ಚೆನ್ನೈ: ಕೊರೊನಾದಿಂದ ಮೃತಪಟ್ಟ ವ್ಯಕ್ತಿಯ ಅಂತ್ಯ ಸಂಸ್ಕಾರಕ್ಕೆ ಅಡ್ಡಿಪಡಿಸಿದರೆ ತಮಿಳುನಾಡಿನಲ್ಲಿ 3 ವರ್ಷ ಜೈಲು ಶಿಕ್ಷೆಯಾಗಲಿದೆ. ಕೋವಿಡ್-19 ಸೋಂಕಿನಿಂದ ಮೃತಪಟ್ಟ ರೋಗಿಗಳ ಅಂತ್ಯಸಂಸ್ಕಾರ ಅಥವಾ ಹೂಳಲು ಜನ ವಿರೋಧ ವ್ಯಕ್ತಿಪಡಿಸಿದರೆ ಮೂರು ವರ್ಷ ಜೈಲು ಶಿಕ್ಷೆ ವಿಧಿಸಲು ತಮಿಳುನಾಡು ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿದೆ. ಮಾರಣಾಂತಿಕ ಕೋವಿಡ್-19 ಮೃತಪಟ್ಟ ವ್ಯಕ್ತಿಗಳ ಅಂತ್ಯಸಂಸ್ಕಾರಕ್ಕೆ ಅಡ್ಡಿಪಡಿಸುವುದು ಕ್ರಿಮಿನಲ್ ಅಪರಾಧ ಎಂದು ಸುಗ್ರೀವಾಜ್ಞೆಯಲ್ಲಿ ಉಲ್ಲೇಖಿಸಲಾಗಿದೆ. ತಮಿಳುನಾಡು ಸಾರ್ವಜನಿಕ ಕಾಯ್ದೆ 1939ರ ಸೆಕ್ಷನ್ 74ರ ಪ್ರಕಾರ ಅಡ್ಡಿಪಡಿಸಿದರೆ …
Read More »ರಾಯಚೂರು ಜಿಲ್ಲೆಯಲ್ಲಿ ಲಾಕ್ ಡೌನ್ ಸಡಿಲಿಕೆ – ಗರಿಗೆದರಿದ ಕೃಷಿ ಚಟುವಟಿಕೆಗಳು
ರಾಯಚೂರು(ಏ.27): ಕೊರೋನಾ ಸೋಂಕಿನಿಂದ ದೂರವಿರುವ ರಾಯಚೂರು ಜಿಲ್ಲೆಯಲ್ಲಿ ಈಗ ಲಾಕ್ ಡೌನ್ ಸಡಿಲಿಕೆಯಾಗಿದೆ. ಈ ಮಧ್ಯೆ ಗ್ರೀನ್ ಝೋನ್ ನಲ್ಲಿರುವ ಜಿಲ್ಲೆಯಲ್ಲಿ ಕೃಷಿ ಚಟುವಟಿಕೆಗಳು ಗರಿಗೆದರಿವೆ. ಇಲ್ಲಿ ಕೃಷಿಕರ ಫಸಲು ಮಾರಾಟಕ್ಕೆ ನೇರವಾಗಿ ಮಿಲ್ ಗಳಿಗೆ ಕಳುಹಿಸಲಾಗುತ್ತಿದೆ. ಜಗತ್ತನ್ನು ಕಾಡುತ್ತಿರುವ ಮಹಾಮಾರಿ ಕೊರೋನಾ ರಾಯಚೂರು ಜಿಲ್ಲೆಯಲ್ಲಿ ಇಲ್ಲಿಯವರೆಗೂ ಮುಕ್ತವಾಗಿದೆ. ಕೊರೋನಾ ಇಲ್ಲದ ಕಾರಣ ಜಿಲ್ಲೆಯು ಈಗ ಗ್ರೀನ್ ಝೋನ್ ನಲ್ಲಿದ್ದು, ಈಗ ಲಾಕ್ ಡೌನ್ ಸಡಿಲಿಕೆಯಾಗಿದ್ದು, ಇಲ್ಲಿ ಕೃಷಿ ಚಟುವಟಿಕೆಗೆ …
Read More »ಕಾಫಿ ತುಂಬಾ ಕಾಸ್ಟ್ ಈಗ ಗ್ರೀನ್ ಟೀ ಮಾತ್ರ ಕುಡಿಯಿರಿ.ಹಾರ್ದಿಕ್ ಪಾಂಡ್ಯ ‘ಕಾಫಿ ವಿಥ್ ಕರಣ್’ ವಿವಾದವನ್ನು ನೆನೆದಿದ್ದಾರೆ.
