ಹಾವೇರಿ: ಹಸಿರು ವಲಯದಲ್ಲಿರುವ ಹಾವೇರಿ ಜಿಲ್ಲೆಯಲ್ಲಿ ಆಯ್ದ ಆರ್ಥಿಕ ಚಟುವಟಿಕೆಗೆ ಅನುಮತಿ ನೀಡಲಾಗಿದೆ. ಬಟ್ಟೆ-ಬಂಗಾರ ಮಾರಾಟದ ಅಂಗಡಿಗಳಿಗೆ ಷರತ್ತುಬದ್ಧ ಅನುಮತಿ ನೀಡಲಾಗಿದೆ. ಈ ಸಂದರ್ಭದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲಾಗಿದೆಯೇ ಹಾಗೂ ನಿಯಮ ಪಾಲಿಸಲಾಗತ್ತಿದೆಯೇ ಎಂಬುದನ್ನು ಪರಿಶೀಲಿಸಲು ಇಂದು ಪೊಲೀಸ್ ಹಾಗೂ ಕಂದಾಯ ಅಧಿಕಾರಿಗಳು ನಗರ ಸಂಚಾರ ಕೈಗೊಂಡು ಜಾಗೃತಿ ಮೂಡಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಜಿ.ದೇವರಾಜ, ಅಪರ ಜಿಲ್ಲಾಧಿಕಾರಿ ಎಸ್. ಯೋಗೇಶ್ವರ ಹಾಗೂ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, …
Read More »ಬಾಳೇಕುಂದ್ರಿ ಗ್ರಾಮದಲ್ಲಿ ಕನ್ನಡ ಸೇನೆ ವತಿಯಿಂದ ನಿರಾಶ್ರಿತರು, ಕೂಲಿ ಕಾರ್ಮಿಕರು ಮತ್ತು ಬಡ ಕುಟುಂಬಗಳಿಗೆ ಕಾಯಿಪಲ್ಯೆ,ಮತ್ತು ರೇಷನ ಕಿಟ್ ವಿತರಣೆ.
ಬೆಳಗಾವಿಯ ಗ್ರಾಮೀಣ ಕ್ಷೇತ್ರದ ಬಾಳೇಕುಂದ್ರಿ ಗ್ರಾಮದಲ್ಲಿ ಕನ್ನಡ ಸೇನೆ ವತಿಯಿಂದ ನಿರಾಶ್ರಿತರು, ಕೂಲಿ ಕಾರ್ಮಿಕರು ಮತ್ತು ಬಡ ಕುಟುಂಬಗಳಿಗೆ ಕಾಯಿಪಲ್ಯೆ,ಮತ್ತು ರೇಷನ ಕಿಟ್ ವಿತರಣೆ. ದೇಶಾದ್ಯಂತ ಮಹಾಮಾರಿ ಕೊರೋನ ಸೋಂಕು ಹರಡಿರುವ ತಡೆಗಟ್ಟುವ ಸಲುವಾಗಿ ಲಾಕ್ ಡೌನ್ ಆದ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿದ ನಿರಾಶ್ರಿತರು, ಕೂಲಿ ಕಾರ್ಮಿಕರು, ಬಡ ಕುಟುಂಬಗಳು ತೊಂದರೆ ಗೀಡಾಗಿದ್ದರಿಂದ ದಿನ ಬಳಕೆಗೆ ಬೇಕಾದ ಅಗತ್ಯ ವಸ್ತುಗಳನ್ನು ಖರೀದಿಸಲು ಪರದಾಡುವಂತಾಗಿದೆ. ನೆರವಿಗೆ ನಿಂತ ಕನ್ನಡ ಸೇನೆ ಜಿಲ್ಲಾಧ್ಯಕ್ಷರಾದ …
Read More »ಕೋವಿಡ್-೧೯: ಇಬ್ಬರು ಮಹಿಳೆಯರು ಗುಣಮುಖ: ಆಸ್ಪತ್ರೆಯಿಂದ ಡಿಸ್ಚಾರ್ಜ್
ಬೆಳಗಾವಿ, ಏ.30(ಕರ್ನಾಟಕ ವಾರ್ತೆ): ಕೋವಿಡ್-೧೯ ಸೋಂಕು ತಗುಲಿದ್ದ ಇಬ್ಬರು ಮಹಿಳೆಯರು ಸಂಪೂರ್ಣ ಗುಣಮುಖರಾಗಿದ್ದು, ಇಂದು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿರುತ್ತದೆ ಎಂದು ಬಿಮ್ಸ್ ನಿರ್ದೇಶಕರಾದ ಡಾ.