Breaking News

ಉಡುಪಿ:ನರ್ಸ್‍ಗೆ ಜೀವ ಬೆದರಿಕೆ ಹಾಕಿದ ಪುಂಡರು……

ಉಡುಪಿ: ಕೋವಿಡ್-19ಗೆ ಚಿಕಿತ್ಸೆ ಕೊಡುತ್ತಿರುವ ವೈದ್ಯರು, ನರ್ಸ್‍ಗಳಿಗೆ ವಿದೇಶದಲ್ಲಿ ವಿಭಿನ್ನ ರೀತಿಯ ಧನ್ಯವಾದ, ಶುಭಾಶಯ ಹೇಳಲಾಗುತ್ತದೆ. ಆದರೆ ಭಾರತದಲ್ಲಿ ಕೆಲವು ಕಡೆಗಳಲ್ಲಿ ಆರೋಗ್ಯ ಕಾರ್ಯಕರ್ತರು, ಡಾಕ್ಟರ್‌ಗಳಿಗೆ ಧಮ್ಕಿ ಹಾಕುವ ಪ್ರಕರಣ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿದೆ. ಕಾಪು ತಾಲೂಕಿನ ಪಡುಬಿದ್ರೆಯ ಆರೋಗ್ಯ ಸಹಾಯಕಿ ಶ್ಯಾಮಲಾ ಅವರಿಗೆ ಧಮ್ಕಿ ಹಾಕಲಾಗಿದೆ. ನಿನ್ನನ್ನು ಫೀಲ್ಡ್ ನಲ್ಲಿ ನೋಡಿಕೊಳ್ಳುತ್ತೇನೆ. ಹೇಗೆ ಕೆಲಸ ಮಾಡುತ್ತೀಯಾ ನೋಡ್ಕೋತೇವೆ ಎಂದು ಮಮ್ತಾಜ್ ಮತ್ತು ಮನ್ಸೂರ್ ಎಂಬ ಕಿಡಿಗೇಡಿಗ ಜೀವ ಬೆದರಿಕೆ …

Read More »

ಗದಗ:ಸಚಿವರ ಅಭಿಮಾನಿಗಳಿಂದ ಸುಳ್ಳು ಸುದ್ದಿ- ಆತಂಕದಲ್ಲಿ ಜನ

ಗದಗ: ಬುಧವಾರ ಜಿಲ್ಲೆನಲ್ಲಿ ಯಾವುದೇ ಕೊರೊನಾ ಸಟಿವ್ ಪ್ರಕರಣಗಳು ಧೃಢಪಟ್ಟಿಲ್ಲ. ಆದರೂ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಸಿ.ಸಿ.ಪಾಟೀಲ್ ಫೇಸ್ಬುಕ್ ಫಾಲೋವರ್ಸ್ ಪಾಸಿಟಿವ್ ಕೇಸ್ ಇದೆ ಎಂದು ಸುಳ್ಳು ಸುದ್ದಿ ಹರಿಬಿಟ್ಟಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಜಿಲ್ಲೆಯ ಜನತೆ ತೀವ್ರ ಆತಂಕಕ್ಕೊಳಗಾಗಿದ್ದು, ಭಯಭೀತರಾಗಿದ್ದಾರೆ. ಕೊರೊನಾ ವೈರಸ್ ಪ್ರಕರಣದ ಕುರಿತು ಇಂದಿನ ಮೀಡಿಯಾ ಬುಲೆಟಿನ್ ನಲ್ಲಿಪ್ರಕಟವಾಗಿಲ್ಲ. ಆದರೆ ಫೆಸ್ಬುಕ್‍ನಲ್ಲಿ ಹಾಕಿದ್ದಾರೆ. ಇದು ಸುಳ್ಳು ಸುದ್ದಿಯಾಗಿದ್ದು, …

Read More »

