Breaking News

ಕನಿಷ್ಟ 30 ಜನ ಮಾಧ್ಯಮ ಪ್ರತಿನಿಧಿಗಳಿಗೆ ಕೊರೋನಾ ಸೋಂಕು ಪತ್ತೆ

ಮುಂಬೈಯಲ್ಲಿ ಕನಿಷ್ಟ 30 ಜನ ಮಾಧ್ಯಮ ಪ್ರತಿನಿಧಿಗಳಿಗೆ ಕೊರೋನಾ ಸೋಂಕು ಪತ್ತೆಯಾಗಿದೆ. ಮಾಧ್ಯಮದವರಿಗಾಗಿಯೇ ಏರ್ಪಡಿಸಲಾಗಿದ್ದ ವಿಶೇಷ ವೈದ್ಯಕೀಯ ಶಿಬಿರದಲ್ಲಿ 171 ಜನರ ಆರೋಗ್ಯ ತಪಾಸಣೆ ನಡೆಸಲಾಗಿದ್ದು, ಇನ್ನಷ್ಟೆ ಪೂರ್ಣ ವರದಿ ಬರಬೇಕಿದೆ. ಆದರೆ, ಈವರೆಗೆ ಬಂದಿರುವ ವರದಿಗಳ ಪೈಕಿ ಕನಿಷ್ಟ 30 ಜನರಿಗೆ ಸೋಂಕು ದೃಢಪಟ್ಟಿದೆ ಎಂದು ಪತ್ರಕರ್ತರ ಸಂಘದ ಅಧ್ಯಕ್ಷ ವಿನೋದ ಜಗದಾಳೆ ತಿಳಿಸಿದ್ದಾರೆ. ಟಿವಿ ವರದಿಗಾರರು ಮತ್ತು ಕ್ಯಾಮರಾಮನ್ ಗಳೇ ಇದರಲ್ಲಿ ಹೆಚ್ಚಾಗಿದ್ದಾರೆ. ಸಂಸದೆ ಪ್ರಿಯಾಂಕಾ ಚತುರ್ವೇದಿ …

Read More »

ವಿಜಯ್ ಸೇತುಪತಿ ಜಾಗಕ್ಕೆ ಧನಂಜಯ್?…………

ಬೆಂಗಳೂರು: ಡಾಲಿ ಖ್ಯಾತಿಯ ಧನಂಜಯ್ ಮತ್ತೊಮ್ಮೆ ಟಾಲಿವುಡ್‍ಗೆ ಎಂಟ್ರಿ ಕೊಡುವುದು ಬಹುತೇಕ ಖಚಿತ ಎನ್ನಲಾಗಿದ್ದು, ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ ‘ಪುಷ್ಪ’ ಸಿನಿಮಾದಲ್ಲಿ ತೆರೆ ಹಂಚಿಕೊಳ್ಳಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಅಲ್ಲದೆ ಇನ್ನೊಂದು ಅಚ್ಚರಿಯ ಪಾತ್ರವೆಂದರೆ ತಮಿಳಿನ ವಿಜಯ್ ಸೇತುಪತಿಯವರ ಜಾಗಕ್ಕೆ ಡಾಲಿ ಆಯ್ಕೆಯಾಗಿದ್ದಾರೆ ಎಂಬ ಮಾತುಗಳು ಸಹ ಕೇಳಿಬರುತ್ತಿವೆ. ಈ ಹಿಂದೆ ಕನ್ನಡದ ಭೈರವಗೀತ ಚಿತ್ರದಲ್ಲಿ ಧನಂಜಯ್ ಅಭಿನಯಿಸಿದ್ದರು, ಅದು ತೆಲುಗಿಗೂ ಡಬ್ ಆಗಿತ್ತು. ಇದೀಗ ಪುಷ್ಪ …

Read More »

