Breaking News

ಹನಿ ಟ್ರ್ಯಾಪ್ ಮಾಡಿ ಬ್ಲ್ಯಾಕ್ ಮಾಡುತ್ತಿದ್ದ ಗ್ಯಾಂಗ್ ಪೊಲೀಸ್ ಬಲೆಗೆ

 ಬೆಳಗಾವಿ : ಹನಿ ಟ್ರ್ಯಾಪ್ ಮಾಡಿ ಬ್ಲ್ಯಾಕ್ ಮಾಡುತ್ತಿದ್ದ ಗ್ಯಾಂಗ್ ಪೊಲೀಸ್ ಬಲೆಗೆ ಬಿದ್ದಿದೆ. ಮೂಡಲಗಿ ಪುರಸಭೆಯ ಸದಸ್ಯನೋರ್ವನಿಗೆ ಹನಿ ಕುಡಿಸಿ ಮನಿ ಪೀಕುತ್ತಿದ್ದವರು ಕಂಬಿ ಎಣಿಸುತ್ತಿದ್ದಾರೆ. 9 ಲಕ್ಷ ಪಡೆದುಕೊಂಡು ಮತ್ತೆ 1 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಹಣಕ್ಕಾಗಿ ಪಟ್ಟಣದ ಪುರಸಭೆಯ ಸದಸ್ಯನೋರ್ವನಿಗೆ ಹನಿ ಟ್ರ್ಯಾಪ್ ಮಾಡಿದ ಆರೋಪಿಗಳಾದ  ಕೆ.ಆರ್.ಎಸ್ ಪಕ್ಷದ ಮೂಡಲಗಿ ತಾಲೂಕಾಧ್ಯಕ್ಷ ಅಬ್ದುಲ್ ಪೈಲವಾನ್ ಹಾಗೂ ಆತನ ಸ್ನೇಹಿತ ಸುಭಾನಿ ಹಾಗೂ ರೇಷ್ಮಾ …

Read More »

ಕಾಮಗಾರಿ ಗುಂಡಿಗೆ ಉರುಳಿದ ಟ್ರ‍್ಯಾಕ್ಟರ್

ತುಮಕೂರು: ಜೆಜೆಎಂ ಕಾಮಗಾರಿಗೆ ತೆಗೆದಿದ್ದ ಟ್ರಂಚ್‌ಗೆ ಟ್ರ‍್ಯಾಕ್ಟರ್ (Tractor) ಉರುಳಿ ಬಿದ್ದು ಚಾಲಕನ (Driver) ಕೈ ಮೂಳೆ ಮುರಿದಿರುವ ಘಟನೆ ಗುಬ್ಬಿ (Gubbi) ತಾಲೂಕಿನ ಚಿಕ್ಕಚೆಂಗಾವಿ ಗ್ರಾಮದ ಬಳಿ ನಡೆದಿದೆ. ಗ್ರಾಮದಿಂದ ಹೆಬ್ಬೂರನ್ನು ಸಂಪರ್ಕಿಸುವ ರಸ್ತೆ ಬದಿ ಪೈಪ್ ಹುಗಿಯಲು ತೆಗೆದಿರುವ ಟ್ರಂಚ್ ಮುಚ್ಚದೆ ಅನೇಕ ದಿನಗಳಿಂದ ಹಾಗೆಯೇ ಬಿಡಲಾಗಿದೆ. ಸಂಬಂಧಿಸಿದ ಗುತ್ತಿಗೆದಾರರು ಹಾಗೂ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜೆಜೆಎಂ …

Read More »

ನೀರು ಪಾಲಾಗಿ ನಾಲ್ವರು ವಿದ್ಯಾರ್ಥಿಯರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ 7 ಶಿಕ್ಷಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕಾರವಾರ: ಮುರುಡೇಶ್ವರದಲ್ಲಿ (Murudeshwar) ನೀರು ಪಾಲಾಗಿ ನಾಲ್ವರು ವಿದ್ಯಾರ್ಥಿಯರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ 7 ಶಿಕ್ಷಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ .ಕೋಲಾರದಿಂದ (Kolar) ಮುರುಡೇಶ್ವರಕ್ಕೆ ಪ್ರವಾಸ ತೆರಳಿದ್ದವರ ಪೈಕಿ ನಾಲ್ಕು ಜನ ವಿದ್ಯಾರ್ಥಿನಿಯರು ನೀರು ಪಾಲಾದ ಬಳಿಕ ಉತ್ತರ ಕನ್ನಡ (Uttara Kannada) ಜಿಲ್ಲಾಡಳಿತ ಎಚ್ಚೆತ್ತುಕೊಂಡಿದೆ. ಒಂದೆಡೆ ಮುರುಡೇಶ್ವರ ಕಡಲ ತೀರದಲ್ಲಿ ನಿರ್ಬಂಧ ಹೇರಲಾಗಿದ್ದು, ಇನ್ನೊಂದೆಡೆ ಮುಖ್ಯ ಶಿಕ್ಷಕಿ ಸೇರಿ ಒಟ್ಟು 7 ಶಿಕ್ಷಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಶಿಕ್ಷಕರ ವಿರುದ್ದ …

Read More »

4 ವರ್ಷದಿಂದ ಗೃಹಬಂಧನದಲ್ಲಿ ಗೃಹಿಣಿ!

