Breaking News

ಅರಸೀಕೆರೆ ನಗರಸಭೆ ಸಿಬ್ಬಂದಿಗಳು ಕರ್ತವ್ಯದ ಸಮಯದಲ್ಲಿ ಟಿಕ್ ಟಾಕ್ ನಲ್ಲಿ ತೊಡಗಿದ್ದು ಸರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದರೆ.

ಹಾಸನ; ಕರೋನಾ ಭೀತಿಯಿಂದ ಇಡೀ ದೇಶವೇ ಲಾಕ್ ಡೌನ್ ಆಗಿದೆ,ಜಿಲ್ಲಾಡಳಿತ ಕರೋನಾ ಭೀತಿ ತಪ್ಪಿಸಲು ಬಾರೀ ಹರಸಾಹಸ ಪಡುತ್ತಿದೆ ಆದರೆ….!! ಅರಸೀಕೆರೆ ನಗರಸಭೆ ಸಿಬ್ಬಂದಿಗಳು ಕರ್ತವ್ಯದ ಸಮಯದಲ್ಲಿ ಟಿಕ್ ಟಾಕ್ ನಲ್ಲಿ ತೊಡಗಿದ್ದು ಸರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದರೆ. ಹೌದು ..ಜಗತ್ತು ಕೊರೋನ ಮಹಾಮಾರಿಗೆ ತತ್ತರಿಸಿದೆ ಅಲ್ಲದೆ ಜನ ಮನೆಯಿಂದ ಹೊರಬರಬಾರದು ಎಂದು ಲಾಕ್ ಡೌನ್ ಮಾಡಲಾಗಿದೆ ಸಾಮಾಜಿಕ ಅಂತರ ಪಾಲಿಸಿ ಎಂದು ಸ್ವತಃ ನಗರಸಭೆ ಪುರಸಭೆ ಆಟೋಗಳ ಮೂಲಕ ಪ್ರಚಾರದ …

Read More »

ಯೋಧನ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸದಲಗಾ ಠಾಣೆಯ ಪಿಎಸ್ಐ ಅನೀಲ ಕಂಬಾರ್ ಅವರನ್ನು ಅಮಾನತುಗೊಳಿಸಲಾಗಿದೆ.

ಬೆಳಗಾವಿ – ರಾಜ್ಯಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿರುವ ಸಿಆರ್ ಪಿಎಫ್ ಯೋಧನ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸದಲಗಾ ಠಾಣೆಯ ಪಿಎಸ್ಐ ಅನೀಲ ಕಂಬಾರ್ ಅವರನ್ನು ಅಮಾನತುಗೊಳಿಸಲಾಗಿದೆ. ಸಿಆರ್ ಪಿಎಫ್ ಯೋಧ ಸಚಿನ್ ಸಾವಂತ ಮಾಸ್ಕ್ ಧರಿಸಿರಲಿಲ್ಲ ಎನ್ನುವ ಕಾರಣಕ್ಕೆ ಮಾತಿಗೆ ಮಾತು ಬೆಳೆದು ಮಾರಾಮಾರಿ ಹಂತಕ್ಕೆ ಹೋಗಿತ್ತು. ನಂತರ ಯೋಧನನ್ನು ಅಮಾನವೀಯವಾಗಿ ಠಾಣೆಗೆ ಕರೆದೊಯ್ದು ಹಿಂಸಿಸಲಾಗಿದೆ ಎಂದು ಆರೋಪಿಸಲಾಗಿತ್ತು. ಯೋಧನಿಗೆ ಕೊಳ ತೊಡಿಸಿ ಕೂಡ್ರಿಸಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ …

Read More »

