Breaking News

ನಾವು ಏನಾದ್ರು ತಿಂದ್ರೆ ತಾನೆ ಮಗುವಿಗೆ ಹಾಲು ಕೊಡಲು ಸಾಧ್ಯ: ತಾಯಂದಿರ ಕಣ್ಣೀರು

ಬೆಂಗಳೂರು: ದೂರದ ಊರಿನಿಂದ ರಾಜ್ಯಕ್ಕೆ ವಾಪಸ್ ಬಂದ ಜನರಿಗೆ ಸರ್ಕಾರ ಸೂಕ್ತವಾದ ವ್ಯವಸ್ಥೆ ಕಲ್ಪಿಸದೇ ಜನಸಾಮಾನ್ಯರು ಬಿಎಂಟಿಸಿ ಬಸ್ಸಿನೊಳಗೆ ಕುಳಿತು ಪರದಾಡಿದ್ದಾರೆ. ಬೇರೆ ರಾಜ್ಯದಿಂದ ಪುಟ್ಟಪುಟ್ಟ ಮಕ್ಕಳನ್ನು ಕಟ್ಟಿಕೊಂಡು, ಮನೆಸೇರಿಕೊಳ್ಳಲು ಬಂದಿರುವ ಈ ತಾಯಂದಿರ ಕಣ್ಣೀರು ನೋಡಿದ್ರೆ ಕರಳು ಚುರುಕ್ ಅನ್ನುತ್ತೆ. ನಿನ್ನೆ ಇಂದು ರೈಲಿನಲ್ಲಿ ಪ್ರಯಾಣ ಮಾಡುತ್ತಿರುವ ಕಾರಣ ಸರಿಯಾಗಿ ಊಟ ತಿನ್ನದೇ ಮಗುವಿಗೆ ಹಾಲು ಉಣಿಸಲು ಎದೆಹಾಲು ಬರುತ್ತಿಲ್ಲ ಎಂದು ಬಿಸಿಲಿನಲ್ಲಿ ಬಸ್ಸಿನೊಳಗೆ ಕುಳಿತು ತಮ್ಮ ಕಷ್ಟವನ್ನು …

Read More »

ಪಿಪಿಇ ಕಿಟ್ ತೆಗೆಯುವಾಗ ಎಡವಟ್ಟು- ನರ್ಸ್‍ಗೆ ತಗುಲಿದೆ ಕೊರೊನಾ

ಬೆಂಗಳೂರು: ಪಿಪಿಇ ಕಿಟ್ ತೆಗೆಯುವಾಗ ಎಡವಟ್ಟು ಮಾಡಿಕೊಂಡ ಪರಿಣಾಮ ಬೆಂಗಳೂರಿನ ನರ್ಸ್ (ರೋಗಿ-928) ಅವರಿಗೆ ಡೆಡ್ಲಿ ಕೊರೊನಾ ಸೋಂಕು ತಗುಲಿದೆ ಎಂಬ ಮಾಹಿತಿ ಮೂಲಗಳಿಂದ ಲಭಿಸಿದೆ. ಕೋವಿಡ್-19 ವಾರ್ಡಿನಲ್ಲಿ ಕೆಲಸ ಮಾಡುವಾಗ ವೈದ್ಯರು, ವೈದ್ಯಕೀಯ ಸಿಬ್ಬಂದಿ ಸಂಪೂರ್ಣವಾಗಿ ವೈಯಕ್ತಿಕ ಸುರಕ್ಷಾ ಸಾಧನ (ಪಿಪಿಇ ಕಿಟ್) ಅಳವಡಿಸಿಕೊಳ್ಳುತ್ತಾರೆ. ಅಷ್ಟೇ ಅಲ್ಲದೆ ಅದನ್ನು ಜಾಗೃತವಾಗಿ ಬಿಚ್ಚಿ ಎಸೆಯಬೇಕು. ಆದರೆ ನರ್ಸ್ ಪಿಪಿಇ ಕಿಟ್ ಬಿಚ್ಚುವಾಗ ಎಡವಟ್ಟು ಮಾಡಿಕೊಂಡಿದ್ದರು ಎಂದು ಹೇಳಲಾಗುತ್ತಿದೆ. ಕೊರೊನಾ ಸೋಂಕಿತರ …

