ಬೆಂಗಳೂರು: ಕೊರೊನಾ ಲಾಕ್‍ಡೌನ್ ಹಿನ್ನೆಲೆ ಹಸಿದವರಿಗೆ ಹೊಟ್ಟೆ ತುಂಬಿಸುವ ಕೆಲಸಕ್ಕೆ ನೆಲಮಂಗಲ ಪೊಲೀಸರು ಮುಂದಾಗಿದ್ದಾರೆ. ಕರುಣೆಯ ಗೋಡೆ ಎಂಬ ನೂತನ ಯೋಜನೆಯನ್ನು ಉದ್ಘಾಟನೆ ಮಾಡಿ ಬಡ ಜೀವಗಳಿಗೆ ನೆರವಾಗಿದ್ದಾರೆ. ಬೆಂಗಳೂರು ಹೊರವಲಯ ನೆಲಮಂಗಲ ನಗರದ ಬಸ್ ನಿಲ್ದಾಣದ ಬಳಿ ಕರುಣೆಯ ಗೋಡೆ ಉದ್ಘಾಟಿಸಲಾಗಿದ್ದು, ತಹಶೀಲ್ದಾರ್ ಶ್ರೀನಿವಾಸಯ್ಯ, ಡಿವೈಎಸ್‍ಪಿ ಮೋಹನ್ ಕುಮಾರ್ ಮತ್ತು ಪಿಎಸ್‍ಐ ಮಂಜುನಾಥ್‍ರಿಂದ ಯೋಜನೆಗೆ ಚಾಲನೆ ದೊರಕಿದೆ. ಈ ಕರುಣೆಯ ಗೋಡೆಯಲ್ಲಿ ಬ್ರೆಡ್, ರಸ್ಕ್, ಬಿಸ್ಕತ್, ಹಣ್ಣುಗಳು, ನೀರಿನ …
Read More »ನಗರದ 65 ವರ್ಷದ ವೃದ್ಧ ಕೊರೊನಾಗೆ ಬಲಿಯಾದ ಬೆನ್ನಲ್ಲೇ ಈಗ ಅವರ ಮಗ ಸೇರಿ ಮೂರು ಮಂದಿಗೆ ಕೊರೊನಾ ಸೋಂಕು
ಚಿಕ್ಕಬಳ್ಳಾಪುರ: ನಗರದ 65 ವರ್ಷದ ವೃದ್ಧ ಕೊರೊನಾಗೆ ಬಲಿಯಾದ ಬೆನ್ನಲ್ಲೇ ಈಗ ಅವರ ಮಗ ಸೇರಿ ಮೂರು ಮಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಚಿಕ್ಕಬಳ್ಳಾಪುರ ನಗರದ 65 ವರ್ಷದ ವೃದ್ಧ ಕಳೆದ ಎರಡು ದಿನಗಳ ಹಿಂದೆ ಮೃತಪಟ್ಟಿದ್ದರು. ಈಗ ಅವರ ಸಂಪರ್ಕದಲ್ಲಿದ್ದ ಅವರ ಕೊನೆಯ ಮಗ(26) ಹಾಗೂ ಮೃತರ ಜೊತೆ ಆತ್ಮೀಯವಾಗಿ ಸಂಪರ್ಕದಲ್ಲಿದ್ದ ಎದುರುಗಡೆ ಮನೆಯ 20 ಮತ್ತು 19 ವರ್ಷದ ಯುವಕರಿಗೆ ಸೋಂಕು ತಗುಲಿದೆ. ವೃದ್ಧ ಮೃತಪಟ್ಟ …
Read More »ಮೈಸೂರಿನಲ್ಲಿ ಒಬ್ಬನಿಂದ 11 ಮಂದಿಗೆ ಸೋಂಕು – ರಾಜ್ಯದಲ್ಲಿ ಒಂದೇ ದಿನ 38 ಮಂದಿಗೆ ಕೊರೊನಾ
ಬೆಂಗಳೂರು: ದಿನೇ ದಿನೇ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಇವತ್ತು ಒಂದೇ ದಿನ 38 ಮಂದಿಗೆ ಕೊರೊನಾ ಸೋಂಕು ತಗುಲಿರೋದು ದೃಢಪಟ್ಟಿದೆ. ಈ ಮೂಲಕ ರಾಜ್ಯದಲ್ಲಿ ಕೋವಿಡ್ -19 ಪ್ರಕರಣಗಳ ಸಂಖ್ಯೆ 353ಕ್ಕೆ ಏರಿಕೆ ಕಂಡಿದೆ. ಬೆಳಗ್ಗೆ ಒಟ್ಟು 38 ಜನರಿಗೆ ಸೋಂಕು ತಗುಲಿರೋದು ದೃಢಪಟ್ಟಿದೆ. ಮೈಸೂರಿನಲ್ಲೇ ಇಂದು 12 ಮಂದಿಗೆ ಕೊರೊನಾ ದೃಢವಾಗಿದೆ. ಇನ್ನೂ ಬಳ್ಳಾರಿಯಲ್ಲಿ ಒಬ್ಬ ಸೋಂಕಿತನಿಂದ ಏಳು ಮಂದಿಗೆ ಕೊರೊನಾ ಬಂದಿದೆ. ಬೆಂಗಳೂರಿನಲ್ಲಿ 9 …
Read More »ಉಡುಪಿ:ಮಣಿಪಾಲದಲ್ಲಿ ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ
ಉಡುಪಿ: ಮಣಿಪಾಲದಲ್ಲಿ ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ನಡುರಸ್ತೆಯಲ್ಲೇ ಹೊತ್ತಿ ಉರಿದ ಘಟನೆ ನಡೆದಿದೆ. ಭಾಗೀರಥಿ ಎಂಬವರು ಮಣಿಪಾಲ ಕೆಎಂಸಿ ಆಸ್ಪತ್ರೆಗೆ ತೆರಳುತ್ತಿದ್ದ ವೇಳೆ ಅವಘಡ ಸಂಭವಿಸಿದೆ. ಮಾರುತಿ ಸ್ವಿಫ್ಟ್ ಡಿಸೈರ್ ಕಾರಿನಲ್ಲಿ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Read More »ಬುದ್ದಿ ಕಲಿಯದ ಜನರೇ ಎಚ್ಚರ ಎಚ್ಚರ, ಮನೆಯಿಂದ ಹೊರಗೆ ಬಂದ್ರೆ ಸಾಯ್ತಿರಾ..!
ಬೆಂಗಳೂರು,ಏ.17- ನಮ್ ಜನಕ್ಕೆ ಅದೇನಾಗಿದೆಯೋ ಏನೋ… ಮಹಾಮಾರಿ ಕೊರೊನಾ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಸೋಂಕಿತರು ಹೆಚ್ಚಾಗಿ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಸಾವನ್ನಪ್ಪುವವರ ಪ್ರಮಾಣವೂ ಹೆಚ್ಚಾಗುತ್ತಿದೆ. ಹೀಗಿದ್ದರೂ ಜನರ ಅನಗತ್ಯ ಓಡಾಟ ನಿಂತಿಲ್ಲ. ಹೀಗಿದ್ದರೂ ಲಾಕ್‍ಡೌನ್ ನಿಯಮಗಳನ್ನು ಪಾಲಿಸದೆ ಮನದಂತೆ ಓಡಾಡುತ್ತಿರುವ ಪರಿ ನೋಡಿದರೆ ಇದು ಎಲ್ಲಿಗೆ ಹೋಗಿ ಮುಟ್ಟುತ್ತದೋ ಎಂಬ ಆತಂಕ ಎದುರಾಗಿದೆ. ಮನುಕುಲಕ್ಕೆ ಕಂಟಕವಾಗಿರುವ ಮಹಾಮಾರಿಯನ್ನು ನಿಯಂತ್ರಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಮಾ.24ರಂದು 21 ದಿನಗಳ ಕಾಲ …
Read More »ತುಮಕೂರು ಜಿಲ್ಲೆ ಜನರಿಗೆ ಬಿಗ್ ರಿಲೀಫ್.
