Breaking News

ಮನುಷ್ಯತ್ವ,ಮಾನವೀಯತೆ ಗುಣ ಹೊಂದಿರದವರು ಮನುಷ್ಯರೇ ಅಲ್ಲ;ಗವಿಮಠ

ಬೆಳಗಾವಿ: ಪ್ರಸಕ್ತ ಕೊರೋನಾ ಸಂಕಷ್ಟದದಿನಗಳನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ಪ್ರತಿಯೊಬ್ಬರೂ ಮಾನವೀಯತೆಯಿಂದ ನಡೆದುಕೊಳ್ಳಬೇಕು.ಮನುಷ್ಯತ್ವ ,ಮಾನವೀಯತೆ ಬಿಟ್ಟವರು ಮನುಷ್ಯರೇ ಅಲ್ಲ ಎಂದು ಹಿರಿಯ ರಂಗಕರ್ಮಿ ಶ್ರೀ ಬಿ.ಎಸ್.ಗವಿಮಠ ಅವರು ಇಂದಿಲ್ಲಿ ಹೇಳಿದರು.ಬಸವರಾಜ ಕಟ್ಟೀಮನಿ ಸಭಾಂಗಣದಲ್ಲಿ ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿಯು ಮೂವತ್ತು ಸಂಗೀತ ಕಲಾವಿದರಿಗೆ ಆಹಾರ ಧಾನ್ಯಗಳ ಕಿಟ್ ವಿತರಿಸಿ ಅವರು ಮಾತನಾಡುತ್ತಿದ್ದರು. ಖ್ಯಾತ ಕವಿ ಸಿದ್ದಯ್ಯ ಪುರಾಣಿಕರ ” ಏನಾದರೂ ಆಗು ಮೊದಲು ಮಾನವನಾಗು” ಎಂಬ ಕವಿವಾಣಿಯನ್ನು ಉಲ್ಲೇಖಿಸಿದ …

Read More »

ಹುಬ್ಬಳ್ಳಿ: ಕಾರ್ಮಿಕರಿಗೆ ನೀಡುವ ಕಿಟ್ ಕಲಘಟಗಿ ಬಿಜೆಪಿ ಶಾಸಕರ ಕಚೇರಿಯಲ್ಲಿಯೇ ಉಳಿದುಕೊಂಡಿದೆ.

ಹುಬ್ಬಳ್ಳಿ: ಕಾರ್ಮಿಕರಿಗೆ ನೀಡುವ ಕಿಟ್ ಕಲಘಟಗಿ ಬಿಜೆಪಿ ಶಾಸಕರ ಕಚೇರಿಯಲ್ಲಿಯೇ ಉಳಿದುಕೊಂಡಿದೆ. ಅಲ್ಲದೆ ಕಾರ್ಮಿಕರಿಗೆ ಬಿಟ್ಟು ಶಾಸಕ ಸಿ.ಎಂ ನಿಂಬಣ್ಣವರ ಅವರು ಬಿಜೆಪಿ ಕಾರ್ಯಕರ್ತರಿಗೆ ಕಿಟ್ ಕೊಡುತ್ತಾರೆ ಎಂದು ಕಾಂಗ್ರೆಸ್ ಮುಖಂಡರು ದೂರು ಸಲ್ಲಿಸಿದ್ದಾರೆ. ಧಾರವಾಡ ಜಿಲ್ಲೆಯ ಕಲಘಟಗಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಸಿ.ಎಂ ನಿಂಬಣ್ಣವರಿಂದ ಕಿಟ್ ದುರ್ಬಳಕೆ ಆರೋಪ ಕೇಳಿ ಬಂದಿದೆ. ಕಾರ್ಮಿಕ ಇಲಾಖೆ ನೀಡುವ ಕಿಟ್‍ಗಳನ್ನ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಕಾಂಗ್ರೆಸ್ ಮುಖಂಡರು ಗಂಭೀರವಾಗಿ ಆರೋಪಿಸಿದ್ದಾರೆ. …

Read More »

ಗ್ರಾಮ ಪಂಚಾಯತ್​ ಚುನಾವಣೆಯನ್ನ ನಡೆಸಬೇಕೆಂದು ರಾಜ್ಯ ಚುನಾವಣಾ ಆಯೋಗಕ್ಕೆ ಹೆಚ್.ಕೆ.ಪಾಟೀಲ್ ಪತ್ರ