Read More »

ಬೆಳಗಾವಿಯಲ್ಲಿ ಮತ್ತೆ ಕೊರೋನಾ ಅಟ್ಯಾಕ್.ಸೊಂಕಿತರ ಸಂಖ್ಯೆ 114 ಕ್ಕೆ ತಲುಪಿದಂತಾಗಿದೆ

ಬೆಳಗಾವಿಯ ಸದಾಶಿವ ನಗರದ ತುಂಬು ಗರ್ಭಿಣಿಗೆ ಕೊರೋನಾ ಸೊಂಕು ಇರುವದು ದೃಡವಾಗಿದೆ ಹೀಗಾಗಿ ಜಿಲ್ಲೆಯಲ್ಲಿ ಸೊಂಕಿತರ ಸಂಖ್ಯೆ 114 ಕ್ಕೆ ತಲುಪಿದಂತಾಗಿದೆ ಕೆಲ ದಿನಗಳ ಹಿಂದೆ ಈ ಮಹಿಳೆ ಮುಂಬೈಯಿಂದ ಬೆಳಗಾವಿಗೆ ಬಂದಿರುವ ಟ್ರಾವೆಲ್ ಹಿಸ್ಟರಿ ಇದೆ ಎಂದು ಗೊತ್ತಾಗಿದೆ   ರಾಜ್ಯದಲ್ಲಿ ಇಂದು 22 ಜನರಿಗೆ ಕೊರೋನಾ ಸೋಂಕು ತಗುಲಿದೆ. ಇದರಿಂದಾಗಿ ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖೆಯ 981ಕ್ಕೇರಿದಂತಾಗಿದೆ. ಬೆಂಗಳೂರಿನಲ್ಲಿ 5, ಮಂಡ್ಯ, ಗದಗ, ಬೀದರ್ ನಲ್ಲಿ ತಲಾ 4, …

Read More »

ಲೈನ್‍ಮ್ಯಾನ್‍ಗಳ ಕೆಲಸಕ್ಕೆ ಸಿಗಲಿಲ್ಲ ಗೌರವ- ಬೇಸರವಾಗಿದೆ ಹಗಲು, ರಾತ್ರಿ ದುಡಿದ ಜೀವ…..

ಬೆಂಗಳೂರು: ಕೊರೊನಾ ಲಾಕ್ ಡೌನ್ ಸಮಯದಲ್ಲಿ ಕೆಲಸ ಮಾಡಿದ ಹಲವು ಇಲಾಖೆಗಳಿಗೆ ಕೊರೊನಾ ವಾರಿಯರ್ಸ್ ಅಂತ ಹೆಸರು ಕೊಡಲಾಯ್ತು. ಜೀವಕ್ಕೆ ಹೆದರದೆ ಕೊರೊನಾ ಸೋಂಕಿತರಿಗಾಗಿ ಕೆಲಸ ಮಾಡಿದವರಿಗೆ ಮನ್ನಣೆ ಕೊಡಲಾಯ್ತು. ಆದರೆ ಕೆಇಬಿಯ ಲೈನ್‍ಮ್ಯಾನ್‍ಗಳಿಗೆ ಯಾವುದೇ ಗೌರವ ಸಲ್ಲಲಿಲ್ಲ ಅನ್ನೋ ಬೇಸರ ಹಲವರಲ್ಲಿದೆ. ಲಾಕ್‍ಡೌನ್ ಟೈಮ್‍ನಲ್ಲಿ ಕೆಲಸ ಮಾಡಿದ ಅನುಭವ ಹೇಗಿತ್ತು..? ಏನಾಯ್ತು ಅನ್ನೊದ್ರ ಬಗ್ಗೆ ಲೈನ್‍ಮ್ಯಾನ್‍ಗಳು ಡಿಟೈಲ್ ಆಗಿ ಹೇಳಿಕೊಂಡಿದ್ದಾರೆ. ಲಾಕ್‍ಡೌನ್ ಅನೌನ್ಸ್ ಆಯ್ತು. ಕೊರೊನಾ ಕಂಟಕದಿಂದ ಪಾರಾಗಲು …