ಚಿಕ್ಕಮಗಳೂರು:ಕೂಲಿಗೆ ಹೋಗಿಲ್ಲ, ಆಹಾರ ಕಿಟ್ ಸಿಕ್ಕಿಲ್ಲ- ಹಕ್ಕಿಪಿಕ್ಕಿ ಜನಾಂಗದವರ ಅಳಲು

ಚಿಕ್ಕಮಗಳೂರು: ದೇಶದಲ್ಲಿ ಲಾಕ್‍ಡೌನ್ ಆದಾಗಿನಿಂದ ನಗರದ ಇಂದಿರಾಗಾಂಧಿ ಬಡಾವಣೆಯ ಹಕ್ಕಿಪಿಕ್ಕಿ ಕಾಲೋನಿಯ ಮಹಿಳೆಯರು ಕೂಲಿ ಕೆಲಸಕ್ಕೆ ಹೋಗುತ್ತಿಲ್ಲ. ನಮಗೆ ಆಹಾರ ಸಾಮಾಗ್ರಿಗಳ ಕಿಟ್ ಕೂಡ ಸಿಕ್ಕಿಲ್ಲ, ಆಹಾರ ಧಾನ್ಯಗಳೇ ಇಲ್ಲದಂತಾಗಿದೆ ಎಂದು ಜಿಲ್ಲಾಧಿಕಾರಿ ಕಚೇರಿ ಮುಂದೆ ಆಕ್ರೋಶ ವ್ಯಕ್ತಪಡಿಸಿ, ಜಿಲ್ಲಾಧಿಕಾರಿ ಬಗಾದಿ ಗೌತಮ್ ಅವರಿಗೆ ಮನವಿ ಸಲ್ಲಿಸಿದ್ದಾರೆ. ತಕ್ಷಣವೇ ಸ್ಪಂದಿಸಿದ ಜಿಲ್ಲಾಧಿಕಾರಿ ಈ ಕುರಿತು ಅಧಿಕಾರಿಗಳಿಗೆ ಸೂಚಿಸಿದ್ದು, ಜಿಲ್ಲಾಧಿಕಾರಿ ಸೂಚನೆ ಮೇರೆಗೆ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಉಪನಿರ್ದೇಶಕರು …

Read More »

ಮಾಸ್ಕ್ ಧರಿಸದೆ ನೀವು ಮನೆಯಿಂದ ಹೊರಗೆ ಬರುವಂತಿಲ್ಲ.:ಎಸ್.ಬಿ.ಬೊಮ್ಮನಳ್ಳಿ

ಬೆಳಗಾವಿ – ಜಿಲ್ಲಾಧಿಕಾರಿ ಎಸ್.ಬಿ.ಬೊಮ್ಮನಳ್ಳಿ ಬುಧವಾರ ಸಂಜೆ ಹೊಸ ಆದೇಶವೊಂದನ್ನು ಹೊರಡಿಸಿದ್ದಾರೆ. ಈ ಆದೇಶದ ಪ್ರಕಾರ ಇನ್ನು ಮುಂದೆ ಮಾಸ್ಕ್ ಧರಿಸದೆ ನೀವು ಮನೆಯಿಂದ ಹೊರಗೆ ಬರುವಂತಿಲ್ಲ. ಕೊರೋನಾ ವೈರಸ್ ತೀವ್ರಗತಿಯಲ್ಲಿ ಹರಡುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ನೂತನ ಆದೇಶ ಹೊರಡಿಸಿದ್ದಾರೆ. ಈ ಆದೇಶದ ಪ್ರಕಾರ ಮಾಸ್ಕ್ ಧರಿಸದೆ ಹೊರಗೆ ಬಂದರೆ 100 ರೂ. ದಂಡ ವಿಧಿಸಲಾಗುತ್ತದೆ. ಜೊತೆಗೆ, ಸಾರ್ವಜನಿಕ ಸ್ಥಳದಲ್ಲಿ ಉಗುಳಿದರೂ 100 ರೂ. ದಂಡ ವಿಧಿಸುವುದಾಗಿ ಎಚ್ಚರಿಕೆ ನೀಡಿರುವ …

Read More »

ಕೊರೋನಾ ಪೀಡಿತನಿಗೆ ಚಿಕಿತ್ಸೆ ನೀಡಿ ಮಾಹಿತಿ ಮುಚ್ಚಿಟ್ಟ ಕ್ಲಿನಿಕ್ ಗೆ ಬೀಗ..!

ಬೆಂಗಳೂರು : ನಗರದ ಹೋಂಗಸಂದ್ರದಲ್ಲಿರುವ ಕ್ಲಿನಿಕ್ ನ ವೈದ್ಯರೊಬ್ಬರು ಕೋವಿಡ್ ರೋಗಿಗೆ ಹಲವು ದಿನಗಳಿಂದ ಚಿಕಿತ್ಸೆ ನೀಡಿದ್ದು, ಮಾಹಿತಿ ತಿಳಿದರೂ ಕೂಡ ಆರೋಗ್ಯ ಇಲಾಖೆ ಅಥವಾ ಇತರೆ ಅಧಿಕಾರಿಗಳಿಗೆ ಮಾಹಿತಿ ತಾವಾಗಿ ನೀಡದೆ, ಮಾಹಿತಿ ಮುಚ್ಚಿಟ್ಟ ವೇಣು ಕ್ಲಿನಿಕ್ ಗೆ ಬೀಗ ಜಡಿದು , ಅನುಮತಿ ರದ್ದುಗೊಳಿಸಲಾಗಿದೆ. ತಾವು ಚಿಕಿತ್ಸೆ ನೀಡಿದ್ದ ವ್ಯಕ್ತಿಗೆ ಪಾಸಿಟಿವ್ ಎಂದು ತಿಳಿದ ಮೇಲೂ ಆರೋಗ್ಯ ಇಲಾಖೆಗೆ ಮಾಹಿತಿ ನೀದರೆ ಕ್ಲಿಕಿಕ್ ನಲ್ಲೆ ಅವಿತು ಕುಳಿತಿದ್ದರು. …

Read More »

ಕೊರೋನಾ ಕುರಿತು ಮತ್ತೊಂದು ಭವಿಷ್ಯ ನುಡಿದ ಕೋಡಿ ಶ್ರೀಗಳು..!