ಮುಂಬೈ: ಕಾಫಿ ತುಂಬಾ ಕಾಸ್ಟ್ಲಿ ಆಗಿದೆ, ಈಗ ಗ್ರೀನ್ ಟೀ ಮಾತ್ರ ಕುಡಿಯಿರಿ ಎಂದು ಟೀಂ ಇಂಡಿಯಾ ಆಲ್‍ರೌಂಡರ್ ಹಾರ್ದಿಕ್ ಪಾಂಡ್ಯ ‘ಕಾಫಿ ವಿಥ್ ಕರಣ್’ ವಿವಾದವನ್ನು ನೆನೆದಿದ್ದಾರೆ. ಇನ್‍ಸ್ಟಾಗ್ರಾಮ್ ಚಾಟ್ ಶೋನಲ್ಲಿ ಪಾಂಡ್ಯ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಅವರೊಂದಿಗೆ ಮಾತನಾಡುತ್ತಿದ್ದಾಗ 2019ರಲ್ಲಿ ನಡೆದ ಘಟನೆಯನ್ನು ಮೆಲುಕು ಹಾಕಿದ್ದಾರೆ. ಕಾರ್ತಿಕ್ ಅವರು ಕರಣ್ ವಿಥ್ ಕಾಫಿ ಕಾರ್ಯಕ್ರಮ ಪ್ರಸ್ತಾಪಿಸುತ್ತಿದ್ದಂತೆ ಪ್ರತಿಕ್ರಿಯೆ ನೀಡಿದ ಹಾರ್ದಿಕ್, “ಕಾಫಿ ತುಂಬಾ ದುಬಾರಿಯಾಗಿದೆ. ಹೀಗಾಗಿ …
Read More »ಮಹಿಳೆಯರಿಗೆ ಸಲಹೆಯೊಂದನ್ನು ನೀಡಿದ ನಟಿ ಹರಿಪ್ರಿಯಾ…….
ಬೆಂಗಳೂರು: ಸಿನಿಮಾದಲ್ಲಿ ಬರುವ ಭಯಾನಕ ವಿಲನ್ ಕೂಡ ಜಿರಳೆಯಷ್ಟು ಭಯ ಹುಟ್ಟಿಸುವುದಿಲ್ಲ ಎಂದು ಚಂದನವದ ನಟಿ ಹರಿಪ್ರಿಯಾ ಹೇಳಿದ್ದಾರೆ. ಲಾಕ್‍ಡೌನ್‍ನಿಂದ ಮನೆಯಲ್ಲೇ ಕುಳಿತಿರುವ ನಟ-ನಟಿಯರು ಸಾಮಾಜಿಕ ಜಾಲತಾಣದಲ್ಲಿ ಮುಳುಗಿದ್ದಾರೆ. ಅಂತೆಯೇ ನಟಿ ಹರಿಪ್ರಿಯಾ ಕೂಡ ತಮ್ಮ ಬ್ಲಾಗ್‍ನಲ್ಲಿ ಆಗಾಗ ತಮ್ಮ ಅನುಭವದ ಕಥೆಯನ್ನು ಬರೆದು ಪೋಸ್ಟ್ ಮಾಡುತ್ತಿರುತ್ತಾರೆ. ಈಗ ಜಿರಳೆ ಕಥೆಯೊಂದು ಬರೆದು ತಮ್ಮ ಲೇಡಿ ಫ್ಯಾನ್ಸ್ ಗೆ ಸಲಹೆಯೊಂದನ್ನು ಹೇಳಿದ್ದಾರೆ ಈ ವಿಚಾರವಾಗಿ ತಮ್ಮ ಬ್ಲಾಗ್‍ನಲ್ಲಿ ತಮ್ಮ ಅನುಭವವನ್ನು …
Read More »ರೈತನ ಜೀವನಾಧಾರವಾಗಿರುವ ಜಾನುವಾರುಗಳ ನೋವಿಗೆ ಸ್ಪಂದಿಸಿ ಮಾನವೀಯತೆ ಮೆರೆದಿದ್ದಾರೆ.:ಎಸ್.ಮಲ್ಲಯ್ಯ