Read More »

ಮಾಜಿ ಭೂಗತ ಪಾತಕಿ ಮತ್ತು ಜಯಕರ್ನಾಟಕ ಸಂಘಟನೆಯ ಮುಖ್ಯಸ್ಥ ಮುತ್ತಪ್ಪ ರೈ ಅವರ ಆರೋಗ್ಯ ಪರಿಸ್ಥಿತಿ ಗಂಭೀರ

ಬೆಂಗಳೂರು: ಮಾಜಿ ಭೂಗತ ಪಾತಕಿ ಮತ್ತು ಜಯಕರ್ನಾಟಕ ಸಂಘಟನೆಯ ಮುಖ್ಯಸ್ಥ ಮುತ್ತಪ್ಪ ರೈ ಅವರ ಆರೋಗ್ಯ ಪರಿಸ್ಥಿತಿ ಗಂಭೀರವಾಗಿದ್ದು, ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಳೆದ ಕೆಲ ವರ್ಷಗಳಿಂದ ಮುತ್ತಪ್ಪ ರೈ ಕ್ಯಾನ್ಸರ್ ನಿಂದ ಬಳಲುತ್ತಿದ್ದರು. ಜೊತೆಗೆ ದೈಹಿಕವಾಗಿ ಕುಗ್ಗಿ ಹೋಗಿದ್ದರು. ಈಗ ಅವರ ಆರೋಗ್ಯ ಪರಿಸ್ಥಿತಿ ಚಿಂತಾಜನಕವಾಗಿದ್ದು, ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ವೆಂಟಿಲೇಟರ್ ಮೇಲೆ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಈ …

Read More »

ಕೊಡಗಿನಲ್ಲಿ ಹುಲಿ ಪ್ರತ್ಯಕ್ಷ – ಸ್ಥಳೀಯರು ಆತಂಕ………..

ಮಡಿಕೇರಿ: ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಆನೆ ಚೌಕೂರು ಗೇಟ್ ಬಳಿ ಹುಲಿ ಪ್ರತ್ಯಕ್ಷವಾಗಿದ್ದು, ಸ್ಥಳೀಯರು ಆತಂಕಗೊಂಡಿದ್ದಾರೆ. ಹುಲಿಯೊಂದು ಆನೆ ಚೌಕೂರು ಗೇಟ್ ಬಳಿ ಪ್ರತ್ಯಕ್ಷವಾಗಿದೆ. ಜೊತೆಗೆ ಮೂರು ಮರಿಗಳೊಂದಿಗೆ ಹುಲಿ ಇದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಹುಲಿಯ ವಿಡಿಯೋವನ್ನು ಸ್ಥಳೀಯರೊಬ್ಬರು ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದಾರೆ. ನಾಗರಹೊಳೆ ರಾಷ್ಟ್ರೀಯ ಹುಲಿ ಸಂರಕ್ಷಣಾ ಸ್ಥಳದಿಂದ ಬಂದಿವೆ ಎನ್ನಲಾಗಿದೆ. ಇದೀಗ ಜನರು ಹುಲಿ ಕಂಡು ಆತಂಕಗೊಂಡಿದ್ದಾರೆ. ಸ್ಥಳೀಯರು ತಕ್ಷಣ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ …

Read More »