ವಿನಯ ದಾಸ್ತಿಕೊಪ್ಪ ಅವರು ತಿಳಿಸಿದ್ದಾರೆ. ಬೆಳಗಾವಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಬಿಮ್ಸ್) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರಾಯಬಾಗ ತಾಲ್ಲೂಕಿನ ಕುಡಚಿಯ 67 ವರ್ಷದ (ಪಿ-149) ಮತ್ತು 36 ವರ್ಷದ(ಪಿ-147) ಅವರನ್ನು ಇಂದು ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿರುತ್ತದೆ. ಇವರು ಕ್ರಮವಾಗಿ ಏ.1 ಹಾಗೂ ಮಾ.31 ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಜಿಲ್ಲೆಯಲ್ಲಿ …
Read More »ಶ್ರೀಕಂಠೇಗೌಡ ಮತ್ತೆ ಉದ್ಧಟತನ – ತಪ್ಪು ಒಪ್ಪಿಕೊಳ್ಳದೇ ಪತ್ರಕರ್ತರ ವಿರುದ್ಧವೇ ದೂರು
ಮಂಡ್ಯ: ಜೆಡಿಎಸ್ ಎಂಎಲ್‍ಸಿ ಕೆ.ಟಿ.ಶ್ರೀಕಂಠೇಗೌಡ ಗೂಡಾಂಗಿರಿ ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪು ಒಪ್ಪಿಕೊಳ್ಳದೇ ಪತ್ರಕರ್ತರ ವಿರುದ್ಧವೇ ದೂರು ದಾಖಲಿಸಿದ್ದಾರೆ. ಎಂಎಲ್‍ಸಿ ಕೆ.ಟಿ.ಶ್ರೀಕಂಠೇಗೌಡ ಹಾಗೂ ಪುತ್ರ ನಾಲ್ವರು ಪತ್ರಕರ್ತರ ವಿರುದ್ಧ ದೂರು ದಾಖಲಿಸಿದ್ದಾರೆ. ಮಂಡ್ಯದ ಅಂಬೇಡ್ಕರ್ ಭವನದಲ್ಲಿ ಭಾನುವಾರ ಪತ್ರಕರ್ತರಿಗೆ ಕೋವಿಡ್ ಟೆಸ್ಟ್ ಮಾಡಲಾಗುತ್ತಿತ್ತು. ಈ ವೇಳೆ ಎಂಎಲ್‍ಸಿ ಕೆ.ಟಿ.ಶ್ರೀಕಂಠೇಗೌಡ ಹಾಗೂ ಪುತ್ರ ಬಂದು ಇಲ್ಲಿ ಕೋವಿಡ್ ಟೆಸ್ಟ್ ಮಾಡಬಾರದು ಎಂದು ಗಲಾಟೆ ಮಾಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಶ್ರೀಕಂಠೇಗೌಡರಿಂದ ನಾಲ್ವರು …
Read More »ಬೆಳಗಾವಿ ಇಂದು ಬೆಳಗಾವಿ ಯಲ್ಲಿ ಮತ್ತೆ 14ಪಾಸಿಟಿವ್
ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಕೋರೊನಾ ಸೋಂಕು *ಗಡಿನಾಡು ಬೆಳಗಾವಿ ಹೆಬ್ಬಾಗಿಲಲ್ಲಿ ಕೋರೊನಾ ಮೃದಂಗ* *ಬೆಳಗಾವಿಯಲ್ಲಿ ಇಂದು ಇಂದು ಒಂದೇ ದಿನ ಪತ್ತೆಯಾದ 14 ಕೋರೊನಾ ಪ್ರಕರಣ* ಕುಂದಾನಗರಿಗೆ ಮತ್ತೆ ಕಂಟಕವಾದ ಕಿಲ್ಲರ್ ಕೋರೊನಾ ವೈರಸ್ *ಬೆಳಗಾವಿ ಜಿಲ್ಲೆಯಲ್ಲಿ ಹತೋಟಿಗೆ ಬರುತ್ತಿಲ್ಲ ಕೋರೊನಾ* *ಹಿರೇಬಾಗೇವಾಡಿಯಲ್ಲಿ 11 ಹಾಗೂ ಸಂಕೇಶ್ವರದಲ್ಲಿ 3 ಕೋರೊನಾ ಪಾಸಿಟಿವ್ ಕೇಸ್* .