ಹಾಸನ : ಮೇ ಅಂತ್ಯಕ್ಕೆ ಕೊರೊನಾ ಮಹಾಮಾರಿ ಕೊನೆಯಾಲಿದೆ , ಪ್ರಕೃತಿ ಜೊತೆ ಜನ ಸಹಕರಿಸಿದರೆ ವ್ಯಾಧಿ ಶೀಘ್ರ ದೂರವಾಗಲಿದೆ, ಭಾರತಕ್ಕಿಲ್ಲ ಮಹಾಮಾರಿಯ ಗಂಡಾಂತರ ಎಂದು ಕೋಡಿ ಮಠ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಶ್ರೀ ಗಳು ಮತ್ತೊಮ್ಮೆ ಭವಿಷ್ಯ ನುಡಿದಿದ್ದಾರೆ. ಅರಸೀಕೆರೆ ತಾಲ್ಲೂಕಿನ ಕೋಡಿ ಮಠದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜನರು ಬಹಳ ಎಚ್ಚರದಿಂದ ಸರ್ಕಾರದ ಜೊತೆ ಸಹಕರಿಸಬೇಕು ಎಂದು ಶ್ರೀಗಳ ಮನವಿ ಮಾಡಿದ್ದಾರೆ . ‘ಸಿರಿವಂತ ಮಗನುಟ್ಟಿ …

Read More »

ಮೇ 3ರವರೆಗೆ ಮದ್ಯ ಮಾರಾಟಕ್ಕೆ ಅವಕಾಶ ಇಲ್ಲ : ಸಚಿವ ಎಸ್.ಟಿ. ಸೋಮಶೇಖರ್

ಚಾಮರಾಜನಗರ- ಮೇ 3ರ ವರೆಗೆ ರಾಜ್ಯದ ಯಾವುದೇ ಭಾಗದಲ್ಲೂ ಮದ್ಯ ಮಾರಾಟಕ್ಕೆ ಅವಕಾಶ ಇಲ್ಲ. ರಾಜ್ಯಕ್ಕೆ ಇದರಿಂದ ನಷ್ಟವಾಗುತ್ತಿದ್ದರೂ ಜನತೆ ಹಿತದೃಷ್ಟಿಯಿಂದ ಸಿಎಂ ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ತಿಳಿಸಿದರು. ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆಗೆ ಹಲವು ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಚಿವರು, ಬಳಿಕ ಸಭೆ ನಡೆಸಿ ಕೆಲವು ಕಟ್ಟುನಿಟ್ಟಿನ ಸೂಚನೆ ನೀಡಿದರು. ಸಾಮಾಜಿಕ ಅಂತರವನ್ನು …

Read More »

ಕೊರೊನಾ ವಾರಿಯರ್ಸ್‍ಗಾಗಿ 8 ಐಶಾರಾಮಿ ಹೋಟೆಲ್‍ಗಳನ್ನೇ ಬಿಟ್ಟುಕೊಟ್ಟ ರೋಹಿತ್ ಶೆಟ್ಟಿ

ಮುಂಬೈ: ಕೊರೊನಾ ವೈರಸ್ ಹಾವಳಿಗೆ ಭಾರತ ಮಾತ್ರವಲ್ಲದೇ ಇಡೀ ವಿಶ್ವವೇ ತತ್ತರಿಸಿ ಹೋಗಿದೆ. ಸೋಂಕು ಹರಡುವುದನ್ನು ತಡೆಗಟ್ಟಲು ದೇಶಾದ್ಯಂತ ಲಾಕ್‍ಡೌನ್ ಜಾರಿಮಾಡಲಾಗಿದೆ. ಲಾಕ್‍ಡೌನ್ ಅಂತ ಎಲ್ಲರೂ ಮನೆಯಲ್ಲಿಯೇ ಇದ್ದಾರೆ. ಆದರೆ ವೈದ್ಯರು, ಸ್ವಚ್ಛತಾ ಕಾರ್ಮಿಕರು, ಪೊಲೀಸರು ಹಾಗೂ ಅಗತ್ಯ ಸೇವೆಗಳಲ್ಲಿ ಕಾರ್ಯನಿರ್ವಹಿಸುವ ಮಂದಿ ಮಾತ್ರ ಕೊರೊನಾ ವಿರುದ್ಧ ಹೋರಾಡುತ್ತಲೇ ಇದ್ದಾರೆ. ಸೆಲೆಬ್ರಿಟಿಗಳು ಆರೋಗ್ಯ ಯೋಧರ ಸಹಾಯಕ್ಕೆ ದೇಣಿಗೆ ನೀಡಿದ್ದಾರೆ. ಹೀಗೆ ಕೊರೊನಾ ಯೋಧರಿಗೆ ನೆರವಿಗೆ ಮುಂದೆ ಬಂದವರ ಪಟ್ಟಿಗೆ ಬಾಲಿವುಡ್‍ನ …

