್ಧಿಯನ್ನು ಕರುಣಿಸುವಂತೆ ಗ್ರಾಮದ ಗ್ರಾಮಸ್ಥರು ಪ್ರಾರ್ಥನೆ ಸಲ್ಲಿಸಿದರು. ಕರೋನ್ ವೈರಸ್ ಹೆದರಿದ ಗ್ರಾಮಸ್ಥರು ತಮ್ಮ ಕೋರಿಕೆಯನ್ನು …

Read More »

ನಗರ ಪ್ರದೇಶಕ್ಕೆ ಮಾದರಿಯಾದ ಹಳ್ಳಿಯ ಸ್ವಯಂ ನಿರ್ಬಂಧನೆ; ಬೆಳಗಾವಿಯ ಈ ಗ್ರಾಮದಲ್ಲಿ ಜನತಾ ಕರ್ಫ್ಯೂ

ಬೆಳಗಾವಿ(14): ದೇಶಾದ್ಯಂತ ಮೇ 3ರ ವರೆಗೆ ಲಾಕ್ ಡೌನ್ ಮುಂದುವರೆಸುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡಿದ್ದಾರೆ. ನಗರದ ಪ್ರದೇಶದಲ್ಲಿ ಲಾಕ್ ಡೌನ್ ಯಶಸ್ವಿಗೊಳಿಸಲು ಪೊಲೀಸರು ಹಗಲು, ರಾತ್ರಿ ಕೆಲಸ ಮಾಡುತ್ತಿದ್ದಾರೆ. ನಗರ ಪ್ರದೇಶದಲ್ಲಿ ಪ್ರತಿ ಬಡಾವಣೆ, ಪ್ರಮುಖ ರಸ್ತೆಯಲ್ಲಿ ಬ್ಯಾರಿಕೇಡ್ ವ್ಯವಸ್ಥೆ ಮಾಡಲು ಕಾಯುತ್ತಿದ್ದಾರೆ. ಇಂತಹ ಕಠಿಣ ಪರಿಸ್ಥಿತಿಯಲ್ಲಿ ತಮ್ಮ ಹಳ್ಳಿಗೆ ತಾವೇ ಸ್ವಯಂ ನಿರ್ಬಂಧನೆ ಹಾಕಿಕೊಳ್ಳುವ ಮೂಲಕ ಪುಟ್ಟ ಗ್ರಾಮದ ಜನ ಮಾದರಿಯಾಗಿದ್ದಾರೆ ಬೆಳಗಾವಿ ಜಿಲ್ಲೆಯ …

Read More »

ಲಾಕ್‌ಡೌನ್ ಎನ್ನುವುದು ಹೇಗೆಲ್ಲ ವಿಧಿಯಾಟ ಆಡಿಸುತ್ತಿದೆಯಲ್ಲ ಎಂಬ ಆಕ್ರೋಶ

ಬೆಳಗಾವಿ- ಆ ತಾಯಿಯ ಕರುಳ ಬಳ್ಳಿಯ ರೋಧನ… ಎದೆಯೆತ್ತರಕ್ಕೆ ಬೆಳೆದು ಮಗನ ಹೆಣದ ಮುಂದೆ ತಾಯಿ ಒಡಲ ರೋಧನ… ಎಲ್ಲವೂ ನೋಡಿದಾಗ ಅಲ್ಲಿದ್ದಾಗ ದುಃಖ ಉಮ್ಮಳಿಸಿ ಬಂತು… ಅದನ್ನೆಲ್ಲ‌ ಬರಿಯಬೇಕು ಅಂದ್ರೆ ನಡುಗುತ್ತಿರುವ ಕೈ ಇನ್ನು ನಿಂತಿಲ್ಲ..‌ ಇಷ್ಟೆಲ್ಲ ಪೀಠಿಕೆ ಏಕೆಂದರೆ ಲಾಕ್‌ಡೌನ್ ಮಧ್ಯೆ ಸ್ಮಶಾನ ಮೌನದಂತೆ ಇರೋ ಬೆಳಗಾವಿಯಲ್ಲಿ ನಡೆದ ನತದೃಷ್ಟ ತಾಯಿ-ಮಕ್ಕಳ‌ ಕರುಣಾಜನಕ, ಕರುಳ ಬಳ್ಳಿ ಕಳೆದುಕೊಂಡು ಪಡಬಾರದ ಪರದಾಟ ಕಂಡ ಘಟನೆ ಇದೆ.. ಸಮಗ್ರ ವಿವರ …

Read More »