ಬೆಂಗಳೂರು: ಗ್ರಾಮ ಪಂಚಾಯತ್​ ಚುನಾವಣೆ ನಡೆಸುವಂತೆ ಮಾಜಿ ಸಚಿವ ಹೆಚ್.ಕೆ. ಪಾಟೀಲ ರಾಜ್ಯ ಚುನಾವಣಾ ಆಯುಕ್ತರಿಗೆ ಪತ್ರ ಬರೆದು ಒತ್ತಾಯ ಮಾಡಿದ್ದಾರೆ. ಈಗ ವಿಶ್ವದಲ್ಲಿ ಕೊರೋನಾ ವೈರಸ್​ ಹಾವಳಿಯಿದೆ. ವೈರಸ್ ನಿಂದ ವಿಶ್ವವೇ ತತ್ತರಿಸಿದೆ. ಈ ಸಂಕಷ್ಟದ ಕಾಲದಲ್ಲಿ ಚುನಾವಣೆಗಳು ನಡೆಯಬೇಕಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸರ್ಕಾರ ಪಂಚಾಯತ್ ಚುನಾವಣೆಗಳನ್ನು ಮುಂದೂಡಬೇಕು ಎಂದು ಚುನಾವಣಾ ಆಯೋಗಕ್ಕೆ ವಿನಂತಿಸಿಕೊಂಡಿದೆ. ಇದು ಸರಿಯಲ್ಲ. ಸರ್ಕಾರ ಚುನಾವಣೆ ಮುಂದೂಡಿಕೆಗೆ ಪ್ರಯತ್ನ ನಡೆಸಿದೆ ಜೊತೆಗೆ ಡಿಸಿಗಳ …

Read More »

ಜನರನ್ನು ಮೂರ್ಖರನ್ನಾಗಿ ಮಾಡುವುದಷ್ಟೇ ಮೋದಿ ಪ್ಯಾಕೇಜ್………..

ಬೆಂಗಳೂರು: ರಾಜ್ಯಗಳಿಗೆ ಆರ್ಥಿಕ ನೆರವು ನೀಡುವಂತೆ 15ನೇ ಪೇ ಕಮೀಷನ್, ನಾಲ್ಕು ಅಂಶಗಳನ್ನು ಆಧರಿಸಿ​ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಕೇಂದ್ರ ರಾಜ್ಯಗಳಿಗೆ ಯಾವ ರೀತಿ ಹಣ ಸಂದಾಯ ಮಾಡುತ್ತಿದೆ ಎಂದು ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿ ಅವರು ಪ್ರಶ್ನೆ ಮಾಡಿದ್ದಾರೆ. ವಿಧಾನಸೌಧದಲ್ಲಿಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಘೋಷಿಸಿರುವ ವಿಶೇಷ ಪ್ಯಾಕೇಜ್​ನಲ್ಲಿ ಕೇಂದ್ರದ ಪಾಲೆಷ್ಟು(?) ಆರೂವರೆ ಲಕ್ಷ ಕೋಟಿಯಲ್ಲಿ ಕೇಂದ್ರದ ಪಾಲು 2,500 ಕೋಟಿ ಮಾತ್ರ. ಕೇಂದ್ರದ 2,500 ಕೋಟಿಯಿಂದ …

Read More »

ತಾಯಿಯ ಶವದೊಂದಿಗೆ 5 ದಿನ ಮನೆಯಲ್ಲೇ ಕಳೆದ ಮಗಳು………

ಶಿವಮೊಗ್ಗ: ತಾಯಿ ಮೃತಪಟ್ಟು ಐದು ದಿನವಾದರೂ ಮಗಳು ಶವದೊಂದಿಗೆ ಐದು ದಿನಗಳ ಕಾಲ ಕಳೆದಿರುವ ಘಟನೆ ಶಿವಮೊಗ್ಗದ ಬಸವನಗುಡಿಯಲ್ಲಿ ನಡೆದಿದೆ. ಮೃತಪಟ್ಟ ಮಹಿಳೆಯನ್ನು ಬಸವನಗುಡಿ ನಿವಾಸಿ ನಿವೃತ್ತ ಶಾಲಾ ಶಿಕ್ಷಕಿ ರಾಜೇಶ್ವರಿ ಎಂದು ಗುರುತಿಸಲಾಗಿದೆ. ಮೃತ ರಾಜೇಶ್ವರಿ ಪತಿ ಸಹ ಕಳೆದ 20 ವರ್ಷದ ಹಿಂದೆಯೇ ಮೃತಪಟ್ಟಿದ್ದರು. ಹೀಗಾಗಿ ಮನೆಯಲ್ಲಿ ತಾಯಿ ಮಗಳು ಇಬ್ಬರೇ ವಾಸಿಸುತ್ತಿದ್ದರು. ಆದರೆ ಕಳೆದ ಹಲವು ವರ್ಷಗಳಿಂದ ಮೃತ ರಾಜೇಶ್ವರಿ ಸ್ತನ ಕ್ಯಾನ್ಸರ್ ಸಮಸ್ಯೆಯಿಂದ ಬಳಲುತ್ತಿದ್ದರು. …

Read More »

ರಾಜ್ಯದಲ್ಲಿ ಇಂದು ಒಂದೇ ದಿನ 127 ಜನರಿಗೆ ಕೊರೋನಾ ಸೋಂಕು……..

