Breaking News

ಟಗರು ಸಾಕಿ ಲಕ್ಷ ಲಕ್ಷ ಸಂಪಾದಿಸುವ ದಳವಾಯಿ

ಮೂಡಲಗಿ (ಬೆಳಗಾವಿ ಜಿಲ್ಲೆ): ತಾಲ್ಲೂಕಿನ ಅವರಾದಿ ಗ್ರಾಮದ ರೈತ ಲಕ್ಷ್ಮಣ ದಳವಾಯಿ ಅವರು ಟಗರು ಸಾಕಾಣಿಕೆಯಿಂದ ಯಶಸ್ಸು ಕಾಣುತ್ತಿದ್ದಾರೆ. ಮೂರು ಎಕರೆ ಜಮೀನು ಹೊಂದಿರುವ ಅವರು ಬಹಳಷ್ಟು ವರ್ಷಗಳಿಂದ ಕಬ್ಬು ಬೆಳೆಯುತ್ತಿದ್ದರು. ಕಬ್ಬಿಗೆ ಸರಿಯಾದ ದರ ದೊರೆಯದೆ ಕಷ್ಟಪಟ್ಟಿದ್ದರು. ಹೀಗಾಗಿ, ಕೃಷಿಯೊಂದಿಗೆ ಟಗರು ಸಾಕಾಣಿಕೆ ಕನಸು ಕಂಡು 8 ವರ್ಷಗಳ ಹಿಂದೆ ಕೇವಲ 3 ಟಗರು ತಂದು ಸಾಕಲು ಶುರು ಮಾಡಿದರು. ಕ್ರಮೇಣ ಹೆಚ್ಚಿಸುತ್ತಾ ಸದ್ಯ ಅಂದಾಜು 60ರಿಂದ 80 …

Read More »

ಜಿಲ್ಲಾಸ್ಪತ್ರೆ ಆವರಣದಲ್ಲೆ ಹೆರಿಗೆ: ಜಿಲ್ಲಾಸ್ಪತ್ರೆ ಸಿಬ್ಬಂದಿಯಿಂದ ನಿರ್ಲಕ್ಷ್ಯ ಆರೋಪ

ಚಾಮರಾಜನಗರ: ಹೆರಿಗಾಗಿ ಜಿಲ್ಲಾಸ್ಪತ್ರೆಗೆ ಆಗಮಿಸಿದ ಬಿಳಿಗಿರಿ ರಂಗನಬೆಟ್ಟದ ಸೋಲಿಗರ ಪೋಡಿನ ಮಹಿಳೆಯೊಬ್ಬರನ್ನು ಜಿಲ್ಲಾಸ್ಪತ್ರೆ ಸಿಬ್ಬಂದಿ ಸಮಯಕ್ಕೆ ಸರಿಯಾಗಿ ಹೆರಿಗೆ ವಾರ್ಡ್ ಗೆ ಕರೆದುಕೊಂಡು ಹೋಗದೆ ಬೇಜವಾಬ್ದಾರಿಯಿಂದ ವರ್ತಿಸಿದ್ದಾರೆ ಎಂದು ಆರೋಪ ಎದುರಾಗಿದೆ. ಜಿಲ್ಲಾಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದೆದುರೇ ಮಹಿಳೆಯರು ಸೀರೆಯನ್ನು ಮರೆಮಾಡಿ ಹೆರಿಗೆ ಮಾಡಿಸಿದ ಘಟನೆ ಜರುಗಿದೆ. ಹೆರಿಗಾಗಿ ಸೋಲಿಗ ಮಹಿಳೆಯನ್ನು ಅರಣ್ಯ ಇಲಾಖೆಯ ವಾಹನದಲ್ಲಿ ಜಿಲ್ಲಾಸ್ಪತ್ರೆಗೆ ಕರೆತರಲಾಯಿತು. ಕರೆತಂದ ಗರ್ಭಿಣಿಯನ್ನು ಹೆರಿಗೆ ವಾರ್ಡ್ ಗೆ ಕರೆದುಕೊಂಡು ಹೋಗುವ ವ್ಯವಸ್ಥೆಯನ್ನು …

