Breaking News

ಬೆಂಗಳೂರು – ರಾಜ್ಯದಲ್ಲಿ ಇಂದು 36 ಜನರಿಗೆ ಕೊರೋನಾ ಸೋಂಕು ತಗುಲಿದ್ದು, ಒಟ್ಟೂ ಸೋಂಕಿತರ ಸಂಖ್ಯೆ 789ಕ್ಕೇ

ಬೆಂಗಳೂರು – ರಾಜ್ಯದಲ್ಲಿ ಇಂದು 36 ಜನರಿಗೆ ಕೊರೋನಾ ಸೋಂಕು ತಗುಲಿದ್ದು, ಒಟ್ಟೂ ಸೋಂಕಿತರ ಸಂಖ್ಯೆ 789ಕ್ಕೇರಿದೆ. ದಾವಣಗೆರೆ 6, ಬೆಂಗಳೂರು 12, ಭಟ್ಕಳದಲ್ಲಿ 10, ಬೀದರ್ ನಲ್ಲಿ 3, ಚಿತ್ರದಿರ್ಗದಲ್ಲಿ 3, ವಿಜಯಪುರ ಹಾಗೂ ತುಮಕೂರಿನಲ್ಲಿ ತಲಾ 1 ಸೋಂಕು ಪತ್ತೆಯಾಗಿದೆ. ಭಟ್ಕಳದಲ್ಲಿ ನಿನ್ನೆ 12 ಜನರಿಗೆ ಸೋಂಕು ಪತ್ತೆಯಾಗಿತ್ತು. ಇಂದು ಮತ್ತೆ 10 ಜನರಿಗೆ ಸೋಂಕು ತಗುಲಿದೆ. ಬೆಂಗಳೂರಿನ ಪಾದರಾಯನಪುರದಲ್ಲಿ 7 ಜನರಿಗೆ ಸೋಂಕು ತಗುಲಿದೆ. ಬೆಳಗಾವಿಯಲ್ಲಿ …

Read More »

ಸರ್ಕಾರದ ಎಡವಟ್ಟಿನಿಂದ ಇದೀಗ ರಾಜ್ಯದಲ್ಲಿ ಕೊರೊನಾ ಸೋಂಕು ಇನ್ನಷ್ಟು ಹೆಚ್ಚುವ ಭೀತಿ

ಬೆಂಗಳೂರು: ಸರ್ಕಾರದ ಎಡವಟ್ಟಿನಿಂದ ಇದೀಗ ರಾಜ್ಯದಲ್ಲಿ ಕೊರೊನಾ ಸೋಂಕು ಇನ್ನಷ್ಟು ಹೆಚ್ಚುವ ಭೀತಿ ಎದುರಾಗಿದೆ. ವಲಸೆ ಕಾರ್ಮಿಕರನ್ನು ಊರಿಗೆ ಕಳುಹಿಸುವ ಮೂಲಕ ಇದೀಗ ಗ್ರಾಮೀಣ ಪ್ರದೇಶಗಳಲ್ಲೂ ಕೊರೊನಾ ಸೋಂಕು ಹರಡುವ ಸಾಧ್ಯತೆಯಿದೆ. ಲಾಕ್ ಡೌನ್ ಸಡಿಲಿಕೆಯಿಂದಾಗಿ ಬೆಂಗಳೂರಿನಲ್ಲಿದ್ದ ವಲಸೆ ಕಾರ್ಮಿಕರನ್ನು ಅವರವರ ಊರುಗಳಿಗೆ ತೆರಳಲು ಕೆ ಎಸ್ ಆರ್ ಟಿಸಿಯಿಂದ ಉಚಿತ ಬಸ್ ವ್ಯವಸ್ಥೆ ಮಾಡಿ ಕಳುಹಿಸಲಾಗಿತ್ತು. ಹೀಗೆ ಕಳುಹಿಸುವಾಗ ಕಾರ್ಮಿಕರಿಗೆ ಕಾಟಾಚಾರಕ್ಕೆ ತಪಾಸಣೆ ನಡೆಸಲಾಗಿದೆ ಹೊರತು ಸೂಕ್ತವಾಗಿ ತಪಾಸಣೆ …

