ಬೆಳಗಾವಿ: ಕರುನಾಡಿಗೆ ಇದೀಗ ಮುಂಬೈನಿಂದ ವಾಪಸ್ ಆಗುತ್ತಿರುವವರೇ ಕಂಟಕವಾಗ್ತಿದ್ದಾರೆ. ಸೋಂಕಿತರು ಲಾರಿಗಳ ಮೂಲಕ ಕದ್ದುಮುಚ್ಚಿ ರಾಜ್ಯಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಇದರ ಬೆನ್ನಲ್ಲೇ ಕರ್ನಾಟಕ-ಮಹಾರಾಷ್ಟ್ರ ಗಡಿಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಕೊರೊನಾ ದಿನದಿಂದ ದಿನಕ್ಕೆ ತನ್ನ ರೌದ್ರತೆಯನ್ನು ಹೆಚ್ಚಿಸುತ್ತಲೇ ಇದೆ. ಲಾಕ್‍ಡೌನ್ ಸಡಿಲಿಕೆ ಬಳಿಕ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಇದಕ್ಕೆ ಮಹಾರಾಷ್ಟ್ರದಿಂದ ರಾಜ್ಯಕ್ಕೆ ಕದ್ದು ನುಸುಳುತ್ತಿರುವರೂ ಕಾರಣವಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಕರ್ನಾಟಕ-ಮಹಾರಾಷ್ಟ್ರ ಗಡಿಯಲ್ಲಿ ಭಾರೀ ಎಚ್ಚರಿಕೆ ವಹಿಸಲಾಗಿದೆ. ಈಗಾಗಲೇ ಮುಂಬೈನಿಂದ ಅಂಬುಲೆನ್ಸ್ ನಲ್ಲಿ …
Read More »ಮಂಗಳೂರು: ಬೇಳೂರು ಪ್ರದೇಶದ ಒಂದೇ ಕುಟುಂಬದ ಐವರಿಗೆ ಕೊರೊನಾ ಸೋಂಕು
ಮಂಗಳೂರು: ಬೇಳೂರು ಪ್ರದೇಶದ ಒಂದೇ ಕುಟುಂಬದ ಐವರಿಗೆ ಕೊರೊನಾ ಸೋಂಕು ತಗುಲಿದೆ. ಮೊದಲು ವೃದ್ಧೆ (ರೋಗಿ-536)ಗೆ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಫಸ್ಟ್ ನ್ಯೂರೋ ಆಸ್ಪತ್ರೆಗೆ ದಾಖಲಾದಾಗ ವೃದ್ಧೆಗೆ ಕೊರೊನಾ ತಗುಲಿರೋದು ದೃಢಪಟ್ಟಿತ್ತು. ತದನಂತರ ವೃದ್ಧೆಯ ಪತಿ, ಅಳಿಯ, ಮಗಳು ಮತ್ತು ಮೊಮ್ಮಗಳಿಗೆ ಸೋಂಕು ತಗುಲಿರೋದು ದೃಢಪಟ್ಟಿದೆ. ಎಲ್ಲರಿಗೂ ಮಂಗಳೂರಿನ ಕೋವಿಡ್-19 ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ವೃದ್ಧೆಯ ಆರೋಗ್ಯ ತೀವ್ರ ಚಿಂತಾಜನಕವಾಗಿದ್ದು, ತೀವ್ರ ನಿಗಾ ಘಟಕದಲ್ಲಿರಿಸಿ ವೆಂಟಿಲೇಟರ್ ಮೂಲಕ ಚಿಕಿತ್ಸೆ ನೀಡಲಾಗುತ್ತಿದೆ. …
Read More »ಲಾಕ್‍ಡೌನ್ ಬಳಿಕ ತೆರೆದ ಕಾರ್ಖಾನೆಯಲ್ಲಿ ಗ್ಯಾಸ್ ಸೋರಿಕೆ- ಸಾವಿನ ಸಂಖ್ಯೆ 8ಕ್ಕೆ ಏರಿಕೆ
ಹೈದರಾಬಾದ್: ಆಂಧ್ರ ಪ್ರದೇಶದ ವಿಶಾಖಪಟ್ಟಣದ ಬಹುರಾಷ್ಟ್ರೀಯ ಸಂಸ್ಥೆಯ ರಾಸಾಯನಿಕ ಕಾರ್ಖಾನೆಯಲ್ಲಿ ವಿಷಕಾರಿ ಅನಿಲ ಸೋರಿಕೆಯಾದ ಪರಿಣಾಮ ಮಗು ಸೇರಿದಂತೆ 8 ಮಂದಿ ಸಾವನ್ನಪ್ಪಿದ್ದಾರೆ. ಅಲ್ಲದೇ 200ಕ್ಕೂ ಅಧಿಕ ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇಂದು ಮುಂಜಾನೆ ಜಿಲ್ಲೆಯ ಆರ್.ಆರ್.ವೆಂಕಟಪುರಂನ ಎಲ್.ಜಿ. ಪಾಲಿಮರ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‍ನ ರಾಸಾಯನಿಕ ಅನಿಲ ಕಾಖಾನೆಯಲ್ಲಿ ವಿಷಾನಿಲ ಸೋರಿಕೆಯಾಗಿದ್ದು, ಗಾಳಿಯಲ್ಲಿ ವಿಷಾನಿಲ ಸುತ್ತಮುತ್ತಲಿನ ಪ್ರದೇಶಗಳಿಗೆ ಹರಡಿದೆ. ಪರಿಣಾಮ ಬೆಳಗ್ಗೆ ವಾಕಿಂಗ್ ಮತ್ತು ಇತರೆ ಕೆಲಸಗಳಿಗೆ ಬಂದಿದ್ದ ಜನರು ವಿಷಾನಿಲ …
Read More »ಹಳೆಯ ದ್ವೇಷದ ಹಿನ್ನಲೆ ದಲಿತ ಯುವ ವೇದಿಕೆ ಸಂಸ್ಥಾಪಕ ಅಧ್ಯಕ್ಷನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ಗೋಕಾಕ ನಗರದಲ್ಲಿ ನಡೆದಿದೆ.