Read More »

ಸಿಂಧ್ಯಾ ಬಿಜೆಪಿಗೆ ಸೇರ್ಪಡೆಯಾಗ್ತಾರೆ ಅನ್ನೋ ಮಾತುಗಳು ಜೋರಾಗಿರುವ ಹೊತ್ತಲ್ಲೇ ರಾಜೀನಾಮೆ ನೀಡಿರುವುದು ತೀವ್ರ ಕುತೂಹಲ ಕೆರಳಿಸಿದೆ.

ಕಾಂಗ್ರೆಸ್​​ ಮುಖಂಡ, ರಾಹುಲ್ ಗಾಂಧಿ ಅತ್ಯಾಪ್ತ ಜ್ಯೋತಿರಾದಿತ್ಯ ಸಿಂಧ್ಯಾ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಇಂದು ಬೆಳಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನ ಭೇಟಿಯಾದ ಬೆನ್ನಲ್ಲೇ ಸಿಂಧ್ಯಾ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ರಾಜ್ಯ ಹಾಗೂ ದೇಶದ ಜನರ ಸೇವೆ ಮಾಡಬೇಕೆಂಬ ನನ್ನ ಧ್ಯೇಯ ಇನ್ಮುಂದೆಯೂ ಹಾಗೇ ಮುಂದುವರೆಯಲಿದೆ. ಆದ್ರೆ ಈ ಪಕ್ಷದಲ್ಲಿ ಇದ್ದುಕೊಂಡು ಅದನ್ನು ಮಾಡಲು ಸಾಧ್ಯವಿಲ್ಲ ಅಂತ ನನಗೆ ಅನ್ನಿಸುತ್ತಿದೆ. ಸದ್ಯ ನನಗೆ ಹೊಸ ಆರಂಭಕ್ಕೆ ಇದು …

Read More »

ನಾಳೆಯಿಂದಲೇ ಅಂಗನವಾಡಿಯಿಂದ 5ನೇ ತರಗತಿವರೆಗೆ ರಜೆ ಘೋಷಣೆ

ಬೆಂಗಳೂರು: ರಾಜ್ಯದಲ್ಲಿ ಇಂದು ಕೊರೋನಾ ಕೇಸ್ ಪತ್ತೆಯಾದ ಹಿನ್ನೆಲೆಯಲ್ಲಿ ಬೆಂಗಳೂರು ಶೈಕ್ಷಣಿಕ ಜಿಲ್ಲೆಗಳ ವ್ಯಾಪ್ತಿಯಲ್ಲಿ 5ನೇ ತರಗತಿವರೆಗೆ ರಜೆ ಘೋಷಿಸಲಾಗಿದೆ. ಕೊರೋನಾ ಸೋಂಕಿತ ವ್ಯಕ್ತಿ ಮತ್ತು ಪತ್ನಿ, ಮಗು ಹಾಗೂ ಚಾಲಕನಿಗೆ ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ. 10 ವರ್ಷದೊಳಗಿನ ಮಕ್ಕಳಿಗೆ ರೋಗನಿರೋಧಕ ಶಕ್ತಿ ಕಡಿಮೆಯಾಗಿರುವ ಕಾರಣ ಸೋಂಕು ತಗುಲಿದರೆ ಬೇಗನೆ ಹರಡುವ ಸಾಧ್ಯತೆ ಹಿನ್ನೆಲೆಯಲ್ಲಿ ಮುಂಜಾಗ್ರತೆ ಕ್ರಮವಾಗಿ ಮಾರ್ಚ್ 10 ರಿಂದ 17 ರವರೆಗೆ ಅಂಗನವಾಡಿ …

Read More »