ನೀವು ಈ ನಿಯಮಗಳನ್ನು ಪಾಲಿಸಿದರೆ ಕೊರೋನಾ ನಿಮ್ಮ ಬಳಿ ಸುಳಿಯಲ್ಲ

ಬೆಂಗಳೂರು, -ಕೋರೋನ ಸೋಂಕಿನ ಹಿನ್ನಲೆಯಲ್ಲಿ ನವದೆಹಲಿಯ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಕೆಲವು ಮುನ್ನೆಚ್ಚರಿಕಾ ಕ್ರಮಗಳನ್ನು ಸೂಚಿಸಿದೆ ಇವುಗಳನ್ನು ಪಾಲಿಸುವ ಮೂಲಕ ಕೊರೋನಾದಿಂದ ಸುರಕ್ಷಿತವಾಗಿರ ಬಹುದು . ಇವುಗಳಲ್ಲಿ ಕೆಲವು ಪ್ರಮುಖ ಅಂಶಗಳನ್ನು ನೀಡಲಾಗಿದೆ. … 1. ಎರಡು ವರ್ಷಗಳ ಕಾಲ ವಿದೇಶ ಪ್ರವಾಸ ಮುಂದೂಡಿ. 2. ಒಂದು ವರ್ಷ ಹೊರಗಿನ ಆಹಾರವನ್ನು ಸೇವಿಸಬೇಡಿ. 3. ಅನಗತ್ಯ ಮದುವೆ / ಇತರೆ ಸಮಾರಂಭಕ್ಕೆ ಹೋಗಬೇಡಿ. 4. ಅನಗತ್ಯ …

Read More »

ದಿಲ್ಲಿಯಿಂದ ಬಂದವ್ರ ಆಕ್ರೋಶ,ನಾವು ಬಡವರು, 1,800-2,000 ರೂ. ಹೋಟೆಲ್ ಗೆ ಹೇಳುತ್ತಿದ್ದಾರೆ. ನಾವು ಎಲ್ಲಿಂದ ಹಣ ತರುವುದು ದೆಹಲಿಯಿಂದ ಬಂದ ಮಹಿಳಾ ಪ್ರಯಾಣಿಕರೊಬ್ಬರು ಸರ್ಕಾರದ ವಿರುದ್ಧ ಕಿಡಿ

ಬೆಂಗಳೂರು: ದೆಹಲಿಯಿಂದ ಇಂದು ಸುಮಾರು 1 ಸಾವಿರ ಮಂದಿ ಬೆಂಗಳೂರಿಗೆ ರೈಲಿನಲ್ಲಿ ಆಗಮಿಸಿದ್ದಾರೆ. ಇದೀಗ ಅವರನ್ನು ಕ್ವಾರಂಟೈನ್ ಮಾಡಲು ಸಿದ್ಧತೆ ನಡೆಸಲಾಗುತ್ತಿದ್ದು, ಪ್ರಯಾಣಿಕರು ತಮ್ಮ ಆಕ್ರೋಶ ಹೊರಹಾಕುತ್ತಿದ್ದಾರೆ. ನಮಗೆ ಕ್ವಾರಂಟೈನ್ ಮಾಡುವ ವಿಚಾರವೇ ಗೊತ್ತಿರಲಿಲ್ಲ. ಕ್ವಾರಂಟೈನ್ ಆಗಲು ನಾವು ಇಲ್ಲಿ ಬರಬೇಕಿತ್ತಾ ಇಂದು ಕಿಡಿಕಾರಿದ್ದಾರೆ.   ದೆಹಲಿಯಿಂದ ಬಂದ ಟ್ರೈನ್‍ನಲ್ಲಿ ಕುಡಿಯೋಕೆ ನೀರಿಲ್ಲ. ಟಾಯ್ಲೆಟ್ ನಲ್ಲಿ ಕೂಡ ನೀರು ಇರಲಿಲ್ಲ. ಇದೀಗ ಕ್ವಾರೆಂಟೈನ್ ಅಂತಾ ಓಡಾಡ್ತಿದ್ದಾರೆ. ದೆಹಲಿಯಿಂದ ಇಲ್ಲಿಗೆ ಬರುವ …

Read More »