Read More »

ತಣ್ಣಗಿದ್ದ ಹೊಂಗಸಂಧ್ರದಲ್ಲಿ ಮತ್ತೆ ಕೊರೊನಾ – ಕ್ವಾರಂಟೈನ್ ಮುಗಿಸಿದ್ದ 5 ಮಂದಿಗೆ ಸೋಂಕು

ಬೆಂಗಳೂರು: ಹೊಂಗಸಂಧ್ರದಲ್ಲಿ ಬಿಹಾರಿ ಕೂಲಿ ಕಾರ್ಮಿಕನಿಂದ 29 ಪ್ರಕರಣಗಳು ಪತ್ತೆಯಾಗಿತ್ತು. ಕೆಲ ದಿನಗಳ ನಂತರ ಪ್ರಕರಣಗಳು ಪತ್ತೆಯಾಗಿರಲಿಲ್ಲ. ಹೀಗಾಗಿ ಹೊಂಗಸಂಧ್ರ ಸಹಜ ಸ್ಥಿತಿಯತ್ತ ಸಾಗುತ್ತಿದೆ ಎನ್ನುವಷ್ಟರಲ್ಲೇ ಬಿಹಾರಿ ಕೂಲಿ ಕಾರ್ಮಿಕನ ಸಂಬಂಧ ಕ್ವಾರಂಟೈನ್ ಮಾಡಿದ್ದವರಲ್ಲಿ ಬರೋಬ್ಬರಿ ಐದು ಜನರಿಗೆ ಸೊಂಕು ಪತ್ತೆಯಾಗಿದೆ. ಇದರಿಂದ ಮತ್ತೆ ಹೊಂಗಸಂಧ್ರದಲ್ಲಿ ಭೀತಿ ಎದುರಾಗಿದೆ. ಬಿಹಾರಿ ಕೂಲಿ ಕಾರ್ಮಿಕನೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದ್ದ 184 ಜನರನ್ನ ಹೋಟೆಲ್ ಕ್ವಾರಂಟೈನ್ ಮಾಡಲಾಗಿತ್ತು. ಇವರನ್ನು 14 ದಿನಗಳು ಕ್ವಾರಂಟೈನ್ …

Read More »

ಪತಿಯ ಅಂತ್ಯಕ್ರಿಯೆಗೆ ತೆರಳಲು 20 ನಿಮಿಷದಲ್ಲೇ ಪಾಸ್ ನೀಡಿದ ತಾಲೂಕಾಡಳಿತ………

ಹುಬ್ಬಳ್ಳಿ: ಪತಿಯ ಅಂತ್ಯ ಸಂಸ್ಕಾರಕ್ಕೆ ತೆರಳಲು ಪಾಸ್ ಇಲ್ಲದೆ ಪುಟ್ಟ ಮಕ್ಕಳೊಂದಿಗೆ ಪರದಾಡುತ್ತಿದ್ದ ಮಹಿಳೆಗೆ 20 ನಿಮಿಷದಲ್ಲಿ ಪಾಸ್ ವ್ಯವಸ್ಥೆ ಮಾಡುವ ಮೂಲಕ ಹುಬ್ಬಳ್ಳಿ ತಾಲೂಕ ಆಡಳಿತ ಕಾರ್ಯದಕ್ಷತೆಯನ್ನು ಮೆರೆದಿದೆ. ಅರವಿಂದ ನಗರದ ಯಶೋಧ ಲೋಕಾಪುರ ಎಂಬವರ ಪತಿ ಬಾಗಲಕೋಟೆಯ ನವನಗರದಲ್ಲಿ ಸಾವನ್ನಪ್ಪಿದ್ದರು. ಬಾಗಲಕೋಟೆಗೆ ತೆರಳು ಪಾಸ್ ಇಲ್ಲದೆ ಎರಡು ಚಿಕ್ಕ ಮಕ್ಕಳ ಜೊತೆ ತಹಶೀಲ್ದಾರ ಕಚೇರಿಗೆ ಆಗಮಿಸಿದ್ದರು. ಅಂತ್ಯ ಸಂಸ್ಕಾರಕ್ಕೆ ತೆರಳಲು ಪಾಸ್ ನೀಡುವಂತೆ ಮನವಿ ಮಾಡಿದ್ದಾರೆ. ಮಹಿಳೆಯ …