30 ಟನ್ ಕಲ್ಲಂಗಡಿ, ಪೇರಳೆ ಖರೀದಿಸಿ ಜನರಿಗೆ ಉಚಿತವಾಗಿ ಹಂಚಿದ ಸತೀಶ್ ಜಾರಕಿಹೊಳಿ

ಚಿಕ್ಕೋಡಿ(ಬೆಳಗಾವಿ): ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದರಿಂದ ಸರ್ಕಾರ ಹೇರಲಾದ ಲಾಕ್ ಡೌನ್ ಹಿನ್ನೆಲೆಯಲ್ಲಿ ಬೆಳೆ ಬೆಳೆದ ರೈತರ ಮಾರಲಾಗದೆ ಸಂಕಷ್ಟಕೀಡಾಗಿದ್ದು, ಇದೀಗ ರೈತರ ಬೆನ್ನಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ, ಬೆಳಗಾವಿ ಜಿಲ್ಲೆಯ ಯಮಕನಮರಡಿ ಕಾಂಗ್ರೆಸ್ ಶಾಸಕ ಸತೀಶ್ ಜಾರಕಿಹೊಳಿ ನಿಂತಿದ್ದಾರೆ. ರೈತರು ಬೆಳೆದ ತರಕಾರಿ, ಹಣ್ಣುಗಳನ್ನು ಖರೀದಿಸಿ ಸಾರ್ವಜನಿಕರಿಗೆ ಹಂಚಿದ್ದಾರೆ. ಯಮನಕಮರಡಿ ಕ್ಷೇತ್ರದ ಹೆಬ್ಬಾಳ ಜಿಲ್ಲಾ ಪಂಚಾಯ್ತಿ ವ್ಯಾಪ್ತಿಯ ಉಳ್ಳಾಗಡ್ಡಿ ಖಾನಾಪುರ ಗ್ರಾಮದ ರೈತ ಹಣುಮಂತ ಎಂಬವರು ಸುಮಾರು ಮೂರು ಎಕರೆ …

Read More »

ತರೀಕೆರೆ ರಾಮದ ಜನ ಇಂದಿಗೂ ದಿನಕ್ಕೆ 19 ಗಂಟೆಗಳ ಕಾಲ ಗ್ರಾಮದ ದ್ವಾರಬಾಗಿಲಲ್ಲಿ ಕಾವಲು ಕೂತಿದ್ದಾರೆ.

ಚಿಕ್ಕಮಗಳೂರು: ಕೊರೊನಾ ವೈರಸ್‍ಗೆ ಆತಂಕಗೊಂಡು ಕಳೆದ 26 ದಿನಗಳಿಂದ ಜಿಲ್ಲೆಯ ತರೀಕೆರೆ ತಾಲೂಕಿನ ಹಾದಿಕೆರೆ ಗ್ರಾಮದ ಜನ ಇಂದಿಗೂ ದಿನಕ್ಕೆ 19 ಗಂಟೆಗಳ ಕಾಲ ಗ್ರಾಮದ ದ್ವಾರಬಾಗಿಲಲ್ಲಿ ಕಾವಲು ಕೂತಿದ್ದಾರೆ. ದಿನದಿಂದ ದಿನಕ್ಕೆ ಕೊರೊನಾ ಆತಂಕ ಹೆಚ್ಚುತ್ತಲೇ ಇದೆ. ಸಾವಿನ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಇವತ್ತು ನೆಗೆಟಿವ್ ಇದ್ದ ಜಿಲ್ಲೆಯಲ್ಲಿ ಬೆಳಗಾಗುವಷ್ಟರಲ್ಲಿ ಎರಡು-ಮೂರು ಪಾಸಿಟಿವ್ ಪ್ರಕರಣಗಳು ಬರುತ್ತಿವೆ. ಇಷ್ಟು ದಿನ ಜಿಲ್ಲೆ, ತಾಲೂಕು, ಪಟ್ಟಣಗಳಲ್ಲಿದ್ದ ಕೊರೊನಾ ಹಳ್ಳಿಗೂ ಕಾಲಿಟ್ಟಿರುವುದರಿಂದ ಜನ …