ಚಿಕ್ಕಮಗಳೂರು: 20 ರೂಪಾಯಿಯಲ್ಲಿ ಆಕೆ ವಾರಪೂರ್ತಿ ಬದುಕಬೇಕು. ಅದು ಮನೆಯಿಂದ ಹೊರಬರದಂತೆ. ಮನೆಯಲ್ಲಿ ರೇಷನ್ ಇದ್ರೆ ಅನ್ನ-ಆಹಾರ. ಇಲ್ಲದಿದ್ರೆ ಮನೆಯಲ್ಲಿ ಉಪವಾಸ.. ಅತ್ತೆ-ಗಂಡ ಹೋದಾಗಲೇ ಹೋದ್ರು, ಬಂದಾಗಲೇ ಬಂದ್ರು. ಮನೆಯಿಂದ ಹೋಗುವಾಗ ಮನೆಯಲ್ಲಿ ರೇಷನ್ ಎಲ್ಲಾ ಖಾಲಿ-ಖಾಲಿ. 3-4 ದಿನ ನೀರು ಕುಡಿದುಕೊಂಡೇ ಇರಬೇಕು. ಅದೂ ನೀರಿನ ಸಂಪರ್ಕ ಕಟ್ ಮಾಡಿರದಿದ್ರೆ. ಮನೆ ಕೆಲಸವೆಲ್ಲಾ ಮಾಡಬೇಕು. ಅಡುಗೆ-ಊಟ ಮಾಡುವಂತಿಲ್ಲ. ಒಂದೇ ಚೇರ್. ಅಲ್ಲೇ ಕೂರಬೇಕು. ಮಹಡಿ ಮೇಲೆ ಮಲಗಬೇಕು. ಇದು …

Read More »

ರೌಡಿಶೀಟರ್‌ ಬರ್ಬರ ಹತ್ಯೆ

ಕಲಬುರಗಿ:‌ ಅಪರಿಚಿತ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿಶೀಟರ್‌ನನ್ನ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಕಲಬುರಗಿ (Kalaburagi) ನಗರದ ಹೊರವಲಯದ ಮಾಲಗತ್ತಿ ಕ್ರಾಸ್ ಬಳಿ ನಡೆದಿದೆ.ಖಲೀಲ್ ಅಹಮದ್ (38) ಹತ್ಯೆಗೀಡಾದ ರೌಡಿಶೀಟರ್. ವೈಕ್ತಿಯ ದ್ವೇಷದ ಹಿನ್ನೆಲೆ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಮೋಸ್ಟ್ ವಾಂಟೆಡ್ ಆಗಿದ್ದ ಖಲೀಲ್‌, ಹಲವು ವರ್ಷಗಳಿಂದ ಪೊಲೀಸರಿಗೆ ಬೇಕಾಗಿದ್ದ ಎನ್ನಲಾಗಿದೆ.

Read More »

ಒಂದು ಟನ್ ಕಬ್ಬಿಗೆ ರೈತರಿಗೆ 5 ಸಾವಿರ ರೂಪಾಯಿ ಸಿಗಬೇಕು. ಇಲ್ಲವಾದರೆ ಸಕ್ಕರೆ ಸಚಿವ ಶಿವಾನಂದ ಪಾಟೀಲರ ನಿವಾಸದ ಎದುರು ಹೋರಾಟ

ಡಿಸೆಂಬರ್​ 11: ತೂಕದಲ್ಲಾಗುತ್ತಿದ್ದ ಮೋಸ ಹಿನ್ನಲೆ ಕಬ್ಬು (sugarcane) ಬೆಳೆಗಾರರು, ಕಾರ್ಖಾನೆಗಳ ವಿರುದ್ಧ ಪ್ರತಿಭಟನೆ ಮಾಡಿದ್ದಾರೆ. ಇದರ ಬೆನ್ನಲ್ಲೇ ಇದೀಗ ಕರ್ನಾಟಕದಲ್ಲಿ ಕಬ್ಬು ಬೆಳೆಗಾರರ ಹಿತ ಕಾಯಲು ಸರ್ಕಾರ ಮುಂದಾಗಿದೆ. ಆ ಮೂಲಕ ಕಬ್ಬು ತೂಕದಲ್ಲಾಗುವ ಮೋಸ ತಡೆಗಟ್ಟಲು ಸರ್ಕಾರದಿಂದ ಕ್ರಮಕೈಗೊಳ್ಳಲಾಗುತ್ತಿದೆ. ಕರ್ನಾಟಕದ ಸಕ್ಕರೆ ಕಾರ್ಖಾನೆಗಳ ಬಳಿ ವೇ ಬ್ರಿಡ್ಜ್ ಸ್ಥಾಪಿಸಲು ನಿರ್ಧಾರ ಮಾಡಲಾಗಿದೆ. ತೂಕದ ಯಂತ್ರವನ್ನ ಎಎಪಿಎಂಸಿ ಮೂಲಕ ವೇ ಬ್ರಿಡ್ಜ್ ಸ್ಥಾಪಿಸಲು ಆಡಳಿತಾತ್ಮಕ ಮಂಜೂರಾತಿ ನೀಡಲಾಗಿದೆ. ಎಫ್​ಆರ್​ಪಿ ಅಡಿಯಲ್ಲಿ ದರ ನಿಗದಿ …

Read More »

ಆಧಾರ್ ಕಾರ್ಡ್​​ನಲ್ಲಿ ಕರ್ನಾಟಕದ ವಿಳಾಸ ಇದ್ದರೆ ಸಾಕು, ಶಕ್ತಿ ಯೋಜನೆಯ ಟಿಕೆಟ್

ಡಿಸೆಂಬರ್ 12: ಈ ಹಿಂದೆ ಆಧಾರ್ ‌ಕಾರ್ಡ್​​ನಲ್ಲಿ ಇಂಗ್ಲಿಷ್ ಜೊತೆಗೆ ಕನ್ನಡ ಬಿಟ್ಟು ಬೇರೆ ಭಾಷೆ ಪ್ರಿಂಟ್ ಆಗಿದ್ದರೆ, ಅಂತಹ ಮಹಿಳೆಯರಿಗೆ ಬಿಎಂಟಿಸಿ ಕಂಡಕ್ಟರ್​ಗಳು ಶಕ್ತಿ ಯೋಜನೆಯ ಟಿಕೆಟ್ ನೀಡುತ್ತಿರಲಿಲ್ಲ. ಇದರಿಂದ ಕಂಡಕ್ಟರ್ ಮತ್ತು ಮಹಿಳಾ ಪ್ರಯಾಣಿಕರ ನಡುವೆ ಸಾಕಷ್ಟು ಜಗಳಗಳಾಗುತ್ತಿದ್ದವು. ಇದನ್ನು ತಪ್ಪಿಸಲು ಬಿಎಂಟಿಸಿ ಮುಂದಾಗಿದ್ದು, ಇನ್ಮುಂದೆ ಆಧಾರ್ ಕಾರ್ಡ್​​ನಲ್ಲಿ ಕರ್ನಾಟಕದ ವಿಳಾಸ ಇದ್ದರೆ ಸಾಕು, ಶಕ್ತಿ ಯೋಜನೆ ಟಿಕೆಟ್ ನೀಡಬಹುದು ಸೂಚನೆ ನೀಡಿದೆ. ಹೊರ ರಾಜ್ಯದಿಂದ ಬಂದು ಕರ್ನಾಟಕದಲ್ಲಿ …

Read More »

ಬೆಳಗಾವಿ ಜಿಲ್ಲಾ ಆಸ್ಪತ್ರೆ ಮತ್ತು ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಬಾಣಂತಿ ಮತ್ತು ಶಿಸುವಿನ ಸಾವಿನ ಸಂಖ್ಯೆ ಕಳೆದ 3 ವರ್ಷಗಳನ್ನು ಗಮನಿಸಿದಾಗ 2022ರಲ್ಲೇ ಅತ್ಯಧಿಕ ಎನ್ನುವುದು ಬೆಳಕಿಗೆ ಬಂದಿದೆ.

