ಬೆಂಗಳೂರು, ಮೇ 25- ಲಾಕ್‍ಡೌನ್ ಹಿನ್ನೆಲೆ ರಾಜ್ಯದ ಬೊಕ್ಕಸ ಖಾಲಿಯಾಗಿದ್ದು, ರಾಜ್ಯ ಸರ್ಕಾರ ವೆಚ್ಚ ಕಡಿತದ ಮೊರೆ ಹೋಗಿದೆ. ಸರ್ಕಾರ ಕೆಲ ಇಲಾಖೆಗಳನ್ನು ವಿಲೀನ ಮಾಡಲು ಚಿಂತನೆ ನಡೆಸಿದೆ. ಕೃಷಿ ಇಲಾಖೆ ಮತ್ತು ತೋಟಗಾರಿಕೆ ಇಲಾಖೆ, ಹಿಂದುಳಿದ ಮತ್ತು ಅಲ್ಪಸಂಖ್ಯಾತ ಮತ್ತು ಸಮಾಜ ಕಲ್ಯಾಣ ಇಲಾಖೆ, ಸಹಕಾರ ಮತ್ತು ಕೃಷಿ ಮಾರುಕಟ್ಟೆ ಇಲಾಖೆ, ಸಹಕಾರಿ ಲೆಕ್ಕ ಪರಿಶೀಲನಾ ಇಲಾಖೆ ಮತ್ತು ಲೆಕ್ಕ ಪತ್ರ ಇಲಾಖೆ ಸೇರಿದಂತೆ ಇಲಾಖೆಗಳನ್ನು ವಿಲೀನ ಮಾಡಲು …
Read More »ಬೆಳಗಾವಿ:ಇಂದು 10 ವರ್ಷದ ಬಾಲಕನಿಗೆ ಕೊರೊನಾ ಸೋಂಕು ದೃಢ
ಬೆಳಗಾವಿ: ಜಿಲ್ಲೆಯಲ್ಲಿ ಇಂದು 10 ವರ್ಷದ ಬಾಲಕನಿಗೆ ಕೊರೊನಾ ಸೋಂಕು ತಗುಲಿರುವುದು ದೃಢವಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇಂದು ಮಧ್ಯಾಹ್ನದ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು, ಬೆಳಗಾವಿಯಲ್ಲಿ ಒಂದು ಪ್ರಕರಣ ಬೆಳಕಿಗೆ ಬಂದಿದೆ. ಪೆ ನಂ- 2101 ಹತ್ತು ವರ್ಷದ ಬಾಲಕ ಮಹಾರಾಷ್ಟ್ರ ಟ್ರಾವೆಲ್ ಹಿಸ್ಟರಿ ಇದೆ. ರಾಜ್ಯದಲ್ಲಿ ಒಟ್ಟು 69 ಪ್ರಕರಣ ಕೇಸ್ ಗಳು ದಾಖಲಾಗಿದ್ದು, ಸೋಂಕಿತರ ಸಂಖ್ಯೆ 2158 ಕ್ಕೆ ಏರಿಕೆಯಾಗಿದೆ
Read More »ಕ್ವಾರಂಟೈನ್‍ನಲ್ಲಿದ್ದ ವ್ಯಕ್ತಿ ಆಸ್ಪತ್ರೆಯ ಬಾತ್ ರೂಮಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ
ದಾವಣಗೆರೆ: ಕ್ವಾರಂಟೈನ್‍ನಲ್ಲಿದ್ದ ವ್ಯಕ್ತಿ ಆಸ್ಪತ್ರೆಯ ಬಾತ್ ರೂಮಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ದಾವಣಗೆರೆ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ದಾವಣಗೆರೆಯ ಬಸಾಪುರ ನಿವಾಸಿ ಕಂಟೈನ್ಮೆಂಟ್ ಏರಿಯಾದಲ್ಲಿ ವಾಸಿಸುತ್ತಿದ್ದರು. ಇವರಿಗೆ ಕೆಮ್ಮು ಜ್ವರದಂತಹ ಲಘು ಕೊರೊನಾ ಲಕ್ಷಣಗಳು ಕಾಣಿಸಿಕೊಂಡಿದ್ದವು. ಕೊರೊನಾ ಲಕ್ಷಣ ಕಾಣಿಸಿಕೊಂಡ ವ್ಯಕ್ತಿಯನ್ನು ಮುನ್ನೆಚ್ಚರಿಕಾ ಕ್ರಮವಾಗಿ ದಾವಣಗೆರೆಯ ಜಿಲ್ಲಾಸ್ಪತ್ರೆಯಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಜೊತೆಗೆ ಮೇ 20ರಂದು ಗಂಟಲು ದ್ರವವನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಆದರೆ ವರದಿ ಬರವುದಕ್ಕೂ …
Read More »ದೆಹಲಿಯಿಂದ ಬೆಂಗಳೂರಿಗೆ ಇಂದು ಬಂದ ಮೊದಲ ವಿಮಾನದಲ್ಲಿ ಐದು ವರ್ಷದ ಬಾಲಕ ಏಕಾಂಗಿಯಾಗಿ ಪ್ರಯಾಣ
ಬೆಂಗಳೂರು: ದೆಹಲಿಯಿಂದ ಬೆಂಗಳೂರಿಗೆ ಇಂದು ಬಂದ ಮೊದಲ ವಿಮಾನದಲ್ಲಿ ಐದು ವರ್ಷದ ಬಾಲಕ ಏಕಾಂಗಿಯಾಗಿ ಪ್ರಯಾಣ ಮಾಡಿದ್ದಾನೆ. ಐದು ವರ್ಷದ ವಿವಾಂತ್ ಶರ್ಮಾ ಏಕಾಂಗಿಯಾಗಿ ಪ್ರಯಾಣ ಮಾಡಿದ್ದಾನೆ. ಲಾಕ್‍ಡೌನ್ ನಂತರ ಇಂದು ರಾಷ್ಟ್ರ ರಾಜಧಾನಿಯಿಂದ ಬೆಂಗಳೂರಿಗೆ ಬಂದ ಮೊದಲ ವಿಮಾನದಲ್ಲಿ ಈ ಬಾಲಕ ಬಂದು ಬೆಂಗಳೂರಿನಲ್ಲಿರುವ ತನ್ನ ಪೋಷಕರನ್ನು ಸೇರಿದ್ದಾನೆ. ಮಗನ ಬರುವಿಕೆಗಾಗಿ ವಿಮಾನ ನಿಲ್ದಾಣದಲ್ಲೇ ಕಾದುಕುಳಿತಿದ್ದ ಆತನ ತಾಯಿ ಮಂಜೀತ್ ಶರ್ಮಾ ಮಗನನ್ನು ಮನೆಗೆ ಕರೆದುಕೊಂಡು ಹೋಗಿದ್ದಾರೆ. ವಿವಾಂತ್ …
Read More »ಏರ್‌ಪೋರ್ಟಿನಲ್ಲಿ ಮಹಿಳೆ ರಂಪಾಟ – ಹೋಂ ಕ್ವಾರಂಟೈನ್‍ಗೆ ತೆರಳಿದ ಸದಾನಂದ ಗೌಡ
ಬೆಂಗಳೂರು: ಇಂದಿನಿಂದ ದೇಶಿಯ ವಿಮಾನಗಳ ಹಾರಾಟ ಆರಂಭವಾಗಿದ್ದು, ಚೆನ್ನೈ ಹಾಗೂ ದೆಹಲಿಯಿಂದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಿಮಾನಗಳು ಆಗಮಿಸಿವೆ. ಎರಡು ತಿಂಗಳ ಬಳಿಕ ಮೊದಲ ಬಾರಿಗೆ ದೇಶಿಯ ವಿಮಾನ ಹಾರಾಟ ನಡೆಸಿದ್ದು, ಇಂದು 120 ಜನ ಪ್ರಯಾಣಿಕರು ಬೆಂಗಳೂರಿಗೆ ವಾಪಸ್ಸಾಗಿದ್ದಾರೆ. ಬಂದವರನ್ನೆಲ್ಲ ಹೋಟೆಲ್ ನಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಆದರೆ ಇದಕ್ಕೆ ಒಪ್ಪದ ಕೆಲ ಪ್ರಯಾಣಿಕರು ದೆಹಲಿಗೆ ವಾಪಸ್ಸಾಗಿದ್ದಾರೆ. ಎಲ್ಲಾ ಪ್ರಯಾಣಿಕರಿಗೆ ಏಳು ದಿನ ಹೋಟೆಲ್ ಕ್ವಾರಂಟೈನ್ ಇನ್ನೂ ಏಳು ದಿನ …