ಬೆಂಗಳೂರು: ಕೊರೊನಾ ಲಾಕ್‍ಡೌನ್ ಆಗಿ ಒಂದು ತಿಂಗಳು ಕಳೆಯುತ್ತಿದ್ದು, ಸಾಕಷ್ಟು ಜನರು ಬಡ ಹಾಗೂ ಕೂಲಿ ಕಾರ್ಮಿಕರ ನೆರವಿಗೆ ಸ್ಪಂದಿಸುತ್ತಿರುವುದು ಶ್ಲಾಘನೀಯ. ಆದರೆ ಇಲ್ಲೊಬ್ಬ ವ್ಯಕ್ತಿ ರೈತನ ಜೀವನಾಧಾರವಾಗಿರುವ ಜಾನುವಾರುಗಳ ನೋವಿಗೆ ಸ್ಪಂದಿಸಿ ಮಾನವೀಯತೆ ಮೆರೆದಿದ್ದಾರೆ. ನೆಲಮಂಗಲದ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾದ ಎಸ್.ಮಲ್ಲಯ್ಯ ಜಾನುವಾರುಗಳಿಗೆ ಮೇವು ನೀಡಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ರೈಲ್ವೆ ಗೊಲ್ಲಹಳ್ಳಿ ಗ್ರಾಮದಲ್ಲಿ ಹೈನುಗಾರಿಕೆ ಆಧಾರಿತ ಕುಟುಂಬಗಳ ಕೃಷಿಕರಿಗೆ ಸಹಾಯ ಮಾಡುವ ಉದ್ದೇಶದಿಂದ ಹಸುಗಳಿಗೆ …
Read More »ಅಕ್ರಮ ಮದ್ಯ ಸಾಗಾಟದಲ್ಲಿ ಅಧಿಕಾರಸ್ಥರ ಕೈವಾಡ; A.A.P.ಆರೋಪ
ಬೆಂಗಳೂರು, ಏಪ್ರಿಲ್ 25: ರಾಜ್ಯದಲ್ಲಿ ಕೊರೊನಾ ಲಾಕ್‌ಡೌನ್ ಸಂದರ್ಭದಲ್ಲಿ ಎಗ್ಗಿಲ್ಲದೆ ಮದ್ಯ ಸರಬರಾಜು ಆಗುತ್ತಿದೆ. ಮುಖ ಬೆಲೆಯ ಹತ್ತು ಪಟ್ಟಿಗೂ ಹೆಚ್ಚಿನ ಬೆಲೆಯಲ್ಲಿ ಮದ್ಯ ಸರಬರಾಜು ಮಾಡಿ ನೂರಾರು ಕೋಟಿ ರೂಪಾಯಿಗಳ ಅಕ್ರಮ ಗಳಿಕೆಗೆ ಈ ಲಾಕ್ ಡೌನ್ ಸಂದರ್ಭವನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಸಮಾಜ ವಿದ್ರೋಹಿ ಶಕ್ತಿಗಳ ಹಿಂದೆ ಅಧಿಕಾರಸ್ಥರ ನೇರ ಕೈವಾಡವಿರುವುದು ಕಂಡುಬರುತ್ತಿದೆ ಎಂದು ಕರ್ನಾಟಕ ಆಮ್ ಆದ್ಮಿ ಪಕ್ಷ ಆರೋಪಿಸಿದೆ. ಬೆಂಗಳೂರು ನಗರದ ಎಸಿಪಿ ವಾಸು ಎಂಬುವವರು …
Read More »ಏರ್ ಪೋರ್ಟ್ ರಸ್ತೆಯಲ್ಲಿ ಟೋಲ್ ಶುಲ್ಕ ಹೆಚ್ಚಳ …….