Read More »

ಕೋವಿಡ್-19 ವಾರಿಯರ್ಸ್‍ಗೆ ಗೌರವ ಸಲ್ಲಿಸುವುದಕ್ಕಾಗಿ ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳದಿರಲು ನಿರ್ಧರಿಸಿದ್ದಾರೆ.-ಕ್ರಿಕೆಟ್ ದಿಗ್ಗಜ

ಮುಂಬೈ: ಕೊರೊನಾ ವೈರಸ್ ಸಾಂಕ್ರಾಮಿಕ ರೋಗದ ವಿರುದ್ಧ ಭಾರತ ಹೋರಾಟವನ್ನು ಮುಂದುವರಿಸಿದೆ. ಇತ್ತ ಶುಕ್ರವಾರ 47ನೇ ವಸಂತಕ್ಕೆ ಕಾಲಿಡುತ್ತಿರುವ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರು, ಕೋವಿಡ್-19 ವಾರಿಯರ್ಸ್‍ಗೆ ಗೌರವ ಸಲ್ಲಿಸುವುದಕ್ಕಾಗಿ ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳದಿರಲು ನಿರ್ಧರಿಸಿದ್ದಾರೆ. ಇದು ಆಚರಣೆಗಳ ಸಮಯವಲ್ಲ ಎಂದು ಸಚಿನ್ ಹೇಳಿದ್ದಾರೆ. ಹೀಗಾಗಿ ಅವರು ಈ ವರ್ಷ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ. ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಎಲ್ಲಾ ವೈದ್ಯರು, ದಾದಿಯರು, ವೈದ್ಯಕೀಯ ಸಿಬ್ಬಂದಿ, ಪೊಲೀಸರು, …

Read More »

ಕೊರೊನಾ ವಾರಿಯರ್ಸ್ ಮೇಲೆ ದಾಳಿ ನಡೆಸಿದ್ರೆ ಹುಷಾರ್- ರಾಜ್ಯದಲ್ಲಿ 3 ವರ್ಷ ಜೈಲು, ಆಸ್ತಿ ಜಪ್ತಿ

ಬೆಂಗಳೂರು: ನಗರದ ಪಾದರಾಯನಪುರ ಗಲಭೆ ಬೆನ್ನಲ್ಲೇ ಕೊರೊನಾ ವಾರಿಯರ್ಸ್ ಮೇಲಿನ ದಾಳಿ ತಡೆ ಸಂಬಂಧ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಸರ್ಕಾರ ಸುಗ್ರಿವಾಜ್ಞೆ ಹೊರಡಿಸಿದೆ. ಕರ್ನಾಟಕ ಸಾಂಕ್ರಾಮಿಕ ರೋಗಗಳ ಕಾಯ್ದೆಗೆ ರಾಜ್ಯಪಾಲರು ಅಂಕಿತ ಹಾಕಿದ್ದು, ತಕ್ಷಣದಿಂದಲೇ ಜಾರಿಗೆ ಬಂದಿದೆ. ಇನ್ಮೇಲೆ, ಸರ್ಕಾರಿ ಅಧಿಕಾರಿಗಳು, ಕೊರೊನಾ ವಾರಿಯರ್ಸ್ ಮೇಲೆ ಹಲ್ಲೆ ನಡೆಸಿದರೆ ಅಂಥವರಿಗೆ ಮುಟ್ಟಿ ನೋಡಿಕೊಳ್ಳುವ ರೀತಿಯಲ್ಲಿ ಶಿಕ್ಷೆ ನೀಡಲಾಗುತ್ತದೆ. ಕೇಂದ್ರ ಸರ್ಕಾರ ಕೂಡ 1897ರ ಸಾಂಕ್ರಾಮಿಕ ರೋಗಗಳ ನಿಯಂತ್ರಣ ಕಾಯ್ದೆಗೆ ತಿದ್ದುಪಡಿ …

Read More »