, ಬೆಳಗಾವಿ ಜಿಲ್ಲಾ ಆಸ್ಪತ್ರೆ ಮತ್ತು ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಬಾಣಂತಿ ಮತ್ತು ಶಿಸುವಿನ ಸಾವಿನ ಸಂಖ್ಯೆ ಕಳೆದ 3 ವರ್ಷಗಳನ್ನು ಗಮನಿಸಿದಾಗ 2022ರಲ್ಲೇ ಅತ್ಯಧಿಕ ಎನ್ನುವುದು ಬೆಳಕಿಗೆ ಬಂದಿದೆ. 2022ರಲ್ಲಿ ಬಿಮ್ಸ್ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ 6,878 ಹೆರಿಗೆಗಳಾಗಿದ್ದು, ಬಿಮ್ಸ್ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ತಲಾ 12ರಂತೆ ಒಟ್ಟೂ 24 ಬಾಣಂತಿಯರು ಸಾವಿಗೀಡಾಗಿದ್ದಾರೆ. 2023ರಲ್ಲಿ 7,951 ಹೆರಿಗೆಯಾಗಿದ್ದು, ಬಿಮ್ಸ್ ನಲ್ಲಿ 7 ಹಾಗೂ ಪಿಎಚ್ …

Read More »

ರಾಜ್ಯದಾದ್ಯಂತ ರಸ್ತೆ ತಡೆಗೆ ಕರೆ ಇಷ್ಟು ದಿನ ಶಾಂತಿಯುತ ಹೋರಾಟ ಆಗಿತ್ತು, ಇನ್ಮೇಲೆ ಹಳ್ಳಿ ಹಳ್ಳಿಯಲ್ಲೂ ಕ್ರಾಂತಿಯುತ ಹೋರಾಟ

ಡಿಸೆಂಬರ್ 12: ಬೆಳಗಾವಿಯ ಸುವರ್ಣ ವಿಧಾನಸೌಧದ ಎದುರು ಸೋಮವಾರ ನಡೆದ ಪಂಚಮಸಾಲಿ 2ಎ ಮೀಸಲಾತಿ ಪ್ರತಿಭಟನೆ ವೇಳೆ ಲಾಠಿ ಚಾರ್ಜ್​ ನಡೆಸಿದ್ದಕ್ಕೆ ಮತ್ತಷ್ಟು ಕೆರಳಿರುವ ಬಸವ ಜಯಮೃತ್ಯುಂಜಯ ಸ್ವಾಮೀಜಿ, ನಮ್ಮ ಜನ ಇನ್ನಷ್ಟು ಪುಟಿದೇಳುತ್ತಾರೆ ಎಂದಿದ್ದಾರೆ. ಅಲ್ಲದೆ, ಇಷ್ಟು ದಿನ ಶಾಂತಿಯುತ ಹೋರಾಟ ಆಗಿತ್ತು, ಇನ್ಮೇಲೆ ಹಳ್ಳಿ ಹಳ್ಳಿಯಲ್ಲೂ ಕ್ರಾಂತಿಯುತ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ. ಸಿಎಂ ಸಿದ್ದರಾಮಯ್ಯ ಅನುಮತಿ ಇಲ್ಲದೇ ಲಾಠಿ ಚಾರ್ಜ್​ ಆಗಿದ್ದು ಹೇಗೆ? ಹಾಗೆ ಆಗಿದ್ದೇ …

Read More »

ನಮ್ಮದು ಶಾಂತಿಯುತ ಹೋರಾಟವಿತ್ತು. ಆದ್ರೆ ನಮ್ಮ ಹೋರಾಟದ ಮೇಲೆ ರಾಜಕೀಯ ದುರುದ್ದೇಶದಿಂದ ಲಾಠಿ ಪ್ರಹಾರ

ಪಂಚಮಸಾಲಿ ಹೋರಾಟದ ವೇಳೆ ಲಾಠಿ ಚಾರ್ಜ್‌ಗೆ ಆರ್ಡರ್ ಮಾಡಿದ್ದು, ಬೆಳಾಗವಿ ಎಸ್ಪಿ ಅವರೇ- ಲಾಠಿ ಏಟು ತಿಂದ ಗಾಯಾಳು ನಾಗಪ್ಪ. ನಮ್ಮ ಸಮಾಜದ ಸ್ವಾಮೀಜಿಗಳ ನೇತೃತ್ವದಲ್ಲಿ ಪಂಚಮಸಾಲಿ 2ಎ ಮೀಸಲಾತಿಗಾಗಿ ನಾವು ಸುವರ್ಣಸೌಧದ ಎದುರು ಶಾಂತಿಯುತ ಹೋರಾಟ ಮಾಡುತ್ತಿದ್ವಿ, ಈ ವೇಳೆ ಬೆಳಗಾವಿ ಎಸ್ಪಯವರೇ ಲಾಠಿ ಚಾರ್ಜ್‌ಗೆ ಆರ್ಡರ್ ಮಾಡಿ ಲಾಠಿ ಚಾರ್ಜ್ ಮಾಡಿದ್ದರು. ಈ ಘಟನೆಯಲ್ಲಿ ಸ್ವಾಮೀಜಿಯವರ ರಕ್ಷಣೆ ಮಾಡಲು ಹೋಗಿ ನನಗೆ ತಲೆಗೆ ಏಟು ಬಿದ್ದು, ಮೂರು …

Read More »