Breaking News

ಕೊರೊನಾದಿಂದ ಕಲ್ಯಾಣ ಮಂಟಪ ಮಾಲೀಕರಿಗೆ 50 ಕೋಟಿ ನಷ್ಟ

ಹಾಸನ: ಕೊರೊನಾ ವೈರಸ್ ಜಿಲ್ಲೆಯ ಕಲ್ಯಾಣ ಮಂಟಪದ ಮಾಲೀಕರನ್ನು ಅತಂತ್ರ ಸ್ಥಿತಿಗೆ ದೂಡಿದೆ. ಹಾಸನ ನಗರದಲ್ಲೇ ಕಲ್ಯಾಣ ಮಂಟಪ ಮಾಲೀಕರಿಗೆ ಬರೋಬ್ಬರಿ 50 ರಿಂದ 60 ಕೋಟಿ ನಷ್ಟ ಆಗಿದೆ ಎಂದು ಹಾಸನ ಕಲ್ಯಾಣ ಮಂಟಪದ ಅಧ್ಯಕ್ಷ ದಿನೇಶ್ ಹೇಳಿಕೆ ನೀಡಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿದ ದಿನೇಶ್ ಅವರು, ಕಲ್ಯಾಣ ಮಂಟಪ ಮಾಲೀಕರು ಈಗಾಗಲೇ ಮದುವೆಗೆ ಬುಕ್ ಮಾಡಿದವರ ಹಣ ವಾಪಸ್ ಕೊಡಲು ಅಸಾಹಯಕತೆ ತೋಡಿಕೊಂಡಿದ್ದಾರೆ. ಈ ಕುರಿತು ಹಾಸನ …

Read More »

ಚಿನ್ನದ ಗಣಿಯಲ್ಲಿ ಕಳ್ಳತನಕ್ಕೆ ಯತ್ನ- ಮೂವರ ಸಾವು, ಇಬ್ಬರು ಅರೆಸ್ಟ್………..

ಕೋಲಾರ: ಚಿನ್ನದ ಗಣಿಯಲ್ಲಿ ಚಿನ್ನ ಕಳ್ಳತನಕ್ಕೆಂದು ತೆರಳಿದ್ದ ಐವರಲ್ಲಿ ಮೂವರು ಮೃತಪಟ್ಟಿದ್ದು, ಇಬ್ಬರನ್ನ ಬಂಧಿಸಿರುವ ಘಟನೆ ಕೋಲಾರದಲ್ಲಿ ಜರುಗಿದೆ. ಕೋಲಾರ ಜಿಲ್ಲೆ ಕೆಜಿಎಫ್ ನಗರದ ಮಾರಿಕುಪ್ಪಂನ ಮೈಸೂರು ಮೈನಿಂಗ್ ನಲ್ಲಿ ಈ ಘಟನೆ ಜರುಗಿದ್ದು, ಮೂವರು ಕಳ್ಳರು ಮೃತಪಟ್ಟಿದ್ದಾರೆ. ಕಳೆದ ರಾತ್ರಿ ಕೆಜಿಎಫ್ ನ ಐವರು ನಿವಾಸಿಗಳು ಚಿನ್ನದ ಗಣಿಯಲ್ಲಿ ಚಿನ್ನ ಕಳ್ಳತನಕ್ಕೆಂದು ತೆರಳಿದ್ದರು. ಚಿನ್ನದ ಗಣಿಯ ಗುಂಡಿಯಲ್ಲಿ ಬಿದ್ದು ಮೂವರು ಸಾವನ್ನಪ್ಪಿದ್ದಾರೆ. ಮೃತರನ್ನು ಕೆಜಿಎಫ್ ನಗರದ ಬಿ-ಶಾಪ್ ನ …

Read More »

ಜೀವನಕ್ಕೆ ಬೇಕಾದ ಸೌಲಭ್ಯ ಕೊಡಿ – ಕಪ್ಪುಪಟ್ಟಿ ಧರಿಸಿ ಬಂದ ಕೊರೊನಾ ವಾರಿಯರ್ಸ್

ಯಾದಗಿರಿ: ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರು ಕಪ್ಪು ಪಟ್ಟಿ ಧರಿಸಿ ಕೆಲಸಕ್ಕೆ ಹಾಜರಾಗಿದ್ದಾರೆ. ಯಾದಗಿರಿ ಜಿಲ್ಲೆಯಲ್ಲಿ ಒಟ್ಟು 560 ನೌಕರರು ರಾಜ್ಯ ಆರೋಗ್ಯ ಮತ್ತು ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಗುತ್ತಿಗೆ ಹಾಗೂ ಹೊರಗುತ್ತಿಗೆ ಆಧಾರದ ಮೇಲೆ ವಿವಿಧ ತಾಲೂಕಿನ ಸರ್ಕಾರಿ ಆಸ್ಪತ್ರೆಗಳಲ್ಲಿ ಹಲವಾರು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ …

Read More »

ಅಂದು ವೇಶ್ಯೆ ಆಗಿದ್ದಾಕೆ ಇಂದು ಬಾಲಿವುಡ್‍ನ ಸ್ಟಾರ್ ಬರಹಗಾರ್ತಿ

ಮುಂಬೈ: ಬಾಲಿವುಡ್‍ನ ಖ್ಯಾತ ಬರಹಗಾರ್ತಿ ಒಬ್ಬರ ಕತೆ ಕೇಳಿದರೆ ಯಾವ ಸಿನಿಮಾ ಕತೆಗಳಿಗಿಂತಲೂ ಕಡಿಮೆಯಿಲ್ಲ ಎನಿಸುತ್ತೆ. ಆದರೆ ಇದು ಸಿನಿಮಾ ಕತೆಯಲ್ಲ ಖ್ಯಾತ ಬರಹಗಾರ್ತಿಯ ನಿಜ ಜೀವನದ ವ್ಯತೆ. ಹಿಂದೆ ಜೀವನ ನಡೆಸಲು ಮುಂಬೈನಲ್ಲಿ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಮಹಿಳೆ ಇಂದು ಬಾಲಿವುಡ್‍ನಲ್ಲಿ ತಮ್ಮ ಪ್ರತಿಭೆ ಮೂಲಕ ಖ್ಯಾತಿ ಗಳಿಸಿದ್ದಾರೆ. ಇವರು ಬರೆದ ಕತೆಗಳು ಇಂದು ಬಿಟೌನ್‍ನಲ್ಲಿ ಹಿಟ್ ಸಿನಿಮಾಗಳಾಗಿವೆ. ಅಂದು ಜೀವನ ನಿರ್ವಹಣೆಗಾಗಿ ವೇಶ್ಯೆ ಆಗಿದ್ದವರು ಇಂದು ಬಾಲಿವುಡ್‍ನಲ್ಲಿ ಖ್ಯಾತಿ …

Read More »

ರೈತರಿಗೆ ಹಣ ಕೊಡಲು ಕೈ ಸಾಲ ಸಿಗದೆ ಆಸ್ತಿ ಅಡ ಇಟ್ರು – ಜನರಿಗೆ ದಿನಸಿ ಕಿಟ್, ತರಕಾರಿ ವಿತರಿಸಲು 5.5 ಕೋಟಿ ಖರ್ಚು

ಮೈಸೂರು: ಮಾಜಿ ಸಚಿವ ಸಾರಾ ಮಹೇಶ್ ಕೊರೊನಾ ಹಿನ್ನೆಲೆಯಲ್ಲಿ ತಮ್ಮ ಕ್ಷೇತ್ರದ ಜನರಿಗೆ ದಿನಸಿ ಕಿಟ್ ವಿತರಿಸಲು ಪೆಟ್ರೋಲ್ ಬಂಕ್ ಹಾಗೂ ಪ್ರೀತಿಯಿಂದ ಕಟ್ಟಿಸಿದ ಮನೆಯನ್ನು ಬ್ಯಾಂಕಿನಲ್ಲಿ ಅಡ ಇಟ್ಟಿದ್ದಾರೆ. ತಮ್ಮ ಕ್ಷೇತ್ರದ ಜನರಿಗೆ 5.5 ಕೋಟಿ ರೂಪಾಯಿ ವೆಚ್ಚದಲ್ಲಿ ಪಡಿತರ ಕಿಟ್ ಹಾಗೂ ತರಕಾರಿ ವಿತರಿಸಿದ್ದಾರೆ. ರೈತರಿಂದ ಒಂದೂವರೆ ಕೋಟಿ ರೂಪಾಯಿಯಷ್ಟು ತರಕಾರಿ ಖರೀದಿ ಮಾಡಿದ್ದಾರೆ. ರೈತರಿಗೆ ಈ ತಿಂಗಳ 18ರ ಒಳಗೆ ಹಣ ಕೊಡುವ ಮಾತು ಕೊಟ್ಟಿದ್ದಾರೆ. …

Read More »

ಯಾರ ಸಹಾಯವೂ ಬೇಡ ನಮ್ಮನ್ನು ಬಿಟ್ಟು ಬಿಡಿ’ – ಬೈಕ್, ಕಾಲ್ನಡಿಗೆಯಲ್ಲಿ ತಮ್ಮೂರಿನತ್ತ ಕೂಲಿ ಕಾರ್ಮಿಕರ ಪಯಣ

ಯಾದಗಿರಿ: ಇಷ್ಟು ದಿನ ರಾಜ್ಯದ ವಿವಿಧ ಜಿಲ್ಲೆಯಲ್ಲಿ ಪಾನಿಪೂರಿ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದ ಉತ್ತರ ಭಾರತದ ವಿವಿಧ ರಾಜ್ಯಗಳ ಕೂಲಿ ಕಾರ್ಮಿಕರು, ಕಾಲ್ನಡಿಗೆ ಮತ್ತು ಬೈಕ್ ಮೂಲಕ ತಮ್ಮ-ತಮ್ಮ ಊರುಗಳಿಗೆ ವಾಪಸ್ಸಾಗುತ್ತಿದ್ದಾರೆ. ಮಕ್ಕಳು, ಮಹಿಳೆಯರು, ವೃದ್ಧರು ಹೀಗೆ ತಮ್ಮ ಕುಟುಂಬಗಳೊಂದಿಗೆ ಕೆಲವರು ಮಧ್ಯಪ್ರದೇಶಕ್ಕೆ ನಡೆದುಕೊಂಡು ಹೋಗುತ್ತಿದ್ದರೆ. ಇನ್ನೂ ಕೆಲವರು ಉತ್ತರ ಪ್ರದೇಶಕ್ಕೆ ಬೈಕ್ ಮೇಲೆ ಹೊರಟಿದ್ದಾರೆ. ಕಲಬುರಗಿ, ವಿಜಯಪುರ ಹಾಗೂ ದಾವಣಗೆರೆಯಲ್ಲಿ ಪಾನಿಪೂರಿ ವ್ಯಾಪಾರ ಮಾಡಿ ಜೀವನ ಸಾಗಿಸುತ್ತಿದ್ದ …

Read More »

ಅನುಮತಿ ಇಲ್ಲದೇ ರಾಜ್ಯಕ್ಕೆ ಪ್ರವೇಶಿಸಿದ್ ಸೋಂಕಿತ ಗರ್ಭಿಣಿ ಪತಿ, ಸಹೋದರ ಹಾಗೂ ಕಾರು ಚಾಲಕನ ಮೇಲೆ ಕೇಸ್: ಡಾ.ಎಸ್.ಬಿ. ಬೊಮ್ಮನಹಳ್ಳಿ

ಬೆಳಗಾವಿ- ಮುಂಬೈನಿಂದ ಬೆಳಗಾವಿಗೆ ಮರಳಿದ ಗರ್ಭಿಣಿಗೆ ಕೊರೊನಾ ಸೋಂಕು ತಗಲಿರುವದು ಇಂದು ಗುರುವಾರ ಬೆಳಗಿನ ಹೆಲ್ತ್ ಬುಲಿಟೀನ್ ನಲ್ಲಿ ದೃಡವಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 114ಕ್ಕೇರಿಕೆಯಾಗಿದೆಮೇ 3ರಂದು ಮುಂಬೈದಿಂದ ಮರಳಿದ್ದ 7 ತಿಂಗಳ ಗರ್ಭಿಣಿಗೆ ಕೊರೊನಾ ಸೊಂಕು ತಗುಲಿದೆ ಗರ್ಭಿಣಿ ಎಂಬ ಕಾರಣಕ್ಕೆ ಮಹಿಳೆಗೆ ಹೋಮ್ ಕ್ವಾರಂಟೈನ್‌ಗೆ ಅವಕಾಶ ನೀಡಿಲಾಗಿತ್ತು ಆರೋಗ್ಯ ಇಲಾಖೆ ಹೋಮ್ ಕ್ವಾರಂಟೈನ್ ಗೆ ಅವಕಾಶ ನೀಡಿತ್ತು ಎಂದು ತಿಳಿದು ಬಂದಿದೆ. ಬೆಳಗಾವಿ ಸದಾಶಿವ …

Read More »

ದಕ್ಷಿಣ ಕನ್ನಡದಲ್ಲಿ ಕಿಲ್ಲರ್ ಕೊರೊನಾಗೆ 5ನೇ ಬಲಿ……..

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಹಾಮಾರಿ ಕೊರೊನಾ ವೈರಸ್‍ಗೆ ಇಂದು 80 ವರ್ಷದ ವೃದ್ಧೆಯೊಬ್ಬರು ಬಲಿಯಾಗಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಕೊರೊನಾಗೆ ಬಲಿಯಾದವರು ಸಂಖ್ಯೆ 5ಕ್ಕೆ ಏರಿದೆ. ಮಂಗಳೂರಿನ ಶಕ್ತಿನಗರ ಮೂಲದ 80 ವರ್ಷದ ರೋಗಿ-507 ಕೊರೊನಾಗೆ ಬಲಿಯಾಗಿದ್ದಾರೆ. ಮಂಗಳೂರು ಕೊವೀಡ್-19 ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೃದ್ಧೆ ಅಧಿಕ ರಕ್ತದೊತ್ತಡ, ಪಾರ್ಶ್ವವಾಯು ರೋಗದಿಂದ ಬಳಲುತ್ತಿದ್ದರು. ಫಸ್ಟ್ ನ್ಯೂರೋ ಆಸ್ಪತ್ರೆಯಿಂದ ವೃದ್ಧೆಗೆ ಸೋಂಕು ತಗುಲಿತ್ತು. ಬುಧವಾರ ಮಂಗಳೂರಿನ ಬೋಳೂರು ನಿವಾಸಿ 58 …

Read More »

3 ವರ್ಷ ಕಾಲ ಸೈನಿಕರಾಗಿ ದೇಶ ಸೇವೆ – ಭಾರತೀಯ ಸೇನೆಯಲ್ಲಿ ತಾತ್ಕಾಲಿಕ ಉದ್ಯೋಗ……..

ನವದೆಹಲಿ: ಭಾರತೀಯ ಸೇನೆಗೆ ಸೇರಿ ದೇಶ ಸೇವೆ ಮಾಡಬೇಕೆಂಬ ಆಸೆ ಯುವ ಜನತೆಯಲ್ಲಿರುತ್ತದೆ. ಆದರೆ ಯಾವುದೋ ಕಾರಣದಿಂದಾಗಿ ಈ ಆಸೆ ಈಡೇರುವುದಿಲ್ಲ. ಆದರೆ ಈಗ 3 ವರ್ಷಗಳ ಕಾಲ ಸೇನೆಯಲ್ಲಿ ಉದ್ಯೋಗ ನೀಡುವ ಬಗ್ಗೆ ಭಾರತೀಯ ಸೇನೆ ಗಂಭೀರವಾಗಿ ಚಿಂತನೆ ನಡೆಸಿದೆ. ಹೌದು, ಮಿಲಿಟರಿ ಸೇರಿದರೆ ನಿವೃತ್ತಿಯಾಗುವರೆಗೆ ಕೆಲಸ ಮಾಡಬೇಕು ಎಂಬ ನಿಯಮವಿದೆ. ಆದರೆ ಈಗ ಮೂರು ವರ್ಷಗಳ ಕಾಲ ‘ಟೂರ್ ಆಫ್ ಡ್ಯೂಟಿ’ ಹೆಸರಿನಲ್ಲಿ ಯುವಜನತೆಗೆ ಸೇನೆಯಲ್ಲಿ ಸೇವೆ …

Read More »

ಲಾಕ್‍ಡೌನ್‍ನಿಂದ ಪಾತಾಳಕ್ಕೆ ಕುಸಿದ ಈರುಳ್ಳಿ ಬೆಲೆ – ಕಂಗಾಲಾಗಿರುವ ಬೆಳೆಗಾರರು

ರಾಯಚೂರು: ಕೊರೊನಾ ಲಾಕ್‍ಡೌನ್ ಶುರುವಾದಗಿನಿಂದ ರೈತರು ತಾವು ಬೆಳೆದ ಬೆಳೆಯನ್ನು ಮಾರಾಟ ಮಾಡಲಾಗದೇ ನಷ್ಟ ಅನುಭವಿಸುತ್ತಿದ್ದಾರೆ. ಇದೀಗ ಲಾಕ್‍ಡೌನ್‍ನಿಂದ ಈರುಳ್ಳಿ ಬೆಲೆ ಕುಸಿತದಿಂದ ಬೆಳೆಗಾರರು ಕಂಗಾಲಾಗಿದ್ದಾರೆ. ಜಿಲ್ಲೆಯ ಮಸ್ಕಿ ತಾಲೂಕಿನ ಕೋಟೆಕಲ್ಲು ಗ್ರಾಮದಲ್ಲಿ ಈರುಳ್ಳಿ ಬೆಳೆದ ಸುಮಾರು 15 ರೈತರು ತಮ್ಮ ಬೆಳೆಯನ್ನ ಜಮೀನಿಗೆ ಅರ್ಪಿಸುತ್ತಿದ್ದಾರೆ. ಈರುಳ್ಳಿ ಬೆಲೆ ಪಾತಾಳಕ್ಕೆ ಕುಸಿದಿದ್ದರಿಂದ ಅದನ್ನ ಮಾರುಕಟ್ಟೆಗೆ ತೆಗೆದುಕೊಂಡು ಹೋದರೆ ಇನ್ನೂ ನಷ್ಟ ಹೆಚ್ವಾಗುತ್ತೆ ಅಂತ ಜಮೀನಿನಲ್ಲೆ ಬಿಟ್ಟಿದ್ದಾರೆ. ಸುಮಾರು 400 ಕ್ವಿಂಟಾಲ್ …

Read More »