ಕೊರೊನಾ ಲಾಕ್‍ಡೌನ್‍ನಿಂದ 50 ದಿನಗಳ ಬಳಿಕ ದೆಹಲಿಯಿಂದ ಬೆಂಗಳೂರಿನ ಮೆಜೆಸ್ಟಿಕ್ ರೈಲು ನಿಲ್ದಾಣಕ್ಕೆ ವಿಶೇಷ ರೈಲು

ಬೆಂಗಳೂರು: ಕೊರೊನಾ ಲಾಕ್‍ಡೌನ್‍ನಿಂದ 50 ದಿನಗಳ ಬಳಿಕ ದೆಹಲಿಯಿಂದ ಬೆಂಗಳೂರಿನ ಮೆಜೆಸ್ಟಿಕ್ ರೈಲು ನಿಲ್ದಾಣಕ್ಕೆ ವಿಶೇಷ ರೈಲು ಬಂದಿದೆ. ಇಂದು ಬೆಳಗ್ಗೆ ಸುಮಾರು 7.15ಕ್ಕೆ ಬೆಂಗಳೂರು ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣಕ್ಕೆ ಆಗಮಿಸಿದೆ. ಕೇಂದ್ರ ಸರ್ಕಾರ ದೇಶಾದ್ಯಂತ 30 ವಿಶೇಷ ರೈಲು ಸಂಚಾರ ಆರಂಭಿಸಲು ಅವಕಾಶ ಮಾಡಿಕೊಟ್ಟಿತ್ತು. ಹೀಗಾಗಿ ಮಂಗಳವಾರ ರಾತ್ರಿ ದೆಹಲಿಯಿಂದ ಬೆಂಗಳೂರಿಗೆ ವಿಶೇಷ ರೈಲು ಹೊರಟಿತ್ತು. ರೈಲಿನಲ್ಲಿ ಸುಮಾರು 1,000ಕ್ಕೂ ಹೆಚ್ಚು ಪ್ರಯಾಣಿಕರು ಆಗಮಿಸಿದ್ದಾರೆ. ಪ್ಲಾಟ್ ಫಾರಂ …

Read More »

ಕಲಬುರಗಿಗೆ ತಬ್ಲಿಘಿ ಬಳಿಕ ಧಾರಾವಿ ಕಂಟಕ……….

ಕಲಬುರಗಿ: ಇಷ್ಟು ದಿನ ತಬ್ಲಿಘಿಗಳ ಸೋಂಕಿನಿಂದ ನರಳಿದ ಕಲಬುರಗಿ ಜಿಲ್ಲೆಗೆ ಇದೀಗ ಮುಂಬೈನ ಧಾರಾವಿ ಸ್ಲಂ ಪ್ರದೇಶ ಕಂಟಕವಾಗಿದ್ದು, ಬುಧವಾರ ದಾಖಲಾದ 8 ಪ್ರಕರಣಗಳಲ್ಲಿ 4 ಜನರಲ್ಲಿ ಮುಂಬೈ ವಲಸಿಗ ಕಾರ್ಮಿಕನಿಂದಲೇ ಬಂದಿದೆ. ಅದರಲ್ಲೂ ಜಿಲ್ಲೆಗೆ 10 ಸಾವಿರಕ್ಕೂ ಹೆಚ್ಚು ವಲಸಿಗ ಕಾರ್ಮಿಕರು ಬಂದಿದ್ದಾರೆ. ಇಡೀ ದೇಶದಲ್ಲಿ ಕೊರೊನಾದಿಂದ ಅತಿ ಹೆಚ್ಚು ನಲುಗಿದ ರಾಜ್ಯ ಅಂದರೆ ಅದು ಮಹಾರಾಷ್ಟ್ರ. ಮುಂಬೈನ ಧಾರಾವಿಯಲ್ಲಿ ನೆಲೆಸಿದ್ದ ಕಲಬುರಗಿ ಮೂಲದ 10 ಸಾವಿರಕ್ಕೂ ಹೆಚ್ಚು …

Read More »