Read More »

ಬೆಳಗಾವಿ –ಗೂಡ್ಸ್ ಟೆಂಪೋದಲ್ಲಿ ಸಾಗಿಸುತ್ತಿದ್ದ 3.70 ಲಕ್ಷ ರೂ. ಮೌಲ್ಯದ ಅಕ್ರಮ ಮದ್ಯ ವಶ

ಬೆಳಗಾವಿ – ಗೂಡ್ಸ್ ಟೆಂಪೋದಲ್ಲಿ ಸಾಗಿಸುತ್ತಿದ್ದ 3.70 ಲಕ್ಷ ರೂ. ಮೌಲ್ಯದ ಅಕ್ರಮ ಮದ್ಯವನ್ನು ಬೆಳಗಾವಿಯ ಉದ್ಯಮಬಾಗ ಠಾಣೆ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಇಬ್ಬರನ್ನು ಬಂಧಿಸಿದ್ದಾರೆ. ಬೆಳಗಾವಿಯ ಪೋರ್ಟ್ ರಸ್ತೆಯ ಸುರೇಶ ಮಂಜುನಾಥ ಪಾಟೀಲ ಮತ್ತು ಮಹದ್ವಾರರಸ್ತೆಯ ಸುಭಾಷ ಸುಧೀರಡೆ ಎನ್ನುವವರನ್ನು ಬಂಧಿಸಲಾಗಿದೆ. ತರಕಾರಿಗಳ ಮಧ್ಯೆ ಬಚ್ಚಿಟ್ಟು ಗೋವಾದಿಂದ ಮದ್ಯವನ್ನು ತರಲಾಗುತ್ತಿತ್ತು. ಖಡೇಬಜಾರ್ ಡಿಎಸ್ಪಿ ಎ ಚಂದ್ರಪ್ಪ ಮಾರ್ಗದರ್ಶನದಲ್ಲಿ, ಉದ್ಯಮಬಾಗ ಪಿಐ ದಯಾನಂದ ಶೇಗುಣಶಿ, ಪಿಎಸ್ಐ ಮಂಜುನಾಥ ಬಜಂತ್ರಿ, …

Read More »

ಐಟಿ-ಬಿಟಿ ಕಂಪನಿ ಓಪನ್ ಇಲ್ಲ: ಸಚಿವ ಮಾಧುಸ್ವಾಮಿ

ಬೆಂಗಳೂರು: ಸಿಎಂ ಯಡಿಯೂರಪ್ಪ ಏಪ್ರಿಲ್ 20ರಿಂದ ಅಂದರೆ ಇಂದಿನಿಂದ ಐಟಿ-ಬಿಟಿ ಕಂಪನಿ ಓಪನ್ ಆಗುತ್ತವೆ ಎಂದು ಹೇಳಿದ್ದರು. ಆದರೆ ಇದೀಗ ಕ್ಯಾಬಿನೆಟ್ ಸಭೆಯಲ್ಲಿ ಐಟಿ-ಬಿಟಿ ಕಂಪನಿ ಓಪನ್ ಇಲ್ಲ ಎಂದು ಸಚಿವ ಮಾಧುಸ್ವಾಮಿ ಘೋಷಣೆ ಮಾಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಮೇ 3ರ ತನಕ ಲಾಕ್‍ಡೌನ್ ಇರುತ್ತದೆ. ಹೀಗಾಗಿ ಯಾವುದೇ ರಿಯಾಯಿತಿ ಇರಲ್ಲ. ರಾಜ್ಯವೇ ಫುಲ್ ಲಾಕ್‍ಡೌನ್ ಆಗುತ್ತದೆ. ಕೇರಳ, ಉತ್ತರ ಪ್ರದೇಶ ಮಾದರಿಯಲ್ಲಿ ಸುಗ್ರಿವಾಜ್ಞೆಗೆ ಕ್ಯಾಬಿನೆಟ್ ಒಪ್ಪಿಗೆ ನೀಡಿದೆ. …

Read More »

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ತಂದೆ ಆನಂದ್ ಸಿಂಗ್ ಬಿಶ್ತ್ ಇಂದು ಬೆಳಗ್ಗೆ ನಿಧನರಾದರು.