ಕೋವಿಡ್-೧೯: ಮತ್ತೇ ಒಬ್ಬ ಗುಣಮುಖ: ಆಸ್ಪತ್ರೆಯಿಂದ ಡಿಸ್ಚಾರ್ಜ್

ಬೆಳಗಾವಿ, ಏ.೨೯(ಕರ್ನಾಟಕ ವಾರ್ತೆ): ಕೋವಿಡ್-೧೯ ಸೋಂಕು ತಗುಲಿದ್ದ ಮತ್ತೊಬ್ಬ ವ್ಯಕ್ತಿ ಸಂಪೂರ್ಣ ಗುಣಮುಖರಾಗಿದ್ದು, ಇಂದು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿರುತ್ತದೆ ಎಂದು ಬಿಮ್ಸ್ ನಿರ್ದೇಶಕರಾದ ಡಾ.ವಿನಯ ದಾಸ್ತಿಕೊಪ್ಪ ಅವರು ತಿಳಿಸಿದ್ದಾರೆ. ಬೆಳಗಾವಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಬಿಮ್ಸ್) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರಾಯಬಾಗ ತಾಲ್ಲೂಕಿನ ಕುಡಚಿಯ ೨೫ ವರ್ಷದ ವ್ಯಕ್ತಿ(ಪಿ-೨೨೬)ಯನ್ನು ಇಂದು ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿರುತ್ತದೆ. ಇವರು ಏ.೧೨ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಜಿಲ್ಲೆಯಲ್ಲಿ ಇಂದಿನವರೆಗೆ ಒಟ್ಟು ೫೫ ಜನರಲ್ಲಿ ಸೋಂಕು ಪತ್ತೆಯಾಗಿದೆ. ಈ ಪೈಕಿ …

Read More »

ಸಂಜೆಯ ಬುಲಿಟೀನ್ ಜಿಲ್ಲೆಗೆ ರಿಲ್ಯಾಕ್ಸ್ ತಂದಿದೆ

ಬೆಳಗಾವಿ- ಬುಧವಾರ ಸಂಜೆಯ ಹೆಲ್ತ್ ಬುಲಿಟೀನ್ ಬಿಡುಗಡೆಯಾಗಿದೆ ಬೆಳಗಾವಿ ಜಿಲ್ಲೆಯ ಯಾವುದೇ ಪಾಸಿಟೀವ್ ಪ್ರಕರಣ ಪತ್ತೆಯಾಗಿಲ್ಲ ಬುಧಾವಾರ ಸಂಜೆಯ ರಿಪೋರ್ಟ್ ಬೆಳಗಾವಿ ಜಿಲ್ಲೆಗೆ ಸಮಾಧಾನ ತಂದಿದೆ‌ ಬುಧಾವರಾ ಬೆಳಗಿನ ಹೆಲ್ತ್ ಬುಲಿಟೀನ್ ನಲ್ಲಿ ಸಂಕೇಶ್ವರದ ಹನ್ನೆರಡು ವರ್ಷದ ಬಾಲಕನಿಗೆ ಸುಂಕು ಇರುವದು ದೃಡವಾಗಿತ್ತು ಸಂಜೆಯ ಬುಲಿಟೀನ್ ಜಿಲ್ಲೆಗೆ ರಿಲ್ಯಾಕ್ಸ್ ತಂದಿದೆ ಜಿಲ್ಲೆಯಲ್ಲಿ ಸೊಂಕಿತರ ಸಂಖ್ಯೆ 55 ಇದೆ

Read More »

ಬೆಳಗಾವಿ ಯೋಧನಿಗೆ ಬಾಸುಂಡೆ ಬರೋ ಹಾಗೆ ಥಳಿತ

ಬೆಳಗಾವಿ: ಸಿಆರ್ ಪಿಎಫ್ ಯೋಧ ಸಚಿನ್ ಸಾವಂತ್ ಅವರಿಗೆ ಬಾಸುಂಡೆ ಬರುವ ಹಾಗೆ ಸದಲಗಾ ಪೊಲೀಸರು ಥಳಿಸಿರುವ ಆರೋಪಗಳು ಕೇಳಿ ಬಂದಿದೆ. ಯೋಧನಿಗೆ ಬಾಸುಂಡೆ ಬಂದಿರುವ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರು ಪೊಲೀಸರ ನಡೆಗೆ ಕಿಡಿಕಾರಿದ್ದಾರೆ. ಏಪ್ರಿಲ್ 23ರಂದು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಪಟ್ಟಣದಲ್ಲಿ ಪೊಲೀಸರು ಮತ್ತು ಯೋಧನ ನಡುವೆ ಗಲಾಟೆ ನಡೆದಿತ್ತು. ತದನಂತರ ಪೊಲೀಸರು ಯೋಧನನ್ನು ಠಾಣೆಗೆ ಕರೆದುಕೊಂಡು ಕೈಗೆ ಕೋಳ ಹಾಕಿದ್ದರು. …

Read More »

ಮಂಡ್ಯ:ಜಿಲ್ಲಾ ಹಾಲು ಒಕ್ಕೂಟದಿಂದ ಹಾಲು ಉತ್ಪಾದಕರಿಗೆ ಆಹಾರಪದಾರ್ಥಗಳ ಕಿಟ್ ವಿತರಣೆ.