ತುಮಕೂರು,ಏ.17- ದೇಶಾದ್ಯಂತ ಕೋರಾನಾ ಸೋಂಕು ಎಲ್ಲೆಡೆ ಅಟ್ಟಹಾಸ ದಿಂದ ಮೆರೆಯುತ್ತಿದ್ದ ರೆ ತುಮಕೂರಿನಲ್ಲಿ ಕಳೆದ 28 ದಿನಗಳ ಹಿಂದೆ ಶಿರಾದಲ್ಲಿ ವೃದ್ದನೊಬ್ಬ ಮೃತಪಟ್ಟಿದ್ದ ಈತನ ಹಿಸ್ಟರಿ ನೋಡಿ ತುಮಕೂರು ಜಿಲ್ಲಾಡಳಿತ ಬೆಚ್ತಿಬಿದ್ದಿತ್ತು . ದೆಹಲಿಯ ಜಮಾತ್ ಹೋಗಿ ಬಂದಿದ್ದು ಹಾಗೂ ಮೂರು ಜನ ಪತ್ನಿಯರು 16 ಜನ ಮಕ್ಕಳುನ್ನು ಹೊಂದಿದ್ದ ವೃದ್ದ ಮೃತಪಟ್ಟ ನಂತರ ಅವರ ಕುಟುಂಬದವರನ್ನು ಬೆಂಗಳೂರಿನ ರಾಜೀವ್ ಗಾಂಧಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ಅದರೆ ಅದೃಷ್ಟವಶಾತ್ ಅತನ ಮಗನಿಗೆ …
Read More »ವಿಶ್ವದ ಆರ್ಥಿಕತೆ 9 ಟ್ರಿಲಿಯನ್ ಡಾಲರನಷ್ಟು ಕುಸಿತ: ಆರ್ ಬಿ ಐ ಗವರ್ನರ್ ಶಕ್ತಿಕಾಂತ್ ದಾಸ್
ನವದೆಹಲಿ: ವಿಶ್ವದ ಆರ್ಥಿಕತೆ 9 ಟ್ರಿಲಿಯನ್ ಡಾಲರನಷ್ಟು ಕುಸಿತ ಕಂಡಿದ್ದು, ಭಾರತದ ಆರ್ಥಿಕತೆ ಸಧ್ಯ ಶೇ.1.9ರಷ್ಟಿದೆ ಕಳೆದ 4 ತಿಂಗಳುಗಳಿಂದ ಉತ್ಪಾದನೆ ತೀವ್ರವಾಗಿ ಕಡಿಮೆಯಾಗಿದೆ ಎಂದು ಆರ್ ಬಿ ಐ ಗವರ್ನರ್ ಶಕ್ತಿಕಾಂತ್ ದಾಸ್ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಕ್ತಿಕಾಂತ್ ದಾಸ್, ಕೊರೊನಾ ವಿರುದ್ಧ ಹೋರಾಡಲು ಬ್ಯಾಂಕ್ ಗಳಿಗೆ ಶೇ.60ರಷ್ಟು ಹೆಚ್ಚುವರಿ ಹಣ ನೀಡಲಾಗುತ್ತಿದೆ. ರಾಜ್ಯಗಳ ಯಾವುದೇ ಬ್ಯಾಂಕ್ ಗಳಲ್ಲಿ ಹಣದ ಕೊರತೆ ಆಗಿಲ್ಲ. ಬ್ಯಾಂಕ್ ಗಳಿಗೆ ಹೆಚ್ಚುವರಿ ಹಣ …
Read More »ಲಾಕ್‍ಡೌನ್ ಹಿನ್ನೆಲೆಯಲ್ಲಿ ಏ.20ರಿಂದ ಓಡಾಟಕ್ಕೆ ಪಾಸ್ ಅವಶ್ಯಕತೆ ಇಲ್ಲ.: ಅಶ್ವತ್ಥನಾರಾಯಣ್
ಬೆಂಗಳೂರು, ಏ.17- ಲಾಕ್‍ಡೌನ್ ಹಿನ್ನೆಲೆಯಲ್ಲಿ ಏ.20ರಿಂದ ಓಡಾಟಕ್ಕೆ ಪಾಸ್ ಅವಶ್ಯಕತೆ ಇರುವುದಿಲ್ಲ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ್ ತಿಳಿಸಿದ್ದಾರೆ. ಐಟಿ, ಬಿಟಿ ಉದ್ದಿಮೆಗಳ ಮುಖ್ಯಸ್ಥರೊಂದಿಗೆ ವಿಡಿಯೋ ಸಂವಾದ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಾಕ್ ಡೌನ್ ಯಥಾ ಪ್ರಕಾರ ಇರುತ್ತದೆ. ಇದು ಎಷ್ಟು ದಿನ ಅನ್ನೋದು ಗೊತ್ತಿಲ್ಲ. ಹೀಗಾಗಿ ನಮ್ಮ ಎಚ್ಚರಿಕೆಯಲ್ಲಿ ನಾವು ಕೆಲಸ ಕಾರ್ಯ ಆರಂಭಿಸಬೇಕಿದೆ ಎಂದು ಹೇಳಿದ್ದಾರೆ. ಐಟಿ ನೌಕರರ ಓಡಾಟಕ್ಕೆ ಪಾಸ್ ಅಗತ್ಯ ಉದ್ಭವ …
Read More »ಬೆಂಗಳೂರಿಗರೇ ಹುಷಾರ್, ಹೊಸಬರಿಗೆ ಮನೆ ಬಾಡಿಗೆ ಕೊಡಬೇಡಿ..!