Read More »

ವಿಡಿಯೋ ಕಾಲ್ ಮಾಡಿದ ವೈದ್ಯಾಧಿಕಾರಿ- ಮನೆಗೆ ಯಾವಾಗ ಬರ್ತಿಯಪ್ಪಾ ಎಂದ ಮಕ್ಕಳು

ಬಾಗಲಕೋಟೆ: ಕೊರೊನಾ ಯುದ್ಧದಲ್ಲಿ ತಿಂಗಳುಗಟ್ಟಲೇ ಪತ್ನಿ, ಮಕ್ಕಳು ತಂದೆ ತಾಯಿಯಿಂದ ದೂರವಾದ ಜಿಲ್ಲಾಸ್ಪತ್ರೆಯ ವೈದ್ಯರೊಬ್ಬರು ವಿಡಿಯೋ ಕಾಲ್ ಮೂಲಕ ಕುಟುಂಬಸ್ಥರ ಕುಶಲೋಪರಿ ವಿಚಾರಿಸಿದರು. ಬಾಗಲಕೋಟೆ ಕೋವಿಡ್ ಆಸ್ಪತ್ರೆಯಲ್ಲಿ ನೂಡಲ್ ಅಧಿಕಾರಿಯಾಗಿರುವ ಚಂದ್ರಕಾಂತ ಜವಳಿ ಕಳೆದ ಒಂದೂವರೆ ತಿಂಗಳಿಂದ ಕೊರೊನಾ ಪ್ರಕರಣಗಳ ಮಾಹಿತಿ ಅಂಕಿ ಅಂಶ ದಾಖಲಾತಿ ಕಾರ್ಯ ನಿಭಾಯಿಸುತ್ತಿದ್ದಾರೆ. ಹೀಗಾಗಿ ಬಾಗಲಕೋಟೆ ಜಿಲ್ಲೆ ಗುಳೇದಗುಡ್ಡ ಪಟ್ಟಣದಲ್ಲಿರುವ ತಂದೆ, ತಾಯಿ, ಪತ್ನಿ ಮಕ್ಕಳ ಭೇಟಿ ಮಾಡಿಲ್ಲ. ಕೊರೊನಾ ಕರ್ತವ್ಯದಲ್ಲಿರುವ ವೈದ್ಯ ಚಂದ್ರಕಾಂತ …

Read More »