  ಮಂಡ್ಯ :ನಾಗಮಂಗಲ ತಾಲ್ಲೂಕಿನ ಬಿಳಗುಂದ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡದ ಆವರಣದಲ್ಲಿ ಶಾಸಕ ಸುರೇಶ್ ಗೌಡ ಹಾಗೂ ಎಂಎಲ್ಸಿ ಅಪ್ಪಾಜಿಗೌಡ ಮತ್ತು ಮನ್ಮುಲ್ ನಿರ್ದೇಶಕರಾದ ನೆಲ್ಲಿಗೆರೆ ಬಾಲು ಮತ್ತು ಕೋಟಿ ರವಿರವರು ಚಾಲನೆ ನೀಡಿದರು ರಾಜ್ಯದಲ್ಲಿರುವ 14 ಹಾಲು ಒಕ್ಕೂಟಗಳ ಮಹಾ ಮಂಡಳಿಗಳಲ್ಲೆ ಮಂಡ್ಯ ಜಿಲ್ಲಾ ಹಾಲು ಒಕ್ಕೂಟ ವಿನೂತನ ಕಾರ್ಯಕ್ರಮವನ್ನು ನಿರೂಪಿಸಿದೆ. ಪ್ರಪ್ರಥಮ ಬಾರಿಗೆ ರೈತ ಕಲ್ಯಾಣ ಟ್ರಸ್ಟ್ ವತಿಯಿಂದ ಜಿಲ್ಲೆಯ 1 ಲಕ್ಷದ …

Read More »

ನಾಗಮಂಗಲ ಹಾಗೂ ಕೆ ಆರ್ ಪೇಟೆ ಮಾರ್ಗಗಳನ್ನ ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ

  ಮಂಡ್ಯ: ಜಿಲ್ಲೆಯ ನಾಗಮಂಗಲ ತಾಲೋಕಿನ ಬಿಂಡಿಗನವಿಲೆ ಹೋಬಳಿಯ ಸಾತೇನಹಳ್ಳಿ ಗ್ರಾಮದಲ್ಲಿ ಕರೋನ (ಕೋವಿಡ್19) 1 ಪಾಸಿಟಿವ್ ಬಂದ ಇನ್ನೆಲೆಯಲ್ಲಿ ಮಂಡ್ಯ ಜಿಲ್ಲೆಯ ಕೆ ಆರ್ ಪೇಟೆ ತಾಲೋಕಿನ ಗಡಿಭಾಗವಾದ ಕಾರಣ, ನಾಗಮಂಗಲ ಹಾಗೂ ಕೆ ಆರ್ ಪೇಟೆ ಮಾರ್ಗಗಳನ್ನ ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ. ಹಾಗೂ ಸಂತೇಬಾಚಹಳ್ಳಿ ಹಾಗೂ ತಾಲೋಕಿನ ಜನತೆಯ ಇತರಕ್ಷಣೆಗಾಗಿ ಅಂಗಡಿ ಮುಂಗಟ್ಟನ್ನ ಲಕ್ ಡೌನ್ ಮಾಡಲಾಗಿದೆ. ಇದರಬಗ್ಗೆ ಸಂತೇಬಾಚಹಳ್ಳಿ ಗ್ರಾಮಪಂಚಾಯತ್ ಸದಸ್ಯರು ಹಾಗೂ ಪ್ರಾರ್ಥಮಿಕ ಕೃಷಿ ಪತ್ತಿನ …

Read More »