ಬೆಂಗಳೂರು, ಏಪ್ರಿಲ್ 26 : ಲಾಕ್ ಡೌನ್ ಮುಗಿದ ಬಳಿಕ ಬೆಂಗಳೂರಿನ ಏರ್ ಪೋರ್ಟ್ ರಸ್ತೆಯಲ್ಲಿ ಸಂಚಾರ ನಡೆಸುವ ವಾಹನ ಸವಾರರು ಹೆಚ್ಚಿನ ಟೋಲ್ ಶುಲ್ಕ ಪಾವತಿ ಮಾಡಬೇಕು. ಹೌದು, ಎನ್‌ಎಚ್‌ಎಐ 5 ರಿಂದ 30 ರೂ. ತನಕ ಟೋಲ್ ಶುಲ್ಕವನ್ನು ಹೆಚ್ಚಳ ಮಾಡಿದೆ. ಸಾದಹಳ್ಳಿ ಟೋಲ್ ಗೇಟ್‌ನಲ್ಲಿ ಲಾಕ್ ಡೌನ್ ಜಾರಿಯಲ್ಲಿದ್ದಾಗಲೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಟೋಲ್ ಶುಲ್ಕ ಹೆಚ್ಚಳ ಮಾಡಿದೆ. ಕಾರು, ವ್ಯಾನ್, ಜೀಪು ಒಂದು ಕಡೆ …
Read More »ಇಂದು ಬರಲಿದೆ ಪಾದರಾಯನಪುರ ಪುಂಡರ ಬಂಧಿಸಿದ್ದ ಪೊಲೀಸರ ಕೊರೊನಾ ಪರೀಕ್ಷಾ ವರದಿ ……..
ಬೆಂಗಳೂರು, ಏ. 27: ಪಾದರಾಯನಪುರ ಗಲಭೆ ಪ್ರಕರಣ ಆರೋಪಿಗಳ ಪತ್ತೆ ಕಾರ್ಯದಲ್ಲಿ ತೊಡಗಿದ್ದ ಪೊಲೀಸ್ ಸಿಬ್ಬಂದಿಯ ಕೋವಿಡ್ ಸೋಂಕಿನ ಪರೀಕ್ಷಾ ವರದಿ ಇವತ್ತು ಬರಲಿದೆ. ಪರೀಕ್ಷೆಗೆ ಒಳಪಟ್ಟಿರುವ ಸಿಬ್ಬಂದಿ ಕುರಿತು ಗೃಹ ಇಲಾಖೆ ಕೂಡ ಆತಂಕದಲ್ಲಿದೆ. ಕಳೆದ ಏಪ್ರಿಲ್ 19 ರಂದು ಕೊರೊನಾ ವೈರಸ್ ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿದ್ದ ಪಾದರಾಯನಪುರ ಪುಂಡರನನ್ನು ಕ್ವಾರಂಟೈನ್‌ಗೆ ಕರೆದೊಯ್ಯಲು ಬಂದಿದ್ದಾಗ ಹಲ್ಲೆ ನಡೆದಿತ್ತು. ಬಳಿಕ ಹೆಚ್ಚಿನ ಪೊಲೀಸ್ ಸಿಬ್ಬಂದಿ ಮೂಲಕ ಶಂಕಿತರನ್ನು ವಶಕ್ಕೆ ಪಡೆದು …
Read More »ರಾಜ್ಯದಲ್ಲಿ ಕೊರೋನ ಪರೀಕ್ಷಾ ಪ್ರಯೋಗಾಲಯಗಳ ಸಂಖ್ಯೆಯಲ್ಲಿ ಏರಿಕೆ …..