ದೇವರನ್ನೂ ಬಿಡದ ಕೊರೊನಾ ಕಂಟಕ; ದೇವರಿಗೆ ಮಾಸ್ಕ್ ಹಾಕಿದ ಪೂಜಾರಿ

ವಾರಣಾಸಿ : ಕೊರೊನಾ ವೈರಸ್ ಭಾರತದಲ್ಲಿ ಹರಡುತ್ತಿರುವ ಬೆನ್ನಲ್ಲೇ ಎಲ್ಲೆಡೆ ಆತಂಕ ಸೃಷ್ಟಿಯಾಗಿದೆ. ಸೋಂಕಿನಿಂದ ತಡೆಗಟ್ಟಲು ಮಾಸ್ಕ್ ಧರಿಸಿದ್ರೆ, ಇತ್ತ ದೇವರಿಗೆ ಮಾಸ್ಕ್ ಹಾಕಿರುವ ಘಟನೆ ವಾರಣಾಸಿಯಲ್ಲಿ ನಡೆದಿದೆ. ಇಲ್ಲಿನ ವಿಶ್ವನಾಥ ದೇವಾಲಯದ ಅರ್ಚಕರು ದೇವರ ಮೂರ್ತಿಗೆ ಮಾಸ್ಕ್ ಹಾಕಿ ಪೂಜೆ ಮಾಡುತ್ತಿದ್ದಾರೆ, ಜೊತೆಗೆ ದೇವರ ವಿಗ್ರಹ ಮುಟ್ಟದಂತೆ ಭಕ್ತರಿಗೆ ಮನವಿ ಮಾಡಿದ್ದಾರೆ. ಜನರು ವಿಗ್ರಹಗಳನ್ನು ಮುಟ್ಟಿದರೆ, ಕೊರೋನಾ ಹರಡುವ ಸಾಧ್ಯತೆ ಇರುತ್ತದೆ” ಎಂದು ಹೇಳಿದ್ದಾರೆ. ದೇವಾಲಯದ ಅರ್ಚಕರು ಹಾಗೂ …

Read More »

ದೇಶದಲ್ಲಿ ಮತ್ತೆ ಏಳು ಹೊಸ ಕೊರೊನಾ ವೈರಸ್ ಸೋಂಕು ಪತ್ತೆಯಾಗಿದ್ದು, ಇದುವರೆಗೆ ದೃಢಪಟ್ಟವರ ಸಂಖ್ಯೆ 48ಕ್ಕೇರಿದೆ

ನವದೆಹಲಿ, ಮಾ.10- ದೇಶದಲ್ಲಿ ಮತ್ತೆ ಏಳು ಹೊಸ ಕೊರೊನಾ ವೈರಸ್ ಸೋಂಕು ಪತ್ತೆಯಾಗಿದ್ದು, ಇದುವರೆಗೆ ದೃಢಪಟ್ಟವರ ಸಂಖ್ಯೆ 48ಕ್ಕೇರಿದೆ ಎಂದು ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ತಿಳಿಸಿದೆ.ದುಬೈನಿಂದ ಮಹಾರಾಷ್ಟ್ರದ ಪುಣೆ ಜಿಲ್ಲೆಗೆ ಆಗಮಿಸಿದ ದಂಪತಿಯಲ್ಲಿ ವೈರಾಣು ಸೋಂಕು ಇರುವುದು ದೃಢಪಟ್ಟಿದೆ. ನಿನ್ನೆ ಹೊಸ ಕೊರೊನಾ ವೈರಸ್ ಪ್ರಕರಣಗಳು ದೆಹಲಿ, ಉತ್ತರ ಪ್ರದೇಶ, ಕೇರಳದ ಎರ್ನಾಕುಲಂ, ಜಮ್ಮು, ಬೆಂಗಳೂರು, ಪಂಜಾಬ್ ಮತ್ತು ಪುಣೆಗಳಲ್ಲಿ ವರದಿಯಾಗಿದೆ. ಆದರೆ, ದೇಶದಲ್ಲಿ ಇದುವರೆಗೆ ಕೊರೊನಾ ವೈರಸ್ …