ಎಂ.ವಿ.ವಿ.ಹಾಗೂ ಎಂ.ಪಿ.ವೈ.ಹುಳಿಯಾರ ಕುಟುಂಬದ ವತಿಯಿಂದ ದಿನಸಿ ಕಿಟ್ ವಿತರಣೆ

  ಮಂಡ್ಯ: ನಾಗಮಂಗಲ ಪಟ್ಟಣದ ಎಂವಿವಿ ಹಾಗೂ ಎಂಪಿವೈ ಹುಳಿಯಾರ್ ಕುಟುಂಬದ ವತಿಯಿಂದ ನಾಗಮಂಗಲ ತಾಲ್ಲೂಕಿನ ಕಡುಬಡವರು ಹಾಗೂ ನಿರ್ಗತಿಕರಿಗೆ ಆಹಾರ ಕೀಟಗಳನ್ನು ವಿತರಿಸಲಾಗುತ್ತಿದೆ ಎಂದು ದಾನಿಗಳು ತಿಳಿಸಿದರು ಪಟ್ಟಣದ ಟಿಬಿ ಬಡಾವಣೆಯ ಕಡುಬಡವರು ವಾಸಿಸುವಂತಹ ಸುಭಾಷ್ ನಗರ ಕಾಲೋನಿ ನಾಗಮಂಗಲದ ಮಾರುತಿನಗರ ಸಂತೆ ಮೈದಾನದ ನಿವಾಸಿಗಳು ಟ್ಯಾಂಕ್ ಮೈದಾನದ ಗುಡಿಸಲು ನಿವಾಸಿಗಳಿಗೆ ಇಂದು ಆಹಾರಧಾನ್ಯದ ಕೀಟಗಳನ್ನು ವಿತರಿಸಲಾಯಿತು ಇದೇ ಸಂದರ್ಭದಲ್ಲಿ ಮಾತನಾಡಿದ ಪಣಿ ಕಿರಣ ಕರುನಾ ವೈರಸ್ ಎಲ್ಲೆಡೆ …

Read More »

ಡೊಣ್ಣೆ ಮೆಣಸಿನಕಾಯಿ ಹಾನಿ ಲಕ್ಷಾಂತರ ರೊ ನಷ್ಟ ಸರ್ಕಾರ ನೀಡುತ್ತಾ ಸಹಾಯ ದನ ?…..

ಚಿಕ್ಕೋಡಿ:೧೫ ಲಕ್ಷ ರೂ ಹಾನಿ. ಸಮರ್ಪಕ ಮಾರಾಟವಾಗದೇ ರೈತನ ಕಣ್ಣಲ್ಲಿ ನೀರು ತರಿಸಿದ ಡೊಣ್ಣ ಮೆಣಸಿನಕಾಯಿ ತರಕಾರಿ ಬೆಳೆ ಒಂದು ಕಡೆ ಕೊರೊನಾ ಭೀತಿ ಮತ್ತೊಂದು ಕಡೆ ನೆತ್ತಿ ಸುಡುವ ಬೀರು ಬಿಸಲಿನ ಬೇಗೆ ಇಂತಹ ಸಂದೀಗ್ಧ ಪರಿಸ್ಥಿತಿಯಲ್ಲಿ ಜಮೀನಿನಲ್ಲಿ ಹುಲಸಾಗಿ ಬೆಳೆದ ಡೊಣ್ಣೆ ಮೆಣಸಿನಕಾಯಿ ಸಮರ್ಪಕ ಮಾರಾಟವಾಗದೇ ರೈತನ ಕಣ್ಣಲ್ಲಿ ಕಣ್ಣಿರು ತರಿಸುತ್ತಿದೆ. ಶೈಕ್ಷಣಿಕ ಜಿಲ್ಲೆ ಚಿಕ್ಕೋಡಿ ವ್ಯಾಪ್ತಿಯ ಡೋಣವಾಡ ಗ್ರಾಮದ ಸಿದ್ದಗೌಡ ಪಾಟೀಲ ಎಂಬ ರೈತ ತನ್ನ …

Read More »

ಖ್ಯಾತ ನಟ ಇರ್ಫಾನ್ ಖಾನ್ ನಿಧನ

ಖ್ಯಾತ ನಟ ಇರ್ಫಾನ್ ಖಾನ್ ನಿಧನ.‌ ಮೊನ್ನೆ ತಾನೆ ಅವರ ತಾಯಿ ನಿಧನರಾದಾಗ ಅಂತ್ಯಕ್ರಿಯೆಗೆ ಹೋಗಲು ಇರ್ಫಾನ್ ಖಾನ್ ಗೆ ಹೋಗಲು ಆಗಿರಲಿಲ್ಲ ಎಂದು ಮಾಧ್ಯಮಗಳಲ್ಲಿ ಓದಿದ್ದೆ. ಇದೀಗ ತನ್ನ ತಾಯಿಯನ್ನೇ ಭೇಟಿಯಾಗಲು ಹೋಗಿ ಬಿಟ್ಟರೇ ಇರ್ಫಾನ್ ಖಾನ್? ಅವರ ಆತ್ಮಕ್ಕೆ ಸದ್ಗತಿ ದೊರಕಲಿ.

Read More »