ಬೆಂಗಳೂರು : ರಾಜ್ಯದಲ್ಲಿ ಕೊರೋನ ಸಂಕಷ್ಟವನ್ನು ಸಮರ್ಥವಾಗಿ ಎದುರಿಸುತ್ತಿರುವ ರಾಜ್ಯ ಸರ್ಕಾರಕ್ಕೆ ಈಗ ಮತ್ತಷ್ಟು ಬಲ ಬಂದಂತಾಗಿದೆ. ರಾಜ್ಯ ಸರ್ಕಾರದ ಸ್ವಾಯತ್ತ ಸಂಸ್ಥೆಯಾದ ಬೆಂಗಳೂರಿನ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯಲ್ಲಿ ಇಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರು ಸ್ವಾಬ್ ಕಲೆಕ್ಟಿಂಗ್ ಬೂತ್ ಗಳಿಗೆ ಚಾಲನೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ಶ್ರೀ ತೇಜಸ್ವಿ ಸೂರ್ಯ, ಕಿದ್ವಾಯಿ ಸಂಸ್ಥೆಯ ನಿರ್ದೇಶಕ ಡಾ.ರಾಮಚಂದ್ರ ಅವರು ಉಪಸ್ಥಿತರಿದ್ದರು. …
Read More »ಲಾಕ್‍ಡೌನ್‍ನಲ್ಲೂ ಹೆಚ್ಚಾದ ಬೈಕ್ ಕಳ್ಳತನ: ಇಬ್ಬರ ಬಂಧನ, 8 ಬೈಕ್ ವಶ……
ರಾಯಚೂರು: ಕೊರೊನಾ ಸೋಂಕಿನ ಭೀತಿ ಹಿನ್ನೆಲೆ ಇಡೀ ದೇಶವೇ ಲಾಕ್‍ಡೌನ್‍ನಲ್ಲಿದ್ದರೆ ಜಿಲ್ಲೆಯಲ್ಲಿ ಬೈಕ್ ಕಳ್ಳರ ಹಾವಳಿ ಜೋರಾಗಿದೆ. ಇತ್ತೀಚೆಗೆ ಬೈಕ್ ಕಳ್ಳತನಗಳು ಹೆಚ್ಚಾದ ಹಿನ್ನೆಲೆ ಮಾನ್ವಿ ಪೊಲೀಸರ ತಂಡ ಕಾರ್ಯಾಚರಣೆ ನಡೆಸಿದ್ದು, ಜಿಲ್ಲೆಯ ವಿವಿಧ ಠಾಣೆ ಪೊಲೀಸರಿಗೆ ಬೇಕಾಗಿದ್ದ ಇಬ್ಬರು ಕಳ್ಳರನ್ನ ಬಂಧಿಸಿದ್ದಾರೆ. ಮಸ್ಕಿ ತಾಲೂಕಿನ ಸೋಮನಾಥಪುರದಲ್ಲಿ ಮೇಷನ್ ಕೆಲಸ ಮಾಡುತ್ತಿದ್ದ ಉಮೇಶ್, ಮಾನವಿ ಕೋನಾಪುರಪೇಟೆಯ ಆಟೋ ಚಾಲಕ ಅಕ್ತರ್ ಬಂಧಿತ ಆರೋಪಿಗಳು. ಬಂಧಿತರಿಂದ 3.55 ಲಕ್ಷ ರೂ. ಮೌಲ್ಯದ …
Read More »