ಬೆಂಗಳೂರು,ಏ.17-ನಗರದಲ್ಲಿ ಹೆಚ್ಚುತ್ತಿರುವ ಕೊರೊನಾ ಸೋಂಕು ಪ್ರಕರಣಗಳನ್ನು ತಡೆಗಟ್ಟಲು ಮುಂದಾಗಿರುವ ಬಿಬಿಎಂಪಿ ಅಕ್ಕಪಕ್ಕದ ಮನೆಗಳಿಗೆ ಹೊಸಬರು ಬಂದರೆ ಮಾಹಿತಿ ನೀಡುವಂತೆ ಸಾರ್ವಜನಿಕರಿಗೆ ಮನವಿ ಮಾಡಿದೆ. ಕೊರೊನಾ ಸೋಂಕಿತರೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿರುವ ಕೆಲವು ವ್ಯಕ್ತಿಗಳು ಮನೆ ಖಾಲಿ ಮಾಡಿಕೊಂಡು ಬೇರೆ ವಾರ್ಡ್‍ಗಳಿಗೆ ತೆರಳುತ್ತಿರುವುದು ಸಾಬೀತಾದ ನಂತರ ಬಿಬಿಎಂಪಿ ಈ ಮಹತ್ವದ ತೀರ್ಮಾನ ಕೈಗೊಂಡಿದೆ. ಹೊಸಬರು ಮನೆ ಕೇಳಿಕೊಂಡು ಬಂದರೆ ಬಾಡಿಗೆ ನೀಡಬೇಡಿ. ಒಂದು ವೇಳೆ ನಿಮ್ಮ ಅಕ್ಕಪಕ್ಕದ ಮನೆಗಳಿಗೆ ಹೊಸಬರು ಬಂದರೆ …
Read More »ಸಿಂಪಲ್ಲಾಗಿ ನಡೀತು ನಿಖಿಲ್-ರೇವತಿ ಅವರ ವಿವಾಹ….
ಬೆಂಗಳೂರು, ಏ.17- ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮತ್ತು ಶಾಸಕಿ ಅನಿತಾ ಕುಮಾರಸ್ವಾಮಿ ಅವರ ಪುತ್ರ ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ಹಾಗೂ ನಟ ನಿಖಿಲ್ ಗೌಡ ಮತ್ತು ರೇವತಿ ಅವರ ವಿವಾಹ ಇಂದು ರಾಮನಗರ ತಾಲ್ಲೂಕಿನ ಕೇತಗಾನಹಳ್ಳಿಯ ತೋಟದ ಮನೆಯಲ್ಲಿ ಸರಳವಾಗಿ ನಡೆಯಿತು. ಕೊರೊನಾ ಸೋಂಕು ಹರಡುವುದನ್ನು ತಡೆಯಲು ಲಾಕ್ ಡೌನ್ ಮುಂದುವರೆಸಿರುವುದರಿಂದ ಕುಮಾರಸ್ವಾಮಿ ಅವರ ತೋಟದ ಮನೆಯಲ್ಲಿ ಎರಡೂ ಕುಟುಂಬದವರ ಸಮ್ಮುಖದಲ್ಲಿ ಮದುವೆಯು ಸಂಪ್ರದಾಯದಂತೆ ಶಾಸ್ತ್ರೋಕ್ತವಾಗಿ ನಡೆಸಲಾಯಿತು. ಮಾಜಿ …
Read More »