Read More »ಕ್ವಾರಂಟೈನ್‍ನಲ್ಲಿ ಇರ್ಬೇಕಾದ ದಂಪತಿ ಓಡಾಟ- ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಪತ್ತೆ
ಬೆಂಗಳೂರು: ಕೊರೊನಾ ಮಹಾಮಾರಿ ರಾಜ್ಯಕ್ಕೆ ಒಕ್ಕರಿಸಿ ತಾಂಡವವಾಡುತ್ತಿದ್ದರೂ ಜನ ಮಾತ್ರ ಕ್ಯಾರೇ ಅಂತಿಲ್ಲ. ಕೈಗೆ ಸೀಲ್ ಹಾಕಿ ಕ್ವಾರಂಟೈನ್ ನಲ್ಲಿ ಇರಿ ಅಂದರೂ ಜನ ಮಾತ್ರ ಹೊರಗಡೆ ಓಡಾಡುತ್ತಾನೆ ಬಂದಿದ್ದಾರೆ. ಇಂದು ಕೂಡ ಇದೇ ರೀತಿಯಲ್ಲಿ ದಂಪತಿ ಮೆಜೆಸ್ಟಿಕ್ ನಲ್ಲಿ ಸಿಕ್ಕಿಬಿದ್ದಿದ್ದಾರೆ. ಹೈದರಾಬಾದ್‍ನಿಂದ ಆಗಮಿಸಿರೋ ದಂಪತಿ ಕ್ವಾರಂಟೈನ್ ಸೀಲ್ ಇದ್ದರೂ ಮೆಜೆಸ್ಟಿಕ್‍ನಲ್ಲಿ ಓಡಾಡಿದ್ದಾರೆ. ಚಿತ್ರದುರ್ಗಕ್ಕೆ ತೆರಳಲು ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದಲ್ಲಿ ಓಡಾಟ ನಡೆಸಿದ್ದಾರೆ. ಈ ವೇಳೆ ದಂಪತಿ ಕೈಯಲ್ಲಿ ಸೀಲ್‍ನೋಡಿ …
Read More »ಮುತಗಾ ಬಳಿ ಭೀಕರ ಅಪಘಾತದಲ್ಲಿ ವಾಕಿಂಗ್ ಹೋಗಿದ್ದ ಇಬ್ಬರು ಮಹಿಳೆಯರು ಸಾವಿಗೀಡಾಗಿದ್ದಾರೆ.
(ಬೆಳಗಾವಿ) – ಇಲ್ಲಿಯ ಮುತಗಾ ಬಳಿ ಭೀಕರ ಅಪಘಾತದಲ್ಲಿ ವಾಕಿಂಗ್ ಹೋಗಿದ್ದ ಇಬ್ಬರು ಮಹಿಳೆಯರು ಸಾವಿಗೀಡಾಗಿದ್ದಾರೆ. ಭಾನುವಾರ ರಾತ್ರಿ 11 ಗಂಟೆಗೆ ಈ ಘಟನೆ ನಡೆದಿದ್ದು, ಸವಿತಾ ಬಾಲಕೃಷ್ಣ ಪಾಟೀಲ (44) ಮತ್ತು ವಿದ್ಯಾ ಬಾಲಕೃಷ್ಣ ಪಾಟೀಲ (52 ) ಎನ್ನುವ ಮಹಿಳೆಯರು ಮೃತಪಟ್ಟಿದ್ದಾರೆ. ಘಟನೆಯಲ್ಲಿ ಶಾಂತಾ ಕೃಷ್ಣಾ ಚೌಗಲೆ (55) ಎನ್ನುವ ಮಹಿಳೆ ಗಾಯಗೊಂಡಿದ್ದಾಳೆ. ಬಾಳೆಕುಂದ್ರಿ ಕೆಎಚ್ ಗ್ರಾಮದ ಯುವರಾಜ ಜಾಧವ ಎನ್ನುವವರು ವೇಗ ಮತ್ತು ನಿರ್ಲಕ್ಷತನದಿಂದ ಕಾರು …
Read More »ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಭಾರತದಲ್ಲಿ ಕಳೆದ 24 ಗಂಟೆಯಲ್ಲಿ ಬರೋಬ್ಬರಿ 6,977 ಹೊಸ ಕೊರೋನಾ ಪ್ರಕರಣ