ರಾಜ್ಯದಲ್ಲಿ ಇಂದು ಒಂದೇ ದಿನ 127 ಜನರಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು, ಒಟ್ಟೂ 1373 ಜರಿಗೆ ಸೋಂಕು ತಗುಲಿದಂತಾಗಿದೆ. ಮಂಡ್ಯ 51, ಉತ್ತರ ಕನ್ನಡ 4, ದಾವಣಗೆರೆ 19, ಶಿವಮೊಗ್ಗ 12, ಬೆಂಗಳೂರು 6, ಹಾಸನ 3, ಗದಗ 1, ಚಿಕ್ಕಮಗಳೂರು 2, ಚಿತ್ರದುರ್ಗ1, ಉಡುಪಿ 4, ಕಲಬುರ್ಗಿ 11, ಯಾದಗಿರಿ ಒಬ್ಬರಿಗೆ ಸೋಂಕು ದೃಢಪಟ್ಟಿದೆ. ಇಂದು ಸೋಂಕು ದೃಢಪಟ್ಟವರ ಪೈಕಿ 59 ಮಹಿಳೆಯರಿದ್ದಾರೆ. ಗ್ರೀನ್ ಝೋನ್ ನಲ್ಲಿದ್ದ ಚಿಕ್ಕಮಗಳೂರಲ್ಲೂ …

Read More »

ಜೀ ವಾಹಿನಿಯ ಸಿಬ್ಬಂದಿಗಳಿಗೆ ಕೊರೊನಾ ಸೊಂಕು…!?

ಜೀ ಸುದ್ದಿ ವಾಹಿನಿ ದೇಶದ ಸುದ್ದಿ ವಾಹಿನಿಗಳ ಸಾಲಿನಲ್ಲಿ ಅಗ್ರ ಸ್ಥಾನ ಪಡೆಯುತ್ತದೆ, ಇಂತಹ ದೈತ್ಯ ಸಂಸ್ಥೆಯ ಸಿಬ್ಬಂದಿಗಳಿಗೆ ಕೊವಿಡ್ ೧೯ ದೃಡವಾಗಿದೆ. 28 ಸಿಬ್ಬಂದಿಗಳಿಗೆ ಕೊರೊನಾ ದೃಡವಾಗಿದ್ದು, ೩೫೦೦ ಸಿಬ್ಬಂದಿಗಳ ಗಂಟಲಿನ ದೃವದ ಪರಿಕ್ಷೆಗೆ ಕಳುಹಿಸಲಾಗಿದೆ. ಜೀ ವಾಹಿನಿಯ ಪ್ರಧಾನ ಸಂಪಾದಕರಾದ ಸುಧೀರ್ ಚೌದರಿಯವರು ಈ ಬಗ್ಗೆ ಟ್ವೀಟ್ ಮಾಡಿದ್ದು, ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ. ”ಇದು ಅತ್ಯಂತ ಕಷ್ಟದ ಸಮಯ ನಮ್ಮ 28 ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿದೆ. …

Read More »

ಹುಕ್ಕೇರಿ ಸದಲಗಾ ಪಟ್ಟಣದಲ್ಲಿರುವ ಏಕವೀರಾ ತಾಯಿ ದೇವಸ್ಥಾನದ ಕೆರೆಯನ್ನು ದುರಸ್ತಿ

ಚಿಕ್ಕೋಡಿ – ಶಾಸಕ ಗಣೇಶ ಪ್ರಕಾಶ ಹುಕ್ಕೇರಿ ಸದಲಗಾ ಪಟ್ಟಣದಲ್ಲಿರುವ ಏಕವೀರಾ ತಾಯಿ ದೇವಸ್ಥಾನದ ಕೆರೆಯನ್ನು ದುರಸ್ತಿ ಮಾಡಿಸಿದ್ದಾರೆ. ಆ ಮಾರ್ಗವಾಗಿ ಹೋಗುವಾಗ ಹತ್ತಿರವಿರುವ ಕೆರೆ‌ ಹಾಗೂ ಸುತ್ತಮುತ್ತಲಿ‌ನ ಪರಿಸ್ಥಿತಿಯನ್ನು ಗಮನಿಸಿದರು. ಅದು ಹೂಳು ಮತ್ತು ಪಾಚಿಯಿಂದ ತುಂಬಿರುವುದನ್ನು ಗಮನಿಸಿದ ಶಾಸಕರು  ಕೂಡಲೆ  ಸಂಪೂರ್ಣ ಕೆರೆಯನ್ನು ದುರಸ್ತಿ ಹಾಗೂ ಸ್ವಚ್ಛ ಮಾಡಿಸಿದರು . ಶಾಸಕರ ಈ ಕಳಕಳಿಗೆ ಏಕವೀರಾತಾಯಿ ದೇವಸ್ಥಾನದ ಕಮಿಟಿಯವರು ಕೃತಜ್ಞತೆ ಸಲ್ಲಿಸಿದರು.