ಗೋಕಾಕ್: ಹಳೆಯ ದ್ವೇಷದ ಹಿನ್ನಲೆ ದಲಿತ ಯುವ ವೇದಿಕೆ ಸಂಸ್ಥಾಪಕ ಅಧ್ಯಕ್ಷನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ಗೋಕಾಕ ನಗರದಲ್ಲಿ ನಡೆದಿದೆ. ಗೋಕಾಕ ಪಟ್ಟಣದ ಆದಿ ಜಾಂಬವ ನಗರದ ನಿವಾಸಿ ಸಿದ್ದು ಅರ್ಜುನ ಕಣಮಡ್ಡಿ (27) ಕೊಲೆಯಾದ ಯುವಕ. ಬುಧವಾರ ರಾತ್ರಿ ಮೂವರು ದುಷ್ಕರ್ಮಿಗಳು ಮುಖಕ್ಕೆ ಮಾಸ್ಕ್ ಹಾಕಿಕೊಂಡು ಬಂದು ಕೊಚ್ಚಿ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ಹಲ್ಲೆಗೊಳಗಾದ ಯುವಕನನ್ನು ಗೋಕಾಕ ಆಸ್ಪತ್ರೆಯಲ್ಲಿ ದಾಖಲಿಸಿ ಬಳಿಕ ಬೆಳಗಾವಿಯ ಖಾಸಗಿ ಆಸ್ಪತ್ರೆಗೆ …
Read More »ಕೋವಿಡ್-19 ಮುಖ್ಯಮಂತ್ರಿ ಪರಿಹಾರ ನಿಧಿಗೆ 35 ಸಾವಿರ ರೂ. ದೇಣಿಗೆ ನೀಡುವ ಮೂಲಕ ಕೂಲಿ ಕಾರ್ಮಿಕರು ಮಾನವೀಯತೆ ಮೆರೆದಿದ್ದಾರೆ.
ಶಿವಮೊಗ್ಗ: ಕೊರೊನಾ ಬಂದ ಕಾರಣ ಕೂಲಿ ಕಾರ್ಮಿಕರಿಗೆ ಒಂದೆಡೆ ಕೂಲಿ ಕೆಲಸವಿಲ್ಲ, ಇನ್ನೊಂದೆಡೆ ಕೂಲಿ ಇಲ್ಲದೆ ಜೀವನ ಸಾಗಿಸುವುದೇ ಕಷ್ಟವಾಗಿದೆ. ಆದರೆ ಇಂತಹ ಸಮಯದಲ್ಲಿಯೂ ಕೋವಿಡ್-19 ಮುಖ್ಯಮಂತ್ರಿ ಪರಿಹಾರ ನಿಧಿಗೆ 35 ಸಾವಿರ ರೂ. ದೇಣಿಗೆ ನೀಡುವ ಮೂಲಕ ಕೂಲಿ ಕಾರ್ಮಿಕರು ಮಾನವೀಯತೆ ಮೆರೆದಿದ್ದಾರೆ. ರಾಜ್ಯದಲ್ಲಿ ಕಳೆದ ಒಂದು ವಾರದಿಂದ ನರೇಗಾ ಯೋಜನೆಯಡಿಯಲ್ಲಿ ಕಾಮಗಾರಿ ಕೆಲಸಗಳು ಆರಂಭವಾಗಿವೆ. ಅದರಂತೆ ಶಿವಮೊಗ್ಗ ಜಿಲ್ಲೆಯ 271 ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಕಾಮಗಾರಿ ನಡೆಯುತ್ತಿವೆ. ಹೀಗಾಗಿ …
Read More »48 ಸಾವಿರ ಜನರನ್ನು ಗುರುತಿಸಿ ಅವರಿಗೆ ಫುಡ್ ಕಿಟ್ ಕೊಡುವ ಮಹತ್ಕಾರ್ಯಕ್ಕೆ ಶಾಸಕ ಅಭಯ ಪಾಟೀಲ ಇಂದು ಚಾಲನೆ