ನವದೆಹಲಿ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ತಂದೆ ಆನಂದ್ ಸಿಂಗ್ ಬಿಶ್ತ್ ಇಂದು ಬೆಳಗ್ಗೆ ನಿಧನರಾದರು. ಆನಂದ್ ಸಿಂಗ್ ಬಿಶ್ತ್ (89) ಅವರು ದೆಹಲಿಯ ಏಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ಬೆಳಗ್ಗೆ 10.44ಕ್ಕೆ ನಿಧನರಾದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಯುಪಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, “ಸಿಎಂ ಯೋಗಿ ಆದಿತ್ಯನಾಥ್ ಅವರ ತಂದೆ ಬೆಳಗ್ಗೆ  ನಿಧನರಾಗಿದ್ದಾರೆ” ಎಂದು …

Read More »

ಒಂದು ತಿಂಗಳು ಪೂರ್ಣಗೊಳಿಸಿದ ” ಹಸಿದವರತ್ತ ನಮ್ಮ ಚಿತ್ತ” ಅಭಿಯಾನ:ಅಶೋಕ ಚಂದರಗಿ

ಬೆಳಗಾವಿ :1991 ರಲ್ಲಿ ಅಸ್ತಿತ್ವಕ್ಕೆ ಬಂದ ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ನಾಡು,ನುಡಿ,ಗಡಿ ಹಿತಾಸಕ್ತಿಗೆ ಸಂಬಂಧಿಸಿದ ನೂರಾರು ಹೋರಾಟಗಳನ್ನು ಮಾಡುತ್ತ ಬಂದಿದೆ.ಜೊತೆಗೆ ಅನೇಕ ಸಾಮಾಜಿಕ ಸಮಸ್ಯೆಗಳ ಪರಿಹಾರಕ್ಕೂ ಶ್ರಮಿಸಿದ್ದು ಈ ನಾಡಿಗೆ ಗೊತ್ತಿದೆ. ನೆರೆಹಾವಳಿ,ಬರಗಾಲ ಮತ್ತಿತರ ನೈಸರ್ಗಿಕ ವಿಕೋಪದ ಕಾಲಕ್ಕೂ ಜನರ ಸಂಕಷ್ಟಗಳಿಗೆ ಸ್ಪಂದಿಸುತ್ತಲೇ ಬಂದಿದೆ. 2018 ರ ಅಗಷ್ಟ ತಿಂಗಳಲ್ಲಿ ಕೊಡಗು ಜಿಲ್ಲೆಯಲ್ಲಿ ಕುಂಭದ್ರೋಣ ಮಳೆಯಿಂದಾಗಿ ಆದ ಅಪಾರ ಪ್ರಮಾಣದ ಹಾನಿಯ ಸಂದರ್ಭದಲ್ಲೂ ಬೆಳಗಾವಿಯಿಂದ ಅಗತ್ಯ …

Read More »

ಪಾದರಾಯನಪುರದಲ್ಲಿ ಗರುಡ ಟೀಂ ಎಂಟ್ರಿ ಕೊಟ್ಟಿದೆ. ಈ ಮೂಲಕ ಇನ್ಮುಂದೆ ಪಾದರಾಯನಪುರದಲ್ಲಿ ಯಾರೂ ಮಿಸುಕಾಡುವಂಗಿಲ್ಲ.