ಕೋಲಾರಕ್ಕೆ ಕೊರೊನಾ ಭಯ!- ಕೆಜಿಎಫ್‍ಗೆ ಹೊಂದಿಕೊಂಡಿರುವ ವಿ.ಕೋಟಾದಲ್ಲಿ 5 ಪ್ರಕರಣ

ಕೋಲಾರ: ಲಾಕ್‍ಡೌನ್ ಸಡಿಲಿಕೆ ಹಾಗೂ ಗಡಿ ರಾಜ್ಯಗಳಲ್ಲಿ ಪತ್ತೆಯಾಗಿರುವ ಕೊರೊನಾ ಪ್ರರಕಣಗಳ ಸಂಖ್ಯೆಯಿಂದ ಜಿಲ್ಲೆಯ ಜನರದಲ್ಲಿ ಆತಂಕ ಮೂಡಿದ್ದು, ಗ್ರೀನ್ ಝೋನ್‍ನಲ್ಲಿರುವ ಜಿಲ್ಲೆ ತನ್ನ ಬಣ್ಣ ಬದಲಿಸುವ ಭಯ ಶುರುವಾಗಿದೆ. ರಾಜ್ಯದಲ್ಲಿ ಗ್ರೀನ್ ಝೋನ್‍ನಲ್ಲಿರುವ ಜಿಲ್ಲೆಗಳ ಪೈಕಿ ಕೋಲಾರವೂ ಒಂದು. ಆದರೆ ಕೋಲಾರ ಗ್ರೀನ್ ಝೋನ್‍ನಲ್ಲಿದ್ದರು ಡೇಂಜರ್ ಝೋನ್‍ನಲ್ಲಿರುವ ಜಿಲ್ಲೆಗಳೊಂದಿಗೆ ಗಡಿ ಹಂಚಿಕೊಂಡಿದೆ. ಜಿಲ್ಲೆಯ ನೆರೆಯ ಆಂಧ್ರಪ್ರದೇಶ ಹಾಗೂ ತಮಿಳುನಾಡಿನ ಸುತ್ತಲೂ ಕೊರೊನಾ ಮಹಾಮಾರಿ ತನ್ನ ಅಟ್ಟಹಾಸ ಮೆರೆಯುತ್ತಿದೆ. ಆಂಧ್ರದ …

Read More »

ಕೊರೊನಾ ಹಾಟ್‍ಸ್ಪಾಟ್ ಆದ ಭಟ್ಕಳ ಸೀಲ್‍ಡೌನ್ – ಮೆಡಿಕಲ್, ಪೆಟ್ರೋಲ್ ಎಲ್ಲವೂ ಬಂದ್

ಕಾರವಾರ: ಉತ್ತರಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಒಂದೇ ದಿನ 12 ಕೇಸ್ ಪತ್ತೆಯಾಗಿದೆ. ಮಂಗಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆಗೆ ಹೋಗಿದ್ದ ಕುಟುಂಬ ಇಡೀ ಜಿಲ್ಲೆಯ ಜನರನ್ನ ಬೆಚ್ಚಿ ಬೀಳಿಸುವಂತೆ ಮಾಡಿದೆ. ಐದೂವರೆ ತಿಂಗಳ ಮಗುವಿನಲ್ಲೂ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಹೀಗಾಗಿ ಇಡೀ ಭಟ್ಕಳ ನಗರವನ್ನು ಸೀಲ್‍ಡೌನ್ ಮಾಡಲಾಗಿದೆ. ಉತ್ತರಕನ್ನಡ ಜಿಲ್ಲೆಯ ಭಟ್ಕಳವೀಗ ಕೊರೊನಾ ಹಾಟ್‍ಸ್ಪಾಟ್ ತಾಣವಾಗಿದೆ. ಒಂದೇ ದಿನ 12 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಆ ಮೂಲಕ ಸೋಂಕಿತರ ಸಂಖ್ಯೆ …

Read More »

ಬೆಂಗಳೂರಿನಲ್ಲಿ ಮತ್ತೊಬ್ಬ ಗರ್ಭಿಣಿಗೆ ಕೊರೊನಾ…………

ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಕೊರೊನಾಸುರ ಅಬ್ಬರಿಸುತ್ತಿದ್ದು, ಇಂದು ಇಬ್ಬರು ಗರ್ಭಿಣಿಯರಿಗೆ ಕೊರೊನಾ ಸೋಂಕು ತಗುಲಿದೆ. ಮಧ್ಯಾಹ್ನ ಪಾದರಾಯನಪುರದ ಗರ್ಭಿಣಿಯೊಬ್ಬರಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಇದೀಗ ಅದೇ ವ್ಯಾಪ್ತಿಯ ಮತ್ತೊಬ್ಬ ಗರ್ಭಿಣಿಗೆ ಸೋಂಕು ಕಾಣಿಸಿಕೊಂಡಿರುವ ಮಾಹಿತಿ ಲಭ್ಯವಾಗಿದೆ. ಇಂದು ಬೆಂಗಳೂರಿನ ಒಟ್ಟು 16 ಮಂದಿಗೆ ಕೊರೊನಾ ಸೋಂಕು ತಗುಲಿದೆ. ಪಾದರಾಯನಪುರ 10ನೇ ಕ್ರಾಸ್ ನಿವಾಸಿ 19 ವರ್ಷದ 8 ತಿಂಗಳು ಗರ್ಭಿಣಿಗೆ ಸೋಂಕು ತಗುಲಿದೆ. ಮಹಿಳೆಯ ಪತಿ (ರೋಗಿ 706)ಗೆ ಸಾಮೂಹಿಕ ಪರೀಕ್ಷೆಯಲ್ಲಿ …