ಬೆಳಗಾವಿ- ಬೆಳಗಾವಿ ನಗರದ ದಾನಶೂರ ರಿಂದ ಕೇಂದ್ರ ಸರ್ಕಾರಕ್ಕೆ ಕೋಟ್ಯಾಂತರ ರೂ ಅನುದಾನ ಕೊಡಿಸಿರುವ ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ ಪಾಟೀಲ ಈಗ ಮತ್ತೊಂದು ಮಹತ್ಕಾರ್ಯ ಮಾಡುವ ಮೂಲಕ ರಾಷ್ಟ್ರದ ಗಮನ ಸೆಳೆದಿದ್ದಾರೆ . ಬೆಳಗಾವಿ ದಕ್ಷಿಣ ಮತಕ್ಷೇತ್ರದಲ್ಲಿ ಸಮೀಕ್ಷೆ ಮಾಡಿ 48 ಸಾವಿರ ಜನರನ್ನು ಗುರುತಿಸಿ ಅವರಿಗೆ ಫುಡ್ ಕಿಟ್ ಕೊಡುವ ಮಹತ್ಕಾರ್ಯಕ್ಕೆ ಶಾಸಕ ಅಭಯ ಪಾಟೀಲ ಇಂದು ಚಾಲನೆ ನೀಡಿದ್ದಾರೆ. ಬೆಳಗಾವಿಯ ಮಹಾವೀರ ಭವನದಲ್ಲಿ ಕಿಟ್ …
Read More »ಸಹಾಯ ಕೇಳಲು ಹೋದವರ ಬಳಿ ಬೇಜವಾಬ್ದಾರಿತನ ಮೆರೆದ ‘ಕೈ’ ಎಂಎಲ್‌ಎ…….
ಬೆಳಗಾವಿ-ಬೈಲಹೊಂಗಲ ಶಾಸಕ ಮಹಾಂತೇಶ ಕೌಜಲಗಿ ಅವರದ್ದು ಸಾಧು ಸ್ವಭಾವ ಇದನ್ನು ಎಲ್ಲರೂ ನಂಬುತ್ತಾರೆ.ಆದ್ರೆ ಬಡವರು ಅವರ ಹತ್ತಿರ ಸಹಾಯ ಕೇಳಲು ಹೋದ ಸಂಧರ್ಭದಲ್ಲಿ ಅವರು ಆಡಿದ ಮಾತುಗಳನ್ನು ಕೇಳಿದರೆ ಅದನ್ನು ನಂಬೋಕೆ ಆಗ್ತಾ ಇಲ್ಲ ಕೊರೋನಾ ಸಂಕಷ್ಟದಿಂದ ಎಲ್ಲರೂ ಕಷ್ಟ ಅನುಭವಿಸುತ್ತಿದ್ದಾರೆ.ಟಿವ್ಹಿ ಯಲ್ಲಿ,ಪೇಪರ್ ನಲ್ಲಿ ಎಲ್ಲಾ ಕ್ಷೇತ್ರದ ಶಾಸಕರು ಸಹಾಯ ಮಾಡುತ್ತಿರುವ ಸುದ್ಧಿ ನೋಡಿ,ಬೈಲಹೊಂಗಲದ ಬಡಪಾಯಿಗಳು ಸಹಾಯ ಮಾಡುವಂತೆ ಬೈಲಹೊಂಗಲ ಶಾಸಕ ಮಹಾಂತೇಶ ಕೌಜಲಗಿ ಬಳಿ ಹೋದ ಸಂಧರ್ಭದಲ್ಲಿ ಬಡವರ …
Read More »DSS ಮುಖಂಡನ ಬರ್ಬರ ಕೊಲೆ, ಭಯದ ವಾತಾವರಣ
ಗೋಕಾಕ: ಇಲ್ಲಿನ ಹರಿಜನ ಕೇರಿಯಲ್ಲಿ ದಲಿತ ಸಂಘರ್ಷ ಸಮಿತಿಯ ಮುಖಂಡನ ಬರ್ಬರ ಕೊಲೆ ನಡೆದಿದ್ದು ಗೋಕಾಕನಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ. ಸಿದ್ದು ಕನಮಡ್ಡಿ (26), ಗೋಕಾಕ ನಗರದ ಹರಿಜನ ಕೇರಿಯ ನಿವಾಸಿ ಬುಧವಾರ ರಾತ್ರಿ ಊಟದ ಬಳಿಕ ಮನೆಯ ಮುಂದೆಯೇ ಕುಳಿತಿದ್ದಾಗ 5 ಜನರು ಗುಂಪೊಂದು ಮಾರಕಸಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಗಂಭೀರ ಗಾಯಗೊಂಡಿದ್ದ ಸಿದ್ದು ಕನಮಡ್ಡಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಇಂದು ಬೆಳಿಗ್ಗೆ …