ನವದೆಹಲಿ: ದೇಶಾದ್ಯಂತ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಭಾರತದಲ್ಲಿ ಕಳೆದ 24 ಗಂಟೆಯಲ್ಲಿ ಬರೋಬ್ಬರಿ 6,977 ಹೊಸ ಕೊರೋನಾ ಪ್ರಕರಣ ದಾಖಲಾಗಿದೆ. ಈ ಮೂಲಕ ಭಾರತದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದೇಶದಲ್ಲಿ 1,38,845 ಕ್ಕೆ ಏರಿಕೆಯಾಗಿದೆ. ವಿಶ್ವದಲ್ಲಿ 54 ಲಕ್ಷ ಜನರಲ್ಲಿ ಕೊರೋನಾ ವೈರಸ್ ಇದೆ. ಈ ಪೈಕಿ 3.46 ಲಕ್ಷ ಜನರು ಕೊರೋನಾ ವೈರಸ್ಗೆ ಮೃತಪಟ್ಟಿದ್ದಾರೆ. ಈ ಪೈಕಿ ಭಾರತದಲ್ಲಿ ಕೊರೋನಾ ಪೀಡಿತರ ಸಂಖ್ಯೆ 1.38 …
Read More »ಕೊರೊನಾ ಮಧ್ಯೆ ರೈತರಿಗೆ ಮತ್ತೊಂದು ಸಂಕಷ್ಟ- ಹಾಲಿಗೆ ಸರಿಯಾದ ಬೆಲೆ ನೀಡದ್ದಕ್ಕೆ ಆಕ್ರೋಶ
ಹಾಸನ: ಕೊರೊನಾ ಲಾಕ್‍ಡೌನ್‍ನಿಂದಾಗಿ ರೈತರು ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದೆ ಬದುಕು ಬೀದಿಗೆ ಬಂದಿದೆ. ಈ ವೇಳೆ ರೈತರು ಹಾಲು ಉತ್ಪಾದನೆ ಮಾಡಿ ಒಂದಷ್ಟು ಬದುಕು ಕಟ್ಟಿಕೊಂಡಿದ್ರು. ಆದರೆ ಈಗ ಹಾಲಿಗೆ ಫ್ಯಾಟ್ ಬರುತ್ತಿಲ್ಲ ಎಂದು ನೆಪ ಹೇಳಿ ಒಂದು ಲೀಟರ್ ಹಾಲಿಗೆ ಕೇವಲ 9 ರೂಪಾಯಿ ಕೊಡುತ್ತಿದ್ದು, ಕಂಗಾಲಾದ ರೈತರು ಹೋರಾಟಕ್ಕೆ ಮುಂದಾಗಿದ್ದಾರೆ. ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ಸಂತೆಶಿವರ ಗ್ರಾಮದ ಸುತ್ತಮುತ್ತಲಿನ ರೈತರು ಕೊರೊನಾ ಭಯ …
Read More »ಸೋಮವಾರದಿಂದ ವಿಮಾನ ಟೇಕಾಫ್- ಪ್ರಯಾಣಿಕರ ಕ್ವಾರಂಟೈನ್ ಹೇಗೆ?
ಬೆಂಗಳೂರು: ದೇಶದ ಪ್ರಮುಖ ನಗರಗಳಲ್ಲಿ ಕೊರೋನಾ ಅಟ್ಟಹಾಸದ ನಡುವೆ ಸೋಮವಾರದಿಂದ ದೇಶದಲ್ಲಿ ದೇಶಿಯ ವಿಮಾನಗಳ ಹಾರಾಟ ಆರಂಭ ಆಗುತ್ತಿದೆ. ಸರಿಸುಮಾರು 2 ತಿಂಗಳ ಬಳಿಕ ವಿಮಾನಗಳು ಗರಿಬಿಚ್ಚಿ ಹಾರಲಿವೆ. ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮೇ 25ರಿಂದ ಜೂನ್ 30ರವರೆಗೂ ವಿಮಾನಗಳ ಹಾರಾಟಕ್ಕೆ ಮೊದಲ ಹಂತದ ಅನುಮತಿ ನೀಡಲಾಗಿದೆ. ನಾಳೆಯಿಂದ ನಿತ್ಯವೂ 215 ವಿಮಾನಗಳ ಟೇಕ್ ಆಫ್, ಲ್ಯಾಂಡಿಂಗ್ ನಡೆಯಲಿದೆ. ಪ್ರತಿ 10 ನಿಮಿಷಕ್ಕೆ ಒಂದರಂತೆ ವಿಮಾನಗಳು ಟೆಕ್‍ಆಫ್ …
Read More »