Read More »

ಮಲಗಿದ್ದ ಮಗುವನ್ನ ಹೊತ್ತೊಯ್ದು ತಿಂದ ಚಿರತೆ – ಅರ್ಧ ದೇಹ ಪತ್ತೆ

ರಾಮನಗರ: ಪೋಷಕರ ಬಳಿ ಮಲಗಿದ್ದ ಮಗುವನ್ನು ಚಿರತೆಯೊಂದು ಹೊತ್ತೊಯ್ದು ಅರ್ಧ ಚಿಂದು ಸಾಯಿಸಿರುವ ಅಮಾನವೀಯ ಘಟನೆ ಜಿಲ್ಲೆಯ ಮಾಗಡಿ ತಾಲೂಕಿನ ಕದಿರಯ್ಯನಪಾಳ್ಯದಲ್ಲಿ ನಡೆದಿದೆ. ಮೂರು ವರ್ಷದ ಹೇಮಂತ್‍ನನ್ನು ಚಿರತೆ ತಿಂದು ಸಾಯಿಸಿದೆ. ಹೇಮಂತ್ ತನ್ನ ತಾತನ ಮನೆಗೆ ಬಂದಿದ್ದ ಸಂದರ್ಭದಲ್ಲಿ ಇಂದು ನಸುಕಿನ ಜಾವ ಸುಮಾರು 2 ಗಂಟೆಗೆ ಈ ಘಟನೆ ನಡೆದಿದೆ. ಮನೆ ಸಮೀಪದ ಕಾಡಿನಲ್ಲಿ ಮಗುವನ್ನು ತಿಂದು ಹೋಗಿದೆ. ಇದೀಗ ಮಗುವಿನ ಅರ್ಧ ದೇಹ ಪತ್ತೆಯಾಗಿದೆ. ಮೃತ …

Read More »

ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಸೆಂಟ್ರಲೈಜೆಷನ್ ಆಕ್ಸಿಜನ್ ವ್ಯವಸ್ಥೆ: ಸಚಿವ ಶ್ರೀರಾಮುಲು

ಧಾರವಾಡ: ರಾಜ್ಯದ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಸೆಂಟ್ರಲೈಜೆಷನ್ ಆಕ್ಸಿಜನ್ ವ್ಯವಸ್ಥೆ ಮಾಡಲಿದ್ದೇವೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ಭರವಸೆ ನೀಡಿದ್ದಾರೆ. ಧಾರವಾಡದಲ್ಲಿ ಅಧಿಕಾರಿಗಳ ಸಭೆ ನಡೆಸಿ ನಂತರ ಮಾತನಾಡಿದ ಅವರು, ರಾಜ್ಯದ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಸೆಂಟ್ರಲೈಜೆಷನ್ ಅಕ್ಸಿಜನ್ ವ್ಯವಸ್ಥೆ ಮಾಡಲಿದ್ದೇವೆ. ಈ ಕುರಿತು ಚರ್ಚೆ ನಡೆಸಲಾಗಿದೆ. ರಾಜ್ಯದಲ್ಲಿ 32 ಕೋವಿಡ್ ಲ್ಯಾಬ್ ಕೆಲಸ ಮಾಡುತ್ತಿವೆ. ಇನ್ನು ಹೆಚ್ಚು ಲ್ಯಾಬ್‍ಗಳಿಗೆ ಬೇಡಿಕೆ ಇದೆ, ಪ್ರಸ್ತುತ ದಿನಕ್ಕೆ 7ರಿಂದ 8 ಸಾವಿರ …

Read More »