Read More »ಅರಷಣಗಿ ಗ್ರಾಮದಲ್ಲಿ ಸಂಪೂರ್ಣವಾಗಿ ಜಾತ್ರೆಯನ್ನು ಮಾಡದೆ ಮಾನವಿತೆ ಮೆರೆದ ಅರಷಣಗಿ ಗ್ರಾಮಸ್ಥರು
ವಿಜಯಪುರ ಜಿಲ್ಲೆಯ ಕೋಲಾರ ತಾಲೂಕಿನಲ್ಲಿ ಬರುವ ಅರಷಣಗಿ ಗ್ರಾಮದಲ್ಲಿ ವರ್ಷಕೊಮ್ಮ ಬಸವ ಜಯಂತಿ ಆದ ದಿನದಲ್ಲಿ ಶ್ರೀ ಮಾರುತ್ತೇಶ್ವರ ಜಾತ್ರೆ ಹಾಗೂ ನೀರೋಕಳಿ ಕಾರ್ಯಕ್ರಮ ಐದು ದಿನಗಳ ಕಾಲ ಅತೀ ವಿಜೃಂಭಣೆಯಿಂದ ಮಾಡಲಾಗುತ್ತಿತ್ತು ಈ ಜಾತ್ರಗೆ ರಾಜ್ಯ ಹಾಗೂ ಬೇರೆ ಕಡೆಗಳಿಂದ ಸಾಕಷ್ಟು ಅಪಾರ ಭಕ್ತ ವೃಂದ ಹರಿದು ಬರುತ್ತಿತ್ತು ಆದರೆ ಇಡೀ ದೇಶಕ್ಕೆ ಮಾರಕವಾದ ಕೋವಿಡ್ 19 ಕರೋನಾ ಏಂಬ ರೋಗದಿಂದಾಗಿ ಇಡೀ ದೇಶವೆ ತತ್ತರಿಸುತ್ತಿದ್ದು ಕೇಂದ್ರ ಹಾಗೂ …
Read More »ಸ್ಯಾಂಡಲ್‍ವುಡ್ ನಟ ರಾಮ್‍ಕುಮಾರ್ ಪುತ್ರ ಧೀರೇನ್ ರಾಮ್ ಕುಮಾರ್ ಚಂದನವನಕ್ಕೆ
ಬೆಂಗಳೂರು: ವರನಟ ಡಾ.ರಾಜ್ ಕುಮಾರ್ ಮೊಮ್ಮಗ ಹಾಗೂ ಸ್ಯಾಂಡಲ್‍ವುಡ್ ನಟ ರಾಮ್‍ಕುಮಾರ್ ಪುತ್ರ ಧೀರೇನ್ ರಾಮ್ ಕುಮಾರ್ ಚಂದನವನಕ್ಕೆ ಕಾಲಿಟ್ಟಿದ್ದು, ಮೊದಲ ಚಿತ್ರ ಆರಂಭದಲ್ಲಿಯೇ ಭರ್ಜರಿಯಾಗಿ ಸದ್ದು ಮಾಡುತ್ತಿದೆ. ದೊಡ್ಮನೆ ಹುಡುಗನ ಮೊದಲ ಚಿತ್ರವೇ ಭಾರೀ ಸದ್ದು ಮಾಡುತ್ತಿದ್ದು, ಇದೀಗ ಧೀರೇನ್ ಹುಟ್ಟುಹಬ್ಬಕ್ಕೆ ಚಿತ್ರತಂಡ ಸರ್ಪ್ರೈಸ್ ನೀಡಿದೆ. ಈ ಹಿಂದೆ ‘ದಾರಿ ತಪ್ಪಿದ ಮಗ’ ಸಿನಿಮಾ ಮೂಲಕ ಧೀರೇನ್ ಕಳೆದ ವರ್ಷವೇ ತಮ್ಮ ಸಿನಿ ಜರ್ನಿ ಆರಂಭಿಸಲಿದ್ದಾರೆ ಎನ್ನಲಾಗಿತ್ತು. ಇದು …
Read More »ಹಸಿ ಕಸ, ಒಣ ಕಸದ ಜೊತೆ ಮಾಸ್ಕ್ ಬೆರೆಸಿ ಕೊಟ್ಟರೆ ಬೀಳುತ್ತೆ ಭಾರೀ ದಂಡ……
ಬೆಂಗಳೂರು(ಏ. 29): ಲಾಕ್‍ಡೌನ್ ನಿಯಮಗಳ ಕಟ್ಟುನಿಟ್ಟು ಅನುಷ್ಠಾನ ಆಗುತ್ತಿರುವಂತೆಯೇ ಬಹುತೇಕ ಮಂದಿಯ ಬಳಿ ಈಗ ಮಾಸ್ಕ್ ಬಂದಿದೆ. ಮಾಸ್ಕ್ ಧರಿಸದೇ ಮನೆಯಿಂದ ಹೊರಬರುವವರ ಸಂಖ್ಯೆ ತೀರಾ ಕಡಿಮೆ ಇದೆ. ಹೀಗಾಗಿ, ಸಾಕಷ್ಟು ಸಂಖ್ಯೆಯಲ್ಲಿ ಮಾಸ್ಕ್ಗಳಿವೆ. ಈಗ ಈ ಮಾಸ್ಕ್ಗಳಿಂದಲೇ ಹೊಸದೊಂದು ಸಮಸ್ಯೆ ಎದುರಾಗಿದೆ. ಜನರು ಮಾಸ್ಕ್ಗಳನ್ನ ಕಸದೊಂದಿಗೆ ಬೆರೆಸಿ ಎಸೆಯುತ್ತಿದ್ದಾರೆ. ಬೆಂಗಳೂರಿನಲ್ಲಿ ಇಂಥ ಸಾಕಷ್ಟು ಪ್ರಕರಣಗಳು ವರದಿಯಾಗಿವೆ. ಮಾಸ್ಕ್ಗಳಲ್ಲಿ ಕೊರೋನಾ ವೈರಸ್ ಇದ್ದರೆ ಬಹಳ ಬೇಗ ಹರಡುವ ಸಾಧ್ಯತೆ ಇದೆ. …
Read More »ಮುಖಕ್ಕೆ ಮಾಸ್ಕ್ ಹಾಕದಿದ್ದರೆ 5000 ರೂ. ದಂಡ..!