Read More »ತೆರಿಗೆ ಸಂಗ್ರಹಕ್ಕೆ ವರ್ಕೌಟ್ ಆದ ಪಾಲಿಕೆ ಪ್ಲಾನ್- 2 ಕೋಟಿಗೂ ಅಧಿಕ ಆಸ್ತಿ ತೆರಿಗೆ ಸಂಗ್ರಹ
ಹುಬ್ಬಳ್ಳಿ: ಮಹಾಮಾರಿ ಕೊರೊನಾ ವೈರಸ್ ಬಂದ ನಂತರ ವಿಶ್ವದ ಆರ್ಥಿಕ ಪರಿಸ್ಥಿತಿಯೇ ಪಾತಾಳಕ್ಕೋಗಿದೆ. ಭಾರತದಲ್ಲೂ ಆರ್ಥಿಕ ಪರಿಸ್ಥಿತಿ ಕೂಡ ಚೆನ್ನಾಗಿಲ್ಲ. ಇತ್ತ ರಾಜ್ಯ ಸರ್ಕಾರದ ಬೊಕ್ಕಸ ಬರಿದಾಗುತ್ತಾ ಬರುತ್ತಿದೆ. ಆದರೆ ಲಾಕ್‍ಡೌನ್ ನಡುವೆಯೂ ಅವಳಿ ನಗರದ ಮಹಾನಗರ ಪಾಲಿಕೆಯ ಖಜಾನೆಗೆ ಕೋಟಿ ಕೋಟಿ ಹಣ ಹರಿದು ಬಂದಿದೆ. ಮೊದಲೇ ಆರ್ಥಿಕ ಸಂಕಷ್ಟದಲ್ಲಿರುವ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ಕೊರೊನಾ ಲಾಕ್‍ಡೌನ್ ಬರಸಿಡಿಲು ಬಡಿದಂತಾಗಿತ್ತು. ಹೀಗಾಗಿ ಆರ್ಥಿಕ ಪುನಶ್ಚೇತನಕ್ಕೆ ಮಹಾನಗರ ಪಾಲಿಕೆ ಆಯುಕ್ತ …
Read More »ಮಹಾಮಾರಿ ಕೊರೊನಾ ಗೆದ್ದ ಮೈಸೂರು- 90ರಲ್ಲಿ 83 ಮಂದಿ ಡಿಸ್ಚಾರ್ಜ್………
ಮೈಸೂರು: ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್ ಸಂಖ್ಯೆ ಏರುತ್ತಿದ್ದದ್ದು ನೋಡಿದಾಗ ಮೈಸೂರು ಇಡೀ ರಾಜ್ಯದಲ್ಲಿ ನಂಬರ್ ಒನ್ ಆಗಿ ಬಿಡುತ್ತೋ ಎಂಬ ಆತಂಕ ಇತ್ತು. ಮೈಸೂರಲ್ಲಿ ಒಟ್ಟು 90 ಪಾಸಿಟಿವ್ ಪ್ರಕರಣ ಪತ್ತೆಯಾಗಿತ್ತು. ಅದರಲ್ಲಿ ಜ್ಯೂಬಿಲಿಯೆಂಟ್ ಕಾರ್ಖಾನೆಯ ಪಾತ್ರವೇ ಅತಿ ದೊಡ್ಡದಾಗಿತ್ತು. ರೋಗಿ ನಂಬರ್ 52 ಸೃಷ್ಟಿಸಿದ ಆತಂಕಕ್ಕೆ ಇಡೀ ಮೈಸೂರೇ ಆತಂಕಕ್ಕೀಡಾಗಿತ್ತು. ಈತನೊಬ್ಬನಿಂದಲೇ 75 ಜನರಿಗೆ ಕೊರೊನಾ ಬಂದಿತ್ತು. ಆದರೆ ಈಗ ಮೈಸೂರು ಮಹಾಮಾರಿ ಕೊರೊನಾವನ್ನ ಗೆದ್ದಿದೆ. ಹೌದು. ಬರೋಬ್ಬರಿ …
Read More »