ಬೆಂಗಳೂರು: ನಗರದ ಪಾದರಾಯನಪುರದಲ್ಲಿ ಭಾನುವಾರ ರಾತ್ರಿ ಕೆಲ ಪುಂಡರು ಗಲಭೆ ನಡೆಸಿದ ಸಂಬಂಧ ಇದೀಗ ಏರಿಯಾಗೆ ಗರುಡ ಟೀಂ ಎಂಟ್ರಿ ಕೊಟ್ಟಿದೆ. ಈ ಮೂಲಕ ಇನ್ಮುಂದೆ ಪಾದರಾಯನಪುರದಲ್ಲಿ ಯಾರೂ ಮಿಸುಕಾಡುವಂಗಿಲ್ಲ. ರೈಫಲ್ ಹಿಡಿದುಕೊಂಡು ಗರುಡ ಕಮಾಂಡೋಗಳು ನಡು ರಸ್ತೆಯಲ್ಲಿ ನಿಂತುಕೊಳ್ಳುತ್ತಾರೆ. ಮಾಸ್ಕ್ ಹಾಕದೆ, ಹೊರಗಡೆ ಓಡಾಡುವ ಜನರಿಗೆ ಫುಲ್ ಕ್ಲಾಸ್ ತೆಗೆದುಕೊಳ್ಳುತ್ತಿದ್ದಾರೆ. ಗರುಡ ಟೀಮ್ ನೋಡಿ ಜನ ಮನೆಯಿಂದ ಹೊರಬರಲು ಭಯಪಟ್ಟಿದ್ದಾರೆ. ಇತ್ತ ಪೊಲೀಸರು ಕೂಡ ಪ್ರತಿ ಏರಿಯಾದಲ್ಲೂ ಗಸ್ತು …

Read More »

ಗೋಕಾಕ ತಾಲೂಕಿನಲ್ಲಿ ಅಕ್ರಮ ಮರಳು ಸಾಗಾಟ ರಾಜಾರೋಷವಾಗಿ‌ನಡೆಯುತ್ತಿದ್ದು,ಅಧಿಕಾರಿಗಳ ವಿರುದ್ಧ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಗರಂ

ಗೋಕಾಕ: ಲಾಕ್‌ಡೌನ್ ಮಧ್ಯೆಯೂ ಗೋಕಾಕ ತಾಲೂಕಿನಲ್ಲಿ ಅಕ್ರಮ ಮರಳು ಸಾಗಾಟ ರಾಜಾರೋಷವಾಗಿ‌ನಡೆಯುತ್ತಿದ್ದು ಇದಕ್ಕೆ ಕುಮ್ಮಕ್ಕು ನೀಡುತ್ತಿರುವ ಅಧಿಕಾರಿಗಳ ವಿರುದ್ಧ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಗರಂ ಆಗಿದ್ದಾರೆ. ನಿನ್ನೆ ನಗರದಲ್ಲಿ ಮಾತಾನಾಡಿ ಜನರಿಗೆ ಬೇಕಾಗಿರುವ ದಿನನಿತ್ಯ ಬಳಕೆಯ ವಸ್ತುಗಳನ್ನು ಸಾಗಾಟ ಮಾಡುವವರಿಗೆ ಪೊಲೀಸರು ಹಿಡಿದು ಥಳಿಸುತ್ತಿದ್ದಾರೆ. ಮರಳು ಲಾರಿಗಳನ್ನು ಬಿಡುತ್ತಿದ್ದಾರೆ.ಲಾಕ್‌ಡೌನ್ ನಲ್ಲಿ ಮರಳಿನ ಅವಶ್ಯಕತೆ ಏನೂ? ಲೋಕೋಪಯೋಗಿ ಇಲಾಖೆ ಇದಕ್ಕೆ ಪರಮಿಷನ್ ನೀಡಿದ್ದೇಯಾ? ಎಂದು ಕಿಡಿಕಾರಿದ್ದಾರೆ. ಕಣ್ಮುಚ್ಚಿ ಕುಳಿತಿರುವ ಲೋಕೋಪಯೋಗಿ, …

Read More »