ತಿರುವನಂತಪುರಂ : ದೇಶದಲ್ಲಿ ಬಹಳ ಕಟ್ಟುನಿಟ್ಟಿನ ಕ್ರಮಗಳ ಮೂಲಕ ಕೊರೋನಾ ತಗ್ಗಿಸುತ್ತಿರುವ ಕೇರಳ ರಾಜ್ಯವು ಮತ್ತಷ್ಟು ಕಠಿಣ ಕ್ರಮಗಳನ್ನು ಕೈಗೊಳ್ಳತ್ತಿದೆ. ಕೇರಳದ ವಯನಾಡಿನಲ್ಲಿ ಜಿಲ್ಲೆಯಲ್ಲಿ ಜನರು ಮುಖಕ್ಕೆ ಮಾಸ್ಕ್ ಹಾಕದೇ ಸಿಕ್ಕಿಬಿದ್ದರೆ 5000 ರೂ ದಂಡ ವಿಧಿಸಲಾಗುವುದು ಎಂದು ವಯನಾಡಿನ ಜಿಲ್ಲಾ ಪೊಲೀಸ್ ಅಧೀಕ್ಷಕ ಆರ್ ಇಲಾಂಗೊ ಪ್ರಕಟಿಸಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸದ ವ್ಯಕ್ತಿಯನ್ನು ಕೇರಳ ಪೊಲೀಸ್ ಆಕ್ಟ್(ಕೆಪಿಎ) 118ಇ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗುವುದು. ಜತೆಗೆ, ನಿಯಮ ಉಲ್ಲಂಘನೆ …
Read More »ವಿದೇಶಗಳಲ್ಲಿ ಸಿಲುಕಿರೋ ಕನ್ನಡಿಗರನ್ನು ಕರೆತರುವ ಪ್ರಕ್ರಿಯೆ ಆರಂಭವಾಗಿದೆ : ಸುರೇಶ್ ಕುಮಾರ್
ಬೆಂಗಳೂರು : ಲಾಕ್‍ಡೌನ್ ನಿಂದಾಗಿ ವಿದೇಶಗಳಲ್ಲಿರುವ ಸಿಲುಕಿರೋ ಕನ್ನಡಿಗರನ್ನು ಕರೆತರುವ ಪ್ರಕ್ರಿಯೆ ಆರಂಭವಾಗಲಿದೆ ಎಂದು ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ. ಹೊರದೇಶಗಳಲ್ಲಿರುವ ಭಾರತೀಯರನ್ನು ಕರೆ ತರಲು ಕೇಂದ್ರ ಸರ್ಕಾರ ಮುಂದಾಗಿದೆ. ವಿದೇಶಗಳಲ್ಲಿ 10,823 ಜನ ಕರ್ನಾಟಕದವರು ಇದ್ದಾರೆ. ಮೊದಲ ಹಂತದಲ್ಲಿ 6,100 ಜನ ವಿದೇಶದಿಂದ ವಾಪಸ್ ಆಗಲಿದ್ದಾರೆ. ಸೌದಿ ಅರೇಬಿಯ, ಕೆನಡಾ, ಇಂಗ್ಲೆಂಡ್ ಮುಂತಾದ ದೇಶಗಳಲ್ಲಿ ಕನ್ನಡಿಗರಿದ್ದಾರೆ. ಎಲ್ಲರನ್ನು ಕರೆ ತರಲು ಸರ್ಕಾರ ಮುಂದಾಗಿದ್ದು, ವಾಪಸ್ ಬಂದವರನ್ನು ಕ್ವಾರಂಟೈನ್ ನಲ್ಲಿರಿಸಿ …
Read More »