Read More »

ಬೆಳಗಾವಿ ಇಂದ ಬೆಂಗಳೂರಿಗೆ ಮೊದಲನೇ ಬಸ್……..

ಬೆಳಗಾವಿ:  ಇಂದು ಬೆಳಗಾವಿ ಇಂದ ಬಸ್ ಸಂಚಾರ ಆರಂಭ ಮೊದಲು ಬೆಳಗಾವಿ ಇಂದ ಬೆಂಗಳೂರಿಗೆ ಮೊದಲನೇ ಬಸ್ ಹೊರಟಿತು ಹಾಗೇ ಮುನ್ನೆಚ್ಚರಿಕೆ ಕ್ರಮ ವಾಗಿ ಥರ್ಮಲ್ ಸ್ಕ್ಯಾನಿಂಗ್ ಮಾಡಿ ಕೇವಲ 30 ಜನ ಪ್ರಯಾಣಿಕರಿಗೆ ಮಾತ್ರ ಅವಕಾಶ ಇತ್ತು ಹಾಗೇ ಸಿಹಿ ಹಂಚಿ ಬೆಳಗಾವಿ ಇಂದ ಮೊದಲನೇ ಬಸ್ ಬೆಂಗಳೂರಿನ ಕಡೆಗೆ ಹೊರಟಿತು ಬಸ್ ನಿಲ್ದಾಣದ ತುಂಬಾ ಮುನ್ನೆಚ್ಚರಿಕಾ ಕ್ರಮ ತೊಗೊಂಡು ಮಾಸ್ಕ್ ಧರಿಸುವುದು ಕಡ್ಡಾಯ ವಾಗಿತ್ತು ಸುಮಾರು ದಿನಗಳಿಂದ …

Read More »

ಕಲ್ಯಾಣ ಕರ್ನಾಟಕ್ಕೆ ಬಸ್ ಸಂಚಾರ ಇರುವುದಿಲ್ಲಎಂದು ಸಾರಿಗೆ ಸಚಿವ, ಡಿಸಿಎಂ ಲಕ್ಷ್ಮಣ ಸವದಿ ತಿಳಿಸಿದ್ದಾರೆ. ಸಾರಿಗೆ ಸಚಿವರ ಈ ದಿಢೀರ್ ಹೇಳಿಕೆ ಈಗ ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಬೆಂಗಳೂರು: ಕಲ್ಯಾಣ ಕರ್ನಾಟಕಕ್ಕೆ ನಾಳೆಯಿಂದ ಬಸ್ ಸಂಚಾರ ಆರಂಭವಾಗಲಿದೆ. ಇಂದು ಕಲ್ಯಾಣ ಕರ್ನಾಟಕ್ಕೆ ಬಸ್ ಸಂಚಾರ ಇರುವುದಿಲ್ಲಎಂದು ಸಾರಿಗೆ ಸಚಿವ, ಡಿಸಿಎಂ ಲಕ್ಷ್ಮಣ ಸವದಿ ತಿಳಿಸಿದ್ದಾರೆ. ಸಾರಿಗೆ ಸಚಿವರ ಈ ದಿಢೀರ್ ಹೇಳಿಕೆ ಈಗ ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ. ಲಾಕ್ ಡೌನ್ ಸಡಿಲಿಕೆ ಹಿನ್ನಲೆಯಲ್ಲಿ ಇಂದು ಬೆಳಿಗ್ಗೆ 7 ಗಂಟೆಯಿಂದ ಹೊರ ಜಿಲ್ಲೆಗಳಿಗೆ ಕೆ ಎಸ್ ಆರ್ ಟಿಸಿ ಸೇರಿದಂತೆ ಸಾಮಾನ್ಯ ಬಸ್ ಸಂಚಾರ ಇರಲಿದೆ ಎಂದು ನಿನ್ನೆ ಸಿಎಂ …

Read More »