Read More »

ಇಂದಿನಿಂದ ಬೆಂಗಳೂರಲ್ಲಿ ಬೀದಿಬದಿ ಹಣ್ಣು-ಚಾಟ್ಸ್​ ವ್ಯಾಪಾರ ನಡೆಸುವಂತಿಲ್ಲ: ಸಿಎಂ ಖಡಕ್ ಸೂಚನೆ

ಇಂದಿನಿಂದ ಬೆಂಗಳೂರಲ್ಲಿ ಬೀದಿಬದಿ ಹಣ್ಣು-ಚಾಟ್ಸ್​ ವ್ಯಾಪಾರ ನಡೆಸುವಂತಿಲ್ಲ: ಸಿಎಂ ಖಡಕ್ ಸೂಚನೆ ಬೆಂಗಳೂರು: ರಾಜ್ಯದಲ್ಲಿ ಕೊರೊನಾ ವೈರಸ್ ಹಾಗೂ ಕಾಲರಾ ಭೀತಿ ಹೆಚ್ಚಾಗಿರುವ ಹಿನ್ನೆಲೆ ಇಂದಿನಿಂದ ಬೆಂಗಳೂರಿನಲ್ಲಿ ಯಾವುದೇ ಬೀದಿಬದಿ ವ್ಯಾಪಾರಿಗಳು ವ್ಯಾಪಾರ ನಡೆಸಬಾರದೆಂದು ಸಿಎಂ ಬಿ.ಎಸ್. ಯಡಿಯೂರಪ್ಪ ಖಡಕ್ ಸೂಚನೆ ಕೊಟ್ಟಿದ್ದಾರೆ. ಬಿಬಿಎಂಪಿ ಮೇಯರ್ ಗೌತಮ್‌ ಕುಮಾರ್, ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಜಿ.ಮಂಜುನಾಥ್‌ ರಾಜು, ಆಡಳಿತ ಪಕ್ಷದ ನಾಯಕ ಮುನೀಂದ್ರಕುಮಾರ್‌ ಹಾಗೂ ಆಯುಕ್ತ ಅನಿಲ್‌ ಕುಮಾರ್‌ಗೆ ಸಿಎಂ …

Read More »

ಬೆಂಗ್ಳೂರು ಹಜ್ ಭವನ ಕಾಮಗಾರಿಗೆ 5 ಕೋಟಿ ರೂ. ಘೋಷಿಸಿದ ಸಿಎಂ

ಬೆಂಗ್ಳೂರು ಹಜ್ ಭವನ ಕಾಮಗಾರಿಗೆ 5 ಕೋಟಿ ರೂ. ಘೋಷಿಸಿದ ಸಿಎಂ ಬೆಂಗಳೂರು: ಸದ್ಯ ನಮ್ಮ ರಾಜ್ಯವೂ ಸೇರಿದಂತೆ ದೇಶದೆಲ್ಲೆಡೆ ಪೌರತ್ವ ಕಾಯ್ದೆ(ಸಿಎಎ) ಪರ – ವಿರೋಧ ಸಂಘರ್ಷ ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ರಾಜ್ಯದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಬೆಂಗಳೂರಿನ ಹಜ್ ಭವನಕ್ಕೆ 5 ಕೋಟಿ ರೂ ಅನುದಾನ ಘೋಷಿಸುವ ಮೂಲಕ ರಾಜ್ಯದ ಮುಸ್ಲಿಮರಲ್ಲಿ ಭರವಸೆಯ ಬೆಳಕು ಮೂಡಿಸಿದ್ದಾರೆ. ಬೆಂಗಳೂರಿನ ಹೆಗ್ಡೆನಗರದಲ್ಲಿರುವ ಹಜ್ ಭವನದಲ್ಲಿ ಇಂದು ಹಜ್ ಯಾತ್ರೆ-2020ಕ್ಕೆ ಆನ್ …

Read More »

ಭಾರೀ ಪ್ರಮಾಣದಲ್ಲಿ ಕುಸಿಯಿತು ತರಕಾರಿ ಬೆಲೆ

ಭಾರೀ ಪ್ರಮಾಣದಲ್ಲಿ ಕುಸಿಯಿತು ತರಕಾರಿ ಬೆಲೆ – ವ್ಯಾಪಾರಕ್ಕೆ ಬರ್ತಿಲ್ಲ ಕೇರಳಿಗರು ಮೈಸೂರು: ಕೊರೊನಾ ವೈರಸ್ ಎಫೆಕ್ಟ್ ಅರಮನೆ ನಗರಿಯಲ್ಲಿ ತರಕಾರಿ ಮೇಲೆ ಬಿದ್ದಿದೆ. ತರಕಾರಿ ಮಾರುಕಟ್ಟೆಯಲ್ಲಿ ತರಕಾರಿ ಮಾರಾಟವಾಗದೆ ಎಲ್ಲಾ ತರಕಾರಿ ಬೆಲೆ ಸಂಪೂರ್ಣವಾಗಿ ಕುಸಿದಿದೆ. ಕೇರಳದಲ್ಲಿ ಕೊರೊನಾದಿಂದ ಮೈಸೂರಿನ ತರಕಾರಿ ವ್ಯಾಪಾರದ ಮೇಲೆ ಭಾರಿ ಹೊಡೆತ ಬಿದ್ದಿದೆ. ಮೈಸೂರು ಎಪಿಎಂಸಿಯಿಂದ ನೇರವಾಗಿ ಕೇರಳಕ್ಕೆ ತರಕಾರಿ ಮಾರಾಟವಾಗುತ್ತಿತ್ತು. ಶೇಕಡಾ ಶೇ. 80 ತರಕಾರಿಗಳನ್ನ ಕೇರಳದ ವ್ಯಾಪಾರಿಗಳೇ ತೆಗೆದುಕೊಳ್ಳುತ್ತಿದ್ದರು. ಇದನ್ನೂ …

Read More »

ಕೊರೊನಾ‌ ವೈರಸ್ ವದಂತಿಗೆ 9 ಸಾವಿರ ಕೋಳಿಗಳನ್ನ ನಾಶ ಮಾಡಿದ್ದಾನೆ.

ಕೋಲಾರ : ಕೊರೊನಾ‌ ವೈರಸ್ ವದಂತಿಗೆ ಕೋಳಿ‌ ಮಾಂಸದ ಮಾರಾಟ ಭಾರಿ ಇಳಿಕೆ ಕಂಡಿತ್ತು, ಇದರಿಂದ ಕೋಳಿ ವ್ಯಾಪಾರದಲ್ಲಿ ಭಾರಿ ಹಿನ್ನಡೆಯಾಗಿ ವ್ಯಕ್ತಿಯೋರ್ವ 9 ಸಾವಿರ ಕೋಳಿಗಳನ್ನ ನಾಶ ಮಾಡಿದ್ದಾನೆ. ಕೋಳಿ ವ್ಯಾಪಾರದಲ್ಲಿ 60- 90 ರೂಪಾಯಿ ಕಡಿತಗೊಂಡಿದೆ. ಈ‌ಹಿನ್ನೆಲೆ ಬಂಗಾರಪೇಟೆ ತಾಲೂಕಿನ‌ ಮಾಗೊಂದಿ ಗ್ರಾಮದ ಹೇಮಂತ್ ತಮ್ಮ ಕೋಳಿಫಾರಂನಲ್ಲಿರುವ ಎಲ್ಲಾ ಕೋಳಿಗಳಿಗೆ ವಿಷ ನೀಡಿ ನಾಶ ಮಾಡಿದ್